LIC IPO: ಎಲ್​ಐಸಿ ಐಪಿಒದಲ್ಲಿ ಭಾಗಿಯಾಗಬೇಕೆ? ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

| Updated By: Srinivas Mata

Updated on: Apr 26, 2022 | 2:46 PM

ಎಲ್​ಐಸಿ ಐಪಿಒ ಮೇ 4ರಿಂದ 9ನೇ ತಾರೀಕಿನ ತನಕ ಇರುತ್ತದೆ. ಇದರಲ್ಲಿ ಪಾಲ್ಗೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.

LIC IPO: ಎಲ್​ಐಸಿ ಐಪಿಒದಲ್ಲಿ ಭಾಗಿಯಾಗಬೇಕೆ? ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ಸಾಂದರ್ಭಿಕ ಚಿತ್ರ
Follow us on

ಭಾರತದ ಅತಿದೊಡ್ಡ ವಿಮಾ ಕಂಪೆನಿಯಾದ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಭಾನುವಾರ ಸಂಜೆ ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಅತಿ ದೊಡ್ಡ ಐಪಿಒಗಾಗಿ ಕರಡು ಪತ್ರಗಳನ್ನು ಸಲ್ಲಿಸಿದೆ. ಈ ಐಪಿಒದಲ್ಲಿ ಹೂಡಿಕೆ ಮಾಡುವುದಕ್ಕಾಗಿ ಪಾಲಿಸಿದಾರರು ಎಲ್​ಐಸಿ ಪೋರ್ಟಲ್‌ನಲ್ಲಿ ತಮ್ಮ ಪರ್ಮನೆಂಟ್ ಅಕೌಂಟ್ ನಂಬರ್ (PAN) ವಿವರಗಳನ್ನು ಅಪ್​ಡೇಟ್ ಮಾಡಬೇಕು ಮತ್ತು ಡಿಮ್ಯಾಟ್ ಖಾತೆಯನ್ನು ತೆರೆಯಬೇಕು.

ರಿಯಾಯಿತಿ ಇದೆ
ಐಪಿಒ ಇಶ್ಯೂ ಗಾತ್ರದ ಪೈಕಿ ಶೇ 10ರಷ್ಟನ್ನು ಪಾಲಿಸಿದಾರರಿಗೆ ಮೀಸಲಿಟ್ಟಿದೆ ಮತ್ತು ಅಂಥ ಹೂಡಿಕೆದಾರರಿಗೆ ಐಪಿಒದಲ್ಲಿ ಸ್ವಲ್ಪ ಮಟ್ಟಿಗೆ ರಿಯಾಯಿತಿ ಸಹ ನೀಡುತ್ತದೆ. ಇನ್ನು ಎಲ್​ಐಸಿಯ ಉದ್ಯೋಗಿಗಳಿಗೂ ಇಶ್ಯೂ ಗಾತ್ರದ ಶೇ 5ರಷ್ಟನ್ನು ಮೀಸಲಿಡಲಾಗಿದೆ.

ಐಪಿಒದಲ್ಲಿ ಭಾಗವಹಿಸುವುದು ಹೇಗೆ?
ಎಲ್​ಐಸಿ ಐಪಿಒದಲ್ಲಿ ಪಾಲ್ಗೊಳ್ಳಬೇಕು ಅಂದರೆ ಕಡ್ಡಾಯವಾಗಿ ಡಿಮ್ಯಾಟ್ ಖಾತೆ ಇರಬೇಕು. ಯಾವುದೇ ಷೇರು, ಸೆಕ್ಯೂರಿಟಿಗಳು ವೈಯಕ್ತಿಕವಾಗಿ ಹೂಡಿಕೆದಾರರು ಇಟ್ಟುಕೊಳ್ಳಬೇಕು ಎಂದಾದರೆ ಇದು ಅತ್ಯಗತ್ಯ. ಆದ್ದರಿಂದ ಯಾವ ಪಾಲಿಸಿದಾರರ ಬಳಿ ಡಿಮ್ಯಾಟ್ ಖಾತೆ ಇಲ್ಲವೋ ತಮ್ಮದೇ ಸ್ವಂತ ವೆಚ್ಚದಲ್ಲಿ ತೆರೆಯಲು ಎಲ್​ಐಸಿ ಸಲಹೆ ಮಾಡುತ್ತಿದೆ.

ಗಮನಿಸಬೇಕಾದ ಅಂಶ:
ಪಾಲಿಸಿದಾರರು ತಮ್ಮ ಸಂಗಾತಿ ಅಥವಾ ಮಗ ಅಥವಾ ಸಂಬಂಧಿಕರ ಡಿಮ್ಯಾಟ್ ಖಾತೆಯಿಂದ ಅಪ್ಲೈ ಮಾಡಲು ಸಾಧ್ಯವಿಲ್ಲ.

ಈಗಾಗಲೇ ಪಾಲಿಸಿದಾರರಾಗಿದ್ದಲ್ಲಿ ಮೊದಲಿಗೆ ಪ್ಯಾನ್ ಕಾರ್ಡ್ ಅನ್ನು ಎಲ್​ಐಸಿ ಪಾಲಿಸಿ ಜತೆಗೆ ಜೋಡಣೆ ಮಾಡಬೇಕು ಹಾಗೂ ಡಿಮ್ಯಾಟ್ ಖಾತೆ ಇರಬೇಕು.

ಎಲ್​ಐಸಿ ಪಾಲಿಸಿ ಜತೆಗೆ ಪ್ಯಾನ್ ಜೋಡಣೆ ಹೇಗೆ:
– https://licindia.in/ ಕ್ಲಿಕ್ ಮಾಡಬೇಕು.
– ಆನ್​ಲೈನ್ ಪ್ಯಾನ್ ನೋಂದಣಿ ಆರಿಸಿಕೊಳ್ಳಬೇಕು ಮತ್ತು Proceed ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
– ಪ್ಯಾನ್, ಎಲ್​ಐಸಿ ಪಾಲಿಸಿ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ ಒಳಗೊಂಡಂತೆ ಇತರ ಮಾಹಿತಿಗಳನ್ನು ನಮೂದಿಸಬೇಕು.
– ಕ್ಯಾಪ್ಚಾ ಕೋಡ್ ನಮೂದಿಸಿ
– ಮೊಬೈಲ್ ಸಂಖ್ಯೆಯಲ್ಲಿ ಪಡೆದ ಒಟಿಪಿ ನಮೂದಿಸಿ ಮತ್ತು ಸಲ್ಲಿಸಿ

ಒಂದಕ್ಕಿಂತ ಹೆಚ್ಚು ಪಾಲಿಸಿಗಳು ಇದ್ದಾಗ ಏನು?
ಒಂದಕ್ಕಿಂತ ಹೆಚ್ಚು ಪಾಲಿಸಿಗಳು ಇದ್ದಲ್ಲಿ ಎಲ್ಲದರ ಸಂಖ್ಯೆಯನ್ನು ಸೇರಿಸಬಹುದು. ಮೊಬೈಲ್ ದೃಢೀಕರಣಕ್ಕೆ ಪಾಲಿಸಿದಾರರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಒಮ್ಮೆ ಖಾತ್ರಿ ಸಂಪೂರ್ಣಗೊಂಡಲ್ಲಿ ಎಲ್​ಐಸಿ ವೆಬ್​ಸೈಟ್​ನಲ್ಲಿ “Online Checking Policy PAN Status” ಎಂಬ ಬಟನ್ ಕ್ಲಿಕ್ ಮಾಡುವ ಮೂಲಕ ಸ್ಟೇಟಸ್ ತಿಳಿಯಬಹುದು.

ಪ್ಯಾನ್ ಜೋಡಣೆಗೆ ಮತ್ತು ಡಿಮ್ಯಾಟ್ ಖಾತೆ ತೆರೆಯುವುದಕ್ಕೆ ಗಡುವು ಏನು?
ಎಲ್​ಐಸಿಯಿಂದ ತಿಳಿಸಿರುವ ಪ್ರಕಾರ ಎಲ್ಲ ಪಾಲಿಸಿದಾರರು ಫೆಬ್ರವರಿ 28, 2022ರ ಒಳಗಾಗಿ ಪಾಲಿಸಿಯಲ್ಲಿ ಪ್ಯಾನ್ ಮಾಹಿತಿಯನ್ನು ಅಪ್​ಡೇಟ್ ಮಾಡುವಂತೆ ತಿಳಿಸಲಾಗಿತ್ತು. ಅದರೊಳಗೆ ಪ್ಯಾನ್​ ಸಂಖ್ಯೆಯನ್ನು ಅಪ್​ಡೇಟ್ ಮಾಡಿದಲ್ಲಿ ಮಾತ್ರ ಐಪಿಒಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಈಗ ನನ್ನ ಬಳಿ ಎಲ್​ಐಸಿ ಪಾಲಿಸಿ ಇಲ್ಲದಿದ್ದರೆ ಏನಾಗುತ್ತದೆ?
ಯಾರ ಬಳಿ ಎಲ್​ಐಸಿ ಪಾಲಿಸಿ ಇಲ್ಲವೋ ಅವರೂ ಐಪಿಒದಲ್ಲಿ ಪಾಲ್ಗೊಳ್ಳಬಹುದು. ರೀಟೇಲ್ ಅಥವಾ ಇನ್​ಸ್ಟಿಟ್ಯೂಷನಲ್ ಹೂಡಿಕೆ ವಿಭಾಗದ ಅಡಿಯಲ್ಲಿ. ಇದಕ್ಕಾಗಿ ಎಲ್​ಐಸಿ ಏಜೆಂಟರ ಸಹಾಯ ಪಡೆಯಬಹುದು.

ಪಾಲಿಸಿದಾರರ ಮೀಸಲಾತಿ ಅಡಿಯಲ್ಲಿ ಬಿಡ್ ಮಾಡಿದರೆ ಹೇಗೆ?
ಪಾಲಿಸಿದಾರರ ಮೀಸಲಾತಿ ಅಡಿಯಲ್ಲಿ ಅಪ್ಲಿಕೇಷನ್ಸ್ ಸಪೋರ್ಟೆಡ್ ಬ್ಲಾಕ್ಡ್ ಅಮೌಂಟ್ (ASBA) ಮತ್ತು ಯುಪಿಐ ಬಿಡ್ ಮಾಡಬಹುದು.ಅರ್ಹ ಪಾಲಿಸಿದಾರರಿಗೆ ರಿಯಾಯಿತಿ ನಂತರದ ವಿತರಣೆ ಮೊತ್ತ 2 ಲಕ್ಷ ರೂಪಾಯಿ ದಾಟುವಂತಿಲ್ಲ.

ನಾನು ಎನ್​ಆರ್​ಐ ಆಗಿದ್ದರೆ?
ಅನಿವಾಸಿ ಭಾರತೀಯರು ಭಾರತದಲ್ಲಿ ಐಪಿಒಗೆ ಹೂಡಿಕೆ ಮಾಡಲು ಅರ್ಹರು. ಆದರೆ ಪಾಲಿಸಿದಾರರ ಮೀಸಲು ಭಾಗದಲ್ಲಿ ಅರ್ಜಿ ಸಲ್ಲಿಸಲು ಅರ್ಹರಲ್ಲ. ಎನ್​ಆರ್​ಐಗಳಾಗಿದ್ದು, ಎಲ್​ಐಸಿ ಪಾಲಿಸಿ ಇದ್ದರೂ ರೀಟೇಲ್ ವರ್ಗದ ಅಡಿಯಲ್ಲಿ ಅಪ್ಲೈ ಮಾಡಬೇಕು.

ಯಾವ ಪಾಲಿಸಿಗಳು ಅರ್ಹ ಆಗಿವೆ
ಸದ್ಯಕ್ಕೆ ಸಕ್ರಿಯವಾಗಿರುವ ಪಾಲಿಸಿ ಆಗಿರಬೇಕು. ದಾಖಲೆಗಳ ಪ್ರಕಾರ ಮೆಚ್ಯೂರ್ಡ್, ಸರೆಂಡರ್ ಅಥವಾ ಪಾಲಿಸಿದಾರರ ಸಾವು ಸಂಭವಿಸಿರಬಾರದು.

ಅಪ್ರಾಪ್ತ ಮಗನ ಪಾಲಿಸಿಯ ಪ್ರಪೋಸರ್ ನಾನು. ಪಾಲಿಸಿದಾರರ ಮೀಸಲು ಅಡಿಯಲ್ಲಿ ಅಪ್ಲೈ ಮಾಡುವುದಕ್ಕೆ ಅರ್ಹನೆ?
ನೀವು ಪಾಲಿಸಿಯ ಮಾಲೀಕರಾಗಿರುತ್ತೀರಿ ಮತ್ತು ಪಾಲಿಸಿದಾರರಾಗಿ ಮೀಸಲು ಅಡಿಯಲ್ಲಿ ಪಡೆಯುವುದಕ್ಕೆ ಅರ್ಹರಾಗುತ್ತೀರಿ.

ಡಿಆರ್​ಎಚ್​ಪಿ ದಿನಾಂಕದ ಮುಂಚೆ ನಾನು ಪ್ರಸ್ತಾವ ಕಾಗದಗಳನ್ನು ಸಲ್ಲಿಸಿದ್ದೇನೆ. ಆದರೆ ಪಾಲಿಸಿ ಬಾಂಡ್ ನಂತರ ಪಡೆದಿದ್ದೇನೆ. ನಾನು ಅಪ್ಲೈ ಮಾಡುವುದಕ್ಕೆ ಅರ್ಹನೆ?
ಪಾಲಿಸಿದಾರರ ಮೀಸಲು ಭಾಗದ ಅಡಿಯಲ್ಲಿ ಅರ್ಹತೆ ಪಡೆಯುವುದಕ್ಕೆ ಪಾಲಿಸಿಯನ್ನು ಡಿಆರ್​ಎಚ್​ಪಿಯ ದಿನಾಂಕದದಂದು ಅಥವಾ ಅದಕ್ಕಿಂತ ಮುಂಚೆ ಪಾಲಿಸಿ ವಿತರಣೆ ಆಗಿರಬೇಕು. ಬಿಡ್/ಆರಂಭದ ದಿನಾಂಕದಂದು ಸರೆಂಡರ್, ಮೆಚ್ಯೂರಿಟಿ ಅಥವಾ ಸಾವಿನ ಕ್ಲೇಮ್ ಮೂಲಕ ಪಾಲಿಸಿ ಬಿಟ್ಟುಕೊಟ್ಟಿರಬಾರದು.

ಅರ್ಹ ಪಾಲಿಸಿದಾರರಿಗೆ ಪಾಲಿಸಿದಾರರ ಮೀಸಲು ಅಡಿಯಲ್ಲಿ ಷೇರು ವಿತರಣೆ ಆಗುವುದು ಖಾತ್ರಿಯೇ?
ಇಲ್ಲ, ಷೇರು ವಿತರಣೆ ಸಿಕ್ಕೇ ಸಿಗುತ್ತದೆ ಅಂತಿಲ್ಲ. ಅಂದಾಜು ಆಫರ್ ಗಾತ್ರದ ಶೇ 10ರಷ್ಟನ್ನು ಅರ್ಹ ಪಾಳಿಸಿದಾರರಿಗೆ ಮೀಸಲಿರಿಸಲಾಗಿದೆ. ಸ್ಪರ್ಧಾತ್ಮಕ ಬಿಡ್ಡಿಂಗ್ ಮತ್ತು ಬಿಡ್ಡಿಂಗ್ ಪ್ರಕ್ರಿಯೆಯ ಬೇಡಿಕೆ ಅನುಸಾರ ಷೇರು ವಿತರಣೆ ಆಗುತ್ತದೆ.

ಹಿರಿಯ ನಾಗರಿಕರು ಅಪ್ಲೈ ಮಾಡಬಹುದಾ? ಇದಕ್ಕೆ ವಯಸ್ಸಿನ ತಡೆ ಇದೆಯೇ?
ವಯಸ್ಸಿನ ನಿರ್ಬಂಧ ಏನೂ ಇಲ್ಲ.

ಲಾಕ್ ಇನ್ ಅವಧಿ ಇದೆಯಾ?
ಲಾಕ್-ಇನ್ ಅವಧಿ ಇಲ್ಲ ಮತ್ತು ಈಕ್ವಿಟಿ ಲಿಸ್ಟಿಂಗ್ ಆದ ತಕ್ಷಣ ಬೇಕಾದಾಗ ಮಾರಾಟಕ್ಕೆ ಅವಕಾಶ ಇರುತ್ತದೆ.

ಪಾಲಿಸಿದಾರರು ಪಾಲಿಸಿದಾರರಿಗೆ ಮೀಸಲಾದ ಭಾಗಕ್ಕಾಗಿ ಗರಿಷ್ಠ ಎಷ್ಟು ಮೊತ್ತಕ್ಕೆ ಅಪ್ಲೈ ಮಾಡುವುದಕ್ಕೆ ಅರ್ಹರು?
ಒಟ್ಟು ವಿತರಣೆ ಗಾತ್ರದ ಬಗ್ಗೆ ಇನ್ನೂ ನಿರ್ಧಾರ ಆಗಬೇಕು. ಆದರೆ ಅದು ಶೇ 10ರಷ್ಟು ಪಾಲನ್ನು ಮೀರುವುದಿಲ್ಲ. ಅರ್ಹ ಪಾಲಿಸಿದಾರರ ಬಿಡ್ ಗರಿಷ್ಠ ಮೊತ್ತ 2 ಲಕ್ಷ ರೂಪಾಯಿ ಮೊತ್ತ ದಾಟಬಾರದು (ಪಾಲಿಸಿದಾರರ ನಿವ್ವಳ ರಿಯಾಯಿತಿ).

2 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ಷೇರುಗಳಿಗೆ ಅಪ್ಲೈ ಮಾಡುವುದಕ್ಕೆ ಸಾಧ್ಯವೆ?
ಇಲ್ಲ. ಗರಿಷ್ಠ ಮೊತ್ತ 2 ಲಕ್ಷ ರೂಪಾಯಿ ಮೊತ್ತ ದಾಟಬಾರದು (ಪಾಲಿಸಿದಾರರ ನಿವ್ವಳ ರಿಯಾಯಿತಿ). ಆದರೆ ಅರ್ಹ ಪಾಲಿಸಿದಾರರು ಆರ್​ಐಬಿ ಅಥವಾ ಸಾಂಸ್ಥಿಕೇತರ ವರ್ಗದ ಅಡಿಯಲ್ಲಿ ಕ್ರಮವಾಗಿ ಹೆಚ್ಚಿನ ಮೊತ್ತ 2 ಲಕ್ಷ ರೂಪಾಯಿ ತನಕ (ಪಾಲಿಸಿದಾರರ ನಿವ್ವಳ ರಿಯಾಯಿತಿ) ಮತ್ತು 2 ಲಕ್ಷ ರೂಪಾಯಿಗೂ ಹೆಚ್ಚು ಅಪ್ಲೈ ಮಾಡಬಹುದು.

ಅರ್ಹ ಪಾಲಿಸಿದಾರರಿಗೆ ಈ ಆಫರ್ ಅಡಿಯಲ್ಲಿ ಎಷ್ಟು ರಿಯಾಯಿತಿ ಸಿಗುತ್ತದೆ?
ಅದು ಇನ್ನೂ ನಿರ್ಧಾರ ಆಗಬೇಕು.

ಎಷ್ಟು ದರದ ಬ್ಯಾಂಡ್​ನೊಳಗೆ ಅರ್ಹ ಪಾಲಿಸಿಸಿದಾರರು ಬಿಡ್​ ಮಾಡಬೇಕು?
ಅರ್ಹ ಪಾಲಿಸಿದಾರ(ರು) ಕಟ್-ಆಫ್ ಬೆಲೆಗೆ ಬಿಡ್ ಮಾಡಬಹುದು. ಆದರೆ ಆ ಸಂದರ್ಭದಲ್ಲಿ ಮಿತಿಯ ಬೆಲೆಯು ಕಟ್-ಆಫ್ ಬೆಲೆಯಾಗಿ ಬದಲಾಗಬಹುದು ಎಂಬ ಕಾರಣದಿಂದ ಬಿಡ್ ಮೊತ್ತವನ್ನು ಗರಿಷ್ಠ ಬೆಲೆ ನಿವ್ವಳ ರಿಯಾಯಿತಿಯಲ್ಲಿ ಹೂಡಿಕೆಗಾಗಿ ನಿರ್ಬಂಧಿಸುವುದು ಅವಶ್ಯಕ.

ಇದನ್ನೂ ಓದಿ: LIC IPO: ಸರ್ಕಾರಿ ಸ್ವಾಮ್ಯದ ಎಲ್​ಐಸಿಯ ಬಹು ನಿರೀಕ್ಷಿತ ಐಪಿಒ 2022ರ ಮೇ 4ರಿಂದ 9ರ ತನಕ