AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರೇಡ್ ಡೀಲ್; ಫ್ಯಾಕ್ಟ್ ಶೀಟ್​ನಲ್ಲಿ ಬದಲಾವಣೆ; ಭಾರತದ ಒತ್ತಡಕ್ಕೆ ಬಗ್ಗಿತಾ ಅಮೆರಿಕ?

India US trade deal, US makes changes in its fact sheet: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಸಂಬಂಧ ಅಮೆರಿಕ ಈ ಹಿಂದೆ ಬಿಡುಗಡೆ ಮಾಡಿದ್ದ ಫ್ಯಾಕ್ಟ್ ಶೀಟ್ ಅನ್ನು ಪರಿಷ್ಕರಿಸಿದೆ. ಭಾರತದಿಂದ ಟ್ಯಾರಿಫ್ ತೆಗೆದುಹಾಕಲಾಗುವ ಸರಕುಗಳಲ್ಲಿ ಬೇಳೆಕಾಳುಗಳನ್ನು ಸೇರಿಸಲಾಗಿತ್ತು. ಅದನ್ನು ಕೈಬಿಡಲಾಗಿದೆ. 500 ಬಿಲಿಯನ್ ಡಾಲರ್ ಮೌಲ್ಯದ ಅಮೆರಿಕದ ಸರಕುಗಳನ್ನು ಆಮದು ಮಾಡಿಕೊಳ್ಳಲು ಭಾರತ ಬದ್ಧವಾಗಿದೆ ಎಂದಿದ್ದನ್ನು ಉದ್ದೇಶಿಸಿದೆ ಎಂದು ತಿದ್ದಲಾಗಿದೆ.

ಟ್ರೇಡ್ ಡೀಲ್; ಫ್ಯಾಕ್ಟ್ ಶೀಟ್​ನಲ್ಲಿ ಬದಲಾವಣೆ; ಭಾರತದ ಒತ್ತಡಕ್ಕೆ ಬಗ್ಗಿತಾ ಅಮೆರಿಕ?
ಭಾರತ ಅಮೆರಿಕ ವ್ಯಾಪಾರ ಒಪ್ಪಂದ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 11, 2026 | 12:03 PM

Share

ನವದೆಹಲಿ, ಫೆಬ್ರುವರಿ 11: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು (US India trade deal) ಈಗ ಭಾರತೀಯ ರೈತರ ಅಸ್ತಿತ್ವದ ಚರ್ಚೆ ಹುಟ್ಟುಹಾಕಿದೆ. ಈ ಒಪ್ಪಂದದ ಮೂಲಕ ಭಾರತದ ಕೃಷಿ ಕ್ಷೇತ್ರವನ್ನು ಸರ್ಕಾರ ಅಮೆರಿಕಕ್ಕೆ ಮಾರಿಬಿಟ್ಟಿದೆ ಎಂದು ಆರೋಪಿಸಿ ವಿವಿಧ ರೈತ ಸಂಘಟನೆಗಳು ಪ್ರತಿಭಟನೆಗಳಿಗೆ ಸಜ್ಜಾಗಿವೆ. ಕೃಷಿ ಮತ್ತು ಡೈರಿ ಸೆಕ್ಟರ್​ಗಳನ್ನು ತೆರೆದಿಡುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ಹೇಳುತ್ತಿದ್ದರೂ ಟ್ರಂಪ್ ಸರ್ಕಾರದ ಫ್ಯಾಕ್ಟ್ ಶೀಟ್​ನಲ್ಲಿ ಕೃಷಿ ಉತ್ಪನ್ನಗಳನ್ನು ಸೇರಿಸಲಾಗಿರುವುದು ರೈತ ಸಂಘಟನೆಗಳ ಅನುಮಾನ ಬಲಗೊಳ್ಳಲು ಕಾರಣವಾಗಿದೆ. ಈ ಮಧ್ಯೆ, ಅಮೆರಿಕ ಸರ್ಕಾರವು ಈ ಒಪ್ಪಂದದ ಫ್ಯಾಕ್ಟ್ ಶೀಟ್​ನಲ್ಲಿ (US fact sheet) ಸದ್ದಿಲ್ಲದೆ ಬದಲಾವಣೆ ಮಾಡಿದೆ. ಗೊಂದಲಕ್ಕೀಡು ಮಾಡಿದ್ದ ಕೆಲ ವಿಚಾರಗಳಲ್ಲಿ ಸ್ಪಷ್ಟನೆ ಕೊಟ್ಟಿದೆ. ಅಮೆರಿಕದ ಫ್ಯಾಕ್ಟ್ ಶೀಟ್​ನಲ್ಲಿ ಮಾಡಲಾದ ಕೆಲ ಬದಲಾವಣೆಗಳ ವಿವರ ಇಲ್ಲಿದೆ…

ಕಾಳುಗಳು ಈ ಒಪ್ಪಂದದಲ್ಲಿ ಇರುವುದಿಲ್ಲ…

‘ಒಣಗಿಸಿದ ಡಿಸ್ಟಿಲರ್ಸ್ ಗ್ರೇನ್ (ಡಿಡಿಜಿ, ಪಶು ಆಹಾರ), ಕೆಂಪು ಜೋಳ, ಮರ ಬೀಜಗಳು (ಬಾದಾಮಿ ಇತ್ಯಾದಿ), ಹಣ್ಣು, ಕೆಲ ಕಾಳುಗಳು (Pulses), ಸೋಯಾಬೀನ್ ಎಣ್ಣೆ, ವೈನ್ ಮತ್ತು ಮದ್ಯ, ಹೆಚ್ಚುವರಿ ಉತ್ಪನ್ನಗಳು ಸೇರಿದಂತೆ ವಿಸ್ತೃತ ಶ್ರೇಣಿಯ ಅಮೆರಿಕನ್ ಆಹಾರ ಮತ್ತು ಕೃಷಿ ಉತ್ಪನ್ನಗಳು ಹಾಗೂ ಎಲ್ಲಾ ಔದ್ಯಮಿಕ ಸರಕುಗಳ ಮೇಲೆ ಭಾರತವು ಟ್ಯಾರಿಫ್ ಅನ್ನು ತೆಗೆದುಹಾಕುತ್ತದೆ ಅಥವಾ ಕಡಿಮೆ ಮಾಡುತ್ತದೆ’ ಎಂದು ಫ್ಯಾಕ್ಟ್ ಶೀಟ್​ನಲ್ಲಿ ಮೊದಲು ಬರೆಯಲಾಗಿತ್ತು.

ಅಪ್​ಡೇಟ್ ಮಾಡಲಾಗಿರುವ ಫ್ಯಾಕ್ಟ್ ಶೀಟ್​ನಲ್ಲಿ ಈ ಮೇಲಿನ ಹೇಳಿಕೆಯಲ್ಲಿ ‘ಕೆಲ ಕಾಳುಗಳು’ ಎನ್ನುವ ಪ್ರಸ್ತಾಪವನ್ನು ತೆಗೆದುಹಾಕಲಾಗಿದೆ.

ಇದನ್ನೂ ಓದಿ: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬಾಂಗ್ಲಾದೇಶ; ಟ್ಯಾರಿಫ್ ಶೇ. 19ಕ್ಕೆ ಇಳಿಕೆ

ಅಮೆರಿಕನ್ ಉತ್ಪನ್ನಗಳನ್ನು ಖರೀದಿಸುವ ಬದ್ಧತೆ ಅಲ್ಲ ಉದ್ದೇಶ ಮಾತ್ರ…

‘500 ಬಿಲಿಯನ್ ಡಾಲರ್​ಗೂ ಅಧಿಕ ಮೌಲ್ಯದ ಇಂಧನ, ಮಾಹಿತಿ, ಸಂವಹನ ತಂತ್ರಜ್ಞಾನ, ಕೃಷಿ, ಕಲ್ಲಿದ್ದಲು ಹಾಗೂ ಇತರ ಉತ್ಪನ್ನಗಳನ್ನು ಅಮೆರಿಕದಿಂದ ಖರೀದಿಸಲು ಭಾರತ ಬದ್ದವಾಗಿರುತ್ತದೆ’ ಎಂದು ಮತ್ತೊಂದು ಟರ್ಮ್ಸ್ ಆಫ್ ಅಗ್ರೀಮೆಂಟ್​ನಲ್ಲಿ ತಿಳಿಸಲಾಗಿತ್ತು. ಅದರಲ್ಲೂ ಬದಲಾವಣೆ ಮಾಡಲಾಗಿದೆ.

ಇಲ್ಲಿ ಪಟ್ಟಿ ಮಾಡಿದ ಇಂಧನ, ಕಲ್ಲಿದ್ದಲು ಮತ್ತಿತರ ಉತ್ಪನ್ನಗಳ ಪಟ್ಟಿಯಿಂದ ಕೃಷಿ ಹೆಸರನ್ನು ಕೈಬಿಡಲಾಗಿದೆ. ಹಾಗೆಯೇ, 500 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಖರೀದಿಸಲು ಭಾರತ ಬದ್ಧವಾಗಿದೆ ಎಂಬುದನ್ನು ಬದಲಿಸಿ, ಸರಕುಗಳನ್ನು ಖರೀದಿಸಲು ಉದ್ದೇಶಿಸಿದೆ ಎಂದು ಮಾಡಲಾಗಿದೆ.

ಡಿಜಿಟಲ್ ಸರ್ವಿಸ್ ಟ್ಯಾಕ್ಸ್ ತೆಗೆದುಹಾಕುವುದಿಲ್ಲ…

ಭಾರತ ತನ್ನ ಡಿಜಿಟಲ್ ಸರ್ವಿಸಸ್ ಟ್ಯಾಕ್ಸ್​ಗಳನ್ನು ತೆಗೆದುಹಾಕುತ್ತದೆ. ಎಲೆಕ್ಟ್ರಾನಿಕ್ ಟ್ರಾನ್ಸ್​ಮಿಶನ್​ಗಳ ಮೇಲೆ ಆಮದು ಸುಂಕ ವಿಧಿಸುವುದನ್ನು ನಿರ್ಬಂಧಿಸುವ ನಿಯಮಗಳನ್ನೂ ಒಳಗೊಂಡಂತೆ, ಪ್ರಬಲ ದ್ವಿಪಕ್ಷೀಯ ಡಿಜಿಟಲ್ ಟ್ರೇಡ್ ನಿಯಮಗಳನ್ನು ರೂಪಿಸಲು ಸಂಧಾನಕ್ಕೆ ಭಾರತ ಬದ್ಧವಾಗಿದೆ’ ಎಂದು ಈ ಮೊದಲು ಬರೆಯಲಾಗಿತ್ತು.

ಇದನ್ನೂ ಓದಿ: ಹಲವು ಇಂಧನದ ಮೂಲಗಳನ್ನು ಅವಲಂಬಿಸುವುದು ಭಾರತದ ಕಾರ್ಯತಂತ್ರ; ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಪ್ರತಿಕ್ರಿಯೆ

ಇದರಲ್ಲಿ ಡಿಜಿಟಲ್ ಸರ್ವಿಸ್ ಟ್ಯಾಕ್ಸ್ ಅನ್ನು ತೆಗೆದುಹಾಕಲಾಗುತ್ತದೆ ಎನ್ನುವುದನ್ನು ತೆಗೆದುಹಾಕಲಾಗಿದೆ. ಈ ಮೇಲಿನ ಮೂರು ಬದಲಾವಣೆಗಳು ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತದ ನಿಲುವನ್ನು ನಿಚ್ಚಳವಾಗಿ ತೋರಿಸುತ್ತದೆ.

ಅಮೆರಿಕ ಅಧ್ಯಕ್ಷರ ಗೃಹ ಕಚೇರಿಯಾದ ವೈಟ್​ಹೌಸ್​ನಿಂದ ಪ್ರಕಟವಾದ ಫ್ಯಾಕ್ಟ್ ಶೀಟ್​ನ ಲಿಂಕ್ ಇಲ್ಲಿದೆ:

www.whitehouse.gov/fact-sheets/2026/02/fact-sheet-the-united-states-and-india-announce-historic-trade-deal/

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:55 am, Wed, 11 February 26

Follow Us
ಕನ್ನಡ ಚಿತ್ರರಂಗಕ್ಕೆ 93ರ ಸಂಭ್ರಮ: ಒಂದೇ ವೇದಿಕೆಯಲ್ಲಿ ಸೆಲೆಬ್ರಿಟಿಗಳು
ಕನ್ನಡ ಚಿತ್ರರಂಗಕ್ಕೆ 93ರ ಸಂಭ್ರಮ: ಒಂದೇ ವೇದಿಕೆಯಲ್ಲಿ ಸೆಲೆಬ್ರಿಟಿಗಳು
ದರ್ಶನ್ ಜೊತೆ ‘ಭೀಮ ತೀರದಲ್ಲಿ’ ಸಿನಿಮಾ ಯಾಕೆ ಮಾಡಲಿಲ್ಲ? ಸಿಕ್ತು ಉತ್ತರ
ದರ್ಶನ್ ಜೊತೆ ‘ಭೀಮ ತೀರದಲ್ಲಿ’ ಸಿನಿಮಾ ಯಾಕೆ ಮಾಡಲಿಲ್ಲ? ಸಿಕ್ತು ಉತ್ತರ
ಇರಾನ್​ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ
ಇರಾನ್​ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ
ಇರಾನ್‌ನ ಸುಪ್ರೀಂ ಲೀಡರ್ ಆಯ್ಕೆ ಸಮಿತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ
ಇರಾನ್‌ನ ಸುಪ್ರೀಂ ಲೀಡರ್ ಆಯ್ಕೆ ಸಮಿತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ
ಖಮೇನಿ ಸಾವಿನ ಕುರಿತಾದ ಪ್ರತಿಭಟನೆಗಳನ್ನು ಖಂಡಿಸಿದ ಮುಂಬೈನ ಶಿಯಾ ನಾಯಕ
ಖಮೇನಿ ಸಾವಿನ ಕುರಿತಾದ ಪ್ರತಿಭಟನೆಗಳನ್ನು ಖಂಡಿಸಿದ ಮುಂಬೈನ ಶಿಯಾ ನಾಯಕ
ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು
ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ನಭೋಮಂಡಲದಲ್ಲಿ ಚಂದ್ರಗ್ರಹಣದ ಅದ್ಭುತ ಕ್ಷಣ
ನಭೋಮಂಡಲದಲ್ಲಿ ಚಂದ್ರಗ್ರಹಣದ ಅದ್ಭುತ ಕ್ಷಣ
ಪ್ರಧಾನಿ ಮುಂದೆ ಕಠಿಣ ಸವಾಲುಗಳು: ಮೋದಿ ಬಗ್ಗೆ ಪಂಡಿತರ ಸ್ಫೋಟಕ ಭವಿಷ್ಯ
ಪ್ರಧಾನಿ ಮುಂದೆ ಕಠಿಣ ಸವಾಲುಗಳು: ಮೋದಿ ಬಗ್ಗೆ ಪಂಡಿತರ ಸ್ಫೋಟಕ ಭವಿಷ್ಯ