Donald Trump income: ಬಿಸಿನೆಸ್ ಹಿನ್ನೆಲೆಯ ಡೊನಾಲ್ಡ್ ಟ್ರಂಪ್ ಬಳಿ ಇರೋ ಆಸ್ತಿ ಎಷ್ಟು? ಇಲ್ಲಿದೆ ಡೀಟೇಲ್ಸ್

|

Updated on: Nov 06, 2024 | 5:56 PM

Donald Trump and his businesses: ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ 47ನೇ ಅಧ್ಯಕ್ಷರಾಗುತ್ತಿದ್ದಾರೆ. 2017ರಲ್ಲಿ ಮೊದಲ ಬಾರಿಗೆ ಯುಎಸ್ ಪ್ರೆಸಿಡೆಂಟ್ ಆಗಿದ್ದರು. 2024ರಲ್ಲಿ ಎರಡನೇ ಬಾರಿ ಅಧ್ಯಕ್ಷರಾಗಿದ್ದಾರೆ. ಬಿಸಿನೆಸ್ ಹಿನ್ನೆಲೆಯ ಅವರ ಬಳಿ ಎಷ್ಟು ಬಿಸಿನೆಸ್ ಇದೆ, ಅವರ ಆದಾಯ ಮೂಲಗಳೇನು ಎನ್ನುವ ವಿವರ ಇಲ್ಲಿದೆ...

Donald Trump income: ಬಿಸಿನೆಸ್ ಹಿನ್ನೆಲೆಯ ಡೊನಾಲ್ಡ್ ಟ್ರಂಪ್ ಬಳಿ ಇರೋ ಆಸ್ತಿ ಎಷ್ಟು? ಇಲ್ಲಿದೆ ಡೀಟೇಲ್ಸ್
ಡೊನಾಲ್ಡ್ ಟ್ರಂಪ್
Follow us on

ನವದೆಹಲಿ, ನವೆಂಬರ್ 6: ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರಾದಾಗ ಸಾಕಷ್ಟು ಜನರಲ್ಲಿ ಅಚ್ಚರಿಯ ಹುಬ್ಬೇರುವಂತೆ ಮಾಡಿದ್ದರು. ರಾಜಕೀಯ ಹಿನ್ನೆಲೆ ಇಲ್ಲದ, ಮತ್ತು ಅಪ್ಪಟ ಬಿಸಿನೆಸ್ ಹಿನ್ನೆಲೆ ಇರುವ ವ್ಯಕ್ತಿಯೊಬ್ಬರು ಯುಎಸ್ ಅಧಿಕಾರ ಸಾಮ್ರಾಜ್ಯದ ಚುಕ್ಕಾಣಿ ಹಿಡಿದಿದ್ದು ಅದೇ ಮೊದಲು. ಡೊನಾಲ್ಡ್ ಟ್ರಂಪ್ ಅಪ್ಪಟ ಬಿಸಿನೆಸ್ ಹಿನ್ನೆಲೆಯಿಂದ ಬಂದವರು. 78 ವರ್ಷದ ಟ್ರಂಪ್ ಅವರ ತಂದೆ ಫ್ರೆಡ್ ಟ್ರಂಪ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಅಪ್ಪನಿಂದ ಇವರು ರಿಯಲ್ ಎಸ್ಟೇಟ್ ವ್ಯವಹಾರವನ್ನು ಬಳುವಳಿಯಾಗಿ ಪಡೆದಿದ್ದರು.

ಡೊನಾಲ್ಡ್ ಟ್ರಂಪ್ ಬಳಿ ಇರುವ ಆಸ್ತಿ ಎಷ್ಟು?

ಫೋರ್ಬ್ಸ್ ಅಂದಾಜು ಪ್ರಕಾರ ಡೊನಾಲ್ಡ್ ಟ್ರಂಪ್ ಅವರ ನಿವ್ವಳ ಆಸ್ತಿ ಮೌಲ್ಯ 6.6 ಬಿಲಿಯನ್ ಡಾಲರ್. ಅಂದರೆ ಸುಮಾರು 55,000 ಕೋಟಿ ರೂ ಇರಬಹುದು. ನಿವ್ವಳ ಆಸ್ತಿ ಎಂದರೆ ಸಾಲ ಕಳೆದು ಉಳಿಯುವ ಆಸ್ತಿ.

ಇನ್ನು, ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಡೊನಾಲ್ಡ್ ಟ್ರಂಪ್ ಅವರ ಆಸ್ತಿ ಮೌಲ್ಯ 7.7 ಬಿಲಿಯನ್ ಡಾಲರ್.

ಡೊನಾಲ್ಡ್ ಟ್ರಂಪ್ ಅವರ ಬಿಸಿನೆಸ್ ವಿವಿಧ ಕ್ಷೇತ್ರಗಳಲ್ಲಿ ಹರಡಿದೆ. ರಿಯಲ್ ಎಸ್ಟೇಟ್ ವಲಯದಿಂದ ಹಿಡಿದು ಮಾಧ್ಯಮದವರೆಗೂ ಬಿಸಿನೆಸ್ ಹೊಂದಿದ್ದಾರೆ.

ಇದನ್ನೂ ಓದಿ: US Presidential Poll: ಡೊನಾಲ್ಡ್ ಟ್ರಂಪ್ ಗೆಲುವು, ಐತಿಹಾಸಿಕ ವಿಜಯಕ್ಕಾಗಿ ಸ್ನೇಹಿತನ ಅಭಿನಂದಿಸಿದ ಮೋದಿ

ಅಮೆರಿಕದ ವಿವಿಧೆಡೆ ಹಲವು ಹೋಟೆಲ್​ಗಳು, ಲಕ್ಷುರಿ ವಸತಿಗಳು, ಗೋಲ್ಫ್ ಕೋರ್ಸ್​ಗಳನ್ನು ಟ್ರಂಪ್ ಹೊಂದಿದ್ದಾರೆ. ಮನ್​ಹಾಟ್ಟನ್​ನಲ್ಲಿರುವ ಟ್ರಂಪ್ ಟವರ್, ಫ್ಲೋರಿಡಾದಲ್ಲಿರುವ ಮಾರಾ ಲಾಗೋ ಎಸ್ಟೇಟ್ ಮೊದಲಾದವು ಇದರಲ್ಲಿವೆ.

ಇನ್ನೂ ಹಲವು ಪ್ರತಿಷ್ಠಿತ ಪ್ರಾಪರ್ಟಿಗಳಲ್ಲಿ ಟ್ರಂಪ್ ಅವರ ಹೂಡಿಕೆ ಇದೆ. ಟ್ರೂತ್ ಸೋಷಿಯಲ್ ಎನ್ನುವ ಹೊಸ ಬ್ರ್ಯಾಂಡ್ ಸೋಷಿಯಲ್ ಮೀಡಿಯಾದ ಮಾಲೀಕರಾಗಿದ್ದಾರೆ.

ಟ್ರಂಪ್ ಅವರು ಕ್ರಿಪ್ಟೋಕರೆನ್ಸಿಯಲ್ಲಿ 1 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದಾರೆ. ಎನ್​ಎಫ್​ಟಿ ಟೋಕನ್​ಗಳ ಮೂಲಕ ಆದಾಯ ಗಳಿಸಿದ್ದಾರೆ. ಹಲವು ವಸ್ತುಗಳ ಪ್ರಚಾರಕ್ಕೆ ತಮ್ಮ ಹೆಸರನ್ನು ಬಳಸಿಕೊಳ್ಳಲು ಲೈಸೆನ್ಸ್ ಕೊಡುವ ಮೂಲಕ ಟ್ರಂಪ್ ಒಂದಷ್ಟು ಆದಾಯ ಗಳಿಸುತ್ತಿದ್ದಾರೆ. ಈ ಬ್ರ್ಯಾಂಡಿಂಗ್​ನಿಂದಲೇ ಟ್ರಂಪ್ 3 ಲಕ್ಷ ಡಾಲರ್ ಹಣ ಗಳಿಸಿದ್ದಾರೆ.

ಇದನ್ನೂ ಓದಿ: US Election Result: ಚುನಾವಣಾ ಗೆಲುವಿನ ಬಳಿಕ ಮೊದಲ ಭಾಷಣದಲ್ಲಿ ಡೊನಾಲ್ಡ್​ ಟ್ರಂಪ್ ಹೇಳಿದ್ದೇನು?

ಟ್ರಂಪ್ ಅವರು ಆರ್ಟ್ ಆಫ್ ಡೀಲ್ ಎನ್ನುವ ಪುಸ್ತಕ ಬರೆದಿದ್ದು ಅದರ ರಾಯಲ್ಟಿಯಿಂದ ಆದಾಯ ಗಳಿಸುತ್ತಾರೆ. ಲೆಟರ್ಸ್ ಟು ಟ್ರಂಪ್ ಎನ್ನುವ ಪುಸ್ತಕದ ಮಾರಾಟದಿಂದ ಟ್ರಂಪ್ 45 ಲಕ್ಷ ಡಾಲರ್ ಹಣ ಗಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:48 pm, Wed, 6 November 24