AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PF Interest: ನಾಲ್ಕು ದಶಕಗಳ ಕನಿಷ್ಠ ಮಟ್ಟಕ್ಕೆ ಕುಸಿದ ಪಿಎಫ್​ ಬಡ್ಡಿ ದರ ಶೇ 8.1ಕ್ಕೆ

2021-22ನೇ ಸಾಲಿಗೆ ಇಪಿಎಫ್​ಒದಿಂದ ಪಿಎಫ್​ ಬಡ್ಡಿ ದರ ಶೇ 8.1ರಷ್ಟು ನಿಗದಿ ಮಾಡಲಾಗಿದ್ದು, ನಾಲ್ಕು ದಶಕದಲ್ಲೇ ಕನಿಷ್ಠ ಮಟ್ಟವನ್ನು ತಲುಪಿದೆ.

PF Interest: ನಾಲ್ಕು ದಶಕಗಳ ಕನಿಷ್ಠ ಮಟ್ಟಕ್ಕೆ ಕುಸಿದ ಪಿಎಫ್​ ಬಡ್ಡಿ ದರ ಶೇ 8.1ಕ್ಕೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on:Jun 03, 2022 | 8:14 PM

Share

ಇಪಿಎಫ್​ಒ (EPFO) ಆದೇಶದ ಪ್ರಕಾರ, 2021-22ನೇ ಸಾಲಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಠೇವಣಿ ಮೇಲೆ ಶೇ 8.1ರಷ್ಟು ಬಡ್ಡಿ ದರ ನೀಡಲು ಸರ್ಕಾರವು ಮಂಜೂರು ಮಾಡಿದೆ. ಇದು ನಾಲ್ಕು ದಶಕದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ಪಿಟಿಐ ವರದಿ ಮಾಡಿದೆ. ಈ ನಿರ್ಧಾರವು ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್​ನ (EPFO) 5 ಕೋಟಿ ಚಂದಾದಾರರ ಮೇಲೆ ಪರಿಣಾಮ ಬೀರಲಿದೆ. ಹಣಕಾಸು ವರ್ಷ 2021-22ರಲ್ಲಿ ಶೇ 8.1ರಷ್ಟು ಬಡ್ಡಿ ದರ ನೀಡುವುದಕ್ಕೆ ಮಾರ್ಚ್​ ತಿಂಗಳಲ್ಲಿ ನಿರ್ಧಾರ ಮಾಡಲಾಯಿತು. ಈ ಹಿಂದೆ ಶೇ 8.5ರಷ್ಟು ಬಡ್ಡಿ ದರ ನೀಡಲಾಗಿತ್ತು. 1977-78ರ ನಂತರದಲ್ಲಿ ಈ ಶೇ 8.1ರ ಬಡ್ಡಿ ದರವು ಅತ್ಯಂತ ಕನಿಷ್ಠ ಮಟ್ಟದ ಬಡ್ಡಿದರ ಆಗಿದೆ. ಈ ಹಿಂದೆ ಶೇ 8ರಷ್ಟಿತ್ತು. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಕಾರ, 2021-22ನೇ ಸಾಲಿನಲ್ಲಿ ಶೇ 8.1ರಷ್ಟು ಬಡ್ಡಿಯನ್ನು ಜಮೆ ಮಾಡುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಪ್ರಸ್ತಾವವನ್ನು ಒಪ್ಪಿಗೆ ಪಡೆಯುವುದರ ಸಲುವಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗಿದೆ.

2021ರ ಮಾರ್ಚ್​ನಲ್ಲಿ ಕೇಂದ್ರೀಯ ಮಂಡಳಿ ಟ್ರಸ್ಟಿಗಳು (CBT) 2020-21ನೇ ಸಾಲಿನಲ್ಲಿ ಶೇ 8.5ರ ಬಡ್ಡಿ ದರವನ್ನು ನಿರ್ಧರಿಸಿದ್ದರು. ಸಿಬಿಟಿಯಲ್ಲಿ ಸರ್ಕಾರ, ಉದ್ಯೋಗಿಗಳು ಮತ್ತು ಸಿಬ್ಬಂದಿ ಪ್ರತಿನಿಧಿಗಳು ಭಾಗವಹಿಸುತ್ತಾರೆ. ಇದರ ನೇತೃತ್ವವನ್ನು ಕಾರ್ಮಿಕ ಸಚಿವರು ವಹಿಸುತ್ತಾರೆ. 2019-20ರಲ್ಲಿ ಏಳು ವರ್ಷದ ಕನಿಷ್ಠ ಮಟ್ಟ ಶೇ 8.5ಕ್ಕೆ ಬಡ್ಡಿ ದರ ಕುಸಿಯಿತು. ಅದಕ್ಕೂ ಮುನ್ನ 2018-19ರ ಸಾಲಿನಲ್ಲಿ ಪಿಎಫ್​ ಬಡ್ಡಿ ದರ ಶೇ 8.65 ಇತ್ತು. 2019-20ರಲ್ಲಿ ನೀಡಿದ್ದ ಬಡ್ಡಿ ದರದ ಮೊತ್ತ ಶೇ 8.5 2012-13ರ ನಂತರದ ಕನಿಷ್ಠ ಮಟ್ಟವಾಗಿತ್ತು. ಇಪಿಎಫ್​ಒದಿಂದ ಅದರ ಚಂದಾದಾರರಿಗೆ 2016-17ರಲ್ಲಿ ಶೇ 8.65 ಹಾಗೂ 2017-18ರಲ್ಲಿ ಶೇ 8.55ರಷ್ಟು ಬಡ್ಡಿ ನೀಡಲಾಗಿದೆ.

2015-16ರಲ್ಲಿ ಬಡ್ಡಿ ದರ ಸ್ವಲ್ಪ ಮಟ್ಟಿಗೆ ಹೆಚ್ಚು, ಅಂದರೆ ಶೇ 8.8ರಷ್ಟಿತ್ತು. 2013-14 ಹಾಗೂ 2014-15ರಲ್ಲಿ ಶೇ 8.75 ಆಯಿತು. 2012-13ರಲ್ಲಿ ಮಂಜೂರು ಮಾಡಿದ್ದ ಶೇ 8.5ಕ್ಕಿಂತ ಹೆಚ್ಚಾಗಿತ್ತು. 2011-12ರಲ್ಲಿ ಬಡ್ಡಿ ದರದ ಪ್ರಮಾಣ ಶೇ 8.25ರಷ್ಟಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Universal Account Number: ನಿಮ್ಮ ಇಪಿಎಫ್ ಖಾತೆಯ ಯುಎಎನ್ ಅನ್ನು ಕಂಡುಹಿಡಿಯುವುದು ಹೇಗೆ

Published On - 8:14 pm, Fri, 3 June 22

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ