Deepavali Bonus: 11 ಲಕ್ಷಕ್ಕೂ ಹೆಚ್ಚು ರೈಲ್ವೆ ಉದ್ಯೋಗಿಗಳಿಗೆ ಕೇಂದ್ರದಿಂದ ಬೋನಸ್

|

Updated on: Oct 19, 2023 | 1:04 PM

ಕೇಂದ್ರ ಸರ್ಕಾರ ಬುಧವಾರ (ಅ.18) ದೀಪಾವಳಿ ಬೋನಸ್ ಪ್ರಕಟಿಸಿತ್ತು. ಇದರಲ್ಲಿ ರೈಲ್ವೇ ಇಲಾಖೆಗೂ ಮಹತ್ವದ ಘೋಷಣೆಯನ್ನು ಮಾಡಿದೆ. ದೀಪವಾಳಿಗೂ ಮುನ್ನ ಕೇಂದ್ರ ಸರ್ಕಾರ ಗೆಜೆಟೆಡ್ ಅಲ್ಲದ 11.07 ಲಕ್ಷಕ್ಕೂ ಹೆಚ್ಚು ರೈಲ್ವೆ ಉದ್ಯೋಗಿಗಳಿಗೆ ಬೋನಸ್​​ ನೀಡಲು ನಿರ್ಧಾರಿಸಿದೆ. ನೆನ್ನೆ ಅಂದರೆ ಬುಧವಾರ (ಅ.18) ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯನ್ನು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

Deepavali Bonus: 11 ಲಕ್ಷಕ್ಕೂ ಹೆಚ್ಚು ರೈಲ್ವೆ ಉದ್ಯೋಗಿಗಳಿಗೆ ಕೇಂದ್ರದಿಂದ ಬೋನಸ್
ಸಾಂದರ್ಭಿಕ ಚಿತ್ರ
Follow us on

ಕೇಂದ್ರ ಸರ್ಕಾರ ಬುಧವಾರ (ಅ.18) ದೀಪಾವಳಿ ಬೋನಸ್ (Deepavali Bonus) ಪ್ರಕಟಿಸಿತ್ತು. ಇದರಲ್ಲಿ ರೈಲ್ವೇ ಇಲಾಖೆಗೂ ಮಹತ್ವದ ಘೋಷಣೆಯನ್ನು ಮಾಡಿದೆ. ದೀಪವಾಳಿಗೂ ಮುನ್ನ ಕೇಂದ್ರ ಸರ್ಕಾರ ಗೆಜೆಟೆಡ್ ಅಲ್ಲದ (non-gazetted Railway employees) 11.07 ಲಕ್ಷಕ್ಕೂ ಹೆಚ್ಚು ರೈಲ್ವೆ ಉದ್ಯೋಗಿಗಳಿಗೆ ಬೋನಸ್​​ ನೀಡಲು ನಿರ್ಧಾರಿಸಿದೆ. ನೆನ್ನೆ ಅಂದರೆ ಬುಧವಾರ (ಅ.18) ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯನ್ನು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಾನ್ ಗ್ಯಾಜೆಟ್ ರೈಲ್ವೆ ನೌಕರರಿಗೆ 78 ದಿನಗಳ ಉತ್ಪಾದಕತೆಯ ಬೋನಸ್ ನೀಡಲು ನಿರ್ಧರಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದ 11,07,346 ರೈಲ್ವೆ ನೌಕರರಿಗೆ ಅನುಕೂಲವಾಗಲಿದ್ದು, ಸರ್ಕಾರದ ಬೊಕ್ಕಸಕ್ಕೆ 1969 ಕೋಟಿ ರೂ. ಹೊರೆ ಬೀಳಲಿದೆ.

2022-2023 ಸಾಲಿನ ಹಣಕಾಸು ವರ್ಷದಲ್ಲಿ ರೈಲ್ವೆ ನೌಕರರಿಗೆ 78 ದಿನಗಳ ಬೋನಸ್ ನೀಡಲು ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಗೆಜೆಟ್ ಅಲ್ಲದ ರೈಲ್ವೇ ನೌಕರರಿಗೆ 78 ದಿನಗಳ ವೇತನಕ್ಕೆ ಸಮಾನವಾದ ಉತ್ಪಾದಕತೆ ಸಂಬಂಧಿತ ಬೋನಸ್ ನೀಡಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮಾಧ್ಯಮಗಳಿಗೆ ಹೇಳಿದ್ದಾರೆ. ಇದು ರೈಲ್ವೆ ಕಾರ್ಮಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕೇಂದ್ರ ಸರ್ಕಾರದಿಂದ ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್; ಹಬ್ಬಕ್ಕೆ ಮುಂಚೆ 7,000 ರೂವರೆಗೆ ಬೋನಸ್ ಪ್ರಕಟ

ಈ ಬೋನಸ್​​​ಗಳನ್ನು ಟ್ರ್ಯಾಕ್ ನಿರ್ವಾಹಕರು, ಲೋಕೋ ಪೈಲಟ್‌ಗಳು, ರೈಲು ವ್ಯವಸ್ಥಾಪಕರು (ಗಾರ್ಡ್‌ಗಳು), ಸ್ಟೇಷನ್ ಮಾಸ್ಟರ್‌ಗಳು, ಮೇಲ್ವಿಚಾರಕರು, ತಂತ್ರಜ್ಞರು, ತಾಂತ್ರಿಕ ಸಹಾಯಕರು, ಪಾಯಿಂಟ್‌ಮೆನ್, ಮಂತ್ರಿ ಸಿಬ್ಬಂದಿ ಮತ್ತು ಆರ್‌ಪಿಎಫ್ ಮತ್ತು ಆರ್‌ಪಿಎಸ್‌ಎಫ್ ಪರ್ಸೆವಲ್ ಹೊರತುಪಡಿಸಿ ಇತರ ಗ್ರೂಪ್ ಸಿ ಕಾರ್ಮಿಕರಿಗೆ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ. ರೈಲ್ವೆ ಸಿಬ್ಬಂದಿಯ ಅತ್ಯುತ್ತಮ ಕಾರ್ಯನಿರ್ವಹಣೆಯಿಂದಾಗಿ ಈ ಬಾರಿ ರೈಲ್ವೆ ನೌಕರರಿಗೆ 1968.86 ಕೋಟಿ ರೂ. ವೆಚ್ಚದಲ್ಲಿ ಬೋನಸ್ ನೀಡಲು ಸಾಧ್ಯವಾಗಿದೆ ಎಂದು ಸರ್ಕಾರ ಹೇಳಿದೆ. 2022-23ರಲ್ಲಿ ರೈಲ್ವೆಯ ಕಾರ್ಯಕ್ಷಮತೆ ಉತ್ತಮವಾಗಿದ್ದು, 6.5 ಶತಕೋಟಿ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಇನ್ನು ಗೂಡ್ಸ್​​ಗಳಲ್ಲಿ 1509 ಮಿಲಿಯನ್ ಟನ್‌ಗಳ ದಾಖಲೆಯ ಸರಕು ಸಾಗಣೆ ನಡೆದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ