Retail Inflation: ಅಕ್ಟೋಬರ್ ಚಿಲ್ಲರೆ ಹಣದುಬ್ಬರ ದರ ಶೇ 4.48ಕ್ಕೆ ಏರಿಕೆ
ಭಾರತದಲ್ಲಿ ಅಕ್ಟೋಬರ್ ತಿಂಗಳ ಚಿಲ್ಲರೆ ಹಣದುಬ್ಬರ ದರವು ಶೇ 4.48ಕ್ಕೆ ಏರಿಕೆ ಆಗಿದೆ. ಏನಿದರ ಹಿಂದಿನ ಕಾರಣ ಎಂಬುದರ ಬಗೆಗಿನ ಲೇಖನ ಇಲ್ಲಿದೆ.
ಭಾರತದ ಚಿಲ್ಲರೆ ಹಣದುಬ್ಬರ ದರವನ್ನು ಗ್ರಾಹಕ ಬೆಲೆ ಸೂಚ್ಯಂಕದಿಂದ (CPI) ಅಳೆಯಲಾಗುತ್ತದೆ. 2021ರ ಅಕ್ಟೋಬರ್‌ನಲ್ಲಿ ಶೇ 4.48ಕ್ಕೆ ಏರಿದೆ ಎಂದು ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ನವೆಂಬರ್ 12ರಂದು ಬಿಡುಗಡೆ ಮಾಡಿದೆ. ಆಹಾರ ಬೆಲೆಗಳ ಏರಿಕೆಯಿಂದಾಗಿ ಅಕ್ಟೋಬರ್‌ನಲ್ಲಿ ಚಿಲ್ಲರೆ ಹಣದುಬ್ಬರದಲ್ಲಿ ಸ್ವಲ್ಪ ಹೆಚ್ಚಳವಾಗಿದೆ ಎಂದು ಸರ್ಕಾರದ ಅಂಕಿ-ಅಂಶಗಳು ತೋರಿಸಿವೆ. 2021ರ ಸೆಪ್ಟೆಂಬರ್‌ನಲ್ಲಿ ಸಿಪಿಐ ಆಧಾರಿತ ಹಣದುಬ್ಬರವು ಶೇಕಡಾ 4.35ರಷ್ಟಿತ್ತು ಮತ್ತು 2020ರ ಅಕ್ಟೋಬರ್‌ನಲ್ಲಿ ಇದು ಶೇಕಡಾ 7.61ರಷ್ಟಿತ್ತು.
ಸತತ ನಾಲ್ಕನೇ ತಿಂಗಳಿನಲ್ಲಿ CPI ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಶೇ 6ರ ಗುರಿಗಿಂತ ಕೆಳಗಿದೆ. 2026ರ ಮಾರ್ಚ್ವರೆಗೆ ಐದು ವರ್ಷಗಳವರೆಗೆ ಕೆಳಸ್ತರದಲ್ಲಿ ಶೇಕಡಾ ಎರಡು ಮತ್ತು ಮೇಲ್ ಸ್ತರದಲ್ಲಿ ಚಿಲ್ಲರೆ ಹಣದುಬ್ಬರ ದರವನ್ನು ಶೇಕಡಾ ನಾಲ್ಕು ದರದಲ್ಲಿ ನಿರ್ವಹಿಸಲು ಭಾರತ ಸರ್ಕಾರವು ಆರ್ಬಿಐಗೆ ತಿಳಿಸಿದೆ. ಗಮನಾರ್ಹವಾಗಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ದ್ವೈ-ಮಾಸಿಕ ಹಣಕಾಸು ನೀತಿಯನ್ನು ಸಿದ್ಧಪಡಿಸುವಾಗ CPI ಡೇಟಾದಲ್ಲಿ ಕೇಂದ್ರೀಯ ಬ್ಯಾಂಕ್ ಅಂಶಗಳಲ್ಲಿ ತಿಳಿಸಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಆರ್‌ಬಿಐನ ವಿತ್ತೀಯ ನೀತಿ ಸಮಿತಿ (ಎಂಪಿಸಿ) ಸತತ ಎಂಟನೇ ಬಾರಿಗೆ ರೆಪೊ ದರವನ್ನು ಶೇಕಡಾ ನಾಲ್ಕರಲ್ಲಿ ಯಥಾಸ್ಥಿತಿಯಲ್ಲಿಡಲು ನಿರ್ಧರಿಸಿತ್ತು.
ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಆಫೀಸ್ (NSO) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಆಹಾರದ ಬುಟ್ಟಿಯಲ್ಲಿನ ಹಣದುಬ್ಬರವು ಹಿಂದಿನ ತಿಂಗಳಲ್ಲಿ ಶೇ 0.68ಕ್ಕೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಶೇ 0.85ಕ್ಕೆ ಏರಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2021-22ರಲ್ಲಿ CPI ಹಣದುಬ್ಬರವನ್ನು ಶೇ 5.3 ಎಂದು ಅಂದಾಜಿಸಿದೆ – ಎರಡನೇ ತ್ರೈಮಾಸಿಕದಲ್ಲಿ ಶೇ 5.1, ಮೂರನೇ ತ್ರೈಮಾಸಿಕದಲ್ಲಿ ಶೇ 4.5, ಹಣಕಾಸಿನ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಶೇ 5.8 ಇರಲಿದೆ ಎಂದಿದೆ. ಅಪಾಯಗಳು ವಿಶಾಲವಾಗಿ ಸಮತೋಲನಗೊಂಡಿದೆ. 2022-23ರ ಏಪ್ರಿಲ್-ಜೂನ್ ಅವಧಿಯಲ್ಲಿ ಚಿಲ್ಲರೆ ಹಣದುಬ್ಬರವು ಶೇ 5.2 ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: Price Hike: ಬಟ್ಟೆ, ಎಲೆಕ್ಟ್ರಾನಿಕ್ಸ್ನಿಂದ ಮದ್ಯದ ತನಕ ಹೊಸ ವರ್ಷದಿಂದ ಶೇ 8ರಿಂದ 10ರಷ್ಟು ಬೆಲೆ ಏರಿಕೆಗೆ ಸಿದ್ಧರಾಗಿ!