ಯುವ ಕ್ರಿಕೆಟಿಗರ ವಯಸ್ಸಿನ ವಂಚನೆಗೆ ಬ್ರೇಕ್ ಹಾಕಲು ಬಿಸಿಸಿಐ ಮಹತ್ವದ ಹೆಜ್ಜೆ
BCCI's Revolutionary Age Verification: ಬಿಸಿಸಿಐ ಭಾರತೀಯ ಕ್ರಿಕೆಟ್‌ನಲ್ಲಿ ವಯಸ್ಸಿನ ವಂಚನೆಯನ್ನು ತಡೆಯಲು ಕಠಿಣ ಕ್ರಮ ಕೈಗೊಂಡಿದೆ. ಜೂನಿಯರ್ ಮಟ್ಟದಲ್ಲಿ ಮೂಳೆ ವಯಸ್ಸು ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಇದು ನಿಖರ ವಯಸ್ಸು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಆಟಗಾರರಿಗೆ ನಿಷೇಧವಿರಲಿದೆ. ಈ ಕ್ರಮದಿಂದ ಪ್ರತಿಭಾವಂತ ಯುವ ಕ್ರಿಕೆಟಿಗರಿಗೆ ನ್ಯಾಯ ಸಿಗಲಿದೆ.

ಭಾರತ ಕ್ರಿಕೆಟ್‌ನಲ್ಲಿ ಕ್ರಾಂತಿ ಕಾರಿ ಸುಧಾರಣೆ ತರಲು ಮುಂದಾಗಿರುವ ಬಿಸಿಸಿಐ (BCCI), ಇಷ್ಟು ದಿನ ಪ್ರತಿಭಾವಂತ ಕ್ರಿಕೆಟಿಗರಿಗೆ ಆಗುತ್ತಿದ್ದ ಮೋಸವನ್ನು ತಡೆಯಲು ಮಹತ್ವದ ಹೆಜ್ಜೆ ಇಟ್ಟಿದೆ. ಅದರಂತೆ ಇನ್ನು ಮುಂದೆ ಭಾರತ ಕ್ರಿಕೆಟ್‌ನಲ್ಲಿ ಯಾರೂ ವಯಸ್ಸಿನ ವಂಚನೆ ಮಾಡದಂತೆ ತಡೆಯಲು ಕಠಿಣ ಕ್ರಮ ಕೈಗೊಂಡಿದೆ. ಇದರಿಂದಾಗಿ ಯುವ ಕ್ರಿಕೆಟಿಗರಿಗೆ ಯಾವುದೇ ಅನ್ಯಾಯವಾಗುವುದಿಲ್ಲ. ಜೊತೆಗೆ ಅರ್ಹರಿಗೆ ತಂಡದಲ್ಲಿ ಆಡಲು ಸುಲಭವಾಗಿ ಅವಕಾಶ ಸಿಗುತ್ತದೆ. ಈ ಹಿಂದೆ, ಅನೇಕ ಕ್ರಿಕೆಟಿಗರು ತಮ್ಮ ವಯಸ್ಸನ್ನು ಕಡಿಮೆ ನೀಡುವ ಮೂಲಕ ಜೂನಿಯರ್ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿದ್ದರು. ಇದರಿಂದಾಗಿ ಪ್ರತಿಭಾನ್ವಿತ ಕ್ರಿಕೆಟಿಗರಿಗೆ ಅನ್ಯಾಯವಾಗುತ್ತಿತ್ತು. ಇದನ್ನು ತಡೆಯುವ ಸಲುವಾಗಿ ಬಿಸಿಸಿಐ ಜೂನಿಯರ್ ಮಟ್ಟದಲ್ಲಿ ಹೆಚ್ಚುವರಿ ಮೂಳೆ ಪರೀಕ್ಷೆಯನ್ನು ನಡೆಸಲು ಪ್ರಾರಂಭಿಸಿದೆ. ಈ ಪರೀಕ್ಷೆಯಿಂದ ಕ್ರಿಕೆಟಿಗರ ನಿಖರವಾದ ವಯಸ್ಸನ್ನು ತಿಳಿಯಬಹುದಾಗಿದೆ.
ಮತ್ತೊಂದು ಪರೀಕ್ಷೆ ಆರಂಭಿಸಿದ ಬಿಸಿಸಿಐ
ಪ್ರಸ್ತುತ ನಿಯಮಗಳ ಪ್ರಕಾರ, ಆಟಗಾರನು TW3 ವಿಧಾನದ ಮೂಲಕ ವಯಸ್ಸನ್ನು ನಿರ್ಧರಿಸಲು ಮೂಳೆ ಪರೀಕ್ಷೆಗೆ ಒಳಗಾಗುತ್ತಾನೆ (ಮೂಳೆಯ ವಯಸ್ಸನ್ನು ನಿರ್ಣಯಿಸಲು ಬಳಸುವ ಪರೀಕ್ಷೆ) ಮತ್ತು ಅದೇ ವಯಸ್ಸಿನ ಗುಂಪಿನಲ್ಲಿ ಮುಂದಿನ ಆವೃತ್ತಿಗೆ ಅವನ ಅರ್ಹತೆಯನ್ನು ನಿರ್ಧರಿಸಲು 1 ಅಂಶವನ್ನು ಸೇರಿಸಲಾಗುತ್ತದೆ. ಇದರ ನಂತರ, ಎರಡನೇ ಮೂಳೆ ಪರೀಕ್ಷೆಯನ್ನು ನಡೆಸಲಾಗುತ್ತದೆ.
ವರದಿಗಳ ಪ್ರಕಾರ, +1 ಅಂಶದಿಂದ ಅನುತ್ತೀರ್ಣರಾದ 16 ವರ್ಷದೊಳಗಿನ ಆಟಗಾರರು ಮುಂದಿನ ಸೀಸನ್ನಿಂದ ಎರಡನೇ ಮೂಳೆ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ನಿಖರವಾದ ವಯಸ್ಸನ್ನು ಕಂಡುಹಿಡಿಯಲು ಈ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಪ್ರಸ್ತುತ, 16 ವರ್ಷದೊಳಗಿನ ಆಟಗಾರರಿಗೆ ಮೂಳೆ ವಯಸ್ಸಿನ ಮಿತಿ 16.5 ವರ್ಷಗಳು ಮತ್ತು 15 ವರ್ಷದೊಳಗಿನ ಹುಡುಗಿಯರಿಗೆ 15 ವರ್ಷಗಳಾಗಿರುತ್ತದೆ.
ಅರ್ಹತಾ ಮಾನದಂಡ ಹೀಗಿದೆ
ವರದಿಗಳ ಪ್ರಕಾರ, ಮುಂದಿನ ಆವೃತ್ತಿಯಿಂದ ಅಂಡರ್-16 ನಲ್ಲಿ ಭಾಗವಹಿಸಲು, ಆಟಗಾರನ ಮೂಳೆ ವಯಸ್ಸು 16.4 ಅಥವಾ ಅದಕ್ಕಿಂತ ಕಡಿಮೆ ಮತ್ತು ಮಹಿಳೆಯರಿಗೆ 14.9 ಅಥವಾ ಅದಕ್ಕಿಂತ ಕಡಿಮೆ ಇರಬೇಕು. 2025-26 ಸೀಸನ್‌ನಲ್ಲಿ ಪುರುಷ ಅಂಡರ್-16 ಆಟಗಾರನ ಮೂಳೆ ಪರೀಕ್ಷೆಯ ಫಲಿತಾಂಶವು 15.4 ವರ್ಷಗಳನ್ನು ತೋರಿಸಿದರೆ, ಮುಂದಿನ ಸೀಸನ್‌ನಲ್ಲಿ ಅವನನ್ನು ಮತ್ತೆ ಪರೀಕ್ಷಿಸಲಾಗುವುದಿಲ್ಲ. ಒಂದು ವೇಳೆ ಆಟಗಾರನ ಮೂಳೆ ವಯಸ್ಸು 15.5 ಅಥವಾ ಅದಕ್ಕಿಂತ ಹೆಚ್ಚಿದ್ದರೆ, ಮುಂದಿನ ವರ್ಷ ಅದು 16.5 ಅಥವಾ ಅದಕ್ಕಿಂತ ಹೆಚ್ಚಾಗಿರುತ್ತದೆ. ಇದು 16.4 ರ ಅರ್ಹತಾ ಮಿತಿಯನ್ನು ಮೀರುವುದರಿಂದ ಅಂತಹ ಕ್ರಿಕೆಟಿಗನನ್ನು ಅಂಡರ್-16 ಪಂದ್ಯಾವಳಿಯಿಂದ ಹೊರಗಿಡಲಾಗುತ್ತದೆ.
ಹಾಗೆಯೇ15 ವರ್ಷದೊಳಗಿನ ಹುಡುಗಿಯರ ಟೂರ್ನಿಯನ್ನು ಆಡಬೇಕೆಂದರೆ, ಆಟಗಾರ್ತಿ ಮೂಳೆ ಪರೀಕ್ಷೆಯು 13.9 ವರ್ಷ ಎಂದು ತೋರಿಸಿದರೆ, ಆಕೆ ಮುಂದಿನ ಸೀಸನ್ನಲ್ಲೂ ಆಡಲು ಅರ್ಹರಾಗುತ್ತಾರೆ. ಒಂದು ವೇಳೆ ಅವರ ಮೂಳೆ ವಯಸ್ಸು 14.9 ವರ್ಷ ಎಂದು ಕಂಡು ಬಂದರೆ ಆಗ ಆಕೆ ಮುಂದಿನ ವರ್ಷ ಭಾಗವಹಿಸಲು ಸಾಧ್ಯವಾಗುವುದಿಲ್ಲ.
IND vs ENG: ಭಾರತದ ಇಬ್ಬರು ಆಟಗಾರರಿಗೆ ಗಾಯ..! ಬದಲಿ ಆಟಗಾರರನ್ನು ಘೋಷಿಸಿದ ಬಿಸಿಸಿಐ
ಹಲವಾರು ಆಟಗಾರರಿಗೆ ನಿಷೇಧದ ಶಿಕ್ಷೆ
ಐಪಿಎಲ್‌ನಲ್ಲಿ ಆಡುವ ನಿತೀಶ್ ರಾಣಾ ಮತ್ತು ರಸಿಕ್ ಸಲಾಂ ದಾರ್ ವಯಸ್ಸಿನ ವಂಚನೆ ಮಾಡಿದ್ದಾರೆ. ವಯಸ್ಸಿನ ವಂಚನೆಯಲ್ಲಿ ನಿತೀಶ್ ತಪ್ಪಿತಸ್ಥರೆಂದು ಕಂಡುಬಂದ ಕಾರಣ, ಬಿಸಿಸಿಐ ಕೂಡ ಅವರನ್ನು ನಿಷೇಧಿಸಿತು. ಎಡಗೈ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಅವರ ಜನ್ಮ ದಿನಾಂಕದಲ್ಲಿ ವ್ಯತ್ಯಾಸವಿದ್ದ ಕಾರಣ 2015 ರಲ್ಲಿ ಬಿಸಿಸಿಐ ನಿತೀಶ್ ರಾಣಾ ಸೇರಿದಂತೆ ದೆಹಲಿಯ 22 ಆಟಗಾರರನ್ನು ನಿಷೇಧಿಸಿತು. ಇದಲ್ಲದೆ, ಜಮ್ಮು ಮತ್ತು ಕಾಶ್ಮೀರ ಕ್ರಿಕೆಟಿಗ ರಸಿಕ್ ಸಲಾಂ ದಾರ್ ಅವರನ್ನು ವಯಸ್ಸಿನ ವಂಚನೆ ಪ್ರಕರಣದಲ್ಲಿ ಎರಡು ವರ್ಷಗಳ ಕಾಲ ನಿಷೇಧಿಸಲಾಯಿತು. ಇವರ ಜೊತೆಗೆ ದೆಹಲಿ ಕ್ರಿಕೆಟಿಗ ಪ್ರಿನ್ಸ್ ರಾಮ್ ನಿವಾಸ್ ಯಾದವ್ ಅವರನ್ನು ಬಿಸಿಸಿಐ ಎರಡು ಸೀಸನ್ಗಳ ಕಾಲ ದೇಶೀಯ ಕ್ರಿಕೆಟ್‌ನಿಂದ ನಿಷೇಧಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
