AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paytm IPO: ಪೇಟಿಎಂ ಐಪಿಒಗೆ ದೊರೆಯದ ಹೂಡಿಕೆದಾರರ ನಿರೀಕ್ಷಿತ ಸ್ವಾಗತ; ಸಮಸ್ಯೆ ಏನಂತ?

ಆನ್​ಲೈನ್ ಡಿಜಿಟಲ್ ಪಾವತಿ ಕಂಪೆನಿ ಪೇಟಿಎಂ ಐಪಿಒಗೆ ಹೂಡಿಕೆದಾರರಿಂದ ಅಷ್ಟೇನೂ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಅದಕ್ಕೆ ಕಾರಣ ಏನು ಎಂಬ ವಿವರ ಇಲ್ಲಿದೆ.

Paytm IPO: ಪೇಟಿಎಂ ಐಪಿಒಗೆ ದೊರೆಯದ ಹೂಡಿಕೆದಾರರ ನಿರೀಕ್ಷಿತ ಸ್ವಾಗತ; ಸಮಸ್ಯೆ ಏನಂತ?
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Nov 09, 2021 | 10:47 PM

Share

ಪ್ರಮುಖ ಆನ್‌ಲೈನ್ ಪಾವತಿ ಸಂಸ್ಥೆ ಪೇಟಿಎಂ ಸೋಮವಾರದಿಂದ (ನವೆಂಬರ್ 8, 2021) ಐಪಿಒ ಆರಂಭವಾಗಿದ್ದು, ಕೇವಲ ಶೇ. 18ರಷ್ಟು ಮಾತ್ರ ಸಬ್​ಸ್ಕ್ರೈಬ್ ಆಗಿತ್ತು. ಆ ಮೂಲಕ ನಿಧಾನಗತಿಯ ಪ್ರಾರಂಭಕ್ಕೆ ಸಾಕ್ಷಿಯಾಯಿತು. ಸೋಮವಾರ ಸಂಜೆ 5 ಗಂಟೆಯ ಹೊತ್ತಿಗೆ ಸ್ಟಾಕ್ ಎಕ್ಸ್​ಚೇಂಜ್ ಡೇಟಾದ ಪ್ರಕಾರ, ರೀಟೇಲ್ ಹೂಡಿಕೆದಾರರಿಗೆ ಮೀಸಲಾಗಿದ್ದ ಭಾಗವು ಶೇ 78ರಷ್ಟು ಸಬ್​ಸ್ಕ್ರೈಬ್ ಆಗಿದ್ದರೆ, ಸಾಂಸ್ಥಿಕ ಹೂಡಿಕೆದಾರರು ಮತ್ತು ಹೈ ನೆಟ್​ ವರ್ಥ್ ವ್ಯಕ್ತಿಗಳ ಪಾಲಿನದು ಕ್ರಮವಾಗಿ ಕೇವಲ ಶೇ 6 ಮತ್ತು ಶೇ 2ರಷ್ಟು ಆಗಿತ್ತು. ಎರಡನೇ ದಿನದ ಚಂದಾದಾರಿಕೆಯು ಹೋಲಿಕೆಯಿಂದ ನೋಡಿದರೆ ಉತ್ತಮವಾಗಿತ್ತು. ಆದರೆ ಅದಕ್ಕೆ ಕಾರಣ ಆಗಿದ್ದು ರೀಟೇಲ್​ ಹೂಡಿಕೆದಾರರಿಂದ ಬಂದ ಹೆಚ್ಚಾದ ಬೇಡಿಕೆ. ರೀಟೇಲ್ ಹೂಡಿಕೆದಾರರಿಗೆ ಮೀಸಲಿದ್ದ ಭಾಗವು ಮಂಗಳವಾರದಂದು ಶೇಕಡಾ 100ಕ್ಕಿಂತ ಹೆಚ್ಚು ಸಬ್​ಸ್ಕ್ರೈಬ್ ಆಗಿದೆ. ಆದರೆ ಅರ್ಹ ಸಾಂಸ್ಥಿಕ ಹೂಡಿಕೆದಾರರ (QIBs) ಭಾಗವು ಶೇಕಡಾ 45ರಷ್ಟು ಸಬ್​ಸ್ಕ್ರೈಬ್ ಆಗಿದೆ ಮತ್ತು ಸಾಂಸ್ಥಿಕ ಅಲ್ಲದ ಹೂಡಿಕೆದಾರರಿಗೆ ಕಾಯ್ದಿರಿಸಿದ ಷೇರುಗಳು ಸಂಜೆ 4 ಗಂಟೆಗೆ ಕೇವಲ ಶೇ 4ರಷ್ಟು ಮಾತ್ರ ಸಬ್​ಸ್ಕ್ರೈಬ್ ಆಗಿದೆ.

ಸಬ್​ಸ್ಕ್ರೈಬ್ ಆದ ಡೇಟಾವನ್ನು ನೋಡಿದರೆ, ದೊಡ್ಡ ಹೂಡಿಕೆದಾರರು ಪೇಟಿಎಂ ಐಪಿಒಗೆ ಹೆಚ್ಚು ಆಕ್ರಮಣಕಾರಿಯಾಗಿ ಬಿಡ್ ಮಾಡಿಲ್ಲ ಎಂದು ತೋರುತ್ತದೆ. ಇದು Nykaa, Zomato ಮತ್ತು ಇತರ ಕೆಲವು ದೊಡ್ಡ ಕಂಪೆನಿಗಳನ್ನೂ ಒಳಗೊಂಡಂತೆ ಇತ್ತೀಚಿನ ಐಪಿಒಗಳಿಗೆ ಇದ್ದ ಬೇಡಿಕೆಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. ಆದರೂ ಯಾವುದೇ ಇತ್ತೀಚಿನ ಐಪಿಒಗಳಿಗೆ ಹೋಲಿಸಿದರೆ ಪೇಟಿಎಂ ಐಪಿಒ ಬೃಹತ್ ಪ್ರಮಾಣದಲ್ಲಿದೆ ಎಂಬುದನ್ನು ಗಮನಿಸಬೇಕು.

ದೊಡ್ಡ ಹೂಡಿಕೆದಾರರಲ್ಲಿ ಆಸಕ್ತಿಯ ಕೊರತೆ ದೊಡ್ಡ ಹೂಡಿಕೆದಾರರಿಂದ ದುರ್ಬಲ ಪ್ರತಿಕ್ರಿಯೆಯು ಇದರ ಹಿಂದಿನ ಸಂಭವನೀಯ ಕಾರಣಗಳಲ್ಲಿ ಒಂದಾಗಿರಬಹುದು. ಐಪಿಒ ಮೌಲ್ಯಮಾಪನವು ಮೊದಲು ನಿರೀಕ್ಷಿಸಿದ್ದಕ್ಕಿಂತ ಕಡಿಮೆಯಿದ್ದರೂ ಅನೇಕ ವಿಶ್ಲೇಷಕರಿಗೆ ಸಮಾಧಾನ ಎನಿಸಿಲ್ಲ. ಹಲವು ವರ್ಷಗಳ ಕಾಲ ವ್ಯವಹಾರದಲ್ಲಿ ಉಳಿದುಕೊಂಡ ನಂತರವೂ ಲಾಭವನ್ನು ನೀಡಲು ಕಂಪೆನಿಯು ಅಸಮರ್ಥವಾಗಿರುವುದನ್ನು ಗಮನದಲ್ಲಿ ಇಟ್ಟುಕೊಂಡು, ಈ ಐಪಿಒವನ್ನು ಅತಿ ಹೆಚ್ಚಾಗಿ ಮೌಲ್ಯಮಾಪನ ಮಾಡಲಾಗಿದೆ ಎಂದು ಅನೇಕ ವಿಶ್ಲೇಷಕರು ಭಾವಿಸುತ್ತಾರೆ. ಕಂಪೆನಿಯು ತನ್ನ ನಷ್ಟವನ್ನು ಕಡಿಮೆ ಮಾಡಲು ಮತ್ತು ವರ್ಷಗಳಲ್ಲಿ ತನ್ನ ವ್ಯವಹಾರವನ್ನು ವೈವಿಧ್ಯಗೊಳಿಸಲು ಕೆಲಸ ಮಾಡುತ್ತಿದ್ದರೂ ಅದು ಇನ್ನೂ ಲಾಭವನ್ನು ನೀಡಿಲ್ಲ. ಮೌಲ್ಯಮಾಪನದ ಬಗ್ಗೆ ಮಾತನಾಡುವಾಗ ಅನೇಕ ವಿಶ್ಲೇಷಕರು ಸೂಚಿಸಿದ ವಿಷಯ ಇದಾಗಿದೆ.

ಪೇಟಿಎಂ ತನ್ನ ಷೇರುಗಳ ಬೆಲೆಯನ್ನು 2,080-2,150ಕ್ಕೆ ನಿಗದಿಪಡಿಸಿದೆ. ಬೆಲೆ ಬ್ಯಾಂಡ್‌ನ ಮೇಲಿನ ಸ್ಪೆಕ್ಟ್ರಮ್‌ನಲ್ಲಿ ಕಂಪೆನಿಯ ಮೌಲ್ಯವನ್ನು 1.39 ಲಕ್ಷ ಕೋಟಿ ಡಾಲರ್​ ಒಯ್ದಿದೆ. ಕಂಪೆನಿಯ ಷೇರು ಮಾರಾಟವು ರೂ. 8,300 ಕೋಟಿಗಳ ಹೊಸ ವಿತರಣೆ ಮತ್ತು ರೂ. 10,000 ಕೋಟಿಗಳವರೆಗೆ ಆಫರ್ ಫಾರ್ ಸೇಲ್ (OFS) ಒಳಗೊಂಡಿದೆ.

ವಿಶ್ಲೇಷಕರಿಂದ ಮಿಶ್ರ ಪ್ರತಿಕ್ರಿಯೆ ಪೇಟಿಎಂ ಐಪಿಒಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ ಎಂದು ಇಲ್ಲಿ ಪ್ರಸ್ತಾಪಿಸುವುದು ಸೂಕ್ತವಾಗುತ್ತದೆ. ಕೆಲವು ವಿಶ್ಲೇಷಕರು ಕಂಪೆನಿಯ ದೀರ್ಘಾವಧಿ ವ್ಯವಹಾರವು ಲಾಭದಾಯಕ ಆಗಬಹುದು ಎಂದು ಉಳಿಸಿಕೊಳ್ಳುವಾಗ, ಮತ್ತೆ ಕೆಲವರು ಈ ಷೇರು ವಿತರಣೆ ಬಗ್ಗೆ ತಟಸ್ಥರಾಗಿದ್ದಾರೆ. ಆದರೆ ಹೆಚ್ಚಿನ ವಿಶ್ಲೇಷಕರು ಷೇರುಗಳ ಬೆಲೆ ದುಬಾರಿ ಎಂದು ಒಪ್ಪುತ್ತಾರೆ. ಕಂಪೆನಿಯು ಎಂದಿಗೂ ಲಾಭವನ್ನು ಪ್ರಕಟಿಸದ ಕಾರಣ ಹಣಕಾಸುಗಳು ದುರ್ಬಲವಾಗಿರುವಂತೆ ಕಂಡುಬರುತ್ತವೆ. ಹೆಚ್ಚಿನ ನಿರ್ವಹಣಾ ನಷ್ಟಗಳು ಮತ್ತು ಹೆಚ್ಚುವರಿ ಕಾರ್ಯನಿರತ ಬಂಡವಾಳದ ಅಗತ್ಯಗಳ ಕಾರಣದಿಂದ FY19, FY20 ಮತ್ತು FY21ಗಾಗಿ ಆಪರೇಟಿಂಗ್ ಚಟುವಟಿಕೆಗಳಿಂದ ಕಂಪೆನಿಯ ನಗದು ಹರಿವು ಋಣಾತ್ಮಕವಾಗಿದೆ. ಭವಿಷ್ಯದಲ್ಲಿ ಋಣಾತ್ಮಕ ನಗದು ಹರಿವು ಕಾರ್ಯಾಚರಣೆಗಳ ಫಲಿತಾಂಶಗಳು ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಐಸಿಐಸಿಐ ಡೈರೆಕ್ಟ್ ಟಿಪ್ಪಣಿಯಲ್ಲಿ ತಿಳಿಸಿದೆ.

ದೊಡ್ಡ ಹೂಡಿಕೆದಾರರು ಎಚ್ಚರಿಕೆಯಿಂದ ಪೇಟಿಎಂ ಐಪಿಒ ನೋಡಲು ಮತ್ತೊಂದು ಕಾರಣವೆಂದರೆ, ಐಪಿಒ “ಅತ್ಯಂತ ಹೆಚ್ಚಿನ ಅಪಾಯದ ಬೆಟ್” ಎಂದು ಸಾಬೀತುಪಡಿಸಬಹುದು ಮತ್ತು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗುವಾಗ ಗಣನೀಯ ಜಿಗಿತವನ್ನು ಕಾಣದೇ ಇರಬಹುದು ಎಂದು ಕೆಲವು ಫಂಡ್ ಮ್ಯಾನೇಜರ್‌ಗಳ ಅಭಿಪ್ರಾಯ ಕೂಡ ಇದಕ್ಕೆ ಕೊಡುಗೆ ನೀಡಿದೆ. ಇನ್ನು ಇದಕ್ಕೆ ವ್ಯತಿರಿಕ್ತವಾಗಿ, ದೇಶದಲ್ಲಿ ಡಿಜಿಟಲ್ ಲ್ಯಾಂಡ್‌ಸ್ಕೇಪ್‌ನ ಭವಿಷ್ಯದ ಬೆಳವಣಿಗೆಯ ಸಾಮರ್ಥ್ಯವನ್ನು ಗಮನದಲ್ಲಿ ಇಟ್ಟುಕೊಂಡು ಹಲವಾರು ವಿಶ್ಲೇಷಕರು ಐಪಿಒ ಬಗ್ಗೆ ವಿಶ್ವಾಸ ಹೊಂದಿದ್ದಾರೆ.

ಗ್ರೇ ಮಾರುಕಟ್ಟೆಯ ಪ್ರೀಮಿಯಂನಲ್ಲಿ ಇಳಿಕೆ ದುರ್ಬಲ ಪ್ರತಿಕ್ರಿಯೆಯ ಹಿಂದಿನ ಇನ್ನೊಂದು ಕಾರಣವೆಂದರೆ, ಕಂಪೆನಿಯ ಷೇರುಗಳ ಗ್ರೇ ಮಾರುಕಟ್ಟೆ ಪ್ರೀಮಿಯಂ (GMP) ನಲ್ಲಿನ ತೀವ್ರ ಕುಸಿತ. ಮಾರುಕಟ್ಟೆ ವೀಕ್ಷಕರ ಪ್ರಕಾರ, ಗ್ರೇ ಮಾರುಕಟ್ಟೆಯಲ್ಲಿ ಪೇಟಿಎಂನ ಪ್ರೀಮಿಯಂ ಕಂಪೆನಿಯ ವಹಿವಾಟು ಮಾಡದ ಷೇರುಗಳು ಅನಧಿಕೃತ ಪ್ಲಾಟ್‌ಫಾರ್ಮ್‌ನಲ್ಲಿ ರೂ. 58ಕ್ಕೆ ಇಳಿದಿದೆ. ಗ್ರೇ ಮಾರುಕಟ್ಟೆ ಪ್ರೀಮಿಯಂ ಸಾಮಾನ್ಯವಾಗಿ ಸ್ಟಾಕ್ ಎಕ್ಸ್​ಚೇಂಜ್​ಗಳಲ್ಲಿ ಲಿಸ್ಟ್​ ಮಾಡಿದ ನಂತರ ಕಂಪೆನಿಯ ಷೇರು ಮೌಲ್ಯವು ಏನೆಂದು ಸ್ಥೂಲವಾದ ಸೂಚನೆಯನ್ನು ನೀಡುತ್ತದೆ. ಪೇಟಿಎಂ ನವೆಂಬರ್ 18ರಂದು ಷೇರು ಮಾರುಕಟ್ಟೆಗೆ ಪದಾರ್ಪಣೆ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ: Paytm IPO: ಪೇಟಿಎಂನ 16,600 ಕೋಟಿ ರೂಪಾಯಿಯ ಐಪಿಒಗೆ ಸೆಬಿಯಿಂದ ಅನುಮತಿ

ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಕೊಪ್ಪಳದಲ್ಲಿ ಯೂರಿಯಾಗಾಗಿ ಒಂದು ಕಿಮೀ ವರೆಗೂ ಸರತಿ ಸಾಲಿನಲ್ಲಿ ನಿಂತ ರೈತರು‌
ಕೊಪ್ಪಳದಲ್ಲಿ ಯೂರಿಯಾಗಾಗಿ ಒಂದು ಕಿಮೀ ವರೆಗೂ ಸರತಿ ಸಾಲಿನಲ್ಲಿ ನಿಂತ ರೈತರು‌
ಚುನಾವಣಾ ಆಯೋಗದಿಂದ ನೋಟಿಸ್, ಬಿಹಾರ ಡಿಸಿಎಂ ವಿಜಯ್ ಹೇಳಿದ್ದೇನು?
ಚುನಾವಣಾ ಆಯೋಗದಿಂದ ನೋಟಿಸ್, ಬಿಹಾರ ಡಿಸಿಎಂ ವಿಜಯ್ ಹೇಳಿದ್ದೇನು?