UPI ATM: ಭಾರತದಲ್ಲಿ ವಿಶ್ವದ ಮೊದಲ ಯುಪಿಐ ಎಟಿಎಂ; ಕಳ್ಳಕಾಕರ ಭಯ ದೂರ ಮಾಡುವ ವಿನೂತನ ಟೆಕ್ನಾಲಜಿ

|

Updated on: Sep 06, 2023 | 11:38 AM

Hitachi Payment Services: ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆ ಸಹಯೋಗದಲ್ಲಿ ಹಿಟಾಚಿ ಪೇಮೆಂಟ್ ಸರ್ವಿಸಸ್ ಭಾರತದಲ್ಲಿ ಮೊದಲ ಯುಪಿಐ ಎಟಿಎಂ ಅನ್ನು ಸ್ಥಾಪಿಸಿದೆ. ಎಟಿಎಂ ಕಾರ್ಡ್ ಬಳಸದೆಯೇ, ಯಾವುದೇ ಯುಪಿಐ ಆ್ಯಪ್ ಮೂಲಕ ಎಟಿಎಂ ಸೆಂಟರ್​ನಲ್ಲಿ ನಗದು ಹಣ ವಿತ್​ಡ್ರಾ ಮಾಡಬಹುದಾಗಿದೆ. ಈಗಾಗಲೇ ಎಸ್​ಬಿಐ ಮೊದಲಾದ ಬ್ಯಾಂಕುಗಳ ಕೆಲ ಎಟಿಎಂಗಳಲ್ಲಿ ಯುಪಿಐ ಫೆಸಿಲಿಟಿ ಇದೆಯಾದರೂ ಅದಕ್ಕೆ ಅ ಬ್ಯಾಂಕ್​ನ ಆ್ಯಪ್ ಬೇಕಾಗುತ್ತದೆ. ಆದರೆ, ಹಿಟಾಚಿಯ ಯುಪಿಐ ಎಟಿಎಂನಲ್ಲಿ ಯಾವುದೇ ಆ್ಯಪ್ ಬಳಸಬಹುದು.

UPI ATM: ಭಾರತದಲ್ಲಿ ವಿಶ್ವದ ಮೊದಲ ಯುಪಿಐ ಎಟಿಎಂ; ಕಳ್ಳಕಾಕರ ಭಯ ದೂರ ಮಾಡುವ ವಿನೂತನ ಟೆಕ್ನಾಲಜಿ
ಯುಪಿಐ
Follow us on

ಭಾರತದಲ್ಲಿ ಯುಪಿಐ ಪಾವತಿಯ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಬಹುತೇಕ ಭಾರತೀಯರು ಹಣದ ವಹಿವಾಟಿಗೆ ಯುಪಿಐ ಸಾಧನವನ್ನೇ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಹಣಕಾಸು ತಂತ್ರಜ್ಞಾನ (ಪಿನ್​ಟೆಕ್) ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹವಾಗಿ ಹೆಚ್ಚುತ್ತಿರುವುದರ ಫಲವಾಗಿ ಯುಪಿಐ ಪಾವತಿ ವ್ಯವಸ್ಥೆಯಲ್ಲಿ ನಿರಂತರವಾಗಿ ಸುಧಾರಣೆಗಳಾಗುತ್ತಿವೆ. ವಿಶ್ವದ ಫಿನ್​ಟೆಕ್ (FinTech) ವಲಯದಲ್ಲಿ ಭಾರತ ಮುಂಚೂಣಿ ಆಟಗಾರನಾಗಿ ಮಿಂಚುತ್ತಿದೆ. ಇದೀಗ ಭಾರತದಲ್ಲಿ ಯುಪಿಐ ಎಟಿಎಂ ಆರಂಭವಾಗಿದೆ. ಎಟಿಎಂ ಕಾರ್ಡ್ ಬಳಸದೆಯೇ, ಯುಪಿಐ ಆ್ಯಪ್ ಮೂಲಕ ಎಟಿಎಂನಲ್ಲಿ ಕ್ಯಾಷ್ ವಿತ್​ಡ್ರಾ ಮಾಡಬಹುದು.

ಇಂಥ ಯುಪಿಐ ಎಟಿಎಂ ಭಾರತದಲ್ಲಿ ಇದೇ ಪ್ರಥಮ ಪ್ರಯೋಗವಲ್ಲ. ಎಸ್​ಬಿಐ, ಎಚ್​ಡಿಎಫ್​ಸಿ ಮೊದಲಾದ ಬ್ಯಾಂಕುಗಳ ಎಟಿಎಂಗಳಲ್ಲಿ ಯುಪಿಐ ಮೂಲಕ ಹಣ ವಿತ್​ಡ್ರಾ ಮಾಡುವ ಸೌಲಭ್ಯಗಳುಂಟು. ಆದರೆ, ಅದನ್ನು ಬಳಸಬೇಕಾದರೆ ಆಯಾ ಬ್ಯಾಂಕ್​ನ ಆ್ಯಪ್​ಗಳೇ ಬೇಕಾಗುತ್ತದೆ. ಆದರೆ, ಯಾವುದೇ ಯುಪಿಐ ಪೇಮೆಂಟ್ ಪ್ಲಾಟ್​ಫಾರ್ಮ್ ಬಳಸಿ ಕ್ಯಾಷ್ ಪಡೆಯಬಲ್ಲ ಸೌಲಭ್ಯ ಇದೇ ಮೊದಲ ಬಾರಿಗೆ ಆರಂಭವಾಗಿದೆ.

ಇದನ್ನೂ ಓದಿ: ಜಾಂಬಿಯಾ ದೇಶದ ತಾಮ್ರ ಗಣಿಗಾರಿಕೆ ಅಧಿಕಾರ ಮತ್ತೆ ಭಾರತದ ವೇದಾಂತ ಸಂಸ್ಥೆಯ ತೆಕ್ಕೆಗೆ; 4 ವರ್ಷಗಳ ಕಾನೂನು ಸಮರ ಸುಖಾಂತ್ಯ

ಯುಪಿಐ ಎಟಿಎಂ ಹಿಂದಿನ ಶಕ್ತಿ ಹಿಟಾಚಿ ಪೇಮೆಂಟ್ ಸರ್ವಿಸಸ್

ಭಾರತದ ಪ್ರಮುಖ ವೈಟ್ ಲೇಬಲ್ ಎಟಿಎಂ ಆಪರೇಟರ್​ಗಳಲ್ಲಿ ಒಂದಾದ ಹಿಟಾಚಿ ಪೇಮೆಂಟ್ ಸರ್ವಿಸ್ ಈ ಯುಪಿಐ ಎಟಿಎಂ ಹಿಂದಿರುವ ಶಕ್ತಿ. ಯುಪಿಐ ಅನ್ನು ಅಭಿವೃದ್ದಿಪಡಿಸಿರುವ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆ ಸಹಯೋಗದೊಂದಿಗೆ ಹಿಟಾಚಿ ಪೇಮೆಂಟ್ ಸರ್ವಿಸಸ್ ಯುಪಿಐ ಎಟಿಎಂ ಅನ್ನು ಅಭಿವೃದ್ಧಿಪಡಿಸಿದೆ.

ಎಟಿಎಂ ಸೆಂಟರ್​ಗಳಲ್ಲಿ ಕಾರ್ಡ್ ಸ್ಕಿಮ್ಮಿಂಗ್ ಇತ್ಯಾದಿ ಅಪರಾಧಗಳಾಗುವ ಅಪಾಯ ಇದ್ದೇ ಇದೆ. ಯುಪಿಐ ಎಟಿಎಂನಿಂದ ಇದು ತಪ್ಪುತ್ತದೆ. ಎಟಿಎಂನ ಪರದೆಯಲ್ಲಿ ಕಾಣುವ ಕ್ಯುಆರ್ ಕೋಡ್ ಅನ್ನು ಯುಪಿಐ ಆ್ಯಪ್​ನಿಂದ ಸ್ಕ್ಯಾನ್ ಮಾಡಿ ಹಣವನ್ನು ಸುಲಭವಾಗಿ ವಿತ್​ಡ್ರಾ ಮಾಡಬಹುದು.

ಇದನ್ನೂ ಓದಿ: ಏರ್ ಇಂಡಿಯಾ ಪ್ರಯಾಣಿಕರೇ ನಿಮ್ಮ ಗಮನಕ್ಕೆ, ಜಿ20 ಶೃಂಗಸಭೆ ಸಮಯದಲ್ಲಿ ದೆಹಲಿಗೆ ಟಿಕೆಟ್ ಬುಕ್ ಮಾಡಿದ್ದೀರಾ? ಈ ಸುದ್ದಿ ಓದಿ

ಭಾರತದಲ್ಲಿ ಎಟಿಎಂ ಸೆಂಟರ್​ಗಳನ್ನು ಇವತ್ತಿನ ದಿನದ ಬೇಡಿಕೆಗೆ ಅನುಗುಣವಾಗಿ ಅಪ್​ಗ್ರೇಡ್ ಮಾಡಲು ಯುಪಿಐ ಎಟಿಎಂ ಎಡೆ ಮಾಡಿಕೊಡುವ ಸಾಧ್ಯತೆ ಇದೆ. ಇಂಡಿಯಾ1 ಪೇಮೆಂಟ್ಸ್ ಲಿ ಬಳಿಕ ಭಾರತದ ಅತಿದೊಡ್ಡ ವೈಟ್ ಲೇಬಲ್ ಎಟಿಎಂ ಆಪರೇಟರ್​ ಎನಿಸಿದ ಹಿಟಾಚಿ ಪೇಮೆಂಟ್ ಸರ್ವಿಸಸ್ ದೇಶಾದ್ಯಂತ 8 ಸಾವಿರಕ್ಕೂ ಹೆಚ್ಚು ಎಟಿಎಂ ಸೆಂಟರ್​ಗಳನ್ನು ನಿರ್ವಹಿಸುತ್ತದೆ. ವೈಟ್ ಲೇಬಲ್ ಎಟಿಎಂ ಎಂದರೆ ನಾನ್ ಬ್ಯಾಂಕಿಂಗ್ ಸಂಸ್ಥೆಗಳಿಗೆ ನೀಡಲಾಗುವ ಎಟಿಎಂ ಸೇವೆ. ಈ ಎಟಿಎಂ ಸರ್ವಿಸ್ ಮಾತ್ರವಲ್ಲ, ಪೇಮೆಂಟ್ ಗೇಟ್​ವೇ ಸಲ್ಯೂಶನ್ಸ್, ಪಿಒಎಸ್ ಸಲ್ಯೂಶನ್ಸ್, ಟೋಲ್ ಸಲ್ಯೂಶನ್ಸ್ ಇತ್ಯಾದಿ ವಿವಿಧ ಫಿನ್​ಟೆಕ್ ಸೇವೆಗಳನ್ನು ಹಿಟಾಚಿ ಒದಗಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ