IMPS Charges: ಎಸ್​ಬಿಐನಲ್ಲಿ 5 ಲಕ್ಷ ರೂಪಾಯಿ ತನಕ ಆನ್​ಲೈನ್ ಐಎಂಪಿಎಸ್​ ವಹಿವಾಟುಗಳಿಗೆ ಯಾವುದೇ ಶುಲ್ಕವಿಲ್ಲ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ರೂ. 5 ಲಕ್ಷದ ತನಕ ಐಎಂಪಿಎಸ್ ವಹಿವಾಟಿಗೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ ಎಂದು ಎಸ್​ಬಿಐ ಘೋಷಣೆ ಮಾಡಿದೆ.

IMPS Charges: ಎಸ್​ಬಿಐನಲ್ಲಿ 5 ಲಕ್ಷ ರೂಪಾಯಿ ತನಕ ಆನ್​ಲೈನ್ ಐಎಂಪಿಎಸ್​ ವಹಿವಾಟುಗಳಿಗೆ ಯಾವುದೇ ಶುಲ್ಕವಿಲ್ಲ
ಸಾಂದರ್ಭಿಕ ಚಿತ್ರ
Follow us
| Updated By: Srinivas Mata

Updated on: Jan 05, 2022 | 8:42 AM

5 ಲಕ್ಷ ರೂಪಾಯಿವರೆಗಿನ ಆನ್‌ಲೈನ್ ಇನ್​ಸ್ಟಂಟ್ ಪೇಮೆಂಟ್ ಸರ್ವೀಸ್​ (IMPS) ವಹಿವಾಟುಗಳಿಗೆ ಯಾವುದೇ ಸೇವಾ ಶುಲ್ಕವನ್ನು ವಿಧಿಸುವುದಿಲ್ಲ ಎಂದು ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಜನವರಿ 4 ರಂದು ಘೋಷಣೆ ಮಾಡಿದೆ. ಈ ಹಿಂದೆ 2 ಲಕ್ಷ ರೂಪಾಯಿವರೆಗಿನ ಆನ್‌ಲೈನ್ ಐಎಂಪಿಎಸ್ ವಹಿವಾಟುಗಳಿಗೆ ಸೇವಾ ಶುಲ್ಕದಿಂದ ವಿನಾಯಿತಿ ನೀಡಲಾಗಿತ್ತು. “ಗ್ರಾಹಕರು ಡಿಜಿಟಲ್ ಬ್ಯಾಂಕಿಂಗ್ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವ ಉದ್ದೇಶದಿಂದ ಎಸ್‌ಬಿಐ ಯೋನೋ ಸೇರಿದಂತೆ ಇಂಟರ್​ನೆಟ್ ಬ್ಯಾಂಕಿಂಗ್/ಮೊಬೈಲ್ ಬ್ಯಾಂಕಿಂಗ್ ಮೂಲಕ ಮಾಡುವ 5 ಲಕ್ಷ ರೂಪಾಯಿವರೆಗಿನ ಐಎಂಪಿಎಸ್ ವಹಿವಾಟುಗಳಿಗೆ ಯಾವುದೇ ಸೇವಾ ಶುಲ್ಕವನ್ನು ವಿಧಿಸುವುದಿಲ್ಲ,” ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.

ಬ್ಯಾಂಕ್ ಶಾಖೆಗಳ ಮೂಲಕ ನಡೆಸುವ IMPS ವಹಿವಾಟುಗಳಿಗೆ ಸೇವಾ ಶುಲ್ಕವನ್ನು ವಿಧಿಸಲು 2 ಲಕ್ಷದಿಂದ 5 ಲಕ್ಷದವರೆಗೆ ಹೊಸ ಸ್ಲ್ಯಾಬ್ ಅನ್ನು ಸೇರಿಸಲಾಗಿದೆ. “ಈ ಸ್ಲ್ಯಾಬ್‌ಗೆ ಪ್ರಸ್ತಾವಿತ ಸೇವಾ ಶುಲ್ಕಗಳು ರೂ 20 + ಜಿಎಸ್‌ಟಿ,” ಈ ನಿರ್ದೇಶನವು ಫೆಬ್ರವರಿ 1, 2022ರಿಂದ ಜಾರಿಗೆ ಬರಲಿದೆ ಎಂದು ಎಸ್‌ಬಿಐ ಹೇಳಿದೆ. ಗಮನಾರ್ಹವಾಗಿ, ಬ್ಯಾಂಕ್ ಶಾಖೆಯಲ್ಲಿ ರೂ. 1,000ದಿಂದ ರೂ. 10,000 ವರೆಗಿನ ಮೊತ್ತದ IMPS ವಹಿವಾಟುಗಳಿಗೆ ರೂ. 2 + GST ​ಸೇವಾ ಶುಲ್ಕವನ್ನು ಪಡೆಯುತ್ತದೆ. ವಹಿವಾಟಿನ ಮೊತ್ತವು ರೂ. 10,000 ದಿಂದ ರೂ. 1,00,000ವರೆಗೆ ಇದ್ದರೆ ರೂ. 4 + ಜಿಎಸ್​ಟಿ ಶುಲ್ಕವನ್ನು ವಿಧಿಸಲಾಗುತ್ತದೆ. ರೂ. 1,00,000 ಮತ್ತು ರೂ. 2,00,000 ನಡುವಿನ ಮೊತ್ತದ ವಹಿವಾಟುಗಳ ಮೇಲೆ ರೂ. 12 + ಜಿಎಸ್​ಟಿ ವಿಧಿಸಲಾಗುತ್ತದೆ.

ಈ ಮೇಲಿನ ಸ್ಲ್ಯಾಬ್‌ಗಳ ಪ್ರಕಾರ, ಅದೇ ಸೇವಾ ಶುಲ್ಕವನ್ನು ಬ್ಯಾಂಕ್ ಶಾಖೆಯ ಮೂಲಕ NEFT/RTGS ವಹಿವಾಟುಗಳಿಗೆ ವಿಧಿಸಲಾಗುತ್ತದೆ. NEFT/RTGS ಗೆ ಹೋಲಿಸಿದರೆ, IMPS ಅದರ 24×7 ಲಭ್ಯತೆ ಮತ್ತು ಶೀಘ್ರ ದೇಶೀಯ ಹಣ ವರ್ಗಾವಣೆ ವೈಶಿಷ್ಟ್ಯದಿಂದಾಗಿ ನೆಟ್-ಬ್ಯಾಂಕಿಂಗ್ ಬಳಕೆದಾರರಲ್ಲಿ ಹೆಚ್ಚು ಜನಪ್ರಿಯವಾಗಿದೆ.

ಇದನ್ನೂ ಓದಿ: ಫೆಬ್ರವರಿ 1ರಿಂದ 2 ಲಕ್ಷದಿಂದ 5 ಲಕ್ಷದವರೆಗಿನ ಐಎಂಪಿಎಸ್ ವರ್ಗಾವಣೆಗೆ ಎಸ್‌ಬಿಐನಿಂದ ರೂ. 20 + ಜಿಎಸ್‌ಟಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ