Credit Card: ಕ್ರೆಡಿಟ್ ಕಾರ್ಡ್ ಮೊದಲ ಬಿಲ್ ಪಾವತಿಗೆ ಮೊದಲು ಗಮನಿಸಬೇಕಾದ ಅಂಶಗಳಿವು

ಕ್ರೆಡಿಟ್ ಕಾರ್ಡ್ ಮೊದಲ ಬಿಲ್ ಪಾವತಿ ಮಾಡುವ ವೇಳೆ ಗಮನಿಸಬೇಕಾದ ಅಂಶಗಳು ಯಾವುವು ಎಂಬ ಬಗ್ಗೆ ತುಂಬ ಉಪಯುಕ್ತವಾದ ಮಾಹಿತಿ ಈ ಲೇಖನದಲ್ಲಿದೆ.

Credit Card: ಕ್ರೆಡಿಟ್ ಕಾರ್ಡ್ ಮೊದಲ ಬಿಲ್ ಪಾವತಿಗೆ ಮೊದಲು ಗಮನಿಸಬೇಕಾದ ಅಂಶಗಳಿವು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Nov 09, 2021 | 5:31 PM

ಕ್ರೆಡಿಟ್ ಕಾರ್ಡ್ ಅನ್ನು ಬಹಳ ವಿವೇಕದಿಂದ ಬಳಸುವುದು ಮುಖ್ಯ. ಏಕೆಂದರೆ ವಿವೇಚನಾರಹಿತವಾದ ಕ್ರೆಡಿಟ್ ಕಾರ್ಡ್ ಬಳಕೆಯಿಂದಾಗಿ ಸಾಲದ ಬಲೆಗೆ ಬೀಳುವಂತೆ ಆಗಬಹುದು. ಕ್ರೆಡಿಟ್ ಕಾರ್ಡ್ ಮೂಲಕ ಹಣವನ್ನು ಖರ್ಚು ಮಾಡುವುದು ಸುಲಭ. ಆದರೆ ನಂತರ ಬೆಟ್ಟದಂತೆ ಬೆಳೆದು ನಿಂತಾಗ ದುಡಿಮೆಯ ಹಣದಲ್ಲಿ ಎಲ್ಲ ಖರ್ಚುನ್ನೂ ನಿಭಾಯಿಸಿದ ಮೇಲೆ ತೀರಿಸುವುದು ಬಹಳ ಕಷ್ಟ. ಆದ್ದರಿಂದ ಮೊದಲ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವ ಮೊದಲು ಪ್ರತಿಯೊಬ್ಬರು ಕೆಲವು ಪ್ರಮುಖ ವಿಷಯಗಳನ್ನು ಪರಿಶೀಲಿಸಬೇಕು; ಅವುಗಳ ಚೆಕ್ ಲಿಸ್ಟ್ ಇಲ್ಲಿದೆ.

ಪಾವತಿಸಲು ಕೊನೆಯ ದಿನಾಂಕ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯ ಅಂತಿಮ ದಿನಾಂಕವು ನೆನಪಿಡುವ ಪ್ರಮುಖ ಅಂಶವಾಗಿದೆ. ಪಾವತಿಯ ಅಂತಿಮ ದಿನಾಂಕವನ್ನು ತಪ್ಪಿಸಿದರೆ ತಡವಾಗಿ ಪಾವತಿಯಾಗಿ, ಹೆಚ್ಚಿನ ದಂಡವನ್ನು ಪಾವತಿಸಬೇಕಾಗುತ್ತದೆ.

ಒಟ್ಟು ಬಾಕಿ ಮೊತ್ತ ಪಾವತಿಸಬೇಕಾದ ಒಟ್ಟು ಮೊತ್ತವು ಬಡ್ಡಿ ಅನ್ವಯವಾಗುವ ಅಥವಾ ಯಾವುದೇ ವಿಳಂಬ ಪಾವತಿ ಶುಲ್ಕಗಳು, ವಾರ್ಷಿಕ ಶುಲ್ಕಗಳು, ಸೇವಾ ಶುಲ್ಕಗಳು ಮತ್ತು ಇತರ ವಹಿವಾಟು ಶುಲ್ಕಗಳನ್ನು ಒಳಗೊಂಡಿರುವ ಮೊತ್ತವಾಗಿರುತ್ತದೆ.

ಬಾಕಿ ಇರುವ ಕನಿಷ್ಠ ಮೊತ್ತ ಕ್ರೆಡಿಟ್ ಕಾರ್ಡ್ ಸಕ್ರಿಯವಾಗಿಡಲು ಮತ್ತು ತಡವಾದ ಶುಲ್ಕವನ್ನು ವಿಧಿಸುವುದನ್ನು ತಪ್ಪಿಸಲು ಒಬ್ಬ ವ್ಯಕ್ತಿಯು ತಮ್ಮ ಬಿಲ್‌ನಲ್ಲಿ ಕನಿಷ್ಠ ಮೊತ್ತವನ್ನು ಪಾವತಿಸಬೇಕು.

ಸ್ಟೇಟ್​ಮೆಂಟ್ ದಿನಾಂಕ ಸ್ಟೇಟ್​ಮೆಂಟ್​ ದಿನಾಂಕವು ಮುಖ್ಯವಾಗಿದೆ. ಏಕೆಂದರೆ ಬಿಲ್ಲಿಂಗ್ ಸೈಕಲ್ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ ಎಂದು ಅದು ಹೇಳುತ್ತದೆ. ಪಾವತಿ ಮಾಡುವುದನ್ನು ತಪ್ಪಿಸಿದರೆ ಬ್ಯಾಂಕ್​ನಿಂದ ಹೆಚ್ಚಿನ ವಿಳಂಬ ಶುಲ್ಕವನ್ನು ವಿಧಿಸುತ್ತದೆ.

ಬಿಲ್ಲಿಂಗ್ ಸೈಕಲ್ ಬಿಲ್ಲಿಂಗ್ ಸೈಕಲ್ ಮುಖ್ಯವಾಗಿದೆ. ಏಕೆಂದರೆ ಇದು ಖರ್ಚುಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಇದು 30 ದಿನಗಳವರೆಗೆ ಇರುತ್ತದೆ. ಬಿಲ್ಲಿಂಗ್ ಸೈಕಲ್ ಮತ್ತು ಬಡ್ಡಿ ರಹಿತ ಅವಧಿ ಒಂದಕ್ಕೊಂದು ಭಿನ್ನವಾಗಿರುತ್ತದೆ.

ಬಡ್ಡಿ ಮುಕ್ತ ಅವಧಿ ಪ್ರತಿ ಕ್ರೆಡಿಟ್ ಕಾರ್ಡ್ ವಿತರಕರು ಕಾರ್ಡ್ ಹೊಂದಿರುವವರಿಗೆ 45ರಿಂದ 50 ದಿನಗಳ ಬಡ್ಡಿ ರಹಿತ ಅವಧಿಯನ್ನು ನೀಡುತ್ತಾರೆ. ಈ ಅವಧಿಯಲ್ಲಿ ಬಾಕಿ ಮೊತ್ತದ ಮೇಲೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಆದರೆ ಈ ವಿಂಡೋವನ್ನು ಮೀರಿ, ಕಾರ್ಡ್ ಹೊಂದಿರುವವರು ಶೇ 34 ಮತ್ತು ಶೇ 40ರ ಮಧ್ಯೆ ಹೆಚ್ಚಿನ ಬಡ್ಡಿದರವನ್ನು ಪಾವತಿಸಬೇಕಾಗುತ್ತದೆ.

ತಜ್ಞರ ಅಭಿಪ್ರಾಯ ಕ್ರೆಡಿಟ್ ಕಾರ್ಡ್ ಬಹಳ ಮುಖ್ಯವಾದ ಸಾಧನವಾಗಿದೆ. ಆದರೆ ಅದನ್ನು ಆಯ್ಕೆ ಮಾಡುವ ಮೊದಲು ಪ್ರತಿಯೊಬ್ಬರೂ ಎಲ್ಲ ನಿಯಮಗಳು ಮತ್ತು ನಿಬಂಧನೆಗಳನ್ನು ಪರಿಶೀಲಿಸಬೇಕು. “ಕ್ರೆಡಿಟ್ ಕಾರ್ಡ್ ಅನ್ನು ವಿವೇಚನೆಯಿಂದ ಬಳಸಿದರೆ ಅದು ತುಂಬಾ ಉಪಯುಕ್ತ. ಇಲ್ಲದಿದ್ದರೆ ಕ್ರೆಡಿಟ್ ಕಾರ್ಡ್‌ಗಳು ವ್ಯಕ್ತಿಯ ಮೇಲೆ ಹೊರೆಯಾಗಬಹುದು,” ಎಂದು ಕೋಲ್ಕತ್ತಾದ ವಯಕ್ತಿಕ ಹಣಕಾಸು ಸಲಹೆಗಾರರು ಅಭಿಙ್ರಾಯ ಪಡುತ್ತಾರೆ.

ಇದನ್ನೂ ಓದಿ: Credit cards spending: ಕ್ರೆಡಿಟ್ ಕಾರ್ಡ್ ವೆಚ್ಚ ಸೆಪ್ಟೆಂಬರ್​ನಲ್ಲಿ ಶೇ 57ರಷ್ಟು ಹೆಚ್ಚಳವಾಗಿ ರೂ. 80,477 ಕೋಟಿಗೆ