
ನವದೆಹಲಿ, ಜೂನ್ 15: ಬಹಳ ದೂರದ ಸ್ಥಳಗಳಿಗೆ ಹೋಗಿ ಹೊಡೆಯಬಲ್ಲ ಕ್ಷಿಪಣಿಗಳು ಎಲ್ಲಾ ದೇಶಗಳಲ್ಲೂ ಇದೆ. ಆಧುನಿಕ ಯುದ್ಧಗಳಲ್ಲಿ ದಾಳಿಯಿಂದ ಹೊರತಾಗುವ ಯಾವ ಭಾಗವೂ, ಪ್ರದೇಶವೂ ಇರದು. ಈ ಹಿನ್ನೆಲೆಯಲ್ಲಿ ಬಹಳ ಮುಖ್ಯವಾದ ಆಸ್ತಿಗಳನ್ನು ಮತ್ತು ಪ್ರದೇಶಗಳನ್ನು ರಕ್ಷಿಸಲು ಭಾರತ ವಿಶೇಷ ಹೆಜ್ಜೆಗಳನ್ನು ಇಟ್ಟಿದೆ. ಲೇಸರ್ ಡ್ಯಾಜ್ಲರ್ಗಳಿರುವ ಆಪ್ಟಾನಿಕ್ ಶೀಲ್ಡ್ ಅನ್ನು ನಿರ್ಮಿಸಲು ಡಿಆರ್ಡಿಒ ಮುಂದಾಗಿದೆ. ಮಿಲಿಟರಿ ನೆಲೆಗಳು, ಐತಿಹಾಸಿಕ ಕಟ್ಟಡಗಳು, ಅಣೆಕಟ್ಟುಗಳು ಇತ್ಯಾದಿ ಪ್ರಮುಖ ಸ್ಥಳಗಳನ್ನು ರಕ್ಷಿಸಬಲ್ಲುದು ಈ ಹೊಸ ಮತ್ತು ವಿನೂತನ ಡಿಫೆನ್ಸ್ ಸಿಸ್ಟಂ.
ಡ್ರೋನ್ಗಳು, ಸ್ಟೀಲ್ತ್ ವಿಮಾನಗಳು, ಕ್ಷಿಪಣಿಗಳು ಹೀಗೆ ಸಾಕಷ್ಟು ವಿಧದ ದಾಳಿಗಳನ್ನು ತಡೆಯಲು ಸಾಧ್ಯವಾಗುವಂತೆ ಆಪ್ಟಾನಿಕ್ ಶೀಲ್ಡ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದು ವಿವಿಧ ರೀತಿಯ ದಾಳಿ ಎದುರಿಸಲು ಸಮರ್ಥ ರಕ್ಷಾ ಕವಚವಾಗಬಲ್ಲುದು.
ಇದನ್ನೂ ಓದಿ: ಪಾಕಿಸ್ತಾನ 3 ರಫೇಲ್ ಹೊಡೆದಿಲ್ಲ; ವಾಸ್ತವ ಗೊತ್ತಾದರೆ ಅಚ್ಚರಿ ಆಗಬಹುದು: ಡಸ್ಸೋ ಏವಿಯೇಶನ್ ಸಿಇಒ
ಆಪ್ಟಾನಿಕ್ ಶೀಲ್ಡ್ ಎನ್ನುವುದು ಒಂದು ರೀತಿಯಲ್ಲಿ ಗುರಿಯನ್ನು ನಿಖರವಾಗಿ ಗುರುತಿಸುವ ಸ್ಮಾರ್ಟ್ ಟ್ರ್ಯಾಕಿಂಗ್ ಸಿಸ್ಟಂ ಆಗಿದೆ. ಎಲೆಕ್ಟ್ರೋ ಆಪ್ಟಿಕಲ್ ತಂತ್ರಜ್ಞಾನವನ್ನು ಇದು ಬಳಸುತ್ತದೆ. ವಿವಿಧ ರೀತಿಯ ಸೆನ್ಸಾರ್ಗಳನ್ನು ಒಳಗೊಂಡಿರುತ್ತದೆ. ಹಗಲಿನಲ್ಲಾಗಲೀ, ರಾತ್ರಿಯಲ್ಲಾಗಲೀ ಗುರಿಗಳನ್ನು ಗುರುತಿಸಬಲ್ಲುದು. ಇದರ ಜೊತೆಗೆ ಎಐ ಶಕ್ತ ಸಾಫ್ಟ್ವೇರ್ ಇದ್ದು, ಬಹಳ ಕ್ಷಿಪ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತದೆ.
ಆಪ್ಟಾನಿಕ್ ಶೀಲ್ಡ್ನಲ್ಲಿ ಹಲವು ಎಳೆಗಳ ರಕ್ಷಣಾ ವ್ಯವಸ್ಥೆ ಇರುತ್ತದೆ. ಒಂದು ಸ್ಥಳಕ್ಕೆ ನಿರ್ದಿಷ್ಟ ದೂರದವರೆಗೂ ಇದು ಕಣ್ಣಿಗೆ ಕಾಣದ ಒಂದು ಗೋಪುರದ ರೀತಿಯ ಬೃಹತ್ ಕವಚವನ್ನು ನಿರ್ಮಿಸುತ್ತದೆ. ಸುಧಾರಿತ ಲೇಸರ್ ಡ್ಯಾಜ್ಲರ್ಗಳ ಮೂಲಕ ದಾಳಿಯನ್ನು ಗುರುತಿಸಬಲ್ಲುದು. ಹಾಗೆಯೇ, ನಿರ್ದಿಷ್ಟ ಸೆಟಿಲೈಟ್ ಸಿಗ್ನಲ್ಗಳ ಮೂಲಕ ದಾಳಿವಸ್ತು ಹೇಗೆ ಸಾಗುತ್ತಿದೆ ಎಂಬುದನ್ನು ಟ್ರ್ಯಾಕ್ ಮಾಡಬಲ್ಲುದು.
ಇದನ್ನೂ ಓದಿ: ವಿರಳ ಭೂಖನಿಜಗಳ ರಫ್ತು: ಜಪಾನ್ ಜೊತೆಗೆ ಒಪ್ಪಂದ ರದ್ದುಗೊಳಿಸಲು ಭಾರತ ಮುಂದು; ಕಾರಣ ಏನು?
ಸಂಪೂರ್ಣ ದೇಶೀಯವಾಗಿ ತಯಾರಾಗುತ್ತಿರುವ ಡಿಫೆನ್ಸ್ ಸಿಸ್ಟಂಗಳ ಸಾಲಿಗೆ ಆಪ್ಟಾನಿಕ್ ಶೀಲ್ಡ್ ಸೇರ್ಪಡೆಯಾಗುತ್ತದೆ. ಡಿಫೆನ್ಸ್ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆ ದಿನೇ ದಿನೇ ಹೆಚ್ಚಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಅಮೆರಿಕ, ರಷ್ಯಾ, ಯೂರೋಪ್ ಮೇಲಿನ ಅವಲಂಬನೆಯನ್ನು ಭಾರತ ತಗ್ಗಿಸಿಕೊಳ್ಳಲು ಸಾಧ್ಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ