AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಿಂದ 7nm ಚಿಪ್ ಯೋಜನೆ; ಇದಾಗಲಿದೆ ಗೇಮ್ ಚೇಂಜರ್; ಯಾಕೆ ಈ ಚಿಪ್ ಮಹತ್ವದ್ದು ಗೊತ್ತಾ?

Research team of IIT Madras to develop 7nm chip indigenously: ಐಐಟಿ ಮದ್ರಾಸ್​ನ ರಿಸರ್ಚ್ ಟೀಮ್ 7 ಎನ್​ಎಂ ಪ್ರೋಸಸರ್ ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಕೇಂದ್ರ ಸಚಿವರು ಇತ್ತೀಚೆಗೆ ಈ ತಂಡವನ್ನು ಭೇಟಿಯಾದರು. 2028ಕ್ಕೆ ಶಕ್ತಿ ಎನ್ನುವ ಈ 7ಎನ್​ಎಂ ಚಿಪ್ ಬಿಡುಗಡೆ ಆಗುವ ಸಾಧ್ಯತೆ ಇದೆ. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಈ ಚಿಪ್ ತಯಾರಿಕಾ ಸಾಮರ್ಥ್ಯ ಒಂದು ಪ್ರಮುಖ ಮೈಲಿಗಲ್ಲಾಗಲಿದೆ.

ಭಾರತದಿಂದ 7nm ಚಿಪ್ ಯೋಜನೆ; ಇದಾಗಲಿದೆ ಗೇಮ್ ಚೇಂಜರ್; ಯಾಕೆ ಈ ಚಿಪ್ ಮಹತ್ವದ್ದು ಗೊತ್ತಾ?
ಸೆಮಿಕಂಡಕ್ಟರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 21, 2025 | 4:49 PM

Share

ಚೆನ್ನೈ, ಅಕ್ಟೋಬರ್ 21: ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಭಾರತ ಬಹಳ ತಡವಾಗಿ ಕಾಲಿಟ್ಟರೂ ಒಂದೊಂದೇ ದೃಢ ಹೆಜ್ಜೆ ಇಡುತ್ತಿದೆ. ಸಾಲು ಸಾಲಾಗಿ ಫ್ಯಾಬ್ರಿಕೇಶನ್ ಯೂನಿಟ್​ಗಳು ಶುರುವಾಗುತ್ತಿವೆ. ಈಗಾಗಲೇ ಮೊದಲ ಚಿಪ್ ತಯಾರಿಕೆಯಾಗಿ ಅಮೆರಿಕದ ಗ್ರಾಹಕರನ್ನೂ ತಲುಪಿಯಾಗಿದೆ. ಚಿಪ್ ಡಿಸೈನ್ ಘಟಕಗಳೂ ಬಂದಿವೆ. ಇದೇ ಹೊತ್ತಲ್ಲಿ ಸೆಮಿಕಂಡಕ್ಟರ್ ಉದ್ಯಮದ ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಲಾಗುವ 7 ಎನ್​ಎಂ ಚಿಪ್ (7nm processor) ಅಭಿವೃದ್ದಿಯತ್ತಲೂ ಭಾರತ ಸಾಗುತ್ತಿದೆ.

ಐಐಟಿ ಮದ್ರಾಸ್​ನ (IIT Madras) ಸಂಶೋಧಕರ ತಂಡವೊಂದು 7nm ಪ್ರೋಸಸರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಬಹುತೇಕ ಇದು ಅಂತಿಮ ಹಂತ ತಲುಪುತ್ತಿದ್ದು 2028ಕ್ಕೆ ಫ್ಯಾಬ್ರಿಕೇಶನ್​ಗೆ ಸಿದ್ಧವಾಗಿರಲಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ ಐಐಟಿ ಮದ್ರಾಸ್​ನ ಈ ರಿಸರ್ಚ್ ತಂಡವನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಶಕ್ತಿ ಚಿಪ್ ಎಂದು ಹೆಸರಿಸಲಾಗಿರುವ ಈ 7 ಎನ್​ಎಂ ಪ್ರೋಸಸರ್ ಅನ್ನು ಐಐಟಿ ಸಂಶೋಧಕರು ಸಂಪೂರ್ಣ ಸ್ವಂತವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಇದು ಅತ್ಯಂತ ಮಹತ್ವದ ಸಂಗತಿ. ಇನ್ನ 2-3 ವರ್ಷದಲ್ಲಿ ಭಾರತವು 7 ಎನ್​ಎಂ ಪ್ರೋಸಸರ್ ಅನ್ನು ತಯಾರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಇದನ್ನೂ ಓದಿ: 800 ಕಿಮೀ ಶ್ರೇಣಿಯ ಬ್ರಹ್ಮೋಸ್ ಕ್ಷಿಪಣಿಗಳ ಪರೀಕ್ಷೆ; ಮುಂದಿನ ವರ್ಷವೇ ಸೇನೆಯ ಬಲ ಹೆಚ್ಚಿಸಲಿವೆ ಈ ಪ್ರಬಲ ಮಿಸೈಲ್​ಗಳು

7 ಎನ್​ಎಂ ಚಿಪ್ ಮಹತ್ವ ಏನೆಂದು ತಿಳಿದಿರಿ…

nm ಎಂದರೆ ನ್ಯಾನೋ ಮೀಟರ್. ಒಂದು ಮೀಟರ್ ಅನ್ನು 100 ಕೋಟಿ ಭಾಗಗಳಾಗಿ ಮಾಡಿದರೆ ಅದರಲ್ಲಿ ಒಂದು ಭಾಗವೇ ನ್ಯಾನೋಮೀಟರ್. ಟ್ರಾನ್ಸಿಸ್ಟರ್ ಟರ್ಮಿನಲ್​ಗಳ ನಡುವಿನ ಅಂತರ ಇದು. 90 ಎನ್​ಎಂ, 28 ಎನ್​ಎಂ, 7 ಎನ್​ಎಂ ಇತ್ಯಾದಿ ಚಿಪ್​ಗಳಿವೆ. ಕಡಿಮೆ ಎನ್​ಎಂ ಇದ್ದಲ್ಲಿ ಒಂದು ಚಿಪ್​ನಲ್ಲಿ ಹೆಚ್ಚು ಟ್ರಾನ್ಸಿಸ್ಟರ್​ಗಳನ್ನು ಸೇರಿಸಬಹುದು. ಇದರಿಂದ ಹೆಚ್ಚು ಬಲಿಷ್ಠ ಪ್ರೋಸಸರ್​ಗಳು ಸಿದ್ಧಗೊಳ್ಳುತ್ತವೆ. 28 ಎನ್​ಎಂ ಚಿಪ್​ಗಿಂತ 7 ಎನ್​ಎಂ ಚಿಪ್​ಗಳು ಹೆಚ್ಚು ಪ್ರಬಲ ಕೆಲಸಗಳನ್ನು ಮಾಡಬಲ್ಲುವು.

ಭಾರತದಲ್ಲಿ ಈಗಾಗಲೇ 28 ಎನ್​ಎಂ ಚಿಪ್​ಗಳನ್ನು ತಯಾರಿಸಲಾಗುತ್ತಿದೆ. ಆದರೆ, 7 ಎನ್​ಎಂ ಚಿಪ್​ಗಳನ್ನು ತಯಾರಿಸಬಲ್ಲ ದೇಶಗಳ ಸಂಖ್ಯೆ ಬಹಳ ಕಡಿಮೆ. 7 ಎನ್​ಎಂಗಿಂತ ಕಡಿಮೆಯ ಚಿಪ್​ಸೆಟ್​ಗಳನ್ನು ಈಗಾಗಲೇ ತಯಾರಿಸಲಾಗುತ್ತಿದೆ. 3 ಎನ್​ಎಂ ಚಿಪ್​ಗಳಿವೆ. 1 ಎನ್​ಎಂ ಚಿಪ್ ತಯಾರಿಕೆಗೂ ಪ್ರಯತ್ನಿಸಲಾಗುತ್ತಿದೆ. ಆದರೆ, 7 ಎನ್​ಎಂ ಚಿಪ್ ಅಭಿವೃದ್ಧಿಪಡಿಸುವುದೆಂದರೆ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಒಂದು ಹೊಸ ತಂತ್ರಜ್ಞಾನ ಮೈಲಿಗಲ್ಲು ಎಂದೇ ಪರಿಭಾವಿಸಲಾಗಿದೆ.

ಇದನ್ನೂ ಓದಿ: ಭಾರತದ ಬ್ರಹ್ಮೋಸ್ ಕ್ಷಿಪಣಿಗೆ ಹೆಚ್ಚಿದ ಬೇಡಿಕೆ; ರಹಸ್ಯವಾಗಿ 4,000 ಕೋಟಿ ರೂ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡ ಎರಡು ದೇಶಗಳು

ಇಲ್ಲಿಂದ ಮುಂದಿನ ಹಾದಿಯನ್ನು ಭಾರತ ಹೆಚ್ಚು ಸುಗಮವಾಗಿ ಸವೆಸಬಹುದು. ಅಂದರೆ, ಹೆಚ್ಚು ಸೂಕ್ಷ್ಮ ಚಿಪ್​ಗಳನ್ನು ತಯಾರಿಸುವ ಸಾಮರ್ಥ್ಯ ಭಾರತಕ್ಕೆ ಸಿದ್ಧಿಸಲಿದೆ. ಅಂತೆಯೇ, ಭಾರತಕ್ಕೆ 7 ಎನ್​ಎಂ ಚಿಪ್ ತಯಾರಿಕೆಯು ಬಹಳ ಮಹತ್ವದ್ದಾಗಿದೆ.

ಏಳು ವರ್ಷಗಳಿಂದ ಆದ ನಿರಂತರ ಪ್ರಯತ್ನದ ಫಲ

7 ಎನ್​ಎಂ ಚಿಪ್ ತಯಾರಿಸುವ ಸಾಮರ್ಥ್ಯ ಪಡೆಯಲು ಬೇರೆ ದೇಶಗಳಿಗೆ ಹಲವು ದಶಕಗಳ ಪ್ರಯತ್ನವೇ ಬೇಕಾಯಿತು. ಭಾರತ ದಿಢೀರನೇ ಈ ಸಾಮರ್ಥ್ಯ ಪಡೆದಿಲ್ಲ ಎಂಬುದು ತಿಳಿದಿರಲಿ. 2018ರಲ್ಲೇ ಐಐಟಿ ಮದ್ರಾಸ್​ನಲ್ಲಿ ಪ್ರೊ| ವಿ ಕಾಮಕೋಟಿ ಮಾರ್ಗದರ್ಶನದಲ್ಲಿ ಈ ಪ್ರೋಸಸರ್ ಅಭಿವೃದ್ಧಿಗೆ ಸಂಶೋಧನೆ ಮೊದಲಿಡಲಾಯಿತು.

ಇದನ್ನೂ ಓದಿ: ಶಕ್ತಿಶಾಲಿ ಏರ್ ಫೋರ್ಸ್; ಚೀನಾವನ್ನು ಹಿಂದಿಕ್ಕಿದ ಭಾರತ ವಿಶ್ವದ ನಂ. 3

ಆರ್​ಐಎಸ್​ಸಿ-ವಿ ಎನ್ನುವ ಓಪನ್ ಸೋರ್ಸ್ ಆರ್ಕಿಟೆಕ್ಚರ್ ಬಳಸಿ ಶಕ್ತಿ ಪ್ರೋಸಸರ್ ಅನ್ನು ರೂಪಿಸಲಾಗುತ್ತಿದೆ. ಆರ್ಮ್ ಹೋಲ್ಡಿಂಗ್ಸ್, ಇಂಟೆಲ್, ಎಎಂಡಿ ಇತ್ಯಾದಿ ಇತರ ಸಿದ್ಧ ಆರ್ಕಿಟೆಕ್ಚರ್ ಇವೆಯಾದರೂ ಅವುಗಳಿಗೆ ಪೇಟೆಂಟ್ ಇದೆ. ಹೀಗಾಗಿ, ಭಾರತವು ಸ್ವತಂತ್ರವಾಗಿ ಚಿಪ್ ತಯಾರಿಸಲು ಆಗುವುದಿಲ್ಲ. ಈ ಕಾರಣಕ್ಕೆ ಓಪನ್ ಸೋರ್ಸ್ ಆರ್ಕಿಟೆಕ್ಚರ್ ಬಳಸಿ ಚಿಪ್ ಅಭಿವೃದ್ಧಿಪಡಿಸಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ