GST Rate Revision: ಜಿಎಸ್​ಟಿ ಪರಿಷ್ಕರಣೆ ನಂತರ ಜುಲೈ 18ರಿಂದ ದುಬಾರಿ- ಅಗ್ಗ ಆಗುವ ವಸ್ತುಗಳ ವಿವರ ಇಲ್ಲಿದೆ

ಜಿಎಸ್​ಟಿ ಪರಿಷ್ಕೃತ ದರವು ಜಾರಿಗೆ ಬಂದ ಮೇಲೆ, ಅಂದರೆ ಜುಲೈ 18ರಿಂದ ದುಬಾರಿ ಅಥವಾ ಅಗ್ಗ ಆಗಲಿರುವ ವಸ್ತುಗಳ ವಿವರ ಈ ಲೇಖನದಲ್ಲಿದೆ.

GST Rate Revision: ಜಿಎಸ್​ಟಿ ಪರಿಷ್ಕರಣೆ ನಂತರ ಜುಲೈ 18ರಿಂದ ದುಬಾರಿ- ಅಗ್ಗ ಆಗುವ ವಸ್ತುಗಳ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jul 11, 2022 | 2:15 PM

ಜೂನ್ ತಿಂಗಳ ಕೊನೆಗೆ ನಡೆದ ಜಿಎಸ್​ಟಿ ಸಮಿತಿಯ 47ನೇ ಸಭೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆಯಿತು. ಆ ಸಭೆಯಲ್ಲಿ ಸರಕು ಮತ್ತು ಸೇವಾ ತೆರಿಗೆಗೆ (GST) ಸಂಬಂಧಿಸಿದಂತೆ ಕೆಲವು ನಿರ್ಧಾರಗಳನ್ನು ಕೈಗೊಂಡು, ಹಲವು ವಸ್ತುಗಳನ್ನು ಜಿಎಸ್​ಟಿ ಅಡಿಯಲ್ಲಿ ತರುವುದಕ್ಕೆ ತೀರ್ಮಾನಿಸಲಾಯಿತು. ಅವುಗಳು ಈ ಹಿಂದೆ ತೆರಿಗೆಮುಕ್ತವಾಗಿದ್ದವು. ಈಗ ತೆರಿಗೆ ವ್ಯಾಪ್ಯಿಯೊಳಗೆ ಬರುವುದರ ಪರಿಣಾಮವಾಗಿ ಜನಸಾಮಾನ್ಯರ ವೆಚ್ಚವು ಹೆಚ್ಚಾಗುತ್ತದೆ. ಕುಟುಂಬಗಳ ವೆಚ್ಚದ ಮೇಲೆ ಮತ್ತಷ್ಟು ಹೊರೆ ಬೀಳುತ್ತದೆ. ಗಾಯದ ಮೇಲೆ ಬರೆ ಎಳೆದಂತೆ ಹಣದುಬ್ಬರದ ಮೇಲೆ ಹೊಸ ಜಿಎಸ್​ಟಿ ದರವು ಇನ್ನಷ್ಟು ಕಂಗಾಲಾಗಿಸುತ್ತದೆ. ಜಿಎಸ್​ಟಿ ಸಮಿತಿಯ ವಿನಾಯಿತಿಗಳು ಹಾಗೂ ಪರಿಷ್ಕರಣೆಯು ಜುಲೈ 18ನೇ ತಾರೀಕಿನಿಂದ ಅನ್ವಯ ಆಗುತ್ತದೆ ಎಂದು ಜೂನ್​ 29ರಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದರು.

ದುಬಾರಿ ಆಗಲಿರುವ ವಸ್ತುಗಳು:

ಪ್ಯಾಕೇಜ್ಡ್ ಫುಡ್: ಪ್ರೀ- ಪ್ಯಾಕ್ಡ್, ಪ್ರೀ- ಲೇಬಲ್ಡ್ ಮೊಸರು, ಲಸ್ಸಿ ಮತ್ತು ಮಜ್ಜಿಗೆ ಮತ್ತಿತರ.

ಬ್ಯಾಂಕ್​ ಚೆಕ್​ ಬುಕ್ ವಿತರಣೆ: ಬ್ಯಾಂಕ್ ಚೆಕ್​ಗಳ (ಬಿಡಿ ಅಥವಾ ಪುಸ್ತಕ ಸ್ವರೂಪದಲ್ಲಿ) ವಿತರಣೆ ಮೇಲೆ ಶೇ 18ರಷ್ಟು ಜಿಎಸ್​ಟಿ ಶುಲ್ಕ.

ನಕ್ಷೆಗಳು ಮತ್ತು ಚಾರ್ಟ್​ಗಳಿಗೆ ಜುಲೈ 18ರಿಂದ ಅನ್ವಯಿಸುವಂತೆ ಶೇ 12ರಷ್ಟು ಜಿಎಸ್​ಟಿ ಹಾಕಲಾಗುತ್ತದೆ.

ಹೋಟೆಲ್ ಕೋಣೆಗಳು: ಒಂದು ದಿನಕ್ಕೆ 1000 ರೂಪಾಯಿ ಒಳಗಿನ ಹೋಟೆಲ್ ರೂಮ್​ಗೆ ಶೇ 12ರಷ್ಟು ಜಿಎಸ್​ಟಿಗೆ ತರಲಾಗಿದೆ. ಸದ್ಯಕ್ಕೆ ಅದು ವಿನಾಯಿತಿ ಕೆಟಗರಿಯಲ್ಲಿತ್ತು.

ಆಸ್ಪತ್ರೆ ಬೆಡ್​​ಗಳು: ರೂಮ್ ಬಾಡಿಗೆ (ಐಸಿಯು ಹೊರತುಪಡಿಸಿ) ದಿನಕ್ಕೆ 5 ಸಾವಿರ ರೂಪಾಯಿ ಮೇಲ್ಪಟ್ಟು ವಿಧಿಸುವ ಆಸ್ಪತ್ರೆಗಳಲ್ಲಿ ಶೇ 5ರಷ್ಟನ್ನು ಐಟಿಸಿ ಹೊರತು ನೀಡಬೇಕು.

ಎಲ್​ಇಡಿ ದೀಪ, ಲ್ಯಾಂಪ್ಸ್: ಎಲ್​ಇಡಿ ದೀಪಗಳು, ಸಲಕರಣೆಗಳು, ಎಲ್​ಇಡಿ ಲ್ಯಾಂಪ್​ಗಳ ಬೆಲೆಯಲ್ಲಿ ಏರಿಕೆ ಆಗಲಿದೆ. ಜಿಎಸ್​ಟಿ ಸಮಿತಿಯು ಶಿಫಾರಸು ಮಾಡಿರುವಂತೆ ಇನ್ವರ್ಟೆಡ್ ಸುಂಕ ರಚನೆ ಶೇ 12ರಿಂದ 18ಕ್ಕೆ ಏರಿಸಲಾಗಿದೆ.

ಚಾಕುಗಳು: ಚಾಕುಗಳು ಜತೆಗೆ ಕತ್ತರಿಸಿದ ಬ್ಲೇಡ್​ಗಳು, ಪೇಪರ್ ಕತ್ತರಿಗಳು, ಪೆನ್ಸಿಲ್ ಶಾರ್ಪ್​ನರ್​ಗಳು ಮತ್ತು ಬ್ಲೇಡ್​ಗಳು, ಸ್ಕಿಮ್ಮರ್ಸ್, ಕೇಕ್ ಸರ್ವರ್ಸ್​ ಮುಂತಾದವುಗಳಿಗೆ ಶೇ 12ರಿಂದ 18ರಷ್ಟು ತೆರಿಗೆ ಹಾಕಲಾಗುತ್ತದೆ.

ಪಂಪ್ಸ್ ಮತ್ತು ಮಶೀನ್​ಗಳು; ಸಬ್​ ಮರ್ಸಬಲ್​ ಪಂಪ್​ಗಳು, ಬೈಸಿಕಲ್ ಪಂಪ್​ಗಳು ಸೇರಿದಂತೆ ಇತರ ಮಶೀನ್​ಗಳ ಮೇಲಿನ ಜಿಎಸ್​ಟಿಯನ್ನು ಶೇ 12ರಿಂದ ಶೇ 18ಕ್ಕೆ ಏರಿಸಲಾಗಿದೆ.

ಪರಿಷ್ಕರಣೆ ನಂತರ ಅಗ್ಗ ಆಗುವ ವಸ್ತುಗಳು:

ರೋಪ್​ವೇ ರೈಡ್​ಗಳು: ರೋಪ್​ವೇಗಳ ಮೂಲಕ ಸರಕುಗಳು ಮತ್ತು ಪ್ರಯಾಣಿಕರನ್ನು ಒಯ್ಯುವ ದರವನ್ನು ಶೇ 18ರಿಂದ ಶೇ 5ಕ್ಕೆ ಇಳಿಸಿದ್ದು, ಜತೆಗೆ ಇನ್​ಪುಟ್​ ಟ್ಯಾಕ್ಸ್​ ಕ್ರೆಡಿಟ್ ಸೇವೆ ದೊರೆಯುತ್ತದೆ.

ಗೂಡ್ಸ್ ಒಯ್ಯುವ ಬಾಡಿಗೆ: ಗೂಡ್ಸ್ ಒಯ್ಯುವುದು ಜತೆಗೆ ತೈಲ ಮತ್ತು ಆಪರೇಟರ್ಸ್ ವೆಚ್ಚ ಜಿಎಸ್​ಟಿ ಶೇ 18ರಿಂದ ಶೇ 12ಕ್ಕೆ ಇಳಿದಿದೆ.

ಅರ್ಥೋಪೆಡಿಕ್ ಅಪ್ಲೈಯನ್ಸಸ್: ಸ್ಪ್ಲಿಂಟ್ಸ್ ಮತ್ತು ದೇಹದ ಇತರ ಕೃತಕ ಭಾಗಗಳಿಗಾಗಿ ಶೇ 12ರಿಂದ ಶೇ 5ಕ್ಕೆ ಇಳಿಸಲಾಗಿದೆ.

ರಕ್ಷಣಾ ವಸ್ತುಗಳು: ಖಾಸಗಿ ಮಾರಾಟಗಾರರು/ಸಂಸ್ಥೆಗಳು ಆಮದು ಮಾಡಿಕೊಳ್ಳುವ ನಿರ್ದಿಷ್ಟ ವಸ್ತುಗಳ ಮೇಲೆ ಐಜಿಎಸ್​ಟಿಯನ್ನು ವಿನಾಯಿತಿ ನೀಡಲಾಗಿದೆ.

Published On - 2:15 pm, Mon, 11 July 22