ಆರು ಲಕ್ಷ ಕೋಟಿ ರೂ..! ಈ ಬಾರಿಯ ದೀಪಾವಳಿ ಸೇಲ್ಸ್ ಹೊಸ ದಾಖಲೆ

Deepavali season sees huge record sales: ಸಿಎಐಟಿ ದತ್ತಾಂಶದ ಪ್ರಕಾರ 2025ರ ದೀಪಾವಳಿ ಸೀಸನ್ ವ್ಯಾಪಾರದಲ್ಲಿ ಆದ ವಹಿವಾಟು ಆರು ಲಕ್ಷ ಕೋಟಿ ರೂ ದಾಟಿದೆ. ಇತಿಹಾಸದಲ್ಲಿ ಈ ಹಬ್ಬದ ಸೀಸನ್​ನಲ್ಲಿ ಈ ಮೈಲಿಗಲ್ಲು ಮುಟ್ಟಿದ್ದು ಇದೇ ಮೊದಲು. ಎಫ್​ಎಂಸಿಜಿ ವಸ್ತುಗಳು, ಆಭರಣಗಳ ಮಾರಾಟ ಅತ್ಯಧಿಕ ಆಗಿದೆ. ಕಳೆದ ಸೀಸನ್​ಗಿಂತ ಈ ಬಾರಿಯ ಮಾರಾಟದಲ್ಲಿ ಶೇ. 25ರಷ್ಟು ಹೆಚ್ಚಿದೆ.

ಆರು ಲಕ್ಷ ಕೋಟಿ ರೂ..! ಈ ಬಾರಿಯ ದೀಪಾವಳಿ ಸೇಲ್ಸ್ ಹೊಸ ದಾಖಲೆ
ಸೇಲ್ಸ್

Updated on: Oct 21, 2025 | 8:37 PM

ನವದೆಹಲಿ, ಅಕ್ಟೋಬರ್ 21: ಈ ವರ್ಷದ ದೀಪಾವಳಿ ಸೀಸನ್​ನ ಮಾರಾಟದಲ್ಲಿ ಹೊಸ ದಾಖಲೆ ಸ್ಥಾಪನೆಯಾಗಿದೆ. ಅಖಿಲ ಭಾರತ ವರ್ತಕರ ಮಹಾ ಒಕ್ಕೂಟ (ಸಿಎಐಟಿ) ನೀಡಿರುವ ಮಾಹಿತಿ ಪ್ರಕಾರ 2025ರ ದೀಪಾವಳಿ ಹಬ್ಬದ ಸೇಲ್ಸ್​ನಲ್ಲಿ (Deepavali Sales) 6.05 ಲಕ್ಷ ಕೋಟಿ ರೂನಷ್ಟು ವಹಿವಾಟು ನಡೆದಿದೆ. ಇದರಲ್ಲಿ ಸರಕುಗಳ ವ್ಯಾಪಾರವೇ 5.40 ಲಕ್ಷ ಕೋಟಿ ರೂ ಆಗಿದೆ. ಸರ್ವಿಸಸ್ ಟ್ರೇಡ್ 65,000 ಕೋಟಿ ರೂ ಆಗಿರುವುದು ತಿಳಿದುಬಂದಿದೆ.

ಯಾವುದೇ ವರ್ಷದಲ್ಲಿ ದೀಪಾವಳಿ ಸೀಸನ್​ನಲ್ಲಿ 6 ಲಕ್ಷ ಕೋಟಿ ರೂ ವ್ಯಾಪಾರ ಆಗಿರಲಿಲ್ಲ. ಆ ಮಟ್ಟಿಗೆ ಹೊಸ ದಾಖಲೆ ಸ್ಥಾಪನೆಯಾಗಿದೆ. ಕಳೆದ ವರ್ಷದ (2024) ದೀಪಾವಳಿ ಸೀಸನ್​ನಲ್ಲಿ 4.25 ಲಕ್ಷ ಕೋಟಿ ರೂನಷ್ಟು ಮಾರಾಟ ಆಗಿತ್ತು. ಈ ವರ್ಷ ಸೇಲ್ಸ್ ಶೇ. 25ರಷ್ಟು ಹೆಚ್ಚಿದೆ.

ಇದನ್ನೂ ಓದಿ: ಭಾರತದಿಂದ 7nm ಚಿಪ್ ಯೋಜನೆ; ಇದಾಗಲಿದೆ ಗೇಮ್ ಚೇಂಜರ್; ಯಾಕೆ ಈ ಚಿಪ್ ಮಹತ್ವದ್ದು ಗೊತ್ತಾ?

ಚಿನ್ನಾಭರಣಗಳು ಭರ್ಜರಿ ಮಾರಾಟ

ಈ ದೀಪಾವಳಿ ಸೇಲ್ಸ್​ನಲ್ಲಿ ದಿನಸಿ ವಸ್ತುಗಳು ಒಳಗೊಂಡಂತೆ ಎಫ್​ಎಂಸಿಜಿಯ ಪಾಲು ಶೇ. 12ರಷ್ಟಿದೆ. ಚಿನ್ನ ಹಾಗೂ ಆಭರಣಗಳ ಮಾರಾಟದ ಪಾಲು ಶೇ. 10ರಷ್ಟಿದೆ. ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ಸ್, ಕನ್ಸೂಮರ್ ಡುರಬಲ್, ಸಿದ್ಧ ಉಡುಪು ಹಾಗೂ ಉಡುಗೊರೆ ವಸ್ತುಗಳ ಮಾರಾಟ ಕೂಡ ಗಣನೀಯವಾಗಿ ಹೆಚ್ಚಿನ ಮಟ್ಟದಲ್ಲಿ ಇದೆ.

ಇನ್ನು, ಮನೆ ಅಲಂಕಾರ, ಪೀಠೋಪಕರಣ ಇತ್ಯಾದಿಗಳ ಮಾರಾಟ ಶೇ. 10ರಷ್ಟಿದೆ. ಸಿಹಿ ತಿಂಡಿಗಳು ಶೇ. 5, ಪೂಜಾ ವಸ್ತುಗಳು ಶೇ. 3, ಹಣ್ಣು ಶೇ. 4 ಮಾರಾಟ ಕಂಡಿವೆ ಎಂದು ಸಿಎಐಟಿ ಬಿಡುಗಡೆ ಮಾಡಿದ ರಿಸರ್ಚ್ ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: 800 ಕಿಮೀ ಶ್ರೇಣಿಯ ಬ್ರಹ್ಮೋಸ್ ಕ್ಷಿಪಣಿಗಳ ಪರೀಕ್ಷೆ; ಮುಂದಿನ ವರ್ಷವೇ ಸೇನೆಯ ಬಲ ಹೆಚ್ಚಿಸಲಿವೆ ಈ ಪ್ರಬಲ ಮಿಸೈಲ್​ಗಳು

ದೇಶಾದ್ಯಂತ ಇರುವ ವ್ಯಾಪಾರಿಗಳನ್ನು ಸಮೀಕ್ಷೆ ಮಾಡಿ ಈ ದತ್ತಾಂಶ ಬಿಡುಗಡೆ ಮಾಡಲಾಗಿದೆ. ಜಿಎಸ್​ಟಿ ದರಗಳು ಇಳಿಕೆಗೊಂಡ ಪರಿಣಾಮವಾಗಿ ವ್ಯಾಪಾರ ಹೆಚ್ಚಾಗಿರಬಹುದು ಎಂದು ಶೇ. 72ರಷ್ಟು ವರ್ತಕರು ಅಭಿಪ್ರಾಯಪಟ್ಟಿದ್ದಾರೆ.

ಸಿಎಐಟಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಪ್ರವೀಣ್ ಖಂಡೇಲ್ವಾಲ್ ಅವರ ಪ್ರಕಾರ, ಕಾರ್ಪೊರೇಟ್ ಮತ್ತು ಕೃಷಿ ಕ್ಷೇತ್ರದ್ದಲ್ಲದ 9 ಕೋಟಿ ಸಣ್ಣ ಉದ್ದಿಮೆಗಳು ಹಾಗೂ ಲಕ್ಷಾಂತರ ಉತ್ಪಾದನಾ ಘಟಕಗಳು ಭಾರತದ ಅಭಿವೃದ್ಧಿಗೆ ಪ್ರಮುಖ ಎಂಜಿನ್ ಆಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ