Universal Account Number: ನಿಮ್ಮ ಇಪಿಎಫ್ ಖಾತೆಯ ಯುಎಎನ್ ಅನ್ನು ಕಂಡುಹಿಡಿಯುವುದು ಹೇಗೆ
ಎಂಪ್ಲಾಯೀಸ್ ಪ್ರಾವಿಡೆಂಟ್ ಖಾತೆಯ ಯುಎಎನ್ ಕಂಡು ಹಿಡಿಯುವುದು ಹೇಗೆ ಎಂಬುದರ ಬಗ್ಗೆ ಹಂತಹಂತವಾದ ವಿವರಣೆ ಇಲ್ಲಿದೆ.
ಇಪಿಎಫ್‌ಗೆ ಹಣ ಜಮೆ ಮಾಡುವ ಪ್ರತಿಯೊಬ್ಬ ವ್ಯಕ್ತಿಗೂ 12-ಅಂಕಿಯ ವಿಶಿಷ್ಟ ಸಂಖ್ಯೆಯನ್ನು ಯೂನಿವರ್ಸಲ್ ಅಕೌಂಟ್ ನಂಬರ್ ಎಂದು ನೀಡಲಾಗುತ್ತದೆ. ಇಪಿಎಫ್‌ಒ ನಿಮಗೆ ಯೂನಿವರ್ಸಲ್ ಅಕೌಂಟ್ ನಂಬರ್ (UAN) ಅನ್ನು ನೀಡಲಾಗುತ್ತದೆ. ವಿವಿಧ ಸಂಸ್ಥೆಗಳು/ಕಂಪೆನಿಗಳು ನೀಡಿದ ವ್ಯಕ್ತಿಯ ಎಲ್ಲ ಸದಸ್ಯ ಐಡಿಗಳಿಗೆ ಯುಎಎನ್ ಕೇಂದ್ರ ಜೀವಾಳವಾಗಿ ಕಾರ್ಯ ನಿರ್ವಹಿಸುತ್ತದೆ. ಉದ್ಯೋಗಿಗಳ ವೃತ್ತಿ ಜೀವನದುದ್ದಕ್ಕೂ ಎಷ್ಟು ಹುದ್ದೆಗಳನ್ನು ಹೊಂದಿದ್ದರೂ ಯುಎಎನ್ ಒಂದೇ ಆಗಿರುತ್ತದೆ.
ಹಂತ 1: ಅಧಿಕೃತ ಇಪಿಎಫ್‌ಒ ವೆಬ್‌ಸೈಟ್‌ಗೆ ಭೇಟಿ ನೀಡಿ: https://unifiedportal-mem.epfindia.gov.in/memberinterface/
ಹಂತ 2: ನೋ (know) ಯುವರ್ ಯುಎಎನ್ ಸ್ಥಿತಿಯನ್ನು ಕ್ಲಿಕ್ ಮಾಡಿ
ಹಂತ 3: ಡ್ರಾಪ್‌ಡೌನ್ ಮೆನುವಿನಿಂದ ರಾಜ್ಯ ಮತ್ತು ಇಪಿಎಫ್‌ಒ ಕಚೇರಿಯನ್ನು ಆಯ್ಕೆ ಮಾಡಿ.
ಹಂತ 4: ನಿಮ್ಮ ಪಿಎಫ್ ಸಂಖ್ಯೆ, ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ ಮುಂತಾದ ವೈಯಕ್ತಿಕ ವಿವರಗಳನ್ನು ನಮೂದಿಸಿ
ಗಮನಿಸಿ: ಸ್ಯಾಲರಿ ಸ್ಲಿಪ್ ನಿಮಗೆ ಪಿಎಫ್ ಸಂಖ್ಯೆ/ಸದಸ್ಯರ ಐಡಿಯನ್ನು ಒದಗಿಸುತ್ತದೆ.
ಹಂತ 5: ಕ್ಯಾಪ್ಚಾ ನಮೂದಿಸಿ ಮತ್ತು ‘ಅಧಿಕೃತ ಪಿನ್ ಪಡೆಯಿರಿ’ ಕ್ಲಿಕ್ ಮಾಡಿ
ಹಂತ 6: UAN ಸಂಖ್ಯೆಯನ್ನು ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
ಹಂತ 7: PIN ನಮೂದಿಸಿದ ನಂತರ ‘OTP ಮೌಲ್ಯೀಕರಿಸಿ ಮತ್ತು UAN ಪಡೆಯಿರಿ’ ಬಟನ್ ಅನ್ನು ಕ್ಲಿಕ್ ಮಾಡಿ.
ನಿಮ್ಮ ಯೂನಿವರ್ಸಲ್ ಅಕೌಂಟ್ ನಂಬರ್ ಅನ್ನು ನೀವು ಒದಗಿಸಿದ ಫೋನ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
ಯುಎಎನ್ ಅನ್ನು ಹೇಗೆ ಸಕ್ರಿಯಗೊಳಿಸುವುದು?
ಯುಎಎನ್ ಆಧಾರಿತ ಸದಸ್ಯ ಪೋರ್ಟಲ್ ವೆಬ್‌ಸೈಟ್ ಆಗಿರುವ https://uanmembers.epfoservices.in/ಗೆ ಭೇಟಿ ನೀಡುವ ಮೂಲಕ ಸದಸ್ಯರು ತಮ್ಮ ಯುಎಎನ್ ಅನ್ನು ಸಕ್ರಿಯಗೊಳಿಸಬಹುದು. ಯುಎಎನ್ ಸದಸ್ಯ ಪೋರ್ಟಲ್‌ನಲ್ಲಿ ಅದನ್ನು ಸಕ್ರಿಯಗೊಳಿಸಲು, ಸದಸ್ಯರು ಯುಎಎನ್, ಮೊಬೈಲ್ ಸಂಖ್ಯೆ ಮತ್ತು ಸದಸ್ಯ ಐಡಿ ಸುಲಭವಾಗಿ ಲಭ್ಯವಿರಬೇಕು. ಒಮ್ಮೆ ಸಕ್ರಿಯಗೊಳಿಸಿದ ನಂತರ, ಸದಸ್ಯರು ತಮ್ಮ ಯುಎಎನ್ ಅನ್ನು ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್‌ನಂತೆ ನಮೂದಿಸುವ ಮೂಲಕ ಯುಎಎನ್ ಸದಸ್ಯ ಪೋರ್ಟಲ್ ಅನ್ನು ಸಂಪರ್ಕಿಸಬಹುದು, ಅದನ್ನು ಅವರೇ ಜನರೇಟ್ ಮಾಡಿರುತ್ತಾರೆ.
ಹಂತ 1: url- http://uanmembers.epfoservices.in/uan_reg_form.phpಗೆ ಹೋಗಿ
ಹಂತ 2: ಯುಎಎನ್ ಸಂಖ್ಯೆಯನ್ನು ನಮೂದಿಸಿ
ಹಂತ 3: ಯಾವುದೇ ಪಾಸ್‌ವರ್ಡ್ ನಮೂದಿಸಿ
ಹಂತ 4: ಇತರ ವಿವರಗಳನ್ನು ನಮೂದಿಸಿ ಮತ್ತು ಪಿಎಫ್ ಖಾತೆ ಸಂಖ್ಯೆಯನ್ನು ನಮೂದಿಸಿ
ಹಂತ 5: ದೃಢೀಕರಣ ಪಿನ್ ಪಡೆಯಿರಿ
ನೀವು ಎಸ್ಸೆಮ್ಮೆಸ್ ಮೂಲಕ ಸ್ವೀಕರಿಸಿದ PIN ಅನ್ನು ಒಮ್ಮೆ ನಮೂದಿಸಿದ ನಂತರ ನಿಮ್ಮ ಯುಎಎನ್ ಖಾತೆಯನ್ನು ಯಶಸ್ವಿಯಾಗಿ ಸಕ್ರಿಯಗೊಳಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Tax On EPF: ಇಪಿಎಫ್ ಉಳಿತಾಯಕ್ಕೆ ಹೊಸ ತೆರಿಗೆ ಲೆಕ್ಕಾಚಾರದ ಬಗ್ಗೆ 7 ಅಂಶಗಳಲ್ಲಿ ವಿವರಣೆ