UK Serious Financial Crisis: ಯು.ಕೆ. 44 ಲಕ್ಷ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿ; ಸ್ನಾನ, ಊಟಕ್ಕೂ ಯೋಚಿಸುವಂಥ ಸ್ಥಿತಿ
ಕೊವಿಡ್ 19 ಸಂದರ್ಭದಲ್ಲಿ ಇದ್ದ ಆರ್ಥಿಕ ಸಮಸ್ಯೆಗಿಂತ ಈಗ ಸನ್ನಿವೇಶ ಬಹಳ ಬಿಗಾಡಿಸಿದೆ. ಅಲ್ಲಿನ 45 ಲಕ್ಷ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ ಎಂದು ಸಮೀಕ್ಷೆಯೊಂದು ಹೇಳಿದೆ.
2022ನೇ ಇಸವಿ ಆರ್ಥಿಕ ಸಂಕಷ್ಟಗಳ ವಿಚಾರದಲ್ಲಿ ಸಾಂಕ್ರಾಮಿಕವಾಗಿ ಪರಿಣಮಿಸಿದೆ. ಅಂದರೆ ಪ್ರಮುಖ ದೇಶಗಳಲ್ಲೇ ಕಂಡುಬರುತ್ತಿದೆ. ನೆರೆಯ ಶ್ರೀಲಂಕಾ, ಪಾಕಿಸ್ತಾನ, ನೇಪಾಳ, ಲಾವೋಸ್ ಹೀಗೆ ಪಟ್ಟಿ ಮುಂದುವರಿಯುತ್ತಾ ಹೋಗುತ್ತದೆ. ಅದಕ್ಕೆ ಹೊಸ ಸೇರ್ಪಡೆ ಅನ್ನಿಸುವ ಹಾಗೆ ಸಮೀಕ್ಷೆಯೊಂದು ಬಂದಿದೆ. ಅದರ ಪ್ರಕಾರ, ಅಕ್ಟೋಬರ್ನಿಂದ ಈಚೆಗೆ ಯುನೈಟೆಡ್ ಕಿಂಗ್ಡಮ್ನ (United Kingdom) ಶೇ 60ರಷ್ಟು ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ಮತ್ತು ಕೊರೊನಾ ಸಾಂಕ್ರಾಮಿಕ ಬಂದಾಗ ಇದ್ದ ಪರಿಸ್ಥಿತಿಯ ಪೈಕಿಯೇ ಈಗ ಸಂಕಷ್ಟ ಗರಿಷ್ಠ ಮಟ್ಟದಲ್ಲಿದೆ ಎಂದು ಈ ಸಮೀಕ್ಷೆ ತಿಳಿಸಿದೆ. ಬ್ರಿಸ್ಟಲ್ ವಿಶ್ವವಿದ್ಯಾಲಯದ abrdn ಫೈನಾನ್ಷಿಯಲ್ ಫೇರ್ನೆಸ್ ಟ್ರಸ್ಟ್ ಅಂಡ್ ರೀಸರ್ಚರ್ಸ್ ಅಂದಾಜಿಸುವಂತೆ, ಶೇ 16ರಷ್ಟು ಅಥವಾ 4.4 ಮಿಲಿಯನ್ (44 ಲಕ್ಷ) ಜನ ಗಂಭೀರ ಸ್ವರೂಪದ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಮತ್ತು ಶೇ 20ರಷ್ಟು ಮಂದಿ ಆರ್ಥಿಕ ಸಂಕಷ್ಟದಿಂದ ಹೊರಬರಲು ಒದ್ದಾಡುತ್ತಿದ್ದಾರೆ.
ಸಮೀಕ್ಷೆಯಲ್ಲಿ ಕಂಡುಬಂದಿರುವಂತೆ, ಜೀವನ ವೆಚ್ಚದ ಏರಿಕೆ ಹಿನ್ನೆಲೆಯಲ್ಲಿ ಈ ಸನ್ನಿವೇಶ ಸೃಷ್ಟಿಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟು. ಆ ಸಂದರ್ಭದಲ್ಲಿ ಇಂಧನ ಬೆಲೆ ಹೆಚ್ಚಾಗಿ, ಹಣದುಬ್ಬರ ದರ ಶೇ 11 ಆಗುವ ನಿರೀಕ್ಷೆ ಇದೆ. ಕಳೆದ ವಾರ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ ನೀಡುವಂತೆ ಸನ್ನಿವೇಶ ಸೃಷ್ಟಿಯಾದ ನಂತರ ರಾಜಕೀಯ ಪ್ರಕ್ಷುಬ್ಧತೆ ಏರ್ಪಟ್ಟಿದ್ದು, ಈ ಅವಧಿಯಲ್ಲಿ ಸಹಾಯಕ್ಕಾಗಿ ಹೆಚ್ಚಿನದನ್ನು ಮಾಡಲು ಸರ್ಕಾರದ ಮೇಲೆ ಒತ್ತಡ ಬಂದಿದೆ. ಮೇ ತಿಂಗಳಲ್ಲಿ ಜಾನ್ಸನ್ ಅವರ ಸರ್ಕಾರವು ಹೆಚ್ಚುವರಿ 15 ಶತಕೋಟಿ ಪೌಂಡ್ (18 ಶತಕೋಟಿ ಯುಎಸ್ ಡಾಲರ್) ಜೀವನ ವೆಚ್ಚದ ಬೆಂಬಲವನ್ನು ಘೋಷಿಸಿತು. ಆದರೆ ಜಾನ್ಸನ್‌ಗೆ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಮೊದಲು ಹೆಚ್ಚುವರಿ ಹಣಕಾಸಿನ ನೆರವು ಘೋಷಿಸಲು ಬೇಡಿಕೆಗಳು ಹೆಚ್ಚುತ್ತಿವೆ.
ಎಲ್ಲರ ಸ್ಥಿತಿಯೂ ಕಠಿಣ
“ಸಮಯವು ಪ್ರತಿಯೊಬ್ಬರಿಗೂ ಕಠಿಣವಾಗಿದೆ. ಆದರೆ ಕಡಿಮೆ ಆದಾಯ ಗಳಿಸುತ್ತಿರುವವರು, ವಿಶೇಷವಾಗಿ ಏರುತ್ತಿರುವ ಬೆಲೆಗಳ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ,” ಎಂದು ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಬಿನ್ ಹಕ್ ಹೇಳಿದ್ದಾರೆ. “ವೇತನಗಳು ಬಹುಮಟ್ಟಿಗೆ ಸ್ಥಗಿತಗೊಂಡಿವೆ ಮತ್ತು ಇನ್ನು ಹಣದುಬ್ಬರ ವೇಗಕ್ಕೆ ತಕ್ಕಂತೆ ಸಾಗುತ್ತಿಲ್ಲ; ಮತ್ತು ಸಾಮಾಜಿಕ ಭದ್ರತೆಯು ಒಂದು ದಶಕದ ಹಿಂದೆ ಇದ್ದಕ್ಕಿಂತ ನೈಜ ಪರಿಭಾಷೆಯಲ್ಲಿ ಕಡಿಮೆಯಾಗಿದೆ. ಜೀವನಮಟ್ಟ ಇನ್ನಷ್ಟು ಕುಸಿಯದಂತೆ ಖಚಿತಪಡಿಸಿಕೊಳ್ಳಲು ಹೆಚ್ಚು ಸಮಗ್ರ ಮತ್ತು ದೀರ್ಘಾವಧಿಯ ಯೋಜನೆ ತುರ್ತಾಗಿ ಅಗತ್ಯವಿದೆ,” ಎಂದಿದ್ದಾರೆ.
ಕೊರೊನಾವೈರಸ್ ಹಣಕಾಸು ಪರಿಣಾಮ ಟ್ರ್ಯಾಕರ್‌ಗಾಗಿ ಸಮೀಕ್ಷೆ ನಡೆಸಿದವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಹೇಳಿರುವಂತೆ, ತಮ್ಮ ಹಣಕಾಸಿನ ಪರಿಸ್ಥಿತಿಗಳು ಆರಂಭಿಕ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಇದ್ದುದಕ್ಕಿಂತ ಹೆಚ್ಚು ಕೆಟ್ಟದಾಗಿದೆ ಎಂದು ಪರಿಗಣಿಸುತ್ತಾರೆ. ಅಕ್ಟೋಬರ್‌ನಲ್ಲಿ ಇದೇ ಪ್ರಶ್ನೆಯನ್ನು ಕೇಳಿದಾಗ, ಶೇ 33ರಷ್ಟು ಮಂದಿ ಮಾತ್ರ ತಮ್ಮ ಪರಿಸ್ಥಿತಿ ಹದಗೆಟ್ಟಿದೆ ಎಂದು ಭಾವಿಸಿದ್ದರು. ಸೋಮವಾರ ಪ್ರಕಟವಾದ ವರದಿಯು ಹಣವನ್ನು ಉಳಿಸಲು ಅನೇಕರು ಏನು ಮಾಡುತ್ತಿದ್ದಾರೆ ಎಂಬುದನ್ನು ವಿವರಿಸಿದೆ.
ಆಸ್ತಿ ಮಾರಾಟ ಮಾಡಿರುವವರಿದ್ದಾರೆ
ಗಂಭೀರ ಆರ್ಥಿಕ ತೊಂದರೆಯಲ್ಲಿ ಇರುವವರಲ್ಲಿ ಶೇ 71ರಷ್ಟು ಜನರು ತಾವು ಸೇವಿಸುವ ಆಹಾರದ ಗುಣಮಟ್ಟವನ್ನು ಕಡಿಮೆ ಮಾಡಿದ್ದಾರೆ, ಶೇ 36ರಷ್ಟು ಜನರು ಆಸ್ತಿಯನ್ನು ಮಾರಾಟ ಮಾಡಿದ್ದಾರೆ ಅಥವಾ ಗಿರವಿ ಇಟ್ಟಿದ್ದಾರೆ ಹಾಗೂ ಶೇ 27ರಷ್ಟು ಜನರು ವಿಮೆಯನ್ನು ರದ್ದುಗೊಳಿಸಿದ್ದಾರೆ ಅಥವಾ ರಿನೀವ್ ಮಾಡಿಲ್ಲ. ಈ ವರ್ಷ ಇಂಧನ ಬಿಲ್‌ಗಳನ್ನು ಉಳಿಸುವ ಕ್ರಮಗಳಲ್ಲಿ ಸ್ನಾನ ಮಾಡುವುದು ಮತ್ತು ಅಡುಗೆ ಮಾಡುವುದು ಕಡಿಮೆ, ಆದರೆ ಐದನೇ ಒಂದು ಭಾಗದಷ್ಟು ಕ್ಯಾಶುವಲ್ ಕೆಲಸಗಾರರು ಪಿಂಚಣಿ ಕೊಡುಗೆಗಳನ್ನು ನಿಲ್ಲಿಸಿದ್ದಾರೆ ಅಥವಾ ಕಡಿಮೆ ಮಾಡಿದ್ದಾರೆ. ಒಂಟಿ ಪೋಷಕರು, ಸಾಮಾಜಿಕ ಬಾಡಿಗೆದಾರರು ಮತ್ತು ಮಕ್ಕಳಿರುವ ಮನೆಗಳು ಹೆಚ್ಚು ತೊಂದರೆಗೊಳಗಾಗುತ್ತಿವೆ.
ಬ್ರಿಸ್ಟಲ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಶರೋನ್ ಕೊಲಾರ್ಡ್ ಮಾತನಾಡಿ, “ಜನರು ಭವಿಷ್ಯದ ಆರ್ಥಿಕ ಸಮಸ್ಯೆಗಳನ್ನು ತಾವೇ ಸಮರ್ಥವಾಗಿ ಸಂಗ್ರಹಿಸುತ್ತಿದ್ದಾರೆ ಎಂಬುದು ವಿಶೇಷವಾಗಿ ಕಳವಳಕಾರಿಯಾಗಿದೆ.”