ವಾರದ ಮೊದಲ ದಿನವಾದ ಸೋಮವಾರ (ಜುಲೈ 11, 2022) ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಇಳಿಕೆ ಕಂಡಿದೆ. ಸತತ ಮೂರು ಟ್ರೇಡಿಂಗ್ ಸೆಷನ್ಗಳಿಂದ ಏರಿಕೆ ಕಾಣುತ್ತಾ ಬಂದಿದ್ದ ಷೇರು ಮಾರುಕಟ್ಟೆ ಸೋಮವಾರದ ವಹಿಟಾಗಿದೆ. ಇಂದಿನ ವಹಿವಾಟಿನಲ್ಲಿ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ದಿನದ ಕನಿಷ್ಠ ಮಟ್ಟದ ವಹಿವಾಟು 54,090.5 ಪಾಯಿಂಟ್ಸ್ ಮುಟ್ಟಿತು. ಇನ್ನು ದಿನಾಂತ್ಯಕ್ಕೆ 87 ಪಾಯಿಂಟ್ಸ್ ಅಥವಾ ಶೇ 0.16ರಷ್ಟು ನೆಲಕಚ್ಚಿತು. ಇನ್ನು ನಿಫ್ಟಿ ಸೂಚ್ಯಂಕವು 5 ಪಾಯಿಂಟ್ಸ್ ಅಥವಾ ಶೇ 0.03 ಇಳಿದು, 16,216 ಪಾಯಿಂಟ್ಸ್ ತಲುಪಿಕೊಂಡಿತು. ಸೂಚ್ಯಂಕವು ದಿನದ ಕನಿಷ್ಠ ಮಟ್ಟವಾದ 16,115.5 ಪಾಯಿಂಟ್ಸ್ ತಲುಪಿತು.
ಈ ಮಧ್ಯೆ ಬಿಎಸ್ಇ ಸ್ಮಾಲ್ಕ್ಯಾಪ್ ಸೂಚ್ಯಂಕ ಶೇ 1ರಷ್ಟು ಏರಿಕೆ ಕಂಡರೆ, ಮಿಡ್ಕ್ಯಾಪ್ ಶೇ 0.6ರಷ್ಟು ಹೆಚ್ಚಳವಾಯಿತು. ವಲಯವಾರು ಗಮನಿಸಿದಾಗ ನಿಫ್ಟಿ ಮಾಹಿತಿ ತಂತ್ರಜ್ಞಾನ ವಲಯವೊಂದನ್ನು ಹೊರತುಪಡಿಸಿ, ಇತರವು ಗಳಿಕೆ ಕಂಡಿದೆ. ಐಟಿ ಸೂಚ್ಯಂಕ ಶೇ 3ರಷ್ಟು ಇಳಿಕೆ ಆಗಿದೆ. ಪಿಎಸ್ಯು ಬ್ಯಾಂಕ್ ಸೂಚ್ಯಂಕವು ಶೇ 2ರಷ್ಟು ಏರಿಕೆ ಆಗಿದೆ. ಅಂದಹಾಗೆ ಸೋಮವಾರದ ಇಂಟ್ರಾಡೇ ವಹಿವಾಟಿನಲ್ಲಿ ಬಿಎಸ್ಇಯಲ್ಲಿ ಅದಾನಿ ಸಮೂಹದ ಷೇರು ಶೇ 12ರಷ್ಟು ಏರಿಕೆ ದಾಖಲಿಸಿದೆ. ಅದಾನಿ ಸಮೂಹವು ಟೆಲಿಕಾಂ ಉದ್ಯಮಕ್ಕೆ ಪ್ರವೇಶಿಸುತ್ತದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ.
ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಐಷರ್ ಮೋಟಾರ್ಸ್ ಶೇ 3.93
ಒಎನ್ಜಿಸಿ ಶೇ 3.29
ಟಾಟಾ ಸ್ಟೀಲ್ ಶೇ 3.03
ಮಹೀಂದ್ರಾ ಅಂಡ್ ಮಹೀಂದ್ರಾ ಶೇ 2.77
ಡಾ ರೆಡ್ಡೀಸ್ ಲ್ಯಾಬ್ಸ್ ಶೇ 2.15
ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಭಾರ್ತಿ ಏರ್ಟೆಲ್ ಶೇ -4.98
ಟಿಸಿಎಸ್ ಶೇ -4.64
ಎಚ್ಸಿಎಲ್ ಟೆಕ್ ಶೇ -4.07
ಬಿಪಿಸಿಎಲ್ ಶೇ -2.89
ಇನ್ಫೋಸಿಸ್ ಶೇ -2.73