PF Withdrawal: ಉದ್ಯೋಗಿಗಳು ತಮ್ಮ PF ಖಾತೆಯಿಂದ ಆನ್‌ಲೈನ್‌ನಲ್ಲಿ ಹಣ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಭಾರತದಲ್ಲಿ ಕೆಲಸ ಮಾಡುವ ಬಹುತೇಕ ಎಲ್ಲರೂ ಪಿಎಫ್ ಖಾತೆಯನ್ನು ಹೊಂದಿದ್ದಾರೆ. ಸರ್ಕಾರಿ ನೌಕರರು ಯಾವುದೇ ಜಾಗದಿಂದ ವರ್ಗಾವಣೆಯಾದರೂ... ಅಥವಾ ಯಾವುದೇ ಸಂಸ್ಥೆಯನ್ನು ಬಿಟ್ಟು ಮತ್ತೊಂದು ಸಂಸ್ಥೆಗೆ ಸೇರಿಕೊಂಡರೂ ಅವರು ತಮ್ಮೊಂದಿಗೆ ಪಿಎಫ್ ಖಾತೆಯನ್ನೂ ವರ್ಗಾವಣೆ ಮಾಡಿಕೊಳ್ಳಬೇಕಾಗಿಲ್ಲ. ಒಂದೇ ಖಾತೆ ಪಾಲನೆಯಾಗುತ್ತಿದ್ದು, ಎಲ್ಲಿಂದ ಬೇಕಾದರೂ ಹಣ ಪಡೆಯಬಹುದು. ಹಾಗಾದಾಗ ತಮ್ಮ PF ಖಾತೆಯಿಂದ ಹಣ ಪಡೆಯುವುದು ಹೇಗೆ ಎಂಬುದರ ವಿವರ ಇಲ್ಲಿದೆ ನೋಡಿ.

PF Withdrawal: ಉದ್ಯೋಗಿಗಳು ತಮ್ಮ PF ಖಾತೆಯಿಂದ ಆನ್‌ಲೈನ್‌ನಲ್ಲಿ ಹಣ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ಉದ್ಯೋಗಿಗಳು PF ಖಾತೆಯಿಂದ ಹಣವನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 22, 2022 | 4:06 PM

ಭಾರತದಲ್ಲಿ ಕೆಲಸ ಮಾಡುವ ಬಹುತೇಕ ಎಲ್ಲರೂ ಪಿಎಫ್ ಖಾತೆಯನ್ನು (Employees Provident Fund -EPF) ಹೊಂದಿದ್ದಾರೆ. ಸರ್ಕಾರಿ ನೌಕರರು ಯಾವುದೇ ಜಾಗದಿಂದ ವರ್ಗಾವಣೆಯಾದರೂ… ಅಥವಾ ಯಾವುದೇ ಸಂಸ್ಥೆಯನ್ನು ಬಿಟ್ಟು ಮತ್ತೊಂದು ಸಂಸ್ಥೆಗೆ ಸೇರಿಕೊಂಡರೂ ಅವರು ತಮ್ಮೊಂದಿಗೆ ಪಿಎಫ್ ಖಾತೆಯನ್ನೂ ವರ್ಗಾವಣೆ ಮಾಡಿಕೊಳ್ಳಬೇಕಾಗಿಲ್ಲ. ಒಂದೇ ಖಾತೆ ಪಾಲನೆಯಾಗುತ್ತಿದ್ದು, ಎಲ್ಲಿಂದ ಬೇಕಾದರೂ ಹಣ ಪಡೆಯಬಹುದು. ಈ ಹಿಂದೆ ಪಿಎಫ್ ವರ್ಗಾವಣೆಗೆ ದೊಡ್ಡ ತೊಡಕಿತ್ತು. ಪಿಎಫ್ ಕಚೇರಿಗೇ ಹೋಗಿ (Employees Provident Fund Organisation -EPFO) ಅರ್ಜಿ ಸಲ್ಲಿಸಬೇಕಿತ್ತು. ಆದರೆ ಈಗ ಅದು ಆನ್‌ಲೈನ್‌ನಲ್ಲಿದೆ. ಆದರೆ ಹೆಚ್ಚಿನವರಿಗೆ ಆನ್‌ಲೈನ್‌ನಲ್ಲಿ ಪಿಎಫ್ ಅನ್ನು ಹೇಗೆ ವರ್ಗಾಯಿಸುವುದು ಎಂದು ತಿಳಿದಿಲ್ಲ. PF ಖಾತೆಯನ್ನು ಹೇಗೆ ವರ್ಗಾಯಿಸುವುದು? ತಮ್ಮ PF ಖಾತೆಯಿಂದ ಹಣ ಪಡೆಯುವುದು ಹೇಗೆ (Withdraw Provident Fund) ಎಂಬುದನ್ನು ಹಂತ ಹಂತವಾಗಿ ನೋಡೋಣ.

ಹಂತ 1: ಮೊದಲು EPFO ​​ವೆಬ್‌ಸೈಟ್‌ಗೆ ಹೋಗಿ. ಸೇವೆಗಳಲ್ಲಿ ಉದ್ಯೋಗಿಗಳನ್ನು ಆಯ್ಕೆ ಮಾಡಿ. ನಂತರ UAN ಆನ್‌ಲೈನ್ ಸೇವೆಯ ಮೇಲೆ ಕ್ಲಿಕ್ ಮಾಡಿ. ನಂತರ ನೀವು ನಿಮ್ಮ UAN ಸಂಖ್ಯೆ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗ್ ಇನ್ ಮಾಡಬೇಕಾಗುತ್ತದೆ.

ಹಂತ 2: ಲಾಗಿನ್ ಮಾಡಿದ ನಂತರ, ಆನ್‌ಲೈನ್ ಸೇವೆಯಲ್ಲಿ (Proceed for Online Claim) ಎಂಬುದರ ಮೇಲೆ ಕರ್ಸರ್ ಅನ್ನು ಇರಿಸಿ ಆಗ ವರ್ಗಾವಣೆ ವಿನಂತಿ (PF Advance -Form 31) ಎಂಬುದು ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

ಹಂತ 3: ವೈಯಕ್ತಿಕ ವಿವರಗಳನ್ನು ಪರಿಶೀಲಿಸಬೇಕು. ಅದರ ನಂತರ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಂಪನಿಯ ವಿವರಗಳನ್ನು ನಮೂದಿಸಬೇಕು.

ಇದನ್ನೂ ಓದಿ: EPFO: ಪಿಂಚಣಿ ವೇತನದ ಮಿತಿ ರೂ. 15,000ದಿಂದ ರೂ. 21,000ಕ್ಕೆ ಹೆಚ್ಚಿಸಲು ಚಿಂತನೆ; ಇದರ ಪರಿಣಾಮ ಏನು?

ಹಂತ 4: ಅಭ್ಯರ್ಥಿಗಳು ಹಿಂದಿನ ಕೆಲಸಕ್ಕೆ ಸಂಬಂಧಿಸಿದ PF ಖಾತೆಯಲ್ಲಿ ಕಂಡುಬರುವ ‘ವಿವರಗಳನ್ನು ಪಡೆಯಿರಿ’ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

ಹಂತ 5: ಫಾರ್ಮ್ ಅನ್ನು ಪರಿಶೀಲಿಸಲು EPFO ​​ಸದಸ್ಯರು ಈಗ ಹಿಂದಿನ ಉದ್ಯೋಗದಾತ ಅಥವಾ ಪ್ರಸ್ತುತ ಉದ್ಯೋಗದಾತರ ಆಯ್ಕೆಗಳನ್ನು ಆರಿಸಬೇಕು

ಇದನ್ನೂ ಓದಿ:

PF Interest: ನಾಲ್ಕು ದಶಕಗಳ ಕನಿಷ್ಠ ಮಟ್ಟಕ್ಕೆ ಕುಸಿದ ಪಿಎಫ್​ ಬಡ್ಡಿ ದರ ಶೇ 8.1ಕ್ಕೆ

ಹಂತ 6: UAN ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ OTP ಸ್ವೀಕರಿಸಲು ಸದಸ್ಯರು ‘OTP ಪಡೆಯಿರಿ’ ಆಯ್ಕೆಯನ್ನು ಕ್ಲಿಕ್ ಮಾಡಬೇಕು

ಹಂತ 7: ಅಂತಿಮವಾಗಿ, EPFO ​​ಸದಸ್ಯರು OTP ಅನ್ನು ನಮೂದಿಸಬೇಕು ಮತ್ತು ಸಬ್​ಮಿಟ್​​ ಮೇಲೆ ಕ್ಲಿಕ್ ಮಾಡಬೇಕು. 10-15 ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ನೀವು ಕೇಳಿರುವ ಮೊತ್ತ ವರ್ಗಾವಣೆ ಆಗಿರುತ್ತದೆ.

To read in Telugu click here

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:42 pm, Wed, 22 June 22

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು