Direct taxes: ಏ. 1ರಿಂದ ಡಿ. 17ರವರೆಗೆ ನೇರ ತೆರಿಗೆ ಸಂಗ್ರಹ 19,21,508 ಕೋಟಿ ರೂ

|

Updated on: Dec 18, 2024 | 8:26 PM

Direct Tax collections: ಭಾರತದಲ್ಲಿ ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ (ಏಪ್ರಿಲ್ 1ರಿಂದ ಡಿಸೆಂಬರ್ 17) ಒಟ್ಟು ನೇರ ತೆರಿಗೆ ಸಂಗ್ರಹ 19,21,508 ಕೋಟಿ ರೂನಷ್ಟಿದೆ. ಈ ಪೈಕಿ ರೀಫಂಡ್ ಆಗಿರುವುದು 3.39 ಲಕ್ಷ ಕೋಟಿ ರೂನಷ್ಟು. ಈ ರೀಫಂಡ್ ಕಳೆದು ಉಳಿದಿರುವ ನಿವ್ವಳ ತೆರಿಗೆ 15,82,584 ಕೋಟಿ ರೂ. ಕಾರ್ಪೊರೇಟ್ ಟ್ಯಾಕ್ಸ್ 7.42 ಲಕ್ಷ ಕೋಟಿ ರೂನಷ್ಟಿದ್ದರೆ, ಕಾರ್ಪೊರೇಟೇತರ ತೆರಿಗೆ 7.97 ಲಕ್ಷ ಕೋಟಿ ರೂನಷ್ಟು ಸಂಗ್ರಹವಾಗಿದೆ.

Direct taxes: ಏ. 1ರಿಂದ ಡಿ. 17ರವರೆಗೆ ನೇರ ತೆರಿಗೆ ಸಂಗ್ರಹ 19,21,508 ಕೋಟಿ ರೂ
ತೆರಿಗೆ
Follow us on

ನವದೆಹಲಿ, ಡಿಸೆಂಬರ್ 18: ಭಾರತದ ನಿವ್ವಳ ನೇರ ತೆರಿಗೆ ಸಂಗ್ರಹ 2024-25ರ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ (ಡಿ. 17) 15,82,584 ಕೋಟಿ ರೂ ಇದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ತೆರಿಗೆ ಸಂಗ್ರಹದಲ್ಲಿ ಶೇ. 16.45ರಷ್ಟು ಹೆಚ್ಚಳ ಆಗಿದೆ. ಒಟ್ಟಾರೆ ನೇರ ತೆರಿಗೆಗಳು ಈ ವರ್ಷ 19,21,508 ಕೋಟಿ ರೂ ಮೊತ್ತದಷ್ಟಿವೆ. ಇದರಲ್ಲಿ ಶೇ. 20.32ರಷ್ಟು ತೆರಿಗೆ ಸಂಗ್ರಹ ಏರಿಕೆ ಆಗಿದೆ. ಮುಂಗಡ ತೆರಿಗೆ ಸಂಗ್ರಹ ಇದೇ ವೇಳೆ 7.56 ಲಕ್ಷ ಕೋಟಿ ರೂನಷ್ಟಿದೆ. ಈ ಅಡ್ವಾನ್ಸ್ ಟ್ಯಾಕ್ಸ್ ಸಂಗ್ರಹ ಕಳೆದ ವರ್ಷದಕ್ಕಿಂತ ಶೇ. 21ರಷ್ಟು ಏರಿಕೆ ಆಗಿದೆ.

ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ, ನಾನ್-ಕಾರ್ಪೊರೇಟ್ ಟ್ಯಾಕ್ಸ್, ಸೆಕ್ಯೂರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್, ವೆಲ್ತ್ ಟ್ಯಾಕ್ಸ್, ಬ್ಯಾಂಕಿಂಗ್ ಕ್ಯಾಷ್ ಟ್ರಾನ್ಸಾಕ್ಷನ್ ಟ್ಯಾಕ್ಸ್, ಹೋಟೆಲ್ ರಿಸಿಪ್ಟ್ ಟ್ಯಾಕ್ಸ್, ಇಂಟರೆಸ್ಟ್ ಟ್ಯಾಕ್ಸ್, ಎಕ್ಸ್​ಪೆಂಡಿಚರ್ ಟ್ಯಾಕ್ಸ್, ಎಸ್ಟೇಟ್ ಡ್ಯೂಟಿ, ಗಿಫ್ಟ್ ಟ್ಯಾಕ್ಸ್ ಇತ್ಯಾದಿಗಳೆಲ್ಲವೂ ನೇರ ತೆರಿಗೆಗಳ ಗುಂಪಿಗೆ ಸೇರುತ್ತವೆ.

ಇದನ್ನೂ ಓದಿ: ಫೆಬ್ರುವರಿ 1 ಶನಿವಾರವಾದರೂ ತೆರೆದಿರಬಹುದು ಷೇರು ಮಾರುಕಟ್ಟೆ; ಎನ್​ಎಸ್​ಇ ಮತ್ತು ಬಿಎಸ್​ಇ ಆಲೋಚನೆ

ಈ ವರ್ಷ ಇಲ್ಲಿಯವರೆಗೆ ಕಾರ್ಪೊರೇಟ್ ಟ್ಯಾಕ್ಸ್ 7.42 ಲಕ್ಷ ಕೋಟಿ ರೂನಷ್ಟು ಸಂಗ್ರಹವಾಗಿದೆ. ಕಾರ್ಪೊರೇಟೇತರ ತೆರಿಗೆ ಸಂಗ್ರಹ 7.97 ಲಕ್ಷ ಕೋಟಿ ರೂನಷ್ಟು ಆಗಿದೆ. ಎಸ್​ಟಿಟಿ 40,114 ಕೋಟಿ ರೂ ಸಂಗ್ರಹವಾಗಿದೆ.

ಒಟ್ಟಾರೆ ನೇರ ತೆರಿಗೆ ಸಂಗ್ರಹವಾದ 19,21,508 ಕೋಟಿ ರೂ ಪೈಕಿ 3.39 ಲಕ್ಷ ಕೋಟಿ ರೂನಷ್ಟು ರೀಫಂಡ್ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ. 42ರಷ್ಟು ಹೆಚ್ಚು ರೀಫಂಡ್ ಆಗಿದೆ. ಈ ರೀಫಂಡ್ ಕಳೆದು ಉಳಿದಿರುವ ನಿವ್ವಳ ನೇರ ತೆರಿಗೆ ಸಂಗ್ರಹ 15,82,584 ಕೋಟಿ ರೂ.

ಇದನ್ನೂ ಓದಿ: ಮುಳ್ಳಿಗೆ ಮುಳ್ಳು..! ಟ್ಯಾಕ್ಸ್ ಹಾಕುವ ಭಾರತದ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳೋದಿದು…

2024-25ರ ಹಣಕಾಸು ವರ್ಷದಲ್ಲಿ 22.07 ಲಕ್ಷ ಕೋಟಿ ರೂ ನೇರ ತೆರಿಗೆ ಸಂಗ್ರಹ ಮಾಡುವ ನಿರೀಕ್ಷೆ ಸರ್ಕಾರದ್ದಾಗಿದೆ. ಮೂರು ತಿಂಗಳ ಮೊದಲೇ ಗುರಿಗೆ ಸಮೀಪ ಮುಟ್ಟಿದೆ. ಹಿಂದಿನ ವರ್ಷದಲ್ಲಿ, ಅಂದರೆ 2023-24ರ ಹಣಕಾಸು ವರ್ಷದಲ್ಲಿ ಒಟ್ಟು ನೇರ ತೆರಿಗೆ ಸಂಗ್ರಹ 19.21 ಲಕ್ಷ ಕೋಟಿ ರೂ ಆಗಿತ್ತು. ಆ ವರ್ಷ ಶೇ. 20.32ರಷ್ಟು ತೆರಿಗೆ ಸಂಗ್ರಹ ಹೆಚ್ಚಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ