AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಆರ್​ಡಿಒ ಮಿಸೈಲ್ ಸಿಸ್ಟಂಗಳ ತಂತ್ರಜ್ಞಾನ ರಕ್ಷಣಾ ಉದ್ಯಮಕ್ಕೆ ಹಸ್ತಾಂತರ; ದೇಶೀಯವಾಗಿ ಕ್ಷಿಪಣಿ ತಯಾರಿಕೆಗೆ ಭರ್ಜರಿ ಪುಷ್ಟಿ

Govt approves transfer of technology of DRDO developed missile systems to defence industry: ರಕ್ಷಣಾ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿರುವ ಸರ್ಕಾರಿ ಸ್ವಾಮ್ಯದ ಡಿಆರ್​ಡಿಒ ಸಂಸ್ಥೆಯ ಮಿಸೈಲ್ ಟೆಕ್ನಾಲಜಿಯನ್ನು ಡಿಫೆನ್ಸ್ ಇಂಡಸ್ಟ್ರಿಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಡಿಆರ್​ಡಿಒ ಅಭಿವೃದ್ಧಿಪಡಿಸಿದ ಮಿಸೈಲ್ ಸಿಸ್ಟಂಗಳ ತಂತ್ರಜ್ಞಾನವನ್ನು ಬಳಸಿ ರಕ್ಷಣಾ ಕ್ಷೇತ್ರದ ಕಂಪನಿಗಳು ಕ್ಷಿಪಣಿಗಳನ್ನು ತಯಾರಿಸಲಿವೆ.

ಡಿಆರ್​ಡಿಒ ಮಿಸೈಲ್ ಸಿಸ್ಟಂಗಳ ತಂತ್ರಜ್ಞಾನ ರಕ್ಷಣಾ ಉದ್ಯಮಕ್ಕೆ ಹಸ್ತಾಂತರ; ದೇಶೀಯವಾಗಿ ಕ್ಷಿಪಣಿ ತಯಾರಿಕೆಗೆ ಭರ್ಜರಿ ಪುಷ್ಟಿ
ಡಿಆರ್ಡಿಒ ಅಭಿವೃದ್ಧಿಪಡಿಸಿದ ರುದ್ರ ಕ್ಷಿಪಣಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 25, 2026 | 5:34 PM

Share

ನವದೆಹಲಿ, ಆಗಸ್ಟ್ 25: ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯ ಗುರಿ ಸಾಧಿಸುವ ನಿಟ್ಟಿನಲ್ಲಿ, ಡಿಆರ್​ಡಿಒ (DRDO) ಅಭಿವೃದ್ಧಿಪಡಿಸಿದ ಎಲ್ಲಾ ಸಾಂಪ್ರದಾಯಿಕ ಕ್ಷಿಪಣಿ (Conventional Missile Systems) ತಂತ್ರಜ್ಞಾನವನ್ನು ಭಾರತೀಯ ರಕ್ಷಣಾ ಉದ್ಯಮಕ್ಕೆ ಹಸ್ತಾಂತರಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದಾರೆ. ನಿಗದಿತ ಅರ್ಹತೆಗಳು, ಪ್ರಮಾಣಪತ್ರಗಳು ಮತ್ತು ನಿಯಂತ್ರಕ ಅಗತ್ಯತೆಗಳಿಗೆ ಒಳಪಟ್ಟು, ಭಾರತೀಯ ಮೂಲದ ಕಂಪನಿಗಳು ದೇಶದೊಳಗೆ ಈ ಮಿಸೈಲ್ ಸಿಸ್ಟಂಗಳನ್ನು ತಯಾರಿಸಲು ಇದು ಅವಕಾಶ ಮಾಡಿಕೊಡುತ್ತದೆ.

ಕ್ಷಿಪಣಿಗಳು ಅಭಿವೃದ್ಧಿ ಹಂತದಿಂದ ಕೈಗಾರಿಕಾ ಮಟ್ಟದ ಉತ್ಪಾದನಾ ಹಂತಕ್ಕೆ (Industrial Production) ಸುಲಭವಾಗಿ ಬದಲಾಗಲು ಈ ನಿರ್ಧಾರ ನೆರವಾಗಲಿದೆ.

ಎಕ್ಸ್​​ನಲ್ಲಿ ಬಂದ ಪೋಸ್ಟ್

ಇದನ್ನೂ ಓದಿ: ಫ್ಯಾಕ್ಟರಿ ಸಕ್ಕರೆ ಬೆಲೆ ಶೇ. 18 ಕುಸಿತ; ಕಿಲೋಗೆ 55 ರೂಗೆ ಇಳಿಕೆ; ಏನು ಕಾರಣ?

ಈ ಯೋಜನೆಯ ಮುಖ್ಯ ಉದ್ದೇಶಗಳು

  • ಆಮದು ಅವಲಂಬನೆ ಕಡಿತ: ವಿದೇಶಗಳಿಂದ ಶಸ್ತ್ರಾಸ್ತ್ರ ಹಾಗೂ ಕ್ಷಿಪಣಿ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿ, ದೇಶೀಯ ಉತ್ಪಾದನೆಗೆ ಆದ್ಯತೆ ನೀಡುವುದು.
  • MSME ಮತ್ತು ತಂತ್ರಜ್ಞಾನ ಸಂಸ್ಥೆಗಳಿಗೆ ಅವಕಾಶ: ಭಾರತೀಯ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSME) ಹಾಗೂ ಪೂರೈಕೆ ಜಾಲದ (Supply Chain) ಇತರ ಭಾಗಿದಾರರಿಗೆ ಕ್ಷಿಪಣಿ ತಯಾರಿಕೆಯಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವುದು.
  • ರಕ್ಷಣಾ ರಫ್ತು ಮತ್ತು ಮೌಲ್ಯವರ್ಧನೆ: ದೇಶೀಯ ರಕ್ಷಣಾ ಉತ್ಪಾದನಾ ವಲಯದ ಬೆಳವಣಿಗೆಗೆ ಬೆಂಬಲ ನೀಡುವುದು ಮತ್ತು ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸುವುದು.

ಇದನ್ನೂ ಓದಿ: ಸುಂಕರಹಿತವಾಗಿ 10 ಲಕ್ಷ ಟನ್ ಕಚ್ಚಾ ಸಕ್ಕರೆ ಆಮದಿಗೆ ಅವಕಾಶ; ಸಕ್ಕರೆ ಬೆಲೆ ಏರಿಕೆ ತಡೆಯಲು ಸರ್ಕಾರದ ಕ್ರಮ

ಬಾಹ್ಯಾಕಾಶ ಕ್ಷೇತ್ರದಲ್ಲೂ ಸರ್ಕಾರ ಇದೇ ತಂತ್ರ ಅನುಸರಿಸುತ್ತಿದೆ. ಇಸ್ರೋ, ಎಡಿಆರ್ ಸಂಸ್ಥೆಗಳು ಅಭಿವೃದ್ಧಿಪಡಿಸಿದ ರಾಕೆಟ್ ಇತ್ಯಾದಿ ಕೆಲ ತಂತ್ರಜ್ಞಾನವನ್ನು ಉದ್ಯಮಕ್ಕೆ ಹಸ್ತಾಂತರಿಸುತ್ತವೆ. ಖಾಸಗಿ ಸಂಸ್ಥೆಗಳೂ ಕೂಡ ರಾಕೆಟ್​ಗಳನ್ನು ತಯಾರಿಸುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:24 pm, Tue, 25 August 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು