AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬಾಂಗ್ಲಾದೇಶ; ಟ್ಯಾರಿಫ್ ಶೇ. 19ಕ್ಕೆ ಇಳಿಕೆ

US reduces tariffs on Bangladesh to 19pc: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಬಾಂಗ್ಲಾದೇಶ ಸಹಿ ಹಾಕಿದೆ. ಅಮೆರಿಕವು ಪ್ರತಿಸುಂಕವನ್ನು ಶೇ. 19ಕ್ಕೆ ಇಳಿಸಿದೆ. ಅಮೆರಿಕದ ಕಚ್ಛಾ ಸಾಮಗ್ರಿಗಳನ್ನು ಉಪಯೋಗಿಸಿ ತಯಾರಾದ ಬಟ್ಟೆಗಳಿಗೆ ಅಮೆರಿಕವು ಟ್ಯಾರಿಫ್ ವಿನಾಯಿತಿ ನೀಡಲಿದೆ. ಬಾಂಗ್ಲಾದೇಶವು ತನ್ನ ಜವಳಿ ಉತ್ಪನ್ನಗಳಿಗೆ ಕಚ್ಚಾ ಸಾಮಗ್ರಿಗಳನ್ನು ಚೀನಾದಿಂದ ಹೆಚ್ಚಾಗಿ ತರಿಸಿಕೊಳ್ಳುತ್ತದೆ. ಅದನ್ನು ತಪ್ಪಿಸಲು ಅಮೆರಿಕ ಈ ತಂತ್ರ ಮಾಡಿರಬಹುದು.

ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬಾಂಗ್ಲಾದೇಶ; ಟ್ಯಾರಿಫ್ ಶೇ. 19ಕ್ಕೆ ಇಳಿಕೆ
ಅಮೆರಿಕ ಬಾಂಗ್ಲಾದೇಶ ವ್ಯಾಪಾರ ಒಪ್ಪಂದ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 10, 2026 | 12:02 PM

Share

ಢಾಕಾ, ಫೆಬ್ರುವರಿ 10: ಅಮೆರಿಕ ಮತ್ತು ಬಾಂಗ್ಲಾದೇಶ ಮಧ್ಯೆ ವ್ಯಾಪಾರ ಒಪ್ಪಂದ (US Bangladesh trade deal) ಏರ್ಪಟ್ಟಿದೆ. ಎರಡೂ ದೇಶಗಳು ಒಪ್ಪಂದಕ್ಕೆ ಸಹಿಹಾಕಿವೆ. ಅದರ ಪ್ರಕಾರ, ಬಾಂಗ್ಲಾದೇಶಕ್ಕೆ ವಿಧಿಸುವ ಟ್ಯಾರಿಫ್ ಅನ್ನು ಅಮೆರಿಕ ಶೇ. 19ಕ್ಕೆ ಇಳಿಸಲಿದೆ. ಅಮೆರಿಕದ ಸಾಮಗ್ರಿಗಳಿಂದ ತಯಾರಾದ ಕೆಲ ಜವಳಿ ಮತ್ತು ಉಡುಪುಗಳ ಮೇಲೆ ಅಮೆರಿಕ ಟ್ಯಾರಿಫ್​ನಿಂದ ಪೂರ್ಣ ವಿನಾಯಿತಿ ಕೊಡಲಿದೆ.

ಇದಕ್ಕೆ ಬದಲಾಗಿ, ಅಮೆರಿಕದ ಹೆಚ್ಚಿನ ಉತ್ಪನ್ನಗಳಿಗೆ ಬಾಂಗ್ಲಾದೇಶದ ಮಾರುಕಟ್ಟೆಗೆ ಮುಕ್ತ ಪ್ರವೇಶ ಸಿಗಲಿದೆ. ಸೋಯಾ ಉತ್ಪನ್ನಗಳು, ಡೈರಿ ಉತ್ಪನ್ನಗಳು, ಬೀಫ್, ಯಂತ್ರೋಪಕರಣ, ವಾಹನ, ವಾಹನ ಬಿಡಿಭಾಗಗಳು, ರಾಸಾಯನಿಕ, ಹಣ್ಣು, ವೈದ್ಯಕೀಯ ಸಾಧನ ಇತ್ಯಾದಿ ಅಮೆರಿಕದ ಕೈಗಾರಿಕಾ ಮತ್ತು ಕೃಷಿ ಉತ್ಪನ್ನಗಳಿಗೆ ಬಾಂಗ್ಲಾದೇಶ ಆದ್ಯತೆಯ ಮೇಲೆ ಅವಕಾಶ ಕಲ್ಪಿಸಲಿದೆ.

ಇದನ್ನೂ ಓದಿ: ಹಲವು ಇಂಧನದ ಮೂಲಗಳನ್ನು ಅವಲಂಬಿಸುವುದು ಭಾರತದ ಕಾರ್ಯತಂತ್ರ; ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಪ್ರತಿಕ್ರಿಯೆ

ಹಾಗೆಯೇ, ಅಮೆರಿಕದ ವಾಹನ ಸುರಕ್ಷತೆ ಮತ್ತು ಆಹಾರ ಗುಣಮಟ್ಟದ ಪ್ರಮಾಣಪತ್ರ ಮತ್ತು ಮಾನದಂಡಗಳನ್ನು ಬಾಂಗ್ಲಾದೇಶ ಸ್ವೀಕರಿಸಲಿದೆ. ಮರುತಯಾರಿತ ಸರುಕಗಳ ಮೇಲಿನ ಆಮದು ನಿರ್ಬಂಧವನ್ನು ತೆಗೆದುಹಾಕಲಿದೆ ಎಂದು ಅಮೆರಿಕದ ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ.

ಮುಂದಿನ 15 ವರ್ಷದಲ್ಲಿ 15 ಬಿಲಿಯನ್ ಡಾಲರ್​ನಷ್ಟು ಅಮೆರಿಕನ್ ಇಂಧನ ಉತ್ಪನ್ನಗಳು, ಹಾಗೂ 3.5 ಬಿಲಿಯನ್ ಡಾಲರ್​ನಷ್ಟು ಕೃಷಿ ಉತ್ಪನ್ನಗಳನ್ನು ಖರೀದಿಸಲು ಬಾಂಗ್ಲಾದೇಶ ಬದ್ಧವಾಗಿದೆ. ಬಿಮಾನ್ ಬಾಂಗ್ಲಾದೇಶ್ ಏರ್ಲೈನ್ಸ್ ಸಂಸ್ಥೆ 14 ಬೋಯಿಂಗ್ ವಿಮಾನಗಳನ್ನು ಖರೀದಿಸಲು ಉದ್ದೇಶಿಸಿದೆ. ಇತರ ದೇಶಗಳ ಬದಲು ಅಮೆರಿಕದಿಂದ ಮಿಲಿಟರಿ ಉಪಕರಣಗಳನ್ನು ಬಾಂಗ್ಲಾದೇಶ ಖರೀದಿ ಮಾಡಲಿದೆ ಎಂದು ಒಪ್ಪಂದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಭಾರತಕ್ಕೆ ದಿಢೀರ್ ಪೆಟ್ರೋಲಿಯಂ ಪೂರೈಕೆ ನಿಂತು ಹೋದರೆ, ಎಷ್ಟು ದಿನಕ್ಕೆ ಆಗುವಷ್ಟು ಪೆಟ್ರೋಲ್ ರಿಸರ್ವ್ ಇದೆ ಗೊತ್ತಾ?

ಡೊನಾಲ್ಡ್ ಟ್ರಂಪ್ ಅವರು ಕಳೆದ ವರ್ಷ ಬಾಂಗ್ಲಾದೇಶಕ್ಕೆ ಶೇ. 37ರಷ್ಟು ಪ್ರತಿಸುಂಕ ಹಾಕಿದ್ದರು. ನಂತರ ಅದನ್ನು ಶೇ. 20ಕ್ಕೆ ಇಳಿಸಲು ಬಾಂಗ್ಲಾದೇಶ ಯಶಸ್ವಿಯಾಗಿತ್ತು. ಈಗ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಟ್ಯಾರಿಫ್ ಶೇ. 19ಕ್ಕೆ ಇಳಿದಿದೆ. ಇದೇ ವೇಳೆ, ಭಾರತವು ಟ್ಯಾರಿಫ್ ಅನ್ನು ಶೇ. 18ಕ್ಕೆ ಇಳಿಸಲು ಯಶಸ್ವಿಯಾಗಿರುವುದು ಕುತೂಹಲದ ಸಂಗತಿ. ಬಾಂಗ್ಲಾದೇಶಕ್ಕೆ ಜವಳಿ ರಫ್ತು ಪ್ರಮುಖ ಆದಾಯ ಮೂಲವಾಗಿದೆ. ಭಾರತದ ಟೆಕ್ಸ್​ಟೈಲ್ಸ್ ಉದ್ಯಮಕ್ಕೆ ಕಡಿಮೆ ಟ್ಯಾರಿಫ್​ನ ಅನುಕೂಲ ಸಿಕ್ಕಂತಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ಅನುಷಾ ರೈ ಜೊತೆ ಮದುವೆ ಆಗ್ತೀರಾ? ಧರ್ಮ ಕೀರ್ತಿರಾಜ್ ನೇರ ಉತ್ತರ
ಅನುಷಾ ರೈ ಜೊತೆ ಮದುವೆ ಆಗ್ತೀರಾ? ಧರ್ಮ ಕೀರ್ತಿರಾಜ್ ನೇರ ಉತ್ತರ
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ