INR USD Exchange Rate: ಜೂನ್ 22ಕ್ಕೆ ಅಮೆರಿಕ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ 78.40ಕ್ಕೆ ಕುಸಿತ

| Updated By: Srinivas Mata

Updated on: Jun 22, 2022 | 5:34 PM

Dollar to Rupee Exchange Rate (USD/INR): ಅಮೆರಿಕ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ ಜೂನ್ 22, 2022, ಬುಧವಾರದ ಮಾಹಿತಿ ಇಲ್ಲಿದೆ.

INR USD Exchange Rate: ಜೂನ್ 22ಕ್ಕೆ ಅಮೆರಿಕ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ 78.40ಕ್ಕೆ ಕುಸಿತ
ಸಾಂದರ್ಭಿಕ ಚಿತ್ರ
Follow us on

ವಿದೇಶಿ ನಿಧಿಯ ಹೊರಹರಿವು ಮತ್ತು ದೇಶೀಯ ಷೇರುಗಳಲ್ಲಿನ ನಷ್ಟದಿಂದಾಗಿ ಜೂನ್ 22ರ ಬುಧವಾರದಂದು ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 27 ಪೈಸೆಗಳಷ್ಟು ಕಡಿಮೆಯಾಗಿ, 78.40ಕ್ಕೆ (ತಾತ್ಕಾಲಿಕ) ಕುಸಿದಿದೆ. ವಿದೇಶದಲ್ಲಿ ಬಲವಾದ ಗ್ರೀನ್‌ಬ್ಯಾಕ್ ಕೂಡ ರೂಪಾಯಿ ಭಾವನೆ ಮೇಲೆ ತೂಗುತ್ತದೆ ಎಂದು ವಿದೇಶೀ ವಿನಿಮಯ ವ್ಯಾಪಾರಿಗಳು ತಿಳಿಸಿದ್ದಾರೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ (Crude Oil) ಬೆಲೆ ಕಡಿಮೆ ಆಗುತ್ತಿರುವುದು ರೂಪಾಯಿಯ ನಷ್ಟವನ್ನು ನಿರ್ಬಂಧಿಸಿದೆ ಎಂದು ಅವರು ಹೇಳಿದ್ದಾರೆ.

ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸ್ಥಳೀಯ ಕರೆನ್ಸಿಯು ಗ್ರೀನ್‌ಬ್ಯಾಕ್ ವಿರುದ್ಧ 78.13ನಲ್ಲಿ ಅಂಥ ಹೆಚ್ಚಿನ ಏರಿಳಿತ ಇಲ್ಲದೆ ಪ್ರಾರಂಭವಾಯಿತು ಮತ್ತು 78.13ರ ಇಂಟ್ರಾ-ಡೇ ಗರಿಷ್ಠ ಮತ್ತು 78.40ರ ಕನಿಷ್ಠ ಮಟ್ಟಕ್ಕೆ ಸಾಕ್ಷಿಯಾಯಿತು. ದೇಶೀಯ ಕರೆನ್ಸಿ ಅಂತಿಮವಾಗಿ 78.40ರ ದಾಖಲೆಯ ಕನಿಷ್ಠ ಮಟ್ಟದಲ್ಲಿ ಕೊನೆಗೊಂಡಿತು. ಅಂದರೆ ಅದರ ಹಿಂದಿನ ಮುಕ್ತಾಯಕ್ಕಿಂತ 27 ಪೈಸೆ ಕಡಿಮೆಯಾಗಿದೆ. ಹಿಂದಿನ ಸೆಷನ್‌ನಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ 78.13 ರಷ್ಟಿತ್ತು.

ಆರು ಕರೆನ್ಸಿಗಳ ಬುಟ್ಟಿಯ ವಿರುದ್ಧ ಗ್ರೀನ್‌ಬ್ಯಾಕ್‌ನ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕವು ಶೇಕಡಾ 0.05 ರಷ್ಟು ಬಲಗೊಂಡು, 104.48ಕ್ಕೆ ತಲುಪಿದೆ. ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ ಶೇ 4.46 ಇಳಿದು, ಯುಎಸ್​ಡಿ 109.54ಕ್ಕೆ ಇಳಿದಿದೆ.

ದೇಶೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ಬಿಎಸ್‌ಇ ಸೆನ್ಸೆಕ್ಸ್ 709.54 ಪಾಯಿಂಟ್‌ ಅಥವಾ ಶೇ 1.35 ಕಡಿಮೆಯಾಗಿ 51,822.53ಕ್ಕೆ ಕೊನೆಗೊಂಡರೆ, ಎನ್‌ಎಸ್‌ಇ ನಿಫ್ಟಿ 225.50 ಪಾಯಿಂಟ್ ಅಥವಾ ಶೇ 1.44ರಷ್ಟು ಕುಸಿದು, 15,413.30ಕ್ಕೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೋಮವಾರ ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿ ಉಳಿದರು, ಅವರು 2,701.21 ಕೋಟಿ ಮೌಲ್ಯದ ಷೇರುಗಳನ್ನು ಆಫ್‌ಲೋಡ್ ಮಾಡಿದ್ದಾರೆ ಎಂದು ಸ್ಟಾಕ್ ಎಕ್ಸ್‌ಚೇಂಜ್ ಡೇಟಾ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: INVESTMENT: ಹೂಡಿಕೆ ಮಾಡಬೇಕೆಂದು ಯೋಚಿಸುತ್ತಿದ್ದೀರಾ? ಈ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಹೆಜ್ಜೆ ಇರಿಸಿ