AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಭಾರತದ ಇಬ್ಬರು ಆಟಗಾರರಿಗೆ ಗಾಯ..! ಬದಲಿ ಆಟಗಾರರನ್ನು ಘೋಷಿಸಿದ ಬಿಸಿಸಿಐ

India U19 Tour England: ಭಾರತದ ಅಂಡರ್-19 ಕ್ರಿಕೆಟ್ ತಂಡದ ಇಂಗ್ಲೆಂಡ್ ಪ್ರವಾಸಕ್ಕೆ ಆದಿತ್ಯ ರಾಣಾ ಮತ್ತು ಖಿಲನ್ ಪಟೇಲ್ ಗಾಯದಿಂದ ಹೊರಗುಳಿದಿದ್ದಾರೆ. ಅವರ ಬದಲಾಗಿ ಡಿ. ದೀಪೇಶ್ ಮತ್ತು ನಮನ್ ಪುಷ್ಪಕ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಆಯುಷ್ ಮ್ಹಾತ್ರೆ ನಾಯಕತ್ವದಲ್ಲಿರುವ ಭಾರತೀಯ ತಂಡ ಜೂನ್ 24 ರಿಂದ ಏಕದಿನ ಮತ್ತು ಬಹು ದಿನ ಪಂದ್ಯಗಳನ್ನು ಆಡಲಿದೆ. ವೈಭವ್ ಸೂರ್ಯವಂಶಿ ಕೂಡ ತಂಡದಲ್ಲಿದ್ದಾರೆ. ಇಂಗ್ಲೆಂಡ್ ಲಯನ್ಸ್ ಕೂಡ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದೆ.

IND vs ENG: ಭಾರತದ ಇಬ್ಬರು ಆಟಗಾರರಿಗೆ ಗಾಯ..! ಬದಲಿ ಆಟಗಾರರನ್ನು ಘೋಷಿಸಿದ ಬಿಸಿಸಿಐ
India U19 Squad
ಪೃಥ್ವಿಶಂಕರ
|

Updated on: Jun 16, 2025 | 6:32 PM

Share

ಭಾರತ ಹಾಗೂ ಇಂಗ್ಲೆಂಡ್ (IND vs ENG) ನಡುವೆ ಇದೇ ಜೂನ್ 20 ರಿಂದ ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿಗಾಗಿ ಈಗಾಗಲೇ ಟೀಂ ಇಂಡಿಯಾ ಇಂಗ್ಲೆಂಡ್​ ತಲುಪಿದ್ದು, ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದೆ. ಇದು ಮಾತ್ರವಲ್ಲದೆ ಭಾರತ ಅಂಡರ್-19 (India U19 Squad) ತಂಡ ಕೂಡ ಇಂಗ್ಲೆಂಡ್ ಪ್ರವಾಸ ಮಾಡಿದ್ದು, ಭಾರತ ಹಾಗೂ ಇಂಗ್ಲೆಂಡ್ ಅಂಡರ್-19 ತಂಡಗಳ ನಡುವೆ ಒಟ್ಟು 8 ಪಂದ್ಯಗಳು ನಡೆಯಲ್ಲಿವೆ. ಉಭಯ ತಂಡಗಳ ಈ ಮುಖಾಮುಖಿ ಜೂನ್ 24 ರಿಂದ ಆರಂಭವಾಗಲಿದೆ. ಆದರೆ ಈ ಪ್ರವಾಸಕ್ಕೂ ಮುನ್ನ ಭಾರತ ತಂಡದ ಇಬ್ಬರು ಆಟಗಾರರು ಗಾಯಗೊಂಡಿದ್ದಾರೆ. ತಂಡದ ಯುವ ಆಟಗಾರರಾದ ಆದಿತ್ಯ ರಾಣಾ ಮತ್ತು ಖಿಲನ್ ಪಟೇಲ್ ಗಾಯಗೊಂಡಿದ್ದು, ಇಬ್ಬರೂ ಆಟಗಾರರನ್ನು ಇಂಗ್ಲೆಂಡ್ ಪ್ರವಾಸದಿಂದ ಹೊರಗಿಡಲಾಗಿದೆ. ಅಲ್ಲದೆ ಇದೀಗ ಅವರ ಬದಲಿ ಆಟಗಾರರನ್ನು ಸಹ ಬಿಸಿಸಿಐ ಘೋಷಿಸಿದೆ. ಜೂನಿಯರ್ ಕ್ರಿಕೆಟ್ ಸಮಿತಿಯು ಮುಂಬರುವ ಭಾರತ ಅಂಡರ್-19 ಇಂಗ್ಲೆಂಡ್ ಪ್ರವಾಸಕ್ಕಾಗಿ ಆದಿತ್ಯ ರಾಣಾ ಮತ್ತು ಖಿಲನ್ ಪಟೇಲ್ ಬದಲಿಗೆ ಡಿ. ದೀಪೇಶ್ ಮತ್ತು ನಮನ್ ಪುಷ್ಪಕ್ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದೆ.

ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯುತ್ತಿರುವ ಹೈ ಪರ್ಫಾರ್ಮೆನ್ಸ್ ಶಿಬಿರದ ಆದಿತ್ಯ ಬೆನ್ನಿನ ಗಾಯಕ್ಕೆ ತುತ್ತಾಗಿದ್ದರೆ, ಖಿಲನ್ ಅವರ ಬಲಗಾಲಿನಲ್ಲಿ ಸಮಸ್ಯೆ ಇದೆ. ಹೀಗಾಗಿ ಬಿಸಿಸಿಐ ಇಬ್ಬರೂ ಆಟಗಾರರನ್ನು ಪ್ರವಾಸದಿಂದ ಹೊರಗಿಟ್ಟು, ಇವರಿಬ್ಬರ ಬದಲಿಯಾಗಿ ಸ್ಟಾಂಡ್ ಬೈ ಆಟಗಾರರಾಗಿ ಆಯ್ಕೆಯಾಗಿದ್ದ ಡಿ. ದೀಪೇಶ್ ಮತ್ತು ನಮನ್ ಪುಷ್ಪಕ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ.

ಆಯುಷ್ ಮ್ಹಾತ್ರೆ ತಂಡದ ನಾಯಕ

ಇಂಗ್ಲೆಂಡ್ ಪ್ರವಾಸಕ್ಕಾಗಿ ಬಿಸಿಸಿಐ ಮೇ 22 ರಂದು ಭಾರತೀಯ ಅಂಡರ್-19 ತಂಡವನ್ನು ಘೋಷಿಸಿತ್ತು. ತಂಡದ ನಾಯಕತ್ವವನ್ನು ಆಯುಷ್ ಮ್ಹಾತ್ರೆ ಅವರಿಗೆ ವಹಿಸಲಾಗಿದ್ದು, ಐಪಿಎಲ್ 2025 ರಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಸಂಚಲನ ಸೃಷ್ಟಿಸಿದ್ದ ವೈಭವ್ ಸೂರ್ಯವಂಶಿ ಅವರನ್ನು ಸಹ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಮತ್ತೊಂದೆಡೆ, ಇಂಗ್ಲೆಂಡ್ ಲಯನ್ಸ್ ಕೂಡ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದ್ದು, ಇದರಲ್ಲಿ ಇಂಗ್ಲೆಂಡ್‌ನ ಮಾಜಿ ಆಟಗಾರ ಆಂಡ್ರ್ಯೂ ಫ್ಲಿಂಟಾಫ್ ಅವರ ಮಗ ರಾಕಿ ಫ್ಲಿಂಟಾಫ್ ಕೂಡ ಸೇರಿದ್ದಾರೆ.

IND vs ENG: ಇಂಗ್ಲೆಂಡ್‌ ಪ್ರವಾಸಕ್ಕೆ ಭಾರತ ಅಂಡರ್-19 ತಂಡ ಪ್ರಕಟ; ಆಯುಷ್​ಗೆ ನಾಯಕತ್ವ

ಭಾರತ ಅಂಡರ್-19 ತಂಡದ ಇಂಗ್ಲೆಂಡ್ ಪ್ರವಾಸ

  • ಜೂನ್ 24: 50-ಓವರ್‌ಗಳ ಅಭ್ಯಾಸ ಪಂದ್ಯ (ಲೌಬರೋ ವಿಶ್ವವಿದ್ಯಾಲಯ)
  • ಜೂನ್ 27: ಮೊದಲ ಏಕದಿನ ಪಂದ್ಯ (ಹೋವ್)
  • ಜೂನ್ 30: ಎರಡನೇ ಏಕದಿನ ಪಂದ್ಯ (ನಾರ್ಥಾಂಪ್ಟನ್)
  • ಜುಲೈ 02-ಜುಲೈ: ಮೂರನೇ ಏಕದಿನ ಪಂದ್ಯ (ನಾರ್ಥಾಂಪ್ಟನ್)
  • ಜುಲೈ 05-ಜುಲೈ: 4ನೇ ಏಕದಿನ ಪಂದ್ಯ (ವೋರ್ಸೆಸ್ಟರ್)
  • ಜುಲೈ 07-ಜುಲೈ: 5ನೇ ಏಕದಿನ ಪಂದ್ಯ (ವೋರ್ಸೆಸ್ಟರ್)
  • ಜುಲೈ 12-15: ಮೊದಲನೇ ಬಹು ದಿನ ಪಂದ್ಯ (ಬೆಕೆನ್‌ಹ್ಯಾಮ್)
  • ಜುಲೈ 20-23: 2ನೇ ಬಹು ದಿನ ಪಂದ್ಯ (ಚೆಲ್ಮ್ಸ್‌ಫೋರ್ಡ್)

ಭಾರತ U19 ತಂಡ: ಆಯುಷ್ ಮ್ಹಾತ್ರೆ (ನಾಯಕ), ವೈಭವ್ ಸೂರ್ಯವಂಶಿ, ವಿಹಾನ್ ಮಲ್ಹೋತ್ರಾ, ಮೌಲ್ಯರಾಜ್‌ಸಿಂಗ್ ಚಾವ್ಡಾ, ರಾಹುಲ್ ಕುಮಾರ್, ಅಭಿಜ್ಞಾನ್ ಕುಂದು (ಉಪನಾಯಕ ಮತ್ತು ವಿಕೆಟ್‌ಕೀಪರ್), ಹರ್ವಂಶ್ ಸಿಂಗ್ (ವಿಕೆಟ್‌ಕೀಪರ್), ಆರ್.ಎಸ್. ಅಂಬ್ರಿಶ್, ಕನಿಷ್ಕ್ ಚೌಹಾಣ್, ಹೆನಿಲ್ ಪಟೇಲ್, ಯುಧಾಜಿತ್ ಗುಹಾ, ಪ್ರಣವ್ ರಾಘವೇಂದ್ರ, ಮೊಹಮ್ಮದ್ ಏನನ್, ಅನ್ಮೋಲ್ಜೀತ್ ಸಿಂಗ್, ಡಿ.ದೀಪೇಶ್, ನಮನ್ ಪುಷ್ಪಕ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ