AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IMPS Money Transfer Rules: ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಇನ್ನೂ ಸುಲಭ; ಹೊಸ ಐಎಂಪಿಎಸ್ ವ್ಯವಸ್ಥೆ ಬಗ್ಗೆ ತಿಳಿಯಿರಿ

Proposed Payment System Change: ಸುಧಾರಿತ ಐಎಂಪಿಎಸ್​ನಲ್ಲಿ, ಹಣ ಕಳುಹಿಸಬೇಕಾದವರ ಮೊಬೈಲ್ ನಂಬರ್ ಹಾಗೂ ಅವರ ಬ್ಯಾಂಕ್ ಹೆಸರನ್ನು ಹಾಕಿದರೆ ಸಾಕು. ಆ ವಿವರ ನಮೂದಿಸಿದರೆ ಬ್ಯಾಂಕ್ ಖಾತೆಯೊಂದಿಗೆ ನೊಂದಾಯಿತವಾದ ಅವರ ಹೆಸರು ಪ್ರತ್ಯಕ್ಷವಾಗುತ್ತದೆ. ಇದರಿಂದ ಸರಿಯಾದ ವ್ಯಕ್ತಿಗೆ ಹಣ ವರ್ಗಾವಣೆ ಆಗುತ್ತದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬಹುದು. ಈಗಿರುವ ಐಎಂಪಿಎಸ್ ವಿಧಾನಗಳಲ್ಲಿ, ಈ ರೀತಿ ಖಾತ್ರಿ ಸಿಗುವುದಿಲ್ಲ. ತಪ್ಪಾಗಿ ಖಾತೆ ನಂಬರ್ ಹಾಕಿದರೆ ಬೇರೆಯವರಿಗೆ ಹಣ ವರ್ಗಾವಣೆ ಆಗಿಹೋಗಬಹುದು.

IMPS Money Transfer Rules: ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ  ಇನ್ನೂ ಸುಲಭ; ಹೊಸ ಐಎಂಪಿಎಸ್ ವ್ಯವಸ್ಥೆ ಬಗ್ಗೆ ತಿಳಿಯಿರಿ
ಹಣ ವರ್ಗಾವಣೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 18, 2023 | 12:27 PM

Share

ಯುಪಿಐ ಮೂಲಕ ಈಗಾಗಲೇ ಭಾರತದ ಪೇಮೆಂಟ್ ವ್ಯವಸ್ಥೆಯಲ್ಲಿ ಕ್ರಾಂತಿಯಾಗಿದೆ. ಈಗ ಐಎಂಪಿಎಸ್ ಪಾವತಿ ವ್ಯವಸ್ಥೆಯನ್ನು (IMPS payment system) ಇನ್ನಷ್ಟು ಸಮರ್ಪಕಗೊಳಿಸಲಾಗಿದೆ. ಈ ಸುಧಾರಿತ ಐಎಂಪಿಎಸ್​ನಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ (money transfer) ಕಾರ್ಯ ಬಹಳ ಸರಳಗೊಂಡಿದೆ. ಯುಪಿಐ ಅನ್ನು ರೂಪಿಸಿದ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆಯೇ (NPCI) ಐಎಂಪಿಎಸ್ ಅನ್ನು ಸುಧಾರಿಸಿದೆ. ವ್ಯಕ್ತಿಯ ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಹೆಸರಿದ್ದರೆ ಸಾಕು, ಐಎಂಪಿಎಸ್ ಮೂಲಕ 5 ಲಕ್ಷ ರೂವರೆಗೂ ಹಣ ವರ್ಗಾಯಿಸಬಹುದು. ಮುಂದೆ ಈ ಸುಧಾರಿತ ಐಎಂಪಿಎಸ್ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಇದೆ.

ಈಗಿರುವ ಐಎಂಪಿಎಸ್ ವಿಧಾನದಲ್ಲಿ ಹಣ ವರ್ಗಾವಣೆ ಹೇಗೆ?

ಇಮ್ಮೀಡಿಯೇಟ್ ಪೇಮೆಂಟ್ ಸರ್ವಿಸ್ ಎನ್ನಲಾಗುವ ಐಎಂಪಿಎಸ್ ಅನ್ನು ಎರಡು ವಿಧಾನದಲ್ಲಿ ಬಳಸಬಹುದು. ಮೊದಲನೆಯದರಲ್ಲಿ, ನೀವು ಹಣ ಕಳುಹಿಸಬೇಕಾದವರ ಬ್ಯಾಂಕ್ ಖಾತೆ ಸಂಖ್ಯೆ, ಬ್ಯಾಂಕ್ ಹೆಸರು ಮತ್ತು ಐಎಫ್​ಎಸ್​ಸಿ ಕೋಡ್ ಹಾಕಿ ಹಣ ಕಳುಹಿಸಬೇಕು.

ಎರಡನೇ ವಿಧಾನದಲ್ಲಿ, ವ್ಯಕ್ತಿಯ ಬ್ಯಾಂಕ್ ಖಾತೆಗೆ ಜೋಡಿತವಾದ ಮೊಬೈಲ್ ನಂಬರ್ ಮತ್ತು ಎಂಎಂಐಡಿ ಇರಬೇಕು. ಹಣ ಕಳುಹಿಸುವವರು ಮತ್ತು ಸ್ವೀಕರಿಸುವವರು ಇಬ್ಬರ ಬಳಿಯೂ ಎಂಎಂಐಡಿ ಇರಬೇಕು.

ಇದನ್ನೂ ಓದಿ: ಹೊಸ ಸ್ಕ್ಯಾಮ್..! ಒಟಿಪಿ ಬರದೆಯೇ ಆಧಾರ್ ಬಳಸಿ ಹಣ ಎಗರಿಸುತ್ತಾರೆ; ಈಗಲೇ ಬಯೋಮೆಟ್ರಿಕ್ ಲಾಕ್ ಮಾಡಿ; ಇದು ಹೇಗೆ?

ಎರಡನೇ ವಿಧಾನಕ್ಕೆ ಹೋಲಿಸಿದರೆ ಮೊದಲ ವಿಧಾನ ಹೆಚ್ಚು ಸರಳವಾಗಿದೆ. ಆದರೆ, ಈಗ ಐಎಂಪಿಎಸ್ ಅನ್ನು ಇನ್ನೂ ಕೂಡ ಸರಳಗೊಳಿಸಲಾಗಿದೆ. ಅದರ ವಿವರ ಮುಂದಿದೆ…

ಹೊಸ ಸರಳೀಕೃತ ಐಎಂಪಿಎಸ್​ನಲ್ಲಿ ಹಣ ವರ್ಗಾವಣೆ ಹೇಗೆ?

ಸುಧಾರಿತ ಐಎಂಪಿಎಸ್​ನಲ್ಲಿ, ಹಣ ಕಳುಹಿಸಬೇಕಾದವರ ಮೊಬೈಲ್ ನಂಬರ್ ಹಾಗೂ ಅವರ ಬ್ಯಾಂಕ್ ಹೆಸರನ್ನು ಹಾಕಿದರೆ ಸಾಕು. ಆ ವಿವರ ನಮೂದಿಸಿದರೆ ಬ್ಯಾಂಕ್ ಖಾತೆಯೊಂದಿಗೆ ನೊಂದಾಯಿತವಾದ ಅವರ ಹೆಸರು ಪ್ರತ್ಯಕ್ಷವಾಗುತ್ತದೆ. ಇದರಿಂದ ಸರಿಯಾದ ವ್ಯಕ್ತಿಗೆ ಹಣ ವರ್ಗಾವಣೆ ಆಗುತ್ತದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬಹುದು. ಈಗಿರುವ ಐಎಂಪಿಎಸ್ ವಿಧಾನಗಳಲ್ಲಿ, ಈ ರೀತಿ ಖಾತ್ರಿ ಸಿಗುವುದಿಲ್ಲ. ತಪ್ಪಾಗಿ ಖಾತೆ ನಂಬರ್ ಹಾಕಿದರೆ ಬೇರೆಯವರಿಗೆ ಹಣ ವರ್ಗಾವಣೆ ಆಗಿಹೋಗಬಹುದು.

ಇದನ್ನೂ ಓದಿ: Deepavali Bonus: ಕೇಂದ್ರ ಸರ್ಕಾರದಿಂದ ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್; ಹಬ್ಬಕ್ಕೆ ಮುಂಚೆ 7,000 ರೂವರೆಗೆ ಬೋನಸ್ ಪ್ರಕಟ

ಇನ್ನೊಂದು ಪ್ರಮುಖ ಸಂಗತಿ ಎಂದರೆ, ಈಗಿರುವ ಐಎಂಪಿಎಸ್ ವ್ಯವಸ್ಥೆಯನ್ನು ಬಳಸಬೇಕೆಂದರೆ ಹಣ ಕಳುಹಿಸಬೇಕಾದವರನ್ನು ಬೆನಿಫಿಶಿಯರಿ ಆಗಿ ಸೇರಿಸಬೇಕು. ಆದರೆ, ಪ್ರಸ್ತಾವಿತ ಹೊಸ ಐಎಂಪಿಎಸ್​ನಲ್ಲಿ ನೀವು ಬೆನಿಫಿಸಿ ಲಿಸ್ಟ್​ಗೆ ಸೇರಿಸದೆಯೇ 5 ಲಕ್ಷ ರೂವರೆಗೂ ಹಣ ವರ್ಗಾವಣೆ ಮಾಡಬಹುದು. ಐದು ಲಕ್ಷ ಮೇಲ್ಪಟ್ಟ ಹಣ ವರ್ಗಾವಣೆ ಮಾಡುವುದಾದರೆ ಮಾತ್ರ ಬೆನಿಫಿಶಿಯರಿ ಸೇರಿಸಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ