ಜುಲೈ 11ನೇ ತಾರೀಕಿನ ಸೋಮವಾರದಂದು ಅಮೆರಿಕ ಡಾಲರ್‌ಗೆ ವಿರುದ್ಧವಾಗಿ ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 79.48 (ತಾತ್ಕಾಲಿಕ) ತಲುಪಿದೆ. ಇಂದಿನ ವಹಿವಾಟಿನಲ್ಲಿ ಅಮೆರಿಕದ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 22 ಪೈಸೆಯಷ್ಟು ಕುಸಿಯಿತು. ವಿದೇಶೀ ಬಲವಾದ ಗ್ರೀನ್‌ಬ್ಯಾಕ್ ಮತ್ತು ದೇಶೀಯ ಷೇರುಗಳನ್ನು ತಗ್ಗಿಸಿತು. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Oil) ಬೆಲೆಗಳು ಕಡಿಮೆ ಆಗುತ್ತಿರುವುದು ರೂಪಾಯಿಯ ನಷ್ಟವನ್ನು ನಿರ್ಬಂಧಿಸಿದೆ ಎಂದು ವಿದೇಶೀ ವಿನಿಮಯ ವಹಿವಾಟುದಾರರು ತಿಳಿಸಿದ್ದಾರೆ. ಇಂಟರ್‌ಬ್ಯಾಂಕ್ ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ಸ್ಥಳೀಯ ಘಟಕವು ಗ್ರೀನ್‌ಬ್ಯಾಕ್ ವಿರುದ್ಧ 79.30ಕ್ಕೆ ದುರ್ಬಲವಾಗಿ ಆರಂಭಗೊಂಡಿತು ಮತ್ತು 79.24 ರ ಇಂಟ್ರಾ-ಡೇ ಗರಿಷ್ಠ ಮತ್ತು 79.49 ರ ಕನಿಷ್ಠಕ್ಕೆ ಸಾಕ್ಷಿಯಾಯಿತು. ಇದು ಅಂತಿಮವಾಗಿ 79.48 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು. ಅಂದರೆ ಅದರ ಹಿಂದಿನ ಮುಕ್ತಾಯದ 79.26ಕ್ಕಿಂತ 22 ಪೈಸೆ ಕಡಿಮೆಯಾಗಿದೆ.
ಆರು ಕರೆನ್ಸಿಗಳ ಬುಟ್ಟಿಯ ವಿರುದ್ಧ ಗ್ರೀನ್‌ಬ್ಯಾಕ್‌ನ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕವು ಶೇ 0.56 ಏರಿಕೆ ಕಂಡು, 107.60ಗೆ ತಲುಪಿದೆ. ದೇಶೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ಬಿಎಸ್‌ಇ ಸೆನ್ಸೆಕ್ಸ್ 86.61 ಪಾಯಿಂಟ್‌ಗಳು ಅಥವಾ ಶೇ 0.16 ಕಡಿಮೆಯಾಗಿ 54,395.23 ಪಾಯಿಂಟ್ಸ್ಗೆ ಕೊನೆಗೊಂಡಿತು. ಎನ್‌ಎಸ್‌ಇ ನಿಫ್ಟಿ 4.60 ಪಾಯಿಂಟ್ ಅಥವಾ ಶೇಕಡಾ 0.03ರಷ್ಟು ಕುಸಿತ ಕಂಡಿತು.
ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ಫ್ಯೂಚರ್ಸ್ ಶೇಕಡಾ 1.43ರಷ್ಟು ಕುಸಿದು, ಪ್ರತಿ ಬ್ಯಾರೆಲ್‌ಗೆ ಯುಎಸ್ಡಿ 105.49ಕ್ಕೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿದ್ದು, ವಿನಿಮಯ ಮಾಹಿತಿಯ ಪ್ರಕಾರ ಅವರು ರೂ. 109.31 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಡಾಲರ್‌ನ ಸ್ಥಿರವಾದ ಮೌಲ್ಯವರ್ಧನೆ ಮತ್ತು ಅಮೆರಿಕದಲ್ಲಿ ಹೆಚ್ಚುತ್ತಿರುವ ಬಡ್ಡಿದರಗಳ ಮಧ್ಯೆ ವಿದೇಶಿ ಹೂಡಿಕೆದಾರರು ಈ ತಿಂಗಳಿನ ಆರಂಭದಿಂದ ಇಲ್ಲಿಯವರೆಗೆ 4,000 ಕೋಟಿ ರೂಪಾಯಿ ಹಿಂಪಡೆದಿದ್ದಾರೆ. ಆದರೆ ಕಳೆದ ಕೆಲವು ವಾರಗಳಿಂದ ವಿದೇಶಿ ಬಂಡವಾಳ ಹೂಡಿಕೆದಾರರ (ಎಫ್‌ಪಿಐ) ಮಾರಾಟದ ವೇಗವು ಕುಸಿಯುತ್ತಿದೆ.
ಅಮೆರಿಕ ಯುಎಸ್ಡಿ 1ಕ್ಕೆ= 79.48 ಭಾರತದ ರೂಪಾಯಿ
ಬ್ರಿಟಿಷ್ ಪೌಂಡ್ ಸ್ಟರ್ಲಿಂಗ್ಗೆ= 94.80 ಭಾರತದ ರೂಪಾಯಿ
ಯುರೋಗೆ= 80.12 ಭಾರತದ ರೂಪಾಯಿ
ಚೀನಾದ ಯುವಾನ್= 11.84 ಭಾರತದ ರೂಪಾಯಿ
ಜಪಾನ್ನ ಯೆನ್= 0.58 (58 ಪೈಸೆ)
ಕುವೈತ್ ದಿನಾರ್= 258.10 ಭಾರತದ ರೂಪಾಯಿ
ಇರಾನ್ನ ರಿಯಾಲ್= 0.0019 ಪೈಸೆ
ಬಾಂಗ್ಲಾದೇಶ್ ಟಾಕಾ= 0.85 (85 ಪೈಸೆ)
ಶ್ರೀಲಂಕಾ ರೂಪಾಯಿ= 0.22 (22 ಪೈಸೆ)
ಪಾಕಿಸ್ತಾನದ ರೂಪಾಯಿ= 0.38 (38 ಪೈಸೆ)
ನೇಪಾಳದ ರೂಪಾಯಿ= 0.62 (62 ಪೈಸೆ)
ರಷ್ಯಾದ ರೂಬೆಲ್= 1.28 (1.28 ರೂ.)
ಅಂತಾರಾಷ್ಟ್ರೀಯ ವಹಿವಾಟುಗಳಿಗೆ, ಅಂದರೆ ಕಚ್ಚಾ ತೈಲ, ಅನಿಲ ಖರೀದಿ ಸೇರಿದಂತೆ ಇತರ ವ್ಯವಹಾರಗಳಿಗೆ ಅಮೆರಿಕನ್ ಡಾಲರ್ ಬಳಸಲಾಗುತ್ತದೆ. ಆದರೆ ಯುನೈಟೆಡ್ ಕಿಂಗ್ಡಮ್ನ ಪೌಂಡ್ ಸ್ಟರ್ಲಿಂಗ್, ಯುರೋಪ್ನಾದ್ಯಂತ ಮಾನ್ಯತೆ ಪಡೆದ ಯುರೋ, ಕುವೈತ್ ದಿನಾರ್ ಸೇರಿದಂತೆ ಇತರ ಕರೆನ್ಸಿಗಳಿಗೆ ಭಾರತದ ರೂಪಾಯಿ ಲೆಕ್ಕದಲ್ಲಿ ಹೆಚ್ಚು ಮೌಲ್ಯವಿದೆ.
Published On - 5:39 pm, Mon, 11 July 22