AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cryptocurrency: 24 ಗಂಟೆಯಲ್ಲಿ ಏರಿಕೆ ಹಾದಿಗೆ ಕ್ರಿಪ್ಟೋಕರೆನ್ಸಿಗಳು; ಬಿಟ್​ಕಾಯಿನ್, ಎಥೆರಿಯಂ ತಲಾ ಶೇ 9ರಷ್ಟು ಹೆಚ್ಚಳ

ಕಳೆದ 24 ಗಂಟೆಯಲ್ಲಿ ಕ್ರಿಪ್ಟೋಕರೆನ್ಸಿಗಳು ಏರಿಕೆ ಹಾದಿ ಕಂಡಿವೆ. ಯಾವ ಕ್ರಿಪ್ಟೋ ದರ ಈಗ ಎಷ್ಟಿದೆ ಮತ್ತು ಕಳೆದ 24 ಗಂಟೆಯಲ್ಲಿ ಎಷ್ಟು ಬದಲಾವಣೆ ಆಗಿದೆ ಎಂಬ ಮಾಹಿತಿ ಇಲ್ಲಿದೆ.

Cryptocurrency: 24 ಗಂಟೆಯಲ್ಲಿ ಏರಿಕೆ ಹಾದಿಗೆ ಕ್ರಿಪ್ಟೋಕರೆನ್ಸಿಗಳು; ಬಿಟ್​ಕಾಯಿನ್, ಎಥೆರಿಯಂ ತಲಾ ಶೇ 9ರಷ್ಟು ಹೆಚ್ಚಳ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Feb 05, 2022 | 2:23 PM

ಜಾಗತಿಕ ಕ್ರಿಪ್ಟೋಕರೆನ್ಸಿ (Cryptocurrency) ಮಾರುಕಟ್ಟೆ ಮೌಲ್ಯವು ಕಳೆದ 24 ಗಂಟೆಯಲ್ಲಿ 1.70 ಲಕ್ಷ ಕೋಟಿ ಡಾಲರ್​ನಿಂದ 1.87 ಲಕ್ಷ ಕೋಟಿ ಡಾಲರ್​ಗೆ ಏರಿಕೆ ಆಗಿದೆ. ಫೆಬ್ರವರಿ 4ನೇ ತಾರೀಕಿನಂದು ವಹಿವಾಟಿನ ಪರಿಮಾಣ (ಟ್ರೇಡಿಂಗ್ ವಾಲ್ಯೂಮ್) 68.72 ಬಿಲಿಯನ್ ಡಾಲರ್​ನಿಂದ 90.36 ಬಿಲಿಯನ್ ಡಾಲರ್​ಗೆ ಏರಿಕೆ ಆಗಿದೆ. ವಿಕೇಂದ್ರೀಕೃತ ಫೈನಾನ್ಸ್ (DeFi) ಕಳೆದ 24 ಗಂಟೆಯಲ್ಲಿ ಒಟ್ಟಾರೆ ಕ್ರಿಪ್ಟೋಕರೆನ್ಸಿಯ ವಹಿವಾಟಿನ ವಾಲ್ಯೂಮ್ 12.21 ಬಿಲಿಯನ್​ ಡಾಲರ್​ನ ಶೇ 13.44ರಷ್ಟಾಗುತ್ತದೆ. ಮತ್ತೊಂದು ಕಡೆ, ಸ್ಥಿರವಾದ ಕಾಯಿನ್ಸ್ ಪಾಲು ಕಳೆದ 24 ಗಂಟೆಯ ವಾಲ್ಯೂಮ್ ಶೇ 81.35ರಷ್ಟಾಗಿದ್ದು, 73.92 ಬಿಲಿಯನ್​ ಡಾಲರ್​ ಆಗುತ್ತದೆ. ಬಿಟ್​ಕಾಯಿನ್​ನ ಪಾರಮ್ಯ ಸ್ವಲ್ಪ ಪ್ರಮಾಣದಲ್ಲಿ ಜಾಸ್ತಿಯಾಗಿ ಶೇ 41.65 ಆಗಿದ್ದು, ಫೆಬ್ರವರಿ 5ರಂದು ವರ್ಚುವಲ್ ಟೋಕನ್ 41,388.68 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ.

ವಿಶ್ವದ ಅತಿ ದೊಡ್ಡ ಮತ್ತು ಹೆಸರಾಂತ ಕ್ರಿಪ್ಟೋಕರೆನ್ಸಿ ಜನವರಿ 24ರಂದು ತಲುಪಿದ್ದ ವಾರ್ಷಿಕ ಕನಿಷ್ಠ ಮಟ್ಟವಾದ 32,950.72 ಡಾಲರ್​ನಿಂದ ಶೇ 23.2ರಷ್ಟು ಮೇಲೇರಿದೆ. ಇನ್ನು ಭಾರತದ ರೂಪಾಯಿ ಲೆಕ್ಕದಲ್ಲಿ ಬಿಟ್​ಕಾಯಿನ್ ದರಗಳು ಶೇ 9ರಷ್ಟು ಹೆಚ್ಚಾಗಿ, 32,33,214 (32.33 ಲಕ್ಷ ರೂಪಾಯಿ) ಆಗಿದೆ. ಎಥೆರಿಯಂ ಶೇ 9.5ರಷ್ಟು ಮೇಲೇರಿ, 2,34,199.9 ರೂಪಾಯಿ ಆಗಿದೆ. ಕಾರ್ಡಾನೊ ಶೇ 6ರಷ್ಟು ಜಾಸ್ತಿಯಾಗಿ ರೂ. 88.73 ಆಗಿದ್ದರೆ, ಅವಲಂಚೆ ಶೇ 11ರಷ್ಟು ಜಿಗಿದು, ರೂ. 6,096.60 ಮುಟ್ಟಿದೆ. ಪೋಲ್ಕ್​ಡಾಟ್ ಶೇ 7ರಷ್ಟು ಬೆಳವಣಿಗೆ ಕಂಡು, ರೂ. 1617.09 ಆಗಿದ್ದು, ಕಳೆದ 24 ಗಂಟೆಯಲ್ಲಿ ಲೈಟ್​ಕಾಯಿನ್ ಶೇ 6.7ರಷ್ಟು ಮೇಲೇರಿ ರೂ. 9,320ರಲ್ಲಿದೆ.

ಕ್ರಿಪ್ಟೋಕರೆನ್ಸಿಗೆ ಭಾರತದಲ್ಲಿ ಕಾನೂನುಬದ್ಧ ಮಾನ್ಯತೆ ಸಿಗುವುದಿಲ್ಲ ಎಂದು ಭಾರತೀಯ ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರು ಗುರುವಾರ ಹೇಳಿದ್ದಾರೆ. ಆ ಮೂಲಕ ಮಾರುಕಟ್ಟೆಯಲ್ಲಿ ಖಾಸಗಿ ಡಿಜಿಟಲ್ ಕರೆನ್ಸಿಗಳ ಕಾನೂನುಬದ್ಧತೆಯ ವದಂತಿಯನ್ನು ತಳ್ಳಿಹಾಕಿದ್ದಾರೆ.2022-23ರ ಬಜೆಟ್ ವರ್ಚುವಲ್ ಡಿಜಿಟಲ್ ಸ್ವತ್ತುಗಳ ತೆರಿಗೆಯ ಬಗ್ಗೆ ಸ್ಪಷ್ಟತೆಯನ್ನು ನೀಡಿದೆ ಮತ್ತು ಕ್ರಿಪ್ಟೋ ವಹಿವಾಟುಗಳನ್ನು ಮಿತಿ ಮೀರಿ, ಶೇ 1 ಟಿಡಿಎಸ್‌ಗೆ ಒಳಪಡಿಸುವುದರ ಜೊತೆಗೆ ಅಂತಹ ವಹಿವಾಟುಗಳ ಮೇಲೆ ಗಳಿಸಿದ ಲಾಭಗಳ ಮೇಲೆ ಶೇ 30ರಷ್ಟು ತೆರಿಗೆಯನ್ನು ವಿಧಿಸಲು ಪ್ರಸ್ತಾಪಿಸಿದೆ.

ಫೆಬ್ರವರಿ 5ನೇ ತಾರೀಕಿನ ಬೆಳಗ್ಗೆ 8.25ಕ್ಕೆ ಭಾರತೀಯ ಮಾರುಕಟ್ಟೆಯಲ್ಲಿನ ವಿವಿಧ ಕ್ರಿಪ್ಟೋಕರೆನ್ಸಿಗಳ ಬೆಲೆಗಳ ವಿವರ ಇಲ್ಲಿದೆ (WazirX.comನಿಂದ ಡೇಟಾ)

ಕ್ರಿಪ್ಟೋಕರೆನ್ಸಿ ಬೆಲೆ (ರೂಪಾಯಿಗಳಲ್ಲಿ)- 24 ಗಂಟೆಗಳಲ್ಲಿ ಬದಲಾವಣೆ (ಶೇಕಡಾವಾರು ಪ್ರಮಾಣ)

ಬಿಟ್‌ಕಾಯಿನ್- ರೂ. 32,27,530 – ಶೇ 8.75

ಎಥೆರಿಯಮ್- ರೂ. 2,34,076.5- ಶೇ 9.3

ಕಾರ್ಡಾನೊ- ರೂ. 88.89- ಶೇ 6.08

ಟೆಥರ್- ರೂ. 78.19- ಶೇ 1.84

ಸೊಲಾನಾ- ರೂ. 8,713.10- ಶೇ 6.76

ಅವಲಂಚೆ- ರೂ. 6,098.397- ಶೇ 12.07

ಲೈಟ್​ ಕಾಯಿನ್ (Litecoin)- ರೂ. 9,340.19- ಶೇ 7.05

XRP- ರೂ. 52.13 – ಶೇ 7.16

ಆಕ್ಸಿ – ರೂ. 4,163.30 – ಶೇ 6.75

ಇದನ್ನೂ ಓದಿ: Budget 2022 ವರ್ಚುವಲ್‌ ಡಿಜಿಟಲ್‌ ಸ್ವತ್ತು, ಕ್ರಿಪ್ಟೊಕರೆನ್ಸಿಗಳ ಮೂಲಕ ಗಳಿಸುವ ಆದಾಯದ ಮೇಲೆ ಶೇ 30 ತೆರಿಗೆ: ಏನಿದು ಕ್ರಿಪ್ಟೊ ತೆರಿಗೆ?

Published On - 2:21 pm, Sat, 5 February 22

Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್