INR USD Exchange Rate: ಅಮೆರಿಕದ ಡಾಲರ್ ವಿರುದ್ಧ ಭಾರತ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟ 79.48ಕ್ಕೆ

Dollar to Rupee Exchange Rate (USD/INR): ಅಮೆರಿಕ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ ಜುಲೈ 11ರ ಸೋಮವಾರದಂದು ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ತಲುಪಿದೆ.

INR USD Exchange Rate: ಅಮೆರಿಕದ ಡಾಲರ್ ವಿರುದ್ಧ ಭಾರತ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟ 79.48ಕ್ಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jul 11, 2022 | 5:39 PM

ಜುಲೈ 11ನೇ ತಾರೀಕಿನ ಸೋಮವಾರದಂದು ಅಮೆರಿಕ ಡಾಲರ್‌ಗೆ ವಿರುದ್ಧವಾಗಿ ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 79.48 (ತಾತ್ಕಾಲಿಕ) ತಲುಪಿದೆ. ಇಂದಿನ ವಹಿವಾಟಿನಲ್ಲಿ ಅಮೆರಿಕದ ಡಾಲರ್​ ವಿರುದ್ಧ ರೂಪಾಯಿ ಮೌಲ್ಯ 22 ಪೈಸೆಯಷ್ಟು ಕುಸಿಯಿತು. ವಿದೇಶೀ ಬಲವಾದ ಗ್ರೀನ್‌ಬ್ಯಾಕ್ ಮತ್ತು ದೇಶೀಯ ಷೇರುಗಳನ್ನು ತಗ್ಗಿಸಿತು. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Oil) ಬೆಲೆಗಳು ಕಡಿಮೆ ಆಗುತ್ತಿರುವುದು ರೂಪಾಯಿಯ ನಷ್ಟವನ್ನು ನಿರ್ಬಂಧಿಸಿದೆ ಎಂದು ವಿದೇಶೀ ವಿನಿಮಯ ವಹಿವಾಟುದಾರರು ತಿಳಿಸಿದ್ದಾರೆ. ಇಂಟರ್‌ಬ್ಯಾಂಕ್ ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ಸ್ಥಳೀಯ ಘಟಕವು ಗ್ರೀನ್‌ಬ್ಯಾಕ್ ವಿರುದ್ಧ 79.30ಕ್ಕೆ ದುರ್ಬಲವಾಗಿ ಆರಂಭಗೊಂಡಿತು ಮತ್ತು 79.24 ರ ಇಂಟ್ರಾ-ಡೇ ಗರಿಷ್ಠ ಮತ್ತು 79.49 ರ ಕನಿಷ್ಠಕ್ಕೆ ಸಾಕ್ಷಿಯಾಯಿತು. ಇದು ಅಂತಿಮವಾಗಿ 79.48 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು. ಅಂದರೆ ಅದರ ಹಿಂದಿನ ಮುಕ್ತಾಯದ 79.26ಕ್ಕಿಂತ 22 ಪೈಸೆ ಕಡಿಮೆಯಾಗಿದೆ.

ಆರು ಕರೆನ್ಸಿಗಳ ಬುಟ್ಟಿಯ ವಿರುದ್ಧ ಗ್ರೀನ್‌ಬ್ಯಾಕ್‌ನ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕವು ಶೇ 0.56 ಏರಿಕೆ ಕಂಡು, 107.60ಗೆ ತಲುಪಿದೆ. ದೇಶೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ಬಿಎಸ್‌ಇ ಸೆನ್ಸೆಕ್ಸ್ 86.61 ಪಾಯಿಂಟ್‌ಗಳು ಅಥವಾ ಶೇ 0.16 ಕಡಿಮೆಯಾಗಿ 54,395.23 ಪಾಯಿಂಟ್ಸ್​ಗೆ ಕೊನೆಗೊಂಡಿತು. ಎನ್‌ಎಸ್‌ಇ ನಿಫ್ಟಿ 4.60 ಪಾಯಿಂಟ್ ಅಥವಾ ಶೇಕಡಾ 0.03ರಷ್ಟು ಕುಸಿತ ಕಂಡಿತು.

ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ಫ್ಯೂಚರ್ಸ್ ಶೇಕಡಾ 1.43ರಷ್ಟು ಕುಸಿದು, ಪ್ರತಿ ಬ್ಯಾರೆಲ್‌ಗೆ ಯುಎಸ್​ಡಿ 105.49ಕ್ಕೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿದ್ದು, ವಿನಿಮಯ ಮಾಹಿತಿಯ ಪ್ರಕಾರ ಅವರು ರೂ. 109.31 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಡಾಲರ್‌ನ ಸ್ಥಿರವಾದ ಮೌಲ್ಯವರ್ಧನೆ ಮತ್ತು ಅಮೆರಿಕದಲ್ಲಿ ಹೆಚ್ಚುತ್ತಿರುವ ಬಡ್ಡಿದರಗಳ ಮಧ್ಯೆ ವಿದೇಶಿ ಹೂಡಿಕೆದಾರರು ಈ ತಿಂಗಳಿನ ಆರಂಭದಿಂದ ಇಲ್ಲಿಯವರೆಗೆ 4,000 ಕೋಟಿ ರೂಪಾಯಿ ಹಿಂಪಡೆದಿದ್ದಾರೆ. ಆದರೆ ಕಳೆದ ಕೆಲವು ವಾರಗಳಿಂದ ವಿದೇಶಿ ಬಂಡವಾಳ ಹೂಡಿಕೆದಾರರ (ಎಫ್‌ಪಿಐ) ಮಾರಾಟದ ವೇಗವು ಕುಸಿಯುತ್ತಿದೆ.

ಅಮೆರಿಕ ಯುಎಸ್​ಡಿ 1ಕ್ಕೆ= 79.48 ಭಾರತದ ರೂಪಾಯಿ

ಬ್ರಿಟಿಷ್​ ಪೌಂಡ್ ಸ್ಟರ್ಲಿಂಗ್​​ಗೆ= 94.80 ಭಾರತದ ರೂಪಾಯಿ

ಯುರೋಗೆ= 80.12 ಭಾರತದ ರೂಪಾಯಿ

ಚೀನಾದ ಯುವಾನ್= 11.84 ಭಾರತದ ರೂಪಾಯಿ

ಜಪಾನ್​ನ ಯೆನ್= 0.58 (58 ಪೈಸೆ)

ಕುವೈತ್​ ದಿನಾರ್= 258.10 ಭಾರತದ ರೂಪಾಯಿ

ಇರಾನ್​ನ ರಿಯಾಲ್= 0.0019 ಪೈಸೆ

ಬಾಂಗ್ಲಾದೇಶ್​ ಟಾಕಾ= 0.85 (85 ಪೈಸೆ)

ಶ್ರೀಲಂಕಾ ರೂಪಾಯಿ= 0.22 (22 ಪೈಸೆ)

ಪಾಕಿಸ್ತಾನದ ರೂಪಾಯಿ= 0.38 (38 ಪೈಸೆ)

ನೇಪಾಳದ ರೂಪಾಯಿ= 0.62 (62 ಪೈಸೆ)

ರಷ್ಯಾದ ರೂಬೆಲ್= 1.28 (1.28 ರೂ.)

ಅಂತಾರಾಷ್ಟ್ರೀಯ ವಹಿವಾಟುಗಳಿಗೆ, ಅಂದರೆ ಕಚ್ಚಾ ತೈಲ, ಅನಿಲ ಖರೀದಿ ಸೇರಿದಂತೆ ಇತರ ವ್ಯವಹಾರಗಳಿಗೆ ಅಮೆರಿಕನ್ ಡಾಲರ್​ ಬಳಸಲಾಗುತ್ತದೆ. ಆದರೆ ಯುನೈಟೆಡ್​ ಕಿಂಗ್​ಡಮ್​ನ ಪೌಂಡ್​ ಸ್ಟರ್ಲಿಂಗ್, ಯುರೋಪ್​ನಾದ್ಯಂತ ಮಾನ್ಯತೆ ಪಡೆದ ಯುರೋ, ಕುವೈತ್​ ದಿನಾರ್​ ಸೇರಿದಂತೆ ಇತರ ಕರೆನ್ಸಿಗಳಿಗೆ ಭಾರತದ ರೂಪಾಯಿ ಲೆಕ್ಕದಲ್ಲಿ ಹೆಚ್ಚು ಮೌಲ್ಯವಿದೆ.

Published On - 5:39 pm, Mon, 11 July 22

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ