7th Pay Commission: ಸರ್ಕಾರಿ ಉದ್ಯೋಗಿಗಳಿಗೆ ಶೇ. 4ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ನಿರ್ಧಾರ; ಕೇಂದ್ರ ಕ್ಯಾಬಿನೆಟ್ ಅನುಮೋದನೆ
DA Hike for Central Government Employees: ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ನಾಲ್ಕು ಪ್ರತಿಶತದಷ್ಟು ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ ಹೆಚ್ಚಳದ ನಿರ್ಧಾರಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಇದರೊಂದಿಗೆ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಡಿಎ ಶೇ. 42ರಿಂದ ಶೇ. 46ಕ್ಕೆ ಏರಲಿದೆ. ಪಿಂಚಣಿದಾರರಿಗೂ ಡಿಆರ್ ಶೇ. 46ಕ್ಕೆ ಹೆಚ್ಚಾಗಲಿದೆ. ಜುಲೈ ತಿಂಗಳಿಂದ ಡಿಎ ಮತ್ತು ಡಿಆರ್ ಹೆಚ್ಚಳ ಅನ್ವಯಕ್ಕೆ ಬರಲಿದೆ.
ನವದೆಹಲಿ, ಅಕ್ಟೋಬರ್ 18: ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ (Central Government Employees) ಇವತ್ತು ಡಬಲ್ ಖುಷಿ ಸುದ್ದಿಗಳಿವೆ. ಕೆಳಹಂತದ ನೌಕರರಿಗೆ ಬೋನಸ್ ಪ್ರಕಟವಾದ ಬೆನ್ನಲ್ಲೇ ಇದೀಗ ಎಲ್ಲಾ ಉದ್ಯೋಗಿಗಳಿಗೆ ಡಿಎ ಹೆಚ್ಚಳವಾಗಿದೆ. ನಾಲ್ಕು ಪ್ರತಿಶತದಷ್ಟು ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ (DA & DR) ಹೆಚ್ಚಳದ ನಿರ್ಧಾರಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಇದರೊಂದಿಗೆ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಡಿಎ ಶೇ. 42ರಿಂದ ಶೇ. 46ಕ್ಕೆ ಏರಲಿದೆ. ಪಿಂಚಣಿದಾರರಿಗೂ (pensioners) ಡಿಆರ್ ಶೇ. 46ಕ್ಕೆ ಹೆಚ್ಚಾಗಲಿದೆ. ಜುಲೈ ತಿಂಗಳಿಂದ ಡಿಎ ಮತ್ತು ಡಿಆರ್ ಹೆಚ್ಚಳ ಅನ್ವಯಕ್ಕೆ ಬರಲಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಒಂದು ಕೋಟಿಗೂ ಹೆಚ್ಚು ಮಂದಿ ಹಾಗೂ ಅವರ ಕುಟುಂಬಗಳಿಗೆ ನಿರಾಳತೆ ತಂದಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 47 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. 68 ಲಕ್ಷ ಪಿಂಚಣಿದಾರರಿದ್ದಾರೆ. ಇವರೆಲ್ಲರಿಗೂ ಈಗ ಶೇ. 46ರಷ್ಟು ಡಿಎ ಮತ್ತು ಡಿಆರ್ ಹೆಚ್ಚಾಗುತ್ತದೆ.
ಇದನ್ನೂ ಓದಿ: ಹೊಸ ಸ್ಕ್ಯಾಮ್..! ಒಟಿಪಿ ಬರದೆಯೇ ಆಧಾರ್ ಬಳಸಿ ಹಣ ಎಗರಿಸುತ್ತಾರೆ; ಈಗಲೇ ಬಯೋಮೆಟ್ರಿಕ್ ಲಾಕ್ ಮಾಡಿ; ಇದು ಹೇಗೆ?
ತುಟ್ಟಿಭತ್ಯೆ ಎಂದರೇನು?
ಪ್ರತೀ ವರ್ಷ ಭಾರತದಲ್ಲಿ ಸರಾಸರಿಯಾಗಿ ಶೇ. 4ರಿಂದ 8ರಷ್ಟು ಅಗತ್ಯವಸ್ತುಗಳ ಬೆಲೆ ಏರಿಕೆ ಆಗುತ್ತದೆ. ಇದರಿಂದ ಸಂಬಳ ಪಡೆಯುವ ನೌಕರರಿಗೆ ಹೊರೆಯಾಗುತ್ತದೆ. ಹೀಗಾಗಿ, ವೇತನ ಆಯೋಗವು ಸಂಬಳ ಹೆಚ್ಚಳದ ಜೊತೆಗೆ ಬೆಲೆ ಏರಿಕೆ ಬಿಸಿ ನಿವಾರಿಸಲು ತುಟ್ಟಿಭತ್ಯೆ ಹೆಚ್ಚಿಸಬೇಕೆನ್ನುವ ಸಲಹೆ ನೀಡಿತ್ತು.
ಅದರಂತೆ ಪ್ರತೀ ವರ್ಷ ಜನವರಿ ಮತ್ತು ಜುಲೈನಲ್ಲಿ, ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ ಪರಿಷ್ಕರಿಸಲಾಗುತ್ತದೆ. ಸರ್ಕಾರಿ ನೌಕರರಿಗೆ ಡಿಎ ನೀಡಲಾಗುತ್ತದೆ. ಪಿಂಚಣಿದಾರರಿಗೆ ಡಿಆರ್ ಸಿಗುತ್ತದೆ. ಎರಡೂ ಕೂಡ ಸಮಪ್ರಮಾಣದಲ್ಲಿ ಏರಿಕೆ ಆಗುತ್ತದೆ.
ಇದನ್ನೂ ಓದಿ: Deepavali Bonus: ಕೇಂದ್ರ ಸರ್ಕಾರದಿಂದ ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್; ಹಬ್ಬಕ್ಕೆ ಮುಂಚೆ 7,000 ರೂವರೆಗೆ ಬೋನಸ್ ಪ್ರಕಟ
ಕೈಗಾರಿಕಾ ಕ್ಷೇತ್ರದ ಕಾರ್ಮಿಕರ ಹಣದುಬ್ಬರ (IW-CPI based Inflation) ಪ್ರಮಾಣದ ಆಧಾರಿತವಾಗಿ ತುಟ್ಟಿಭತ್ಯೆ ಏರಿಕೆಯನ್ನು ನಿರ್ಧರಿಸಲಾಗುತ್ತದೆ. ಜನವರಿಯ ಏರಿಕೆಯನ್ನು ಮಾರ್ಚ್ 24ರಂದು ಪ್ರಕಟಿಸಲಾಗಿತ್ತು. ಈಗ ಜುಲೈ ತಿಂಗಳ ಡಿಎ ಮತ್ತು ಡಿಆರ್ ಅನ್ನು ಅಕ್ಟೋಬರ್ನಲ್ಲಿ ಪ್ರಕಟಿಸಲಾಗುತ್ತಿದೆ. ಆದರೆ, ಜುಲೈನಿಂದಲೇ ಈ ಹೆಚ್ಚಳವು ಅನ್ವಯ ಆಗುತ್ತದೆ.
ದೀಪಾವಳಿ ಬೋನಸ್
ಇವತ್ತು ಸರ್ಕಾರಿ ನೌಕರರಿಗೆ ಡಬಲ್ ಖುಷಿಯ ಸುದ್ದಿ. ಡಿಎ ಹೆಚ್ಚಳ ನಿರ್ಧಾರಕ್ಕೂ ಮುನ್ನ ಕೇಂದ್ರ ಸರ್ಕಾರ ತನ್ನ ಕೆಲ ವರ್ಗದ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಪ್ರಕಟಿಸಿದೆ. ಗ್ರೂಪ್ ಸಿ ನೌಕರರು ಮತ್ತು ನಾನ್ ಗೆಜೆಟೆಡ್ ಗ್ರೂಪ್ ಬಿ ನೌಕರರಿಗೆ 7,000 ರೂವರೆಗೂ ಬೋನಸ್ ಅನ್ನು ನೀಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:03 pm, Wed, 18 October 23