LIC IPO: ಸರ್ಕಾರಿ ಸ್ವಾಮ್ಯದ ಎಲ್​ಐಸಿಯ ಬಹು ನಿರೀಕ್ಷಿತ ಐಪಿಒ 2022ರ ಮೇ 4ರಿಂದ 9ರ ತನಕ

ಭಾರತೀಯ ಜೀವ ವಿಮಾ ನಿಗಮದ ಐಪಿಒ 2022ರ ಮೇ 4ರಿಂದ 9ನೇ ತಾರೀಕಿನ ಮಧ್ಯೆ ಇರುತ್ತದೆ. ಹೂಡಿಕೆ ಹಿಂತೆಗೆತದಲ್ಲಿ ಸರ್ಕಾರಕ್ಕೆ ಇದು ಪ್ರಮುಖವಾಗಿದೆ.

LIC IPO: ಸರ್ಕಾರಿ ಸ್ವಾಮ್ಯದ ಎಲ್​ಐಸಿಯ ಬಹು ನಿರೀಕ್ಷಿತ ಐಪಿಒ 2022ರ ಮೇ 4ರಿಂದ 9ರ ತನಕ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Apr 26, 2022 | 6:04 AM

ಭಾರತೀಯ ಜೀವವಿಮಾ ನಿಗಮದ (LIC) ಬಹು ನಿರೀಕ್ಷಿತ ಮೆಗಾ ಆರಂಭಿಕ ಷೇರು ಮಾರಾಟವನ್ನು ಘೋಷಿಸಲಾಗಿದೆ ಮತ್ತು ಈ ಇಶ್ಯೂ ಮೇ 4, 2022ರಂದು ಪ್ರಾರಂಭವಾಗಲಿದೆ ಎಂದು ಪಿಟಿಐ ವರದಿ ತಿಳಿಸಿದೆ. ಐಪಿಒಗಾಗಿ ಬಿಡ್ಡಿಂಗ್ ಮೇ 9ರ ವರೆಗೆ ನಡೆಯಲಿದೆ. ಸರ್ಕಾರಿ ಸ್ವಾಮ್ಯದ ಎಲ್‌ಐಸಿಯ ಶೇ 3.5ರ ಪಾಲನ್ನು ಸರ್ಕಾರ ಮಾರಾಟ ಮಾಡುವ ಐಪಿಒ ಮೂಲಕ ಬೊಕ್ಕಸಕ್ಕೆ 21,000 ಕೋಟಿ ರೂಪಾಯಿ ಬರಲಿದೆ. ಇದೀಗ ಶೇ 3.5ರಷ್ಟು ಪಾಲನ್ನು ಮಾರಾಟ ಮಾಡುವುದರಿಂದ ರಷ್ಯಾ- ಉಕ್ರೇನ್ ಮೇಲೆ ಆಕ್ರಮಣ ಮಾಡುವ ಮೊದಲು ಅಂದಾಜು ಮಾಡಿದ ರೂ. 50,000 ಕೋಟಿಗಿಂತ ಕಡಿಮೆ ಇರುತ್ತದೆ. ಎಲ್‌ಐಸಿ ಐಪಿಒ ಮೌಲ್ಯವು ರೂ. 6 ಲಕ್ಷ ಕೋಟಿ. ಹಿಂದಿನ ಸರ್ಕಾರದ ಅಂದಾಜಿನ ಪ್ರಕಾರ, ವಿಮಾದಾರ ಕಂಪೆನಿ ಸುಮಾರು ರೂ. 17 ಲಕ್ಷ ಕೋಟಿ ಮೌಲ್ಯವನ್ನು ಹೊಂದಿರುತ್ತದೆ.

ಸೆಬಿ ನಿಯಮಗಳ ಪ್ರಕಾರ, ರೂ. 1 ಲಕ್ಷ ಕೋಟಿಗಿಂತ ಹೆಚ್ಚಿನ ಮೌಲ್ಯ ಹೊಂದಿರುವ ಕಂಪೆನಿಗಳು ಐಪಿಒದಲ್ಲಿ ಶೇ 5ರಷ್ಟು ಪಾಲನ್ನು ಮಾರಾಟ ಮಾಡಬೇಕು. ಸರ್ಕಾರವು ಸೆಬಿಗೆ ನಿಯಮಾವಳಿಯಿಂದ ವಿನಾಯಿತಿ ಕೋರಿ, ದಾಖಲೆಗಳನ್ನು ಸಲ್ಲಿಸಿದೆ ಎಂದು ಪಿಟಿಐ ವರದಿ ಉಲ್ಲೇಖಿಸಿದೆ. ಸರ್ಕಾರವು ಎಲ್​ಐಸಿ ಐಪಿಒ ಗಾತ್ರವನ್ನು ಕಡಿಮೆಗೊಳಿಸಿದ್ದರೂ ಸಹ ಮಾರಾಟವು ಇನ್ನೂ ಭಾರತದ ಷೇರುಪೇಟೆ ಇತಿಹಾಸದಲ್ಲೇ ಅತಿ ದೊಡ್ಡದಾಗಿದ್ದು, ಕಳೆದ ವರ್ಷ ನವೆಂಬರ್‌ನಲ್ಲಿ ಸುಮಾರು ರೂ. 18,300 ಕೋಟಿ ಸಂಗ್ರಹಿಸಿದ್ದ ಒನ್​97 ಕಮ್ಯುನಿಕೇಷನ್ಸ್​ ಲಿಮಿಟೆಡ್​ನ (One 97 Communications Ltd) ಮೀರಿಸಿದೆ.

ಯುದ್ಧವು ಈಕ್ವಿಟಿಗಳ ಬೇಡಿಕೆಯನ್ನು ಕಡಿಮೆಗೊಳಿಸಿದ್ದರಿಂದ ಆ್ಯಂಕರ್ ಹೂಡಿಕೆದಾರರು ಬದ್ಧರಾಗಲು ಇಷ್ಟಪಡುತ್ತಿಲ್ಲ ಎಂದು ಬ್ಲೂಮ್‌ಬರ್ಗ್ ಈ ಹಿಂದೆ ವರದಿ ಮಾಡಿದ್ದು, ವಿದೇಶಿ ನಿಧಿಗಳು ಈ ವರ್ಷ ಭಾರತೀಯ ಷೇರುಗಳಿಂದ 16 ಶತಕೋಟಿ ಡಾಲರ್​ಗಿಂತ ಹೆಚ್ಚಿನ ಹಣವನ್ನು ಹಿಂತೆಗೆದುಕೊಂಡವು. ಫೆಬ್ರವರಿಯಲ್ಲಿ ಸರ್ಕಾರವು ಎಲ್ಐಸಿಯಲ್ಲಿ ಶೇ 5ರಷ್ಟು ಪಾಲನ್ನು ಮಾರಾಟ ಮಾಡಲು ಯೋಜಿಸಿತ್ತು. ಆದರೆ ರಷ್ಯಾ-ಉಕ್ರೇನ್ ಯುದ್ಧದ ಕಾರಣದಿಂದಾಗಿ ನಡೆಯುತ್ತಿರುವ ಮಾರುಕಟ್ಟೆಯ ಏರಿಳಿತವು ಐಪಿಒ ಗಾತ್ರವನ್ನು ಕಡಿಮೆ ಮಾಡಿದೆ.

ಎಲ್​ಐಸಿಯು 280 ಮಿಲಿಯನ್‌ಗಿಂತಲೂ ಹೆಚ್ಚು ಪಾಲಿಸಿಗಳೊಂದಿಗೆ ಭಾರತದ ವಿಮಾ ವಲಯದಲ್ಲಿ ಪ್ರಾಬಲ್ಯ ಹೊಂದಿದೆ. ಲಭ್ಯವಿರುವ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, 2020ರಲ್ಲಿ ವಿಮಾ ಪ್ರೀಮಿಯಂ ಸಂಗ್ರಹಣೆಯ ವಿಷಯದಲ್ಲಿ ಇದು ಐದನೇ ಅತಿ ದೊಡ್ಡ ಜಾಗತಿಕ ವಿಮಾದಾರ ಆಗಿದೆ. ಎಲ್​ಐಸಿ ಐಪಿಒ ಪ್ರಸಕ್ತ ಹಣಕಾಸು ವರ್ಷದಲ್ಲಿ ಬಜೆಟ್ ಹೂಡಿಕೆ ಹಿಂತೆಗೆತ ಆದಾಯಕ್ಕೆ ಪ್ರಮುಖ ಭಾಗವನ್ನು ಕೊಡುಗೆ ನೀಡುತ್ತದೆ. ಸರ್ಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ. 65,000 ಕೋಟಿಗಳಷ್ಟು ಹೂಡಿಕೆಯ ಸ್ವೀಕೃತಿಗಳನ್ನು ನಿಗದಿಪಡಿಸಿದ್ದು, ಕಳೆದ ಹಣಕಾಸು ವರ್ಷದಲ್ಲಿ ರೂ. 13,531 ಕೋಟಿಗಳನ್ನು ಸಂಗ್ರಹಿಸಿದೆ.

ಇದನ್ನೂ ಓದಿ: LIC IPO: ಸರಿಯಾದ ಸಮಯದಲ್ಲಿ ಎಲ್​ಐಸಿ ಐಪಿಒ ಬರಬೇಕು: ಕೇಂದ್ರ ಸರ್ಕಾರಕ್ಕೆ ಆರ್​ಬಿಐ ಸಲಹೆ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್