Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepavali Bonus: ಕೇಂದ್ರ ಸರ್ಕಾರದಿಂದ ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್; ಹಬ್ಬಕ್ಕೆ ಮುಂಚೆ 7,000 ರೂವರೆಗೆ ಬೋನಸ್ ಪ್ರಕಟ

Central Government Gift For Its Employees: ಕೇಂದ್ರ ಸರ್ಕಾರದ ಗ್ರೂಪ್ ಸಿ ನೌಕರರು ಹಾಗೂ ನಾನ್ ಗೆಜೆಟೆಡ್ ಗ್ರೂಪ್ ಬಿ ದರ್ಜೆಯ ಅಧಿಕಾರಿಗಳಿಗೆ ದೀಪಾವಳಿ ಹಬ್ಬಕ್ಕೆ ಮುನ್ನ ಬೋನಸ್ ಸಿಗಲಿದೆ. ಅರೆಸೇನಾ ಪಡೆಗಳೂ ಈ ಬೋನಸ್ ಫಲಾನುಭವಿಗಳ ಪಟ್ಟಿಯಲ್ಲಿದ್ದಾರೆ. ಈ ಕೇಂದ್ರ ಸರ್ಕಾರಿ ನೌಕರರಿಗೆ 2022-23ರ ಸಾಲಿಗೆ 7,000 ರೂವರೆಗೆ ಬೋನಸ್ ಅನ್ನು ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಿಸಿದೆ. ಉತ್ಪನ್ನತೆ ಆಧಾರಿತ ಬೋನಸ್ ಸ್ಕೀಮ್​ನ ವ್ಯಾಪ್ತಿಗೆ ಸೇರಿರುವ ನೌಕರರಿಗೆ ಈ ದೀಪಾವಳಿ ಬೋನಸ್ ಇರುವುದಿಲ್ಲ.

Deepavali Bonus: ಕೇಂದ್ರ ಸರ್ಕಾರದಿಂದ ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್; ಹಬ್ಬಕ್ಕೆ ಮುಂಚೆ 7,000 ರೂವರೆಗೆ ಬೋನಸ್ ಪ್ರಕಟ
ಬೋನಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 18, 2023 | 10:53 AM

ನವದೆಹಲಿ, ಅಕ್ಟೋಬರ್ 18: ಕೇಂದ್ರ ಸರ್ಕಾರ ಇದೀಗ ದೀಪಾವಳಿ ಬೋನಸ್ (Deepavali Bonus) ಪ್ರಕಟಿಸಿದೆ. ಕೇಂದ್ರ ಸರ್ಕಾರದ ಗ್ರೂಪ್ ಸಿ ನೌಕರರು ಹಾಗೂ ನಾನ್ ಗೆಜೆಟೆಡ್ ಗ್ರೂಪ್ ಬಿ ದರ್ಜೆಯ ಅಧಿಕಾರಿಗಳಿಗೆ ದೀಪಾವಳಿ ಹಬ್ಬಕ್ಕೆ ಮುನ್ನ ಬೋನಸ್ ಸಿಗಲಿದೆ. ಅರೆಸೇನಾ ಪಡೆಗಳೂ ಈ ಬೋನಸ್ ಫಲಾನುಭವಿಗಳ ಪಟ್ಟಿಯಲ್ಲಿದ್ದಾರೆ. ವರದಿ ಪ್ರಕಾರ ಈ ಕೇಂದ್ರ ಸರ್ಕಾರಿ ನೌಕರರಿಗೆ 2022-23ರ ಸಾಲಿಗೆ 7,000 ರೂ ಮಿತಿಯ ಬೋನಸ್ ಅನ್ನು ಕೇಂದ್ರ ಹಣಕಾಸು ಸಚಿವಾಲಯ ನಿಗದಿಪಡಿಸಿದೆ.

‘ಉತ್ಪನ್ನತೆ ಆಧಾರಿತ ಬೋನಸ್ ಸ್ಕೀಮ್​ನ (Productivity Linked Bonus) ವ್ಯಾಪ್ತಿಗೆ ಸೇರದ ಕೇಂದ್ರ ಸರ್ಕಾರದ ಗ್ರೂಪ್ ಸಿ ಮತ್ತು ಗ್ರೂಪ್ ಬಿ ಶ್ರೇಣಿಯ ನಾನ್ ಗೆಜೆಟೆಡ್ ಉದ್ಯೋಗಿಗಳಿಗೆ 2022-23ರ ಅಕೌಂಟಿಂಗ್ ವರ್ಷಕ್ಕೆ 30 ದಿನಗಳ ಭತ್ಯೆಗೆ ಸಮವಾದ ಬೋನಸ್ ಅನ್ನು ನೀಡಲಾಗಿದೆ,’ ಎಂದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಸೇರಿದ ವೆಚ್ಚ ಇಲಾಖೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ನಾಮಿನಿ ಎನ್ನುವುದು ನಾಮಕಾವಸ್ತೆಯಾ? ವಾರಸುದಾರಿಕೆ ಸಿಗುವುದು ಖಚಿತವಲ್ಲವಾ? ಏನನ್ನುತ್ತದೆ ಕಾನೂನು?

ಬೋನಸ್ ನೀಡಲು ಕೆಲ ಷರತ್ತುಗಳು….

ಮೇಲೆ ತಿಳಿಸಿದ ವರ್ಗದ ಉದ್ಯೋಗಿಗಳು 2023ರ ಮಾರ್ಚ್ 31ರಲ್ಲಿ ಸೇವೆಯಲ್ಲಿರಬೇಕು. ಹಾಗು 2022-23ರ ಹಣಕಾಸು ವರ್ಷದಲ್ಲಿ ಕನಿಷ್ಠ 6 ತಿಂಗಳು ನಿರಂತರ ಸೇವೆಯಲ್ಲಿರಬೇಕು. ಇಂಥವರು ಬೋನಸ್​​ಗೆ ಅರ್ಹರಾಗಿರುತ್ತಾರೆ.

ಎಲ್ಲರಿಗೂ ಸಮಾನವಾಗಿ 7,000 ರೂ ಬೋನಸ್ ಸಿಗುವುದಿಲ್ಲ. ಸರಾಸರಿ ಭತ್ಯೆ ಅಥವಾ ನಿಗದಿಪಡಿಸಿದ ಬೋನಸ್ ಮಿತಿಯಲ್ಲಿ ಯಾವುದು ಕಡಿಮೆಯೋ ಅಷ್ಟನ್ನು ನೀಡಲಾಗುತ್ತದೆ.

ಇದನ್ನೂ ಓದಿ: ಅಭಿಬಸ್ 1 ರೂ ಟಿಕೆಟ್; ಕೆಎಸ್ಸಾರ್ಟಿಸಿ ದಸರಾ ಕೊಡುಗೆ; ಆಂಧ್ರ ಬಸ್ ಡಿಸ್ಕೌಂಟ್; ಏರ್ ಇಂಡಿಯಾ ಫ್ಲೈಟ್ ಆಫರ್

ತಾತ್ಕಾಲಿಕ ಹುದ್ದೆಯ ನೌಕರರಾದರೆ (casual labour) ವಾರದಲ್ಲಿ 6 ದಿನ ಕೆಲಸ ಇರುವ ಕಚೇರಿಗಳಲ್ಲಿ ವರ್ಷಕ್ಕೆ ಕನಿಷ್ಠ 240 ದಿನಗಳು ಸೇವೆಯಲ್ಲಿ ಹಾಜರಾತಿ ಹೊಂದಿರಬೇಕು. ಈ ರೀತಿ 3 ಹಾಗೂ ಹೆಚ್ಚು ವರ್ಷ ಕರ್ತವ್ಯ ನಿಭಾಯಿಸಿರಬೇಕು. ಒಂದು ವೇಳೆ ವಾರಕ್ಕೆ 5 ದಿನ ಕೆಲಸ ಇರುವ ಕಚೇರಿಯಲ್ಲಾದರೆ ಇವರು ವರ್ಷಕ್ಕೆ 206 ದಿನಗಳಂತೆ ಕನಿಷ್ಠ 3 ವರ್ಷ ಕೆಲಸಕ್ಕೆ ಹಾಜರಿದ್ದಿರಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಲಿಂಗಾಯತರು ಬಿಜೆಪಿನ ಪುನಃ ಅಧಿಕಾರಕ್ಕೆ ತರಬೇಕೆಂದುಕೊಂಡಿದ್ದರು: ಸ್ವಾಮೀಜಿ
ಲಿಂಗಾಯತರು ಬಿಜೆಪಿನ ಪುನಃ ಅಧಿಕಾರಕ್ಕೆ ತರಬೇಕೆಂದುಕೊಂಡಿದ್ದರು: ಸ್ವಾಮೀಜಿ
ಫ್ಯಾನ್ಸ್ ಪ್ರಕಾರ ಆರ್​ಸಿಬಿ- ಸಿಎಸ್​ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
ಫ್ಯಾನ್ಸ್ ಪ್ರಕಾರ ಆರ್​ಸಿಬಿ- ಸಿಎಸ್​ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
‘ಮನದ ಕಡಲು’ ನಟ-ನಟಿಯರಿಗೆ ಶಾಪ ಹಾಕಿದ ರಂಗಾಯಣ ರಘು
‘ಮನದ ಕಡಲು’ ನಟ-ನಟಿಯರಿಗೆ ಶಾಪ ಹಾಕಿದ ರಂಗಾಯಣ ರಘು
ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ಒಡಿಶಾದಲ್ಲಿ ಪೊಲೀಸರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಬಳಕೆ
ಒಡಿಶಾದಲ್ಲಿ ಪೊಲೀಸರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಬಳಕೆ
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್