Work From Home: ಇನ್ನೇನು ಈ ದೇಶದಲ್ಲಿ ವರ್ಕ್ ಫ್ರಮ್ ಹೋಮ್ ಎಂಬುದು ಉದ್ಯೋಗಿಯ ಕಾನೂನು ಬದ್ಧ ಹಕ್ಕು

| Updated By: Srinivas Mata

Updated on: Jul 11, 2022 | 6:28 PM

ನೆದರ್​ಲೆಂಡ್ಸ್​ನಲ್ಲಿ ಶೀಘ್ರದಲ್ಲೇ ವರ್ಕ್​ ಫ್ರಮ್ ಹೋಮ್ ಎಂಬುದು ಉದ್ಯೋಗಿಗಳ ಕಾನೂನು ಬದ್ಧ ಹಕ್ಕಾಗಲಿದೆ. ಆ ಬಗ್ಗೆ ವಿವರ ಇಲ್ಲಿದೆ.

Work From Home: ಇನ್ನೇನು ಈ ದೇಶದಲ್ಲಿ ವರ್ಕ್ ಫ್ರಮ್ ಹೋಮ್ ಎಂಬುದು ಉದ್ಯೋಗಿಯ ಕಾನೂನು ಬದ್ಧ ಹಕ್ಕು
ಸಾಂದರ್ಭಿಕ ಚಿತ್ರ
Follow us on

ವರ್ಕ್​ ಫ್ರಮ್ ಹೋಮ್ (Work From Home) ಅನ್ನೋದನ್ನ ಶಾಶ್ವತ ಮಾಡಿಬಿಡಬೇಕು. ಈ ಟ್ರಾಫಿಕ್, ಖರ್ಚುಗಳು, ಓಡಾಟ… ಇವೆಲ್ಲ ರಗಳೆಯೇ ಇರಲ್ಲ ಅಂತ ಅಂದುಕೊಳ್ಳುವವರ ಪಾಲಿಗೆ ಅಲ್ಲೆಲ್ಲೋ ದೂರ ದೇಶದಲ್ಲಿ ಲೈಟ್ ಹೊತ್ತಿಕೊಂಡಿದೆ. ನೆದರ್​ಲೆಂಡ್ಸ್​​ನಲ್ಲಿ ವರ್ಕ್​ ಫ್ರಮ್ ಹೋಮ್ ಅನ್ನು ಉದ್ಯೋಗಿಗಳ ಕಾನೂನುಬದ್ದ ಹಕ್ಕು ಎಂದು ಮಾಡಲು ಮುಂದಾಗಿದ್ದಾರೆ. ಕಳೆದ ವಾರವಷ್ಟೇ ಡಚ್ ಸಂಸತ್​ನ ಕೆಳಮನೆಯಲ್ಲಿ ಈ ಸಂಬಂಧವಾಗಿ ಕಾನೂನು ಸಹ ಅಂಗೀಕಾರ ಮಾಡಲಾಗಿದೆ. ಇನ್ನೇನಿದ್ದರೂ ಈ ಯುರೋಪಿಯನ್ ದೇಶದಲ್ಲಿ ಸೆನೆಟ್ ಒಪ್ಪಿಗೆಯೊಂದು ಸಿಕ್ಕರೆ ಆಯಿತು. ಸದ್ಯಕ್ಕೆ ಪರಿಸ್ಥಿತಿ ಏನೆಂದರೆ, ನೆದರ್​ಲೆಂಡ್ಸ್​ನ ಯಾರಾದರೂ ಉದ್ಯೋಗಿ ತಾನು ವರ್ಕ್​ ಫ್ರಮ್ ಹೋಮ್ ಆರಿಸಿಕೊಳ್ಳುತ್ತೇನೆ ಎಂದರೆ ಅಲ್ಲಿನ ಉದ್ಯೋಗದಾತರು ಅದಕ್ಕೆ “ನಕ್ಕೋ ನಕ್ಕೋ” ಅನ್ನಬಹುದು. ಯಾಕೆ ಬೇಡ ಅನ್ನುತ್ತಿರುವುದಕ್ಕೆ ಕಾರಣವನ್ನು ಸಹ ನೀಡುವ ಅಗತ್ಯ ಇಲ್ಲ.

“ಈ ನಿಯಮದಿಂದಾಗಿ ಉದ್ಯೋಗಿಗಳ ಕೆಲಸ- ಜೀವನದ ಸಮತೋಲನ ಸಾಧ್ಯವಾಗುತ್ತದೆ. ಪ್ರಯಾಣದಲ್ಲೇ ಹೆಚ್ಚಿನ ಸಮಯ ಹೋಗುವುದು ನಿಲ್ಲುತ್ತದೆ,” ಎಂದು ಗ್ರೋಯೆನ್​ಲಿಂಕ್ಸ್ ಪಕ್ಷದ ಸೆನ್ನಾ ಮಾಟೌಗ್ ಹೇಳಿದ್ದಾರೆ ಎಂದು ವಾಲ್​ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಈ ಮಸೂದೆಯ ಸಹ ಲೇಖಕರ ಪೈಕಿ ಮಾಟೌಗ್ ಕೂಡ ಒಬ್ಬರು. ಈ ಹೊಸ ಮಸೂದೆ ಅಂತ ಏನಿದೆ, ಇದು ನೆದರ್​ಲೆಂಡ್ಸ್​ನ ಫ್ಲೆಕ್ಸಿಬಲ್ ವರ್ಕಿಂಗ್ ಆ್ಯಕ್ಟ್ 2015ರ ತಿದ್ದುಪಡಿ. ಈ ಕಾನೂನು ಜಾರಿಗೆ ಬಂದಲ್ಲಿ ಉದ್ಯೋಗಿಗಳು ತಮ್ಮ ಕೆಲಸದ ಸಮಯ, ಪಾಳಿ ಹಾಗೂ ಕೆಲಸ ಮಾಡುವ ಸ್ಥಳದಲ್ಲಿ ಕೂಡ ಬದಲಾವಣೆಯನ್ನು ಮನವಿ ಮಾಡಬಹುದು.

ಈಗಾಗಲೇ ನೆದರ್​ಲೆಂಡ್ಸ್​ನಲ್ಲಿ ಉದ್ಯೋಗಿಗಳ ಹಕ್ಕು ರಕ್ಷಣೆಗೆ ಬೇಕಾದ ವಾತಾವರಣ ಇದೆ. ವಿಶ್ವದಾದ್ಯಂತ ಕೊರೊನಾ ನಂತರದಲ್ಲಿ ಉದ್ಯೋಗಿಗಳನ್ನು ಮರಳಿ ಕಚೇರಿಗೆ ಕರೆತರಲು ಹೆಣಗುತ್ತಿರುವ ಸನ್ನಿವೇಶದಲ್ಲಿ ಈ ಕಾನೂನು ತರುವ ಪ್ರಯತ್ನ ನಡೆದಿದೆ. ಕೆಲವು ಕಂಪೆನಿಗಳು ತಮ್ಮ ಉದ್ಯೋಗಿಗಳನ್ನು ಮರಳಿ ಕರೆತರುವಲ್ಲಿ ಅವಕಾಶ ನೀಡುತ್ತಿದ್ದರೆ, ಮಾರಾಟ ತಂಡದಂಥ ಇತರವುಗಳು ಕಚೇರಿಯಲ್ಲಿ ಕೆಲಸ ಮಾಡುವುದನ್ನು ಸಂಪೂರ್ಣವಾಗಿ ತೆಗೆದುಹಾಕಿವೆ. ಟೆಸ್ಲಾದಂತೆ ಕೆಲವು ಕಂಪೆನಿಗಳು ಕಚೇರಿಗೆ ಮರಳಲು ಉದ್ಯೋಗಿಗಳನ್ನು ಒತ್ತಾಯಿಸುತ್ತಿದೆ. ಟೆಸ್ಲಾ ಸಂಸ್ಥಾಪಕ ಮತ್ತು ಸಿಇಒ ಎಲಾನ್ ಮಸ್ಕ್ ಅವರು ಉದ್ಯೋಗಿಗಳಿಗೆ ಕೆಲಸದ ಸ್ಥಳಕ್ಕೆ ಹಿಂತಿರುಗಿ ಅಥವಾ ಕಂಪೆನಿಯನ್ನು ತೊರೆಯಿರಿ ಎಂದು ಎಚ್ಚರಿಸಿದ್ದಾರೆ.

ಡಚ್ ಕಾರ್ಪೊರೇಷನ್​ಗಳಿಗೆ ಈ ಹೊಸ ಶಾಸನವು ವಿವಾದಾಸ್ಪದ ಆಗಿರುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. ಶೇ 14ರಷ್ಟು ಉದ್ಯೋಗಿಗಳು ಈಗಾಗಲೇ ಸಾಂಕ್ರಾಮಿಕ ರೋಗಕ್ಕೆ ಎರಡು ವರ್ಷಗಳ ಮೊದಲು ದೂರದಿಂದಲೇ ಕೆಲಸ ಮಾಡುತ್ತಿದ್ದಾರೆ.

Published On - 6:28 pm, Mon, 11 July 22