ಕಚೇರಿಗೆ ಬನ್ನಿ, ಜತೆಗೆ ಡ್ರೆಸ್ ಕೋಡ್ ಪಾಲಿಸಿ ಎಂದು ತನ್ನ ಉದ್ಯೋಗಿಗಳಿಗೆ ಆದೇಶ ನೀಡಿದ ಟಿಸಿಎಸ್

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ತನ್ನ ಉದ್ಯೋಗಿಗಳಿಗೆ ವರ್ಕ್​​​​ ಫ್ರಮ್​​​ ಹೋಮ್​​ನ್ನು ಮುಕ್ತಾಯಗೊಳಿಸಿ ಕಚೇರಿಗೆ ಬರುವಂತೆ ಆದೇಶವನ್ನು ನೀಡಿದೆ. 2 ವರ್ಷಗಳಿಂದ ವರ್ಕ್​​​​ ಫ್ರಮ್​​​ ಹೋಮ್​​ನಲ್ಲಿದ್ದ ತನ್ನ ಉದ್ಯೋಗಿಗಳು ತಕ್ಷಣ ಆಫೀಸ್​​​ಗೆ ಬರುವಂತೆ ಎಲ್ಲ ಉದ್ಯೋಗಿಗಳಿಗೆ ಇಮೇಲ್​​​ ಮೂಲಕ ಸಂದೇಶ ಕಳುಹಿಸಿದೆ. ಇದರ ಜತೆಗೆ ಇನ್ನು ಮುಂದೆ ಟಿಸಿಎಸ್ ಉದ್ಯೋಗಿಗಳಿಗೆ ಡ್ರೆಸ್ ಕೋಡ್ ಇರುತ್ತದೆ ಎಂದು ಹೇಳಿದೆ.

ಕಚೇರಿಗೆ ಬನ್ನಿ, ಜತೆಗೆ ಡ್ರೆಸ್ ಕೋಡ್ ಪಾಲಿಸಿ ಎಂದು ತನ್ನ ಉದ್ಯೋಗಿಗಳಿಗೆ ಆದೇಶ ನೀಡಿದ ಟಿಸಿಎಸ್
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Oct 19, 2023 | 10:51 AM

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ತನ್ನ ಉದ್ಯೋಗಿಗಳಿಗೆ ವರ್ಕ್​​​​ ಫ್ರಮ್​​​ ಹೋಮ್​​ನ್ನು ಮುಕ್ತಾಯಗೊಳಿಸಿ ಕಚೇರಿಗೆ ಬರುವಂತೆ ಆದೇಶವನ್ನು ನೀಡಿದೆ. 2 ವರ್ಷಗಳಿಂದ ವರ್ಕ್​​​​ ಫ್ರಮ್​​​ ಹೋಮ್​​ನಲ್ಲಿದ್ದ ತನ್ನ ಉದ್ಯೋಗಿಗಳು ತಕ್ಷಣ ಆಫೀಸ್​​​ಗೆ ಬರುವಂತೆ ಎಲ್ಲ ಉದ್ಯೋಗಿಗಳಿಗೆ ಇಮೇಲ್​​​ ಮೂಲಕ ಸಂದೇಶ ಕಳುಹಿಸಿದೆ. ಇದರ ಜತೆಗೆ ಇನ್ನು ಮುಂದೆ ಟಿಸಿಎಸ್ ಉದ್ಯೋಗಿಗಳಿಗೆ ಡ್ರೆಸ್ ಕೋಡ್ ಇರುತ್ತದೆ ಎಂದು ಹೇಳಿದೆ. ಕಂಪನಿ ಸೂಚಿಸಿದಂತೆ ಡ್ರೆಸ್ ಕೋಡ್​​ನ್ನು ಪಾಲಿಸಬೇಕು ಎಂದು ತಿಳಿಸಿದೆ. ಈ ಬಗ್ಗೆ ಕಂಪನಿಯ ಎಚ್​ಆರ್​​ ಎಲ್ಲ ಉದ್ಯೋಗಿಗಳಿಗೆ ಮೇಲ್​​ ಮಾಡಿದ್ದಾರೆ ಎಂದು ವರದಿ ಹೇಳಿದೆ.

ಕಂಪನಿಯ ಎಲ್ಲ ಸಹವರ್ತಿಗಳು ತಕ್ಷಣದಿಂದಲ್ಲೇ ವರ್ಕ್​​​​ ಫ್ರಮ್​​​ ಹೋಮ್​​ನ್ನು ಮುಕ್ತಾಯಗೊಳಿಸಿ ಕಚೇರಿಗೆ ಬರಬೇಕು. ಕಳೆದ ಎರಡು ವರ್ಷಗಳಿಂದ ತಮ್ಮ ಜತೆಗೆ ಆಪ್​​​ ಲೈನ್​​ ಹಾಗೂ ಆನ್​​​ ಲೈನ್​​​​​​ ಮೂಲಕ ನಮ್ಮ ಜತೆಗೆ ಕೆಲಸ ಮಾಡಿದ್ದೀರಾ. ಇನ್ನು ಮುಂದೆ ಇದೆ ರೀತಿಯ ಸಹಾಕಾರ ಬೇಕು ಎಂದು ಎಚ್​​​​ಆರ್​​ ಮೇಲ್​​ನಲ್ಲಿ ತಿಳಿಸಿದ್ದಾರೆ.

ಇನ್ನು ಇದರ ಜತೆಗೆ ಕಚೇರಿಗೆ ಬರುವಾಗ ಕಂಪನಿ ರೂಪಿಸಿದ ನಿಯಮಗಳ ಪ್ರಕಾರ ಎಲ್ಲರೂ ಡ್ರೆಸ್ ಕೋಡ್​​ನ್ನು ಪಾಲಿಸಬೇಕು. ಇದು ನಮ್ಮ ಕಂಪನಿಯ ವೃತ್ತಿಪರತೆಯ  ಗುಣಮಟ್ಟವನ್ನು ಎತ್ತಿ ತೋರಿಸುತ್ತದೆ. ಜಾಗತಿಕವಾಗಿಯೂ ಹೆಚ್ಚು ಪ್ರಭಾವ ಉಂಟು ಮಾಡುತ್ತದೆ. ಡ್ರೆಸ್ ಕೋಡ್ ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

ಡ್ರೆಸ್ ಕೋಡ್ ನಿಯಮ ಹೇಗೆ? ಸೋಮವಾರದಿಂದ ಗುರುವಾರದವರೆಗೆ

1. ಪೂರ್ಣ ತೋಳಿನ ಶರ್ಟ್‌ಗಳು ಹಾಗೂ ಟ್ರೌಸರ್‌ಗಳನ್ನು (ಘನ ಬಣ್ಣಗಳು, ಪಟ್ಟೆಯುಳ್ಳ ಶರ್ಟ್‌ಗಳು, ಇತ್ಯಾದಿ) ಹಾಕಬಹುದು.

2. ಸ್ಕರ್ಟ್‌ಗಳು, ಘನ ಬಣ್ಣ ಕೋಟ್​​ಗಳನ್ನು ಹಾಕಬಹುದು.

3. ಸೀರೆ ಅಥವಾ ಮೊಣಕಾಲಿನವರೆಗಿನ ಕುರ್ತಾಗಳು

4.ಔಪಚಾರಿಕ ಬೂಟುಗಳು, ಮೊಕಾಸಿನ್ಗಳು, ಫ್ಲಾಟ್ಗಳು, ಹೀಲ್ಸ್, ಪಂಪ್ಗಳು, ಉಡುಗೆ ಸ್ಯಾಂಡಲ್​​ಗಳನ್ನು ಹಾಕಬಹುದು.

ಇದನ್ನೂ ಓದಿ:ಕಚೇರಿಯಲ್ಲಿ ಕೆಲಸ ಮಾಡುವ ಜನರು ವೃತ್ತಿಜೀವನದ ಸುರಕ್ಷತೆಗಾಗಿ 25% ಹೆಚ್ಚು ಸಮಯವನ್ನು ಕಳೆಯುತ್ತಾರೆ?

ಶುಕ್ರವಾರ ಡ್ರೆಸ್ ಕೋಡ್

1.ಕ್ಯಾಶುಯಲ್, ಅರ್ಧ ತೋಳಿನ ಶರ್ಟ್‌ಗಳು, ಕಾಲರ್ ಟೀ ಶರ್ಟ್‌ಗಳು, ಗಾಲ್ಫ್/ಪೋಲೊ ಶರ್ಟ್‌ಗಳು ಮತ್ತು ಟರ್ಟಲ್‌ನೆಕ್ಸ್

2.ಸ್ಮಾರ್ಟ್ ಕ್ಯಾಶುಯಲ್ ಪ್ಯಾಂಟ್, ಖಾಕಿಗಳು, ಚಿನೋಸ್, ನೇರ ಕಟ್ ಮತ್ತು ಪೂರ್ಣ-ಉದ್ದದ ಜೀನ್ಸ್

3.ಕುರ್ಟಿಸ್, ಮುದ್ರಿತ ಬ್ಲೌಸ್ ಮತ್ತು ಸ್ಕರ್ಟ್‌ಗಳು

4.ಸ್ನೀಕರ್ಸ್, ಮೊಕಾಸಿನ್ಗಳು, ಸ್ಯೂಡ್ ಬೂಟುಗಳು

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:49 am, Thu, 19 October 23