AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Price Today: 3 ದಿನಗಳಿಂದ ಒಂದೇ ರೀತಿ ಇದೆ ಚಿನ್ನದ ಬೆಲೆ; ಬೆಳ್ಳಿ ಖರೀದಿಗೂ ಇದು ಒಳ್ಳೆ ಸಮಯ

Silver Price Today: ಭಾರತದಲ್ಲಿ ಚಿನ್ನದ ಬೆಲೆ ಕಳೆದ ಮೂರು ದಿನಗಳಿಂದ ಏರಿಳಿತವಾಗಿಲ್ಲ. ಬೆಳ್ಳಿ ಬೆಲೆ ಕೂಡ ಇಂದು ಯಥಾಸ್ಥಿತಿಯಲ್ಲಿದೆ.

Gold Price Today: 3 ದಿನಗಳಿಂದ ಒಂದೇ ರೀತಿ ಇದೆ ಚಿನ್ನದ ಬೆಲೆ; ಬೆಳ್ಳಿ ಖರೀದಿಗೂ ಇದು ಒಳ್ಳೆ ಸಮಯ
ಚಿನ್ನದ ಬೆಲೆ
TV9 Web
| Edited By: |

Updated on: Jul 12, 2022 | 6:14 AM

Share

ಬೆಂಗಳೂರು: ನೀವೇನಾದರೂ ಚಿನ್ನ ಖರೀದಿಸಲು ಯೋಚಿಸಿದ್ದರೆ ಇದು ಸರಿಯಾದ ಸಮಯ. ಏಕೆಂದರೆ, ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದೆ. ಭಾರತದಲ್ಲಿ ಕೊಂಚ ಏರಿಕೆ ಕಂಡಿದ್ದ ಚಿನ್ನದ ಬೆಲೆ ಕಳೆದ 3 ದಿನಗಳಿಂದ ಮತ್ತೆ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ಚಿನ್ನದ ಬೆಲೆಯಲ್ಲಿ (Gold Rate) ಇಂದು ಕೂಡ ಯಾವುದೇ ಏರಿಳಿತವಾಗಿಲ್ಲ. ಬೆಳ್ಳಿಯ ಬೆಲೆ (Silver Price) ಕೂಡ ಇಂದು ಯಾವುದೇ ಬದಲಾವಣೆಯಾಗಿಲ್ಲ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಕಳೆದ ಮೂರು ದಿನಗಳಿಂದ ಏರಿಳಿತವಾಗಿಲ್ಲ. 3 ದಿನಗಳ ಹಿಂದೆ 22 ಕ್ಯಾರೆಟ್ ಚಿನ್ನದ ಬೆಲೆ 46,850 ರೂ. ಇದ್ದುದು 46,950 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,110 ರೂ. ಇದ್ದುದು 51,210 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 46,800 ರೂ. ಮುಂಬೈ- 46,950 ರೂ, ದೆಹಲಿ- 46,950 ರೂ, ಕೊಲ್ಕತ್ತಾ- 46,950 ರೂ, ಬೆಂಗಳೂರು- 46,980 ರೂ, ಹೈದರಾಬಾದ್- 46,950 ರೂ, ಕೇರಳ- 46,950 ರೂ, ಪುಣೆ- 46,970 ರೂ, ಮಂಗಳೂರು- 46,980 ರೂ, ಮೈಸೂರು- 46,980 ರೂ. ಇದೆ.

ಇದನ್ನೂ ಓದಿ: Gold Price Today: 2 ದಿನಗಳ ಬಳಿಕ ಚಿನ್ನದ ಬೆಲೆ ಕೊಂಚ ಏರಿಕೆ; ಬೆಳ್ಳಿ ದರ 200 ರೂ. ಹೆಚ್ಚಳ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 51,050 ರೂ, ಮುಂಬೈ- 51,210 ರೂ, ದೆಹಲಿ- 51,210 ರೂ, ಕೊಲ್ಕತ್ತಾ- 51,210 ರೂ, ಬೆಂಗಳೂರು- 51,250 ರೂ, ಹೈದರಾಬಾದ್- 51,210 ರೂ, ಕೇರಳ- 51,210 ರೂ, ಪುಣೆ- 51,240 ರೂ, ಮಂಗಳೂರು- 51,250 ರೂ, ಮೈಸೂರು- 51,250 ರೂ. ಆಗಿದೆ.

ಇಂದಿನ ಬೆಳ್ಳಿಯ ದರ: ಬೆಳ್ಳಿ ಬೆಲೆ ಕೂಡ ಇಂದು ಯಥಾಸ್ಥಿತಿಯಲ್ಲಿದೆ. 3 ದಿನಗಳ ಹಿಂದೆ 1 ಕೆಜಿ ಬೆಳ್ಳಿಯ ದರ 57,000 ರೂ. ಇದ್ದುದು ಇಂದು 57,200 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 63,000 ರೂ, ಮೈಸೂರು- 63,000 ರೂ., ಮಂಗಳೂರು- 63,000 ರೂ., ಮುಂಬೈ- 57,200 ರೂ, ಚೆನ್ನೈ- 63,000 ರೂ, ದೆಹಲಿ- 57,200 ರೂ, ಹೈದರಾಬಾದ್- 63,000 ರೂ, ಕೊಲ್ಕತ್ತಾ- 57,200 ರೂ. ಆಗಿದೆ.

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್