Gold Silver Price on 19th December: ಚಿನ್ನದ ಬೆಲೆ ಸತತ ಎರಡನೇ ದಿನ ಇಳಿಕೆ; ಬೆಳ್ಳಿಯೂ ಅಗ್ಗ

Bullion Market 2024 December 19th: ಚಿನ್ನದ ಬೆಲೆ ಸತತ ಎರಡನೇ ದಿನ ಇಳಿಕೆ ಆಗಿದೆ. ನಿನ್ನೆ 15 ರೂನಷ್ಟು ಇಳಿದಿದ್ದ ಚಿನ್ನದ ಬೆಲೆ ಇವತ್ತು 65 ರೂ ಕಡಿಮೆ ಆಗಿದೆ. ಜಾಗತಿಕವಾಗಿ ಹಲವು ರಾಷ್ಟ್ರಗಳಲ್ಲೂ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಬೆಳ್ಳಿ ಬೆಲೆ ಕಿಲೋಗೆ 1,000 ರೂನಷ್ಟು ಇಳಿಕೆ ಆಗಿದೆ. ಬೆಂಗಳೂರಿನಲ್ಲಿ ಬೆಲೆ 92 ರೂಗಿಂತ ಕಡಿಮೆಗೆ ಬಂದಿದೆ.

Gold Silver Price on 19th December: ಚಿನ್ನದ ಬೆಲೆ ಸತತ ಎರಡನೇ ದಿನ ಇಳಿಕೆ; ಬೆಳ್ಳಿಯೂ ಅಗ್ಗ
ಚಿನ್ನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 19, 2024 | 12:39 PM

ಬೆಂಗಳೂರು, ಡಿಸೆಂಬರ್ 19: ಚಿನ್ನದ ಬೆಲೆ ಮತ್ತೂ ಇಳಿದಿದೆ. ಐದಾರು ದಿನಗಳ ಕಾಲ ವ್ಯತ್ಯಯವಾಗದೇ ಉಳಿದಿದ್ದ ಬೆಳ್ಳಿ ಬೆಲೆಯೂ ಇಂದು ಗುರುವಾರ ಇಳಿಕೆ ಕಂಡಿದೆ. ಚಿನ್ನದ ಬೆಲೆ ಗ್ರಾಮ್​ಗೆ 65 ರೂನಷ್ಟು ಕುಸಿತ ಕಂಡಿದೆ. ಅಪರಂಜಿ ಚಿನ್ನದ ಬೆಲೆ 71 ರೂ ಕಡಿಮೆ ಆಗಿದೆ. ಭಾರತದಲ್ಲಿ ಮಾತ್ರವಲ್ಲ ಹೆಚ್ಚಿನ ದೇಶಗಳ ಮಾರುಕಟ್ಟೆಗಳಲ್ಲೂ ಚಿನ್ನದ ಬೆಲೆ ಇಳಿಕೆ ಆಗಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ 1 ರೂನಷ್ಟು ಕಡಿಮೆ ಆಗಿದೆ. ಬೆಂಗಳೂರಿನಲ್ಲಿ ಬೆಲೆ 91.50 ರೂ ಆಗಿದೆ. ಚೆನ್ನೈ ಮೊದಲಾದೆಡೆ ಬೆಳ್ಳಿ ಬೆಲೆ 99 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 70,700 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 77,130 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,150 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 70,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,150 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಡಿಸೆಂಬರ್ 19ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 70,700 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,130 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,850 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 915 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 70,700 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,130 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 915 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 70,700 ರೂ
  • ಚೆನ್ನೈ: 70,700 ರೂ
  • ಮುಂಬೈ: 70,700 ರೂ
  • ದೆಹಲಿ: 70,850 ರೂ
  • ಕೋಲ್ಕತಾ: 70,700 ರೂ
  • ಕೇರಳ: 70,700 ರೂ
  • ಅಹ್ಮದಾಬಾದ್: 70,750 ರೂ
  • ಜೈಪುರ್: 70,850 ರೂ
  • ಲಕ್ನೋ: 70,850 ರೂ
  • ಭುವನೇಶ್ವರ್: 70,700 ರೂ

ಇದನ್ನೂ ಓದಿ: Petrol Diesel Price on December 19: ಭಾರತದ ಪ್ರಮುಖ ನಗರಗಳಲ್ಲಿ ಸ್ಥಿರತೆ ಕಾಯ್ದುಕೊಂಡ ಇಂಧನ ದರ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,630 ರಿಂಗಿಟ್ (68,550 ರುಪಾಯಿ)
  • ದುಬೈ: 2,925 ಡಿರಾಮ್ (67,740 ರುಪಾಯಿ)
  • ಅಮೆರಿಕ: 780 ಡಾಲರ್ (66,350 ರುಪಾಯಿ)
  • ಸಿಂಗಾಪುರ: 1,086 ಸಿಂಗಾಪುರ್ ಡಾಲರ್ (67,810 ರುಪಾಯಿ)
  • ಕತಾರ್: 3,000 ಕತಾರಿ ರಿಯಾಲ್ (70,020 ರೂ)
  • ಸೌದಿ ಅರೇಬಿಯಾ: 3,020 ಸೌದಿ ರಿಯಾಲ್ (68,380 ರುಪಾಯಿ)
  • ಓಮನ್: 311.50 ಒಮಾನಿ ರಿಯಾಲ್ (68,830 ರುಪಾಯಿ)
  • ಕುವೇತ್: 242.70 ಕುವೇತಿ ದಿನಾರ್ (67,030 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,150 ರೂ
  • ಚೆನ್ನೈ: 9,900 ರೂ
  • ಮುಂಬೈ: 9,150 ರೂ
  • ದೆಹಲಿ: 9,150 ರೂ
  • ಕೋಲ್ಕತಾ: 9,150 ರೂ
  • ಕೇರಳ: 9,900 ರೂ
  • ಅಹ್ಮದಾಬಾದ್: 9,150 ರೂ
  • ಜೈಪುರ್: 9,150 ರೂ
  • ಲಕ್ನೋ: 9,150 ರೂ
  • ಭುವನೇಶ್ವರ್: 9,900 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಕ್ತನಾಳಗಳು ಸಂಕುಚಿತಗೊಳ್ಳುವುದರಿಂದ ಹೃದಯಾಘಾತದ ಅಪಾಯ ಹೆಚ್ಚು: ಡಾಕ್ಟರ್
ರಕ್ತನಾಳಗಳು ಸಂಕುಚಿತಗೊಳ್ಳುವುದರಿಂದ ಹೃದಯಾಘಾತದ ಅಪಾಯ ಹೆಚ್ಚು: ಡಾಕ್ಟರ್
ಬಿಜೆಪಿ ಸಂಸದ ಪ್ರತಾಪ್​ಗೆ ಗಾಯ, ರಾಹುಲ್​ ಗಾಂಧಿಯೇ ತಳ್ಳಿದ್ದು ಎಂದ ಸಾರಂಗಿ
ಬಿಜೆಪಿ ಸಂಸದ ಪ್ರತಾಪ್​ಗೆ ಗಾಯ, ರಾಹುಲ್​ ಗಾಂಧಿಯೇ ತಳ್ಳಿದ್ದು ಎಂದ ಸಾರಂಗಿ
ಮಕ್ಕಳು ಮತ್ತು ವಯೋವೃದ್ಧರು ಮನೆಗಳಿಂದ ಹೊರಬಾರದ ಸ್ಥಿತಿ!
ಮಕ್ಕಳು ಮತ್ತು ವಯೋವೃದ್ಧರು ಮನೆಗಳಿಂದ ಹೊರಬಾರದ ಸ್ಥಿತಿ!
ಎಲ್ಲರಿಗೂ ಟೈಮ್ ಬರುತ್ತೆ: ಡ್ರೆಸ್ಸಿಂಗ್ ರೂಮ್​ನಲ್ಲಿ ಅಶ್ವಿನ್ ಭಾವುಕ ಮಾತು
ಎಲ್ಲರಿಗೂ ಟೈಮ್ ಬರುತ್ತೆ: ಡ್ರೆಸ್ಸಿಂಗ್ ರೂಮ್​ನಲ್ಲಿ ಅಶ್ವಿನ್ ಭಾವುಕ ಮಾತು
ಬೆಂಗಳೂರು: ರಸ್ತೆಗೆ ಅಡ್ಡಲಾಗಿ ಕಂಟೈನರ್ ನಿಲ್ಲಿಸಿದ ಚಾಲಕ, ಟ್ರಾಫಿಕ್ ಜಾಮ್
ಬೆಂಗಳೂರು: ರಸ್ತೆಗೆ ಅಡ್ಡಲಾಗಿ ಕಂಟೈನರ್ ನಿಲ್ಲಿಸಿದ ಚಾಲಕ, ಟ್ರಾಫಿಕ್ ಜಾಮ್
ಗೌತಮಿನ ಸ್ವಮ್ಮಿಂಗ್​ಪೂಲ್​ಗೆ ತಳ್ಳಿದ ಮೋಕ್ಷಿತಾ; ಹೆಚ್ಚಿತು ದ್ವೇಷ
ಗೌತಮಿನ ಸ್ವಮ್ಮಿಂಗ್​ಪೂಲ್​ಗೆ ತಳ್ಳಿದ ಮೋಕ್ಷಿತಾ; ಹೆಚ್ಚಿತು ದ್ವೇಷ
ಮನೆಯಲ್ಲಿ ಕೆಲವು ವಸ್ತುಗಳನ್ನು ಭೂಮಿ ಮೇಲೆ ಇಡಬಾರದು: ಇದೆ ಅಧ್ಯಾತ್ಮ ಕಾರಣ!
ಮನೆಯಲ್ಲಿ ಕೆಲವು ವಸ್ತುಗಳನ್ನು ಭೂಮಿ ಮೇಲೆ ಇಡಬಾರದು: ಇದೆ ಅಧ್ಯಾತ್ಮ ಕಾರಣ!
ದಿನ ಭವಿಷ್ಯ; ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲ!
ದಿನ ಭವಿಷ್ಯ; ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲ!
ಜಾಮೀನು ಸಿಕ್ಕ 6 ದಿನದ ಬಳಿಕ ಶಿವಮೊಗ್ಗ ಜೈಲಿನಿಂದ ಆರೋಪಿ ಜಗದೀಶ್ ರಿಲೀಸ್​
ಜಾಮೀನು ಸಿಕ್ಕ 6 ದಿನದ ಬಳಿಕ ಶಿವಮೊಗ್ಗ ಜೈಲಿನಿಂದ ಆರೋಪಿ ಜಗದೀಶ್ ರಿಲೀಸ್​
ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು