ಕಣ್ಣ ತುಂಬಾ ಕನಸು ಉತ್ತಮ ಜೀವನವನ್ನು ಹುಡುಕುತ್ತಾ ಸಂತೋಷ್ ಶ್ರೀಮಲೆ (Santosh Shrimale’s) ಕೆಲವು ವರ್ಷಗಳ ಹಿಂದೆ ತನ್ನ ಊರನ್ನು ತೊರೆದು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು. ಯಾವುದೇ ಸಂಪನ್ಮೂಲಗಳಿಲ್ಲದೆ, ಅಪಾರ ಇಚ್ಛಾಶಕ್ತಿ ಹಾಗೂ ಆತ್ಮವಿಶ್ವಾಸದೊಂದಿಗೆ ಸ್ಥಳೀಯ ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಈ ಅನುಭವವು ಅವರಿಗೆ B2B ಹಣ್ಣು ಪೂರೈಕೆ ಉದ್ಯಮದ ಕುರಿತಾದ ಆಳವಾದ ಒಳನೋಟವನ್ನು ನೀಡಿತು. ಹೀಗಾಗಿ 2012 ರಲ್ಲಿ, ಸಂತೋಷ್ ತಮ್ಮ ಮೊದಲ ಟಾಟಾ ಏಸ್ ಖರೀದಿಸಲು ಹಣವನ್ನು ಒಂದುಗೂಡಿಸಿದರು. ಈ ವಿಶ್ವಾಸಾರ್ಹ ಪಾಲುದಾರರೊಂದಿಗೆ, ಅವರು ತಮ್ಮದೇ ಆದ ಹಣ್ಣು ಪೂರೈಕೆ ಉದ್ಯಮವನ್ನು ಪ್ರಾರಂಭಿಸಿದರು. ಉದ್ಯಮಶೀಲತಾ ಮನೋಭಾವ ಉದ್ಯಮದ ತಿಳುವಳಿಕೆಯು ದೊಡ್ಡದಾದ ಅಡಿಪಾಯ ಹಾಕಿಕೊಟ್ಟಿತು.
2017ರ ವೇಳೆಗೆ ಸಾಯಿ ಫಾರ್ಮಿಕಲ್ಚರ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಗೆ ಆರಂಭಿಸಿದರು. ಇದು ಜೀವನದಲ್ಲಿ ಒಂದು ಮಹತ್ವದ ತಿರುವು. ಸಂತೋಷ್‌ಗೆ, ಇದು ನಿಜವಾಗಿಯೂ “ಅಬ್ ಮೇರಿ ಬಾರಿ” ಯ ಆರಂಭವಾಗಿತ್ತು. ಕನಸು ಹೊತ್ತು ಬೆಂಗಳೂರಿಗೆ ಬಂದಿದ್ದ ಸಂತೋಷ್ ಇಂದು, 70 ಟಾಟಾ ACE ಗಳ ಫ್ಲೀಟ್ ಅನ್ನು ಹೊಂದಿದ್ದಾರೆ, ಬೆಂಗಳೂರಿನಾದ್ಯಂತ ಹಣ್ಣುಗಳನ್ನು ಪೂರೈಸುತ್ತಾರೆ. ಐಟಿಸಿ, ಬಿಗ್ ಬಾಸ್ಕೆಟ್ ಮತ್ತು ಬ್ಲಿಂಕಿಟ್‌ನಂತಹ ಪ್ರಮುಖ ಕಂಪನಿಗಳೊಂದಿಗೆ ಕೈ ಜೋಡಿಸಿದ್ದಾರೆ. ಅವರ ಕಂಪನಿಯಲ್ಲಿ ಈಗಾಗಲೇ 100 ಕ್ಕೂ ಹೆಚ್ಚು ಜನರು ಉದ್ಯೋಗ ಕಂಡುಕೊಂಡಿದ್ದಾರೆ. ಬಡತನದಿಂದ ಯಶಸ್ಸಿನವರೆಗೆ ಸಂತೋಷ್ ಅವರ ಕಥೆಯು ಭಾರತದ ನವಯುಗದ ಉದ್ಯಮಿಗಳಿಗೆ ನಿಜವಾದ ಒಡನಾಡಿಯಾದ ಟಾಟಾ ಏಸ್‌ನ ಕಠಿಣ ಪರಿಶ್ರಮದ ಶಕ್ತಿ ಮತ್ತು ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಅಬ್ ಮೇರಿ ಬಾರಿ ಅಭಿಯಾನದ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:20 pm, Wed, 23 July 25