RuPay Card: ಎನ್‌ಪಿಸಿಐ, ಆಕ್ಸಿಸ್ ಬ್ಯಾಂಕ್ ಸಹಯೋಗದಲ್ಲಿ ಮೊಬಿಕ್ವಿಕ್ ರುಪೇ ಕಾರ್ಡ್ ಬಿಡುಗಡೆ
MobiKwik Prepaid RuPay Card: ಆಕ್ಸಿಸ್ ಬ್ಯಾಂಕ್ ಮತ್ತು ಎನ್‌ಪಿಸಿಐ ಸಹಯೋಗದಲ್ಲಿ ಮೊಬಿಕ್ವಿಕ್ನಿಂದ ರುಪೇ ಕಾರ್ಡ್ ಬಿಡುಗಡೆ ಮಾಡಲಾಗಿದೆ. ಏನಿದರ ವಿಶೇಷ ಎಂಬ ಮಾಹಿತಿ ಇಲ್ಲಿದೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಮತ್ತು ಆಕ್ಸಿಸ್ ಬ್ಯಾಂಕ್ ಸಹಯೋಗದೊಂದಿಗೆ ಮೊಬಿಕ್ವಿಕ್ನಿಂದ ಮೊಬಿಕ್ವಿಕ್ (MobiKwik) ರುಪೇ ಕಾರ್ಡ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಕಾರ್ಡ್ ಅನ್ನು ಗ್ರಾಹಕರಿಗೆ ಉಚಿತವಾಗಿ ನೀಡಲಾಗುವುದು. ಆನ್‌ಲೈನ್ ಮತ್ತು ಡಿಜಿಟಲ್ ಪಾವತಿಗಳಿಗೆ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಸಂಪೂರ್ಣವಾಗಿ ಡಿಜಿಟಲ್ ಆಗಿರುತ್ತದೆ. ಮೊಬೈಲ್ ವ್ಯಾಲೆಟ್ ಕಂಪೆನಿಯು ಗ್ರಾಹಕರು ಮೊಬಿಕ್ವಿಕ್ ರುಪೇ ಪ್ರಿಪೇಯ್ಡ್ ಕಾರ್ಡ್‌ನಲ್ಲಿ ವ್ಯಾಲೆಟ್ ಬ್ಯಾಲೆನ್ಸ್‌ನ 2 ಲಕ್ಷದವರೆಗೆ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳುತ್ತದೆ. ಮೊಬಿಕ್ವಿಕ್ ವ್ಯಾಲೆಟ್‌ನೊಂದಿಗೆ ಕಾರ್ಡ್‌ನ ಜೋಡಣೆಯು ಗ್ರಾಹಕರು ಮರ್ಚೆಂಟ್ ನೆಟ್‌ವರ್ಕ್ ಜೊತೆಗೆ 190 ದೇಶಗಳಾದ್ಯಂತ 4.1 ಕೋಟಿ ವ್ಯಾಪಾರಿಗಳಲ್ಲಿ ಕಾರ್ಡ್ ಮತ್ತು ವ್ಯಾಲೆಟ್ ಬ್ಯಾಲೆನ್ಸ್ ಅನ್ನು ಬಳಸಲು ಅವಕಾಶ ದೊರಕಿಸುತ್ತದೆ.
ಕಾರ್ಡ್ ಬಳಕೆದಾರರು ಸ್ವಯಂಚಾಲಿತ ಮೊಬಿಕ್ವಿಕ್ ಝಿಪ್(Zip)ಗೆ ಅರ್ಹತೆ ಪಡೆಯುತ್ತಾರೆ. ಇದು ಪ್ರಮುಖ BNPL (ಬೈ ನೌ ಪೇ ಲೇಟರ್) ಉತ್ಪನ್ನವಾಗಿದೆ. ಇದು ಬಳಕೆದಾರರ ವ್ಯಾಲೆಟ್‌ನಲ್ಲಿ ರೂ. 30,000 ಕ್ರೆಡಿಟ್ ಅನ್ನು ಒದಗಿಸುತ್ತದೆ. ರುಪೇ ಕಾರ್ಡ್ ಆಫರ್‌ಗಳು ಮತ್ತು ಮೊಬಿಕ್ವಿಕ್ ಸೂಪರ್ಕ್ಯಾಶ್ ಎರಡರಿಂದಲೂ ಪ್ರಯೋಜನ ಪಡೆಯುವ ಮೂಲಕ ಬಳಕೆದಾರರು ಪ್ರತಿ ಕಾರ್ಡ್ ಖರೀದಿಯಲ್ಲಿ ಹೆಚ್ಚುವರಿ ಉಳಿತಾಯ ಮಾಡಬಹುದು. ಆಕ್ಸಿಸ್ ಬ್ಯಾಂಕ್‌ನ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ ರಾಜೀವ್ ಆನಂದ್ ಮಾತನಾಡಿ, “ತಂತ್ರಜ್ಞಾನ-ಮುಂಚೂಣಿಯ ಆರ್ಥಿಕ ಸಲ್ಯೂಷನ್ಗಳ ಮೂಲಕ ನಮ್ಮ ಗ್ರಾಹಕರ ವಿಶಿಷ್ಟ ಅಗತ್ಯಗಳನ್ನು ಪೂರೈಸಲು ಬದ್ಧರಾಗಿದ್ದೇವೆ. ಮೊಬಿಕ್ವಿಕ್ ರುಪೇ ಕಾರ್ಡ್ ನಗದುರಹಿತ, ಸುರಕ್ಷಿತ ಮತ್ತು ನವೀನ ಪಾವತಿ ಆಯ್ಕೆಗಳನ್ನು ಹುಡುಕುತ್ತಿರುವ ಯುವ ಭಾರತೀಯರಿಗೆ ಸೂಕ್ತವಾಗಿದೆ,” ಎಂದಿದ್ದಾರೆ.
ಎನ್‌ಪಿಸಿಐನ ಮುಖ್ಯ ಡಿಜಿಟಲ್ ಅಧಿಕಾರಿ ಆರಿಫ್ ಖಾನ್, “ಇಂದಿನ ಬಳಕೆದಾರರ ಹೆಚ್ಚುತ್ತಿರುವ ಡಿಜಿಟಲ್ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಡ್ ಅನ್ನು ತರಲಾಗಿದೆ. ಈ ಕಾರ್ಡ್ ಅನ್ನು ಭಾರತದ ಜನರಿಗೆ ತಲುಪಿಸುವ ಮೂಲಕ ಡಿಜಿಟಲ್ ವಹಿವಾಟಿನ ಮೌಲ್ಯವನ್ನು ಹೆಚ್ಚಿಸುವ ವಿಶ್ವಾಸ ನಮಗಿದೆ,” ಎಂದು ಹೇಳಿದ್ದಾರೆ.
ಮೊಬಿಕ್ವಿಕ್ ರುಪೇ ಕಾರ್ಡ್‌ನ ಪ್ರಮುಖ ಲಕ್ಷಣಗಳು; – ಯಾವುದೇ ಆ್ಯಕ್ಟಿವೇಷನ್ ಶುಲ್ಕಗಳಿಲ್ಲ – ಹೋಮ್ ಸೆಂಟರ್‌ನಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ಮತ್ತು ಸೈನ್ ಅಪ್ ಮಾಡುವಾಗ ಉಬರ್ ಬುಕಿಂಗ್‌ನಲ್ಲಿ ಶೇಕಡಾ 30ರಷ್ಟು ರಿಯಾಯಿತಿ – ವೈಯಕ್ತಿಕ ಅಪಘಾತ ವಿಮೆ (ಅಪಘಾತದ ಸಾವು ಅಥವಾ ಶಾಶ್ವತ ಒಟ್ಟು ಅಂಗವೈಕಲ್ಯ) ರೂ. 2 ಲಕ್ಷಗಳವರೆಗೆ – ಕಾರ್ಡ್ ಖರೀದಿಗಳಲ್ಲಿ ಮೊಬಿಕ್ವಿಕ್ ಸೂಪರ್ಕ್ಯಾಶ್
ರುಪೇ ಟೋಕನೈಸೇಶನ್, ಆಫ್‌ಲೈನ್ ಟ್ರಾನ್ಸಿಟ್, ಮತ್ತು ಪ್ರಯಾಣ, ಊಟ, ರೀಟೇಲ್ ಶಾಪಿಂಗ್, ಬಿಲ್ ಪಾವತಿಗಳಂತಹ ವಿವಿಧ ವರ್ಗಗಳಲ್ಲಿ ಆಕರ್ಷಕ ಕೊಡುಗೆಗಳನ್ನು ತರುತ್ತದೆ. ಜೊತೆಗೆ ಗಿಫ್ಟ್‌ನಂತಹ ಹಲವಾರು ಸೇವೆಗಳಿಗೆ 24X7 ಸೇವೆಯು ಬಳಕೆದಾರರಿಗೆ ಲಭ್ಯವಿರುತ್ತದೆ. ಇದರ ಮೂಲಕ ಉಡುಗೊರೆ/ಹೂವಿನ ಡೆಲಿವರಿ ನೆರವು, ರೆಸ್ಟೋರೆಂಟ್ ರೆಫರಲ್ ಮತ್ತು ವ್ಯವಸ್ಥೆ, ಐಟಿ ರಿಟರ್ನ್ ನೆರವು ಮತ್ತು ಫೈಲಿಂಗ್ ನೆರವು, ಇತ್ಯಾದಿ ದೊರೆಯುತ್ತದೆ.
ಮೊಬಿಕ್ವಿಕ್ ಸಿಒಒ, ಸಹ-ಸಂಸ್ಥಾಪಕಿ ಉಪಾಸನಾ ಟಕು ಮಾತನಾಡಿ, “ಮೊಬಿಕ್ವಿಕ್ ರುಪೇ ಪ್ರಿಪೇಯ್ಡ್ ಕಾರ್ಡ್ ಭಾರತದಲ್ಲಿ ಆರ್ಥಿಕ ಸೇರ್ಪಡೆಗಾಗಿ ನಮ್ಮ ಬದ್ಧತೆಯನ್ನು ಬಲವಾಗಿ ಮತ್ತೆ ಹೇಳುತ್ತದೆ. ನಮ್ಮ ಗ್ರಾಹಕರಿಗೆ ಪಾವತಿ ನಂತರದ ಅನುಭವವನ್ನು ನೀಡುವ ನವೀನ ಉತ್ಪನ್ನಗಳನ್ನು ತರಲು ನಾವು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇವೆ” ಎಂದಿದ್ದಾರೆ.
ಇದನ್ನೂ ಓದಿ: Credit Card: ಕ್ರೆಡಿಟ್ ಕಾರ್ಡ್ ಮೊದಲ ಬಿಲ್ ಪಾವತಿಗೆ ಮೊದಲು ಗಮನಿಸಬೇಕಾದ ಅಂಶಗಳಿವು
Published On - 5:45 pm, Fri, 12 November 21