AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

State Bank Of India: ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾ ಮೂರನೇ ತ್ರೈಮಾಸಿಕ ಲಾಭ ರೂ. 8,432 ಕೋಟಿ

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾವು 2021- 22ನೇ ಸಾಲಿನ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ 8432 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ. ಹಣಕಾಸು ಫಲಿತಾಂಶದ ಇನ್ನಷ್ಟು ವಿವರಗಳು ಇಲ್ಲಿವೆ.

State Bank Of India: ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾ ಮೂರನೇ ತ್ರೈಮಾಸಿಕ ಲಾಭ ರೂ. 8,432 ಕೋಟಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Feb 05, 2022 | 10:47 PM

ದೇಶದ ಅತಿ ದೊಡ್ಡ ಬ್ಯಾಂಕ್​ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank Of India) ಬಡ್ಡಿ ಮಾರ್ಜಿನ್‌ಗಳ ಹೆಚ್ಚಳದಿಂದಾಗಿ ಡಿಸೆಂಬರ್ 31, 2021ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ (YoY) ಶೇಕಡಾ 62.3ರಷ್ಟು ಹೆಚ್ಚಾಗಿ, 8,432 ಕೋಟಿ ರೂಪಾಯಿ ನಿವ್ವಳ ಲಾಭ ಬಂದಿದೆ. ಇದು ಬ್ಯಾಂಕ್ ವರದಿ ಮಾಡಿದ ಅತ್ಯಧಿಕ ತ್ರೈಮಾಸಿಕ ನಿವ್ವಳ ಲಾಭ ಆಗಿದೆ. ವರ್ಷದ ಹಿಂದಿನ ಅವಧಿಯಲ್ಲಿ (Q3FY21) ಎಸ್​ಬಿಐ 5,196 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ದಾಖಲಿಸಿತ್ತು. ಅನುಕ್ರಮವಾಗಿ, ಲಾಭವು Q2FY22ರಲ್ಲಿ ಬಂದಿದ್ದ 7,627 ಕೋಟಿ ರೂಪಾಯಿಗಳಿಗಿಂತ ಶೇಕಡಾ 10.56ರಷ್ಟು ಏರಿಕೆಯಾಗಿದೆ.

ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದ ನಿವ್ವಳ ಬಡ್ಡಿ ಆದಾಯ (NII) FY22Q3ರಲ್ಲಿ ವರ್ಷದಿಂದ ವರ್ಷಕ್ಕೆ ಶೇ 6.48ರಷ್ಟು ಹೆಚ್ಚಾಗಿ, 30,687 ಕೋಟಿ ರೂಪಾಯಿಗೆ ಮುಟ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 28,820 ಕೋಟಿ ರೂಪಾಯಿ ಬಂದಿದೆ. ಅನುಕ್ರಮವಾಗಿ, 31,184 ಕೋಟಿ ರೂಪಾಯಿಗಳಿಂದ ಶೇ.1.6ರಷ್ಟು ಕಡಿಮೆಯಾಗಿದೆ ಎಂದು ಎಸ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ. ಲಾಭದಾಯಕತೆಯ ಅಳತೆಯಾದ ದೇಶೀಯ ನಿವ್ವಳ ಬಡ್ಡಿಯ ಮಾರ್ಜಿನ್ Q3FY22ರಲ್ಲಿ ಶೇ 3.40ರಷ್ಟಿದೆ. ವರ್ಷದಿಂದ ವರ್ಷಕ್ಕೆ 6 ಬೇಸಿಸ್​ ಪಾಯಿಂಟ್ಸ್​ ಏರಿಕೆಯಾಗಿದೆ. ಆದರೆ ಅನುಕ್ರಮವಾಗಿ NIM (Net Interest Margin) Q2FY22ರಲ್ಲಿ ಶೇ 3.50ಯಿಂದ 10 ಬೇಸಿಸ್ ಪಾಯಿಂಟ್‌ ಕುಸಿದಿದೆ.

ಎಸ್​ಬಿಐ ಫಲಿತಾಂಶದ ಇತರ ಪ್ರಮುಖಾಂಶಗಳು ಇಲ್ಲಿವೆ:

– ಇತರೆ ಆದಾಯ – ಶುಲ್ಕಗಳು, ಹೂಡಿಕೆಗಳ ಮಾರಾಟ, ವಸೂಲಾತಿಗಳು ಮತ್ತು ವಿದೇಶೀ ವಿನಿಮಯ ಆದಾಯ – Q3FY22ರಲ್ಲಿ 8,673.42 ಕೋಟಿ ರೂಪಾಯಿಗೆ ಕುಸಿದಿದೆ. ಒಂದು ವರ್ಷದ ಹಿಂದೆ ಇದು 9,246.15 ಕೋಟಿ ರೂಪಾಯಿ ಇತ್ತು.

– ಸಾಲ ನಷ್ಟದ ಪ್ರಾವಿಷನ್​ಗಳು ವರ್ಷದಿಂದ ವರ್ಷಕ್ಕೆ ಶೇ 35.18ರಷ್ಟು ಏರಿಕೆಯಾಗಿ, Q3FY21ರಲ್ಲಿ ಇದ್ದ 2,290 ಕೋಟಿಗಳಿಂದ Q3FY22ಕ್ಕೆ 3,096 ಕೋಟಿ ರೂಪಾಯಿಗಳಿಗೆ ಏರಿಕೆ ಆಗಿದೆ ಮತ್ತು Q2FY21ರಲ್ಲಿ 2,699 ಕೋಟಿಗಳು ತಲುಪಿ, ಶೇ 14.7ರಷ್ಟು ಏರಿಕೆಯಾಗಿದೆ.

– ಮೂರನೇ ತ್ರೈಮಾಸಿಕದಲ್ಲಿ ಆಸ್ತಿ ಗುಣಮಟ್ಟ ಸುಧಾರಿಸಿದೆ ಮತ್ತು ಒಟ್ಟು ಅನುತ್ಪಾದಕ ಆಸ್ತಿಗಳು (NPAs) ಡಿಸೆಂಬರ್ 2021ರಲ್ಲಿ ಶೇಕಡಾ 4.5ಕ್ಕೆ ಇಳಿಕೆಯಾಗಿದ್ದು, ವರ್ಷದ ಹಿಂದೆ ಶೇ 4.77ರಷ್ಟಿತ್ತು ಮತ್ತು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 4.9ರಷ್ಟಿತ್ತು.

– ನಿವ್ವಳ ಎನ್‌ಪಿಎಗಳು 2020ರ ಡಿಸೆಂಬರ್​ನಲ್ಲಿ ಇದ್ದ ಶೇಕಡಾ 1.23ರಿಂದ 2021ರ ಡಿಸೆಂರ್​ನಲ್ಲಿ ಶೇಕಡಾ 1.34ಕ್ಕೆ ಹೆಚ್ಚಳವಾಗಿದೆ. ಆದರೆ ಅವು 2021ರ ಸೆಪ್ಟೆಂಬರ್​ನಲ್ಲಿ ಶೇಕಡಾ 1.52ರಿಂದ ಕಡಿಮೆಯಾಗಿದೆ.

– ಈಗ ವರದಿ ಮಾಡುವ ತ್ರೈಮಾಸಿಕದಲ್ಲಿ ಬ್ಯಾಂಕ್ ಒಂದು ಸಲದ ರೀಸ್ಟ್ರಕ್ಚರಿಂಗ್ ವಿಂಡೋ ಅಡಿಯಲ್ಲಿ ರೂ. 2,583 ಕೋಟಿ ಮೌಲ್ಯದ ಸಾಲಗಳನ್ನು ಪುನರ್​ರಚಿಸಿದೆ. 2021ರ ಡಿಸೆಂಬರ್ ಅಂತ್ಯದ ವೇಳೆಗೆ (Q3FY22) ಒಟ್ಟು ಪುನರ್​ರಚನೆಯ ಲೆಕ್ಕವು 32,895 ಕೋಟಿ ರೂಪಾಯಿ ಇತ್ತು.

ರೀಕಾಸ್ಟ್ ಪೋರ್ಟ್‌ಫೋಲಿಯೋದಲ್ಲಿ ಸ್ಥಿರತೆಯನ್ನು ಸೂಚಿಸುತ್ತಾ, ಎಸ್‌ಬಿಐ ಅಧ್ಯಕ್ಷ ದಿನೇಶ್ ಖರ, ಪುನರ್​ರಚಿಸಿದ ಲೆಕ್ಕವು ಸಮಂಜಸವಾಗಿ ಯೋಗ್ಯ ಪ್ರಭಾವವನ್ನು ತೋರಿಸುತ್ತಿದೆ ಎಂದು ಹೇಳಿದ್ದಾರೆ. ಈ ಪುಸ್ತಕದಲ್ಲಿನ ಅನಿಶ್ಚಿತತೆಗಳ ಕಾರಣಕ್ಕೆ ಉಂಟಾಗುವ ಭವಿಷ್ಯದ ಆಘಾತಗಳಿಂದ ಬ್ಯಾಲೆನ್ಸ್ ಶೀಟ್ ಅನ್ನು ರಕ್ಷಿಸಲು ಬ್ಯಾಂಕ್ ಪುನರ್​ರಚಿಸಿದ ಸಾಲದ ಬಂಡವಾಳದ ವಿರುದ್ಧ ಸಾಕಷ್ಟು ಆಕಸ್ಮಿಕ ಪ್ರಾವಿಷನ್​ಗಳನ್ನು ರಚಿಸಿದೆ ಎಂದು ಅವರು ಹೇಳಿದ್ದಾರೆ. ಬ್ಯಾಡ್​ ಲೋನ್​ ಆಗಿ ಮಾರ್ಪಡುವ ಸಾಧ್ಯತೆ ಇರುವ ರೀಟೇಲ್ ಜಾಲಗಳಿಗೆ (ಫ್ಯೂಚರ್​ ರೀಟೇಲ್) ಬಗ್ಗೆ ಕೇಳಿದಾಗ, ಬ್ಯಾಂಕ್ ಅದಕ್ಕಾಗಿ ಸಾಕಷ್ಟು ಪ್ರಾವಿಷನ್​ಗಳನ್ನು ಮಾಡಿದೆ ಎಂದು ಹೇಳಿದ್ದಾರೆ.

ಬ್ಯಾಂಕ್​ನ ಮುಂಗಡಗಳು ಶೇ 8.47ರಷ್ಟು ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಆಗಿದ್ದು, 26.64 ಟ್ರಿಲಿಯನ್‌ಗೆ ಏರಿಕೆಯಾಗಿದೆ. ವೈಯಕ್ತಿಕ ರೀಟೇಲ್ ಮುಂಗಡಗಳು ವರ್ಷದಿಂದ ವರ್ಷಕ್ಕೆ ಶೇ 14.57ರಷ್ಟು ಮತ್ತು ವಿದೇಶಿ ಕಚೇರಿ ಮುಂಗಡಗಳು ಶೇ 21.35ರಷ್ಟು ಬೆಳೆದಿವೆ. ರೀಟೇಲ್ ವ್ಯಾಪಾರದಲ್ಲಿ ಅಸುರಕ್ಷಿತ ಸಾಲದ ಏರಿಕೆಗೆ ಸಂಬಂಧಿಸಿದಂತೆ, ಸಾಲಗಾರರನ್ನು ಆಯ್ಕೆ ಮಾಡುವಲ್ಲಿ ಬ್ಯಾಂಕ್ ಜಾಗರೂಕವಾಗಿದೆ ಎಂದು ಅವರು ಹೇಳಿದ್ದಾರೆ. ಅದರಲ್ಲಿ ಹೆಚ್ಚಿನವು ಸರ್ಕಾರಗಳು ಮತ್ತು ಸಶಸ್ತ್ರ ಪಡೆಗಳಿಂದ ಸಂಬಳ ಪಡೆಯುತ್ತಿರುವವರು. ಆದ್ದರಿಂದ ಆತಂಕಕ್ಕೆ ಯಾವುದೇ ಕಾರಣವಿಲ್ಲ. ಬ್ಯಾಂಕ್‌ನ ದೇಶೀಯ ಮುಂಗಡಗಳ ಶೇ 24ರಷ್ಟಿರುವ ಗೃಹ ಸಾಲವು ವರ್ಷಕ್ಕೆ ಶೇ 11.15ರಷ್ಟು ಬೆಳವಣಿಗೆಯಾಗಿದೆ. ಕಾರ್ಪೊರೇಟ್ ಮತ್ತು ಎಸ್‌ಎಂಇ ವಿಭಾಗಗಳಲ್ಲಿನ ಬೆಳವಣಿಗೆಯು ತ್ರೈಮಾಸಿಕದಲ್ಲಿ ಏರಿಕೆಯಾಗಿದೆ ಎಂದು ಖರ ಹೇಳಿದ್ದಾರೆ.

ಮೂಲಸೌಕರ್ಯದ ಜೊತೆಗೆ, ಗಣಿಗಾರಿಕೆ ವಲಯವು ಕೂಡ ಬಂಡವಾಳ ವೆಚ್ಚಕ್ಕಾಗಿ ಸಾಲಕ್ಕೆ ಪ್ರಯತ್ನಿಸುತ್ತಿದೆ. ಬಿಡುವಿಲ್ಲದ ಋತುವಿನ ಆರಂಭದಲ್ಲಿ ವರ್ಕಿಂಗ್ ಕ್ಯಾಪಿಟಲ್​ ಮಿತಿಯು ಮೂರನೇ ತ್ರೈಮಾಸಿಕದಲ್ಲಿ ಸುಧಾರಿಸಿದೆ. 2022ರ ಜನವರಿಯಲ್ಲಿ ಬ್ಯಾಂಕ್ ರೂ. 15,000 ಕೋಟಿ ಸಾಲವನ್ನು ನೀಡಿದೆ. ಇದು ಸುಮಾರು 4 ಲಕ್ಷ ಕೋಟಿ ರೂಪಾಯಿಗಳ ಪೈಪ್‌ಲೈನ್ ಹೊಂದಿದೆ ಎಂದು ಅವರು ಹೇಳಿದ್ದಾರೆ. ಎಸ್​ಬಿಐ ಒಟ್ಟು ಠೇವಣಿಗಳು 2021ರ ಡಿಸೆಂಬರ್ ಅಂತ್ಯದ ವೇಳೆಗೆ ವರ್ಷದಿಂದ ವರ್ಷಕ್ಕೆ ಶೇ 8.83ರಷ್ಟು ಬೆಳವಣಿಗೆಯಾಗಿ 38.47 ಲಕ್ಷ ಕೋಟಿ ರೂಪಾಯಿಗೆ ಏರಿದೆ. ಬ್ಯಾಂಕ್​ನ ಕ್ಯಾಪಿಟಲ್ ಅಡಿಕ್ವಸಿ ಅನುಪಾತವು 2020ರ ಡಿಸೆಂಬರ್​ನಲ್ಲಿ ಶೇಕಡಾ 14.5ರಿಂದ 2021 ಡಿಸೆಂಬರ್​ನಲ್ಲಿ ಶೇಕಡಾ 13.23ರಷ್ಟಿತ್ತು. ಈಕ್ವಿಟಿಯ ಮೇಲಿನ ಆದಾಯವು (RoA) ಡಿಸೆಂಬರ್ 2021ರಲ್ಲಿ ಶೇಕಡಾ 14.01ಕ್ಕೆ ಏರಿದ್ದು, ಒಂದು ವರ್ಷದ ಹಿಂದೆ ಶೇ 9.49ರಷ್ಟಿತ್ತು.

ಇದನ್ನೂ ಓದಿ: SBI Credit Card: ಎಸ್​ಬಿಐ ಕಾರ್ಡ್​ದಾರರು ಕ್ರೆಡಿಟ್ ಮಿತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ