ಫೆಬ್ರುವರಿ 1 ಶನಿವಾರವಾದರೂ ತೆರೆದಿರಬಹುದು ಷೇರು ಮಾರುಕಟ್ಟೆ; ಎನ್​ಎಸ್​ಇ ಮತ್ತು ಬಿಎಸ್​ಇ ಆಲೋಚನೆ

Union budget and stock market: ಫೆಬ್ರುವರಿ 1, ಶನಿವಾರದಂದು ಷೇರು ವಿನಿಮಯ ಕೇಂದ್ರಗಳಾದ ಬಿಎಸ್​ಇ ಮತ್ತು ಎನ್​ಎಸ್​ಇ ತೆರೆದಿರುವ ಸಾಧ್ಯತೆ ಇದೆ. ಅಂದು ಬಜೆಟ್ ಮಂಡನೆಯ ಮಹತ್ವದ ದಿನವಾದ್ದರಿಂದ ಹೂಡಿಕೆದಾರರಿಗೆ ಟ್ರೇಡಿಂಗ್ ನಡೆಸಲು ಅವಕಾಶ ನೀಡಲು ಯೋಜಿಸಲಾಗಿದೆ. 2015ರಲ್ಲಿ ಬಜೆಟ್ ಮಂಡನೆಯಾದ ಫೆಬ್ರುವರಿ 28ರಂದು ಶನಿವಾರವಾದರೂ ಮಾರುಕಟ್ಟೆ ತೆರೆದಿತ್ತು.

ಫೆಬ್ರುವರಿ 1 ಶನಿವಾರವಾದರೂ ತೆರೆದಿರಬಹುದು ಷೇರು ಮಾರುಕಟ್ಟೆ; ಎನ್​ಎಸ್​ಇ ಮತ್ತು ಬಿಎಸ್​ಇ ಆಲೋಚನೆ
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 18, 2024 | 5:47 PM

ನವದೆಹಲಿ, ಡಿಸೆಂಬರ್ 18: ಫೆಬ್ರುವರಿ 1ರಂದು ಬಜೆಟ್ ಮಂಡನೆ ನಿಮಿತ್ತ ಷೇರು ಮಾರುಕಟ್ಟೆ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ಬಜೆಟ್ ದಿನವಾದ ಫೆಬ್ರುವರಿ 1, ಶನಿವಾರವಾದರೂ ಅಂದು ಟ್ರೇಡಿಂಗ್​ಗೆ ಅವಕಾಶ ಸಿಗಬಹುದು ಎನ್ನಲಾಗಿದೆ. ಈ ಬಗ್ಗೆ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಚರ್ಚಿಸುತ್ತಿದ್ದು, ಸದ್ಯದಲ್ಲೇ ತೀರ್ಮಾನ ತೆಗೆದುಕೊಳ್ಳಬಹುದು ಎಂಬುದು ಸಿಎನ್​ಬಿಸಿ ಟಿವಿ18 ವರದಿಯಲ್ಲಿ ಹೇಳಲಾಗಿದೆ.

ಫೆಬ್ರುವರಿ 1ರಂದು ಬಜೆಟ್ ಪ್ರಸ್ತುತಪಡಿಸಲಾಗುತ್ತದೆ. ಮುಂದಿನ ಹಣಕಾಸು ವರ್ಷದ ಆಯವ್ಯಯ ಮತ್ತು ವಿಶೇಷ ಯೋಜನೆಗಳ ಘೋಷಣೆಯಾಗುವ ಮಹತ್ವದ ದಿನವಾದ ಅಂದು ಹೂಡಿಕೆದಾರರಿಗೆ ಟ್ರೇಡಿಂಗ್ ಮಾಡಲು ಅವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದೆ.

ಇದನ್ನೂ ಓದಿ: ಮುಳ್ಳಿಗೆ ಮುಳ್ಳು..! ಟ್ಯಾಕ್ಸ್ ಹಾಕುವ ಭಾರತದ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳೋದಿದು…

ಶನಿವಾರ ಮತ್ತು ಭಾನುವಾರ ಷೇರು ಮಾರುಕಟ್ಟೆ ಬಂದ್ ಆಗಿರುತ್ತದೆ. ಆದರೆ, ಫೆಬ್ರುವರಿ 1 ಶನಿವಾರವಾದರೂ ಅಂದು ಬಿಎಸ್​ಇ ಮತ್ತು ಎನ್​ಎಸ್​ಇ ಕಾರ್ಯನಿರ್ವಹಿಸಬಹುದು. ಹಿಂದೆ 2015ರ ಫೆಬ್ರುವರಿ 28ರಂದು ಬಜೆಟ್ ಮಂಡನೆ ಆಗಿತ್ತು. ಅಂದು ಶನಿವಾರವಾಗಿದ್ದರೂ ಮಾರುಕಟ್ಟೆ ಟ್ರೇಡಿಂಗ್​ಗೆ ತೆರೆದಿತ್ತು. ಈ ಬಾರಿಯ ಬಜೆಟ್ ಮಂಡನೆ ದಿನ ಶನಿವಾರವಾಗಿದ್ದು, ಅಂದೂ ರಜೆ ಇರುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ಸತತ ಏಳು ಬಜೆಟ್ ಮಂಡಿಸಿದ್ದಾರೆ. ಫೆಬ್ರುವರಿ 1ರದ್ದು ಅವರಿಗೆ ಸತತ ಎಂಟನೇ ಬಜೆಟ್ ಆಗುತ್ತದೆ. ಅಸ್ಥಿರ ಜಾಗತಿಕ ರಾಜಕೀಯ ಪರಿಸ್ಥಿತಿ, ಜಾಗತಿಕ ಆರ್ಥಿಕ ಹಿನ್ನಡೆ, ಸರಿಯಾಗಿ ನಿಯಂತ್ರಣಕ್ಕೆ ಬಾರದ ಹಣದುಬ್ಬರ ಇತ್ಯಾದಿ ವಿವಿಧ ಅಂಶಗಳು ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟುವಂತೆ ಮಾಡಿವೆ.

ಯಥಾಪ್ರಕಾರ, ಮಧ್ಯಮವರ್ಗದವರು ಆದಾಯ ತೆರಿಗೆ ವಿನಾಯಿತಿ ಘೋಷಣೆ ಆಗಬಹುದಾ ಎನ್ನುವ ಆಶಯದಲ್ಲಿದ್ದಾರೆ. ತಂತ್ರಜ್ಞಾನ ಮತ್ತು ಕೌಶಲ್ಯಗಳ ಕ್ಷೇತ್ರ ಹೆಚ್ಚು ಉತ್ತೇಜನದ ನಿರೀಕ್ಷೆಯಲ್ಲಿವೆ.

ಇದನ್ನೂ ಓದಿ: Ujjwala Yojana 2.0: ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್‌ ಸಂಪರ್ಕಕ್ಕೆ ಮತ್ತೊಮ್ಮೆ ಅವಕಾಶ; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಚುನಾವಣೆಯ ಬಳಿಕ ಜುಲೈನಲ್ಲಿ ಬಜೆಟ್ ಮಂಡನೆ ಆಗಿತ್ತು. ಈಗ ಫೆಬ್ರುವರಿ 1ರಂದು ನಡೆಯಲಿರುವುದು ಎನ್​ಡಿಎ 2.0 ಸರ್ಕಾರದ ಎರಡನೇ ಬಜೆಟ್ ಆಗಿರಲಿದೆ. ಜುಲೈ 23ರಂದು ಮಂಡನೆಯಾದ ಬಜೆಟ್​ನ ಗಾತ್ರ ಸುಮಾರು 48 ಲಕ್ಷ ಕೋಟಿ ರೂನಷ್ಟಿತ್ತು. ಈ ಬಾರಿ ಬಜೆಟ್ ಗಾತ್ರ 50 ಲಕ್ಷ ಕೋಟಿ ರೂ ಮೀರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಧರಣಿ ಮರೆತು ಸಚಿವೆ ಜತೆ ಸೆಲ್ಫೀ ತೆಗೆದುಕೊಂಡ ಅಂಗನವಾಡಿ ಕಾರ್ಯಕರ್ತೆಯರು!
ಧರಣಿ ಮರೆತು ಸಚಿವೆ ಜತೆ ಸೆಲ್ಫೀ ತೆಗೆದುಕೊಂಡ ಅಂಗನವಾಡಿ ಕಾರ್ಯಕರ್ತೆಯರು!
ಬೆಂಗಳೂರು ಬೆಳೆದರೆ ಅದು ರಾಜ್ಯದ ಬೆಳವಣಿಗೆ ಅಲ್ಲ: ಲಕ್ಷ್ಮಣ ಸವದಿ
ಬೆಂಗಳೂರು ಬೆಳೆದರೆ ಅದು ರಾಜ್ಯದ ಬೆಳವಣಿಗೆ ಅಲ್ಲ: ಲಕ್ಷ್ಮಣ ಸವದಿ
ಮತ್ತೇ ಮುನ್ನೆಲೆಗೆ ಬಂದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಣಿಗಳ ಜಗಳ
ಮತ್ತೇ ಮುನ್ನೆಲೆಗೆ ಬಂದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಣಿಗಳ ಜಗಳ
ಯತ್ನಾಳ್ ಆರೋಪಗಳಿಗೆ ಕೌಂಟರ್ ನೀಡಿದ ಖರ್ಗೆ ಮತ್ತು ಎಂಬಿ ಪಾಟೀಲ್
ಯತ್ನಾಳ್ ಆರೋಪಗಳಿಗೆ ಕೌಂಟರ್ ನೀಡಿದ ಖರ್ಗೆ ಮತ್ತು ಎಂಬಿ ಪಾಟೀಲ್
ಉತ್ತರ ಕರ್ನಾಟಕದ ಭವ್ಯ ಪರಂಪರೆಯನ್ನು ಸದನದಲ್ಲಿ ವಿವರಿಸಿದ ಯತ್ನಾಳ್
ಉತ್ತರ ಕರ್ನಾಟಕದ ಭವ್ಯ ಪರಂಪರೆಯನ್ನು ಸದನದಲ್ಲಿ ವಿವರಿಸಿದ ಯತ್ನಾಳ್
ಬಿಳಿಗಿರಿರಂಗನಬೆಟ್ಟ ಮುಖ್ಯರಸ್ತೆಯಲ್ಲಿ ಕಾಡಾನೆಗಳ ಹಿಂಡು, ಹುಲಿ ಪ್ರತ್ಯಕ್ಷ
ಬಿಳಿಗಿರಿರಂಗನಬೆಟ್ಟ ಮುಖ್ಯರಸ್ತೆಯಲ್ಲಿ ಕಾಡಾನೆಗಳ ಹಿಂಡು, ಹುಲಿ ಪ್ರತ್ಯಕ್ಷ
ನಿವೃತ್ತಿ ಘೋಷಣೆಗೂ ಮುನ್ನ ವಿರಾಟ್ ಕೊಹ್ಲಿ ಮುಂದೆ ಕಣ್ಣೀರಿಟ್ಟ ಅಶ್ವಿನ್
ನಿವೃತ್ತಿ ಘೋಷಣೆಗೂ ಮುನ್ನ ವಿರಾಟ್ ಕೊಹ್ಲಿ ಮುಂದೆ ಕಣ್ಣೀರಿಟ್ಟ ಅಶ್ವಿನ್
ಸರ್ಕಾರೀ ಆಸ್ಪತ್ರೆಗಳ ವಿಷಯದಲ್ಲಿ ನೆಗೆಟಿವ್ ಮಾತು ಸರಿಯಲ್ಲ: ಕೋನರೆಡ್ಡಿ
ಸರ್ಕಾರೀ ಆಸ್ಪತ್ರೆಗಳ ವಿಷಯದಲ್ಲಿ ನೆಗೆಟಿವ್ ಮಾತು ಸರಿಯಲ್ಲ: ಕೋನರೆಡ್ಡಿ
ಕಣ್ಣೀರು ಅದುಮಿಟ್ಟು ನಿವೃತ್ತಿ ಘೋಷಿಸಿದ ಅಶ್ವಿನ್
ಕಣ್ಣೀರು ಅದುಮಿಟ್ಟು ನಿವೃತ್ತಿ ಘೋಷಿಸಿದ ಅಶ್ವಿನ್
ದರ್ಶನ್​ಗೆ ನಡೆದಾಡಲು ಮಗನ ಆಸರೆ; ಕುಂಟುತ್ತಲೇ ಕಾರು ಏರಿದ ನಟ
ದರ್ಶನ್​ಗೆ ನಡೆದಾಡಲು ಮಗನ ಆಸರೆ; ಕುಂಟುತ್ತಲೇ ಕಾರು ಏರಿದ ನಟ