AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರೈವಿಂಗ್ ಲೈಸೆನ್ಸ್ ಹೊಸ ನಿಯಮಗಳು; ಪಾಸಾಗಲು ಶೇ. 75 ಅಂಕ ಕಡ್ಡಾಯ; ವಿಳಾಸ ಬದಲಾವಣೆಗೆ 15 ದಿನ ಗಡುವು

ಭಾರತದಲ್ಲಿ ಚಾಲನಾ ಪರವಾನಗಿ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಿಗೆ ಸಿದ್ಧತೆ ನಡೆಯುತ್ತಿದೆ. ಪರೀಕ್ಷೆಯಲ್ಲಿ ಶೇ. 75ರಷ್ಟು ಅಂಕ ಕಡ್ಡಾಯ, ಕೆಲ ಆನ್​ಲೈನ್ ಸೇವೆಗಳು ಉಚಿತ ಇತ್ಯಾದಿ ಪ್ರಸ್ತಾಪಗಳನ್ನು ಮಾಡಲಾಗಿದೆ. ಹಾಗೆಯೇ, ಕೆಲ ಅರ್ಜಿಗಳ ವಿಲೇವಾರಿಗೆ ಇರುವ ಪ್ರಕ್ರಿಯೆಗಳಿಗೆ ನಿಯಮ ಪರಿಷ್ಕರಿಸಲು ಪ್ರಸ್ತಾಪಿಸಲಾಗಿದೆ. ವಿಳಾಸ ಬದಲಾವಣೆಗೆ 15 ದಿನಗಳ ಗಡುವಿನ ಪ್ರಸ್ತಾಪ ಇದೆ.

ಡ್ರೈವಿಂಗ್ ಲೈಸೆನ್ಸ್ ಹೊಸ ನಿಯಮಗಳು; ಪಾಸಾಗಲು ಶೇ. 75 ಅಂಕ ಕಡ್ಡಾಯ; ವಿಳಾಸ ಬದಲಾವಣೆಗೆ 15 ದಿನ ಗಡುವು
ಚಾಲನಾ ಪರವಾನಗಿImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 22, 2026 | 6:08 PM

Share

ನವದೆಹಲಿ, ಅಕ್ಟೋಬರ್ 22: ಭಾರತದಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಸಾರಿಗೆ ಸೇವೆಗಳನ್ನು ಹೆಚ್ಚು ಪಾರದರ್ಶಕ ಹಾಗೂ ಸುಲಭಗೊಳಿಸಲು ಕೇಂದ್ರ ಸರ್ಕಾರವು ಚಾಲನಾ ಪರವಾನಗಿ ನಿಯಮಗಳಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ತರಲು ಮುಂದಾಗಿದೆ. ಡ್ರೈವಿಂಗ್ ಸ್ಕಿಲ್ ಪರೀಕ್ಷೆಯಲ್ಲಿ ಪಾಸಾಗಲು ಕನಿಷ್ಠ ಅಂಕವನ್ನು ಶೇ. 75ಕ್ಕೆ ಏರಿಸುವ ಪ್ರಸ್ತಾಪ ಇದೆ. ಕೆಲ ಆನ್​ಲನ್ ಸರ್ವಿಸ್​ಗಳಿಗೆ ಶುಲ್ಕದಲ್ಲಿ ವಿನಾಯಿತಿ ಕೊಡುವುದು; ಲೈಸೆನ್ಸ್ ಹೆಸರು, ವಿಳಾಸ ಬದಲಾವಣೆಗೆ ಡೆಡ್​ಲೈನ್​ಗಳನ್ನು ಪರಿಷ್ಕರಿಸುವುದು, ಹೀಗೆ, ವಿವಿಧ ಬದಲಾವಣೆಗಳನ್ನು ಪ್ರಸ್ತಾಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಜಾರಿಗೆ ಬರಲಿರುವ ಅಥವಾ ಪ್ರಸ್ತಾವನೆಯಲ್ಲಿರುವ ಪ್ರಮುಖ ಬದಲಾವಣೆಗಳು ಇಲ್ಲಿವೆ:

ಪರೀಕ್ಷೆಯಲ್ಲಿ ಪಾಸಾಗಲು ಶೇ. 75ರಷ್ಟು ಅಂಕ ಕಡ್ಡಾಯ

ಚಾಲನಾ ಪರವಾನಗಿ ಪಡೆಯಲು ನಡೆಸುವ ಲಿಖಿತ ಅಥವಾ ಪ್ರಾಯೋಗಿಕ ಪರೀಕ್ಷೆಗಳಲ್ಲಿ ಕಠಿಣ ನಿಯಮಗಳನ್ನು ತರಲಾಗುತ್ತಿದ್ದು, ಅಭ್ಯರ್ಥಿಗಳು ಉತ್ತೀರ್ಣರಾಗಲು ಕನಿಷ್ಠ ಶೇ. 75ರಷ್ಟು ಅಂಕಗಳನ್ನು ಪಡೆಯುವುದನ್ನು ಕಡ್ಡಾಯಗೊಳಿಸುವ ಸಾಧ್ಯತೆಯಿದೆ. ರಸ್ತೆ ಸುರಕ್ಷತೆ ಮತ್ತು ಚಾಲನಾ ಕೌಶಲ್ಯವನ್ನು ಗಂಭೀರವಾಗಿ ಪರಿಗಣಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ವಿಳಾಸ ಅಥವಾ ಹೆಸರು ಬದಲಾವಣೆಗೆ 15 ದಿನಗಳ ಗಡುವು

ಚಾಲನಾ ಪರವಾನಗಿಯಲ್ಲಿ ಅಥವಾ ವಾಹನಗಳ ನೋಂದಣಿಯಲ್ಲಿ (RC) ವಿಳಾಸ, ಹೆಸರು ಅಥವಾ ಮೊಬೈಲ್ ಸಂಖ್ಯೆ ಬದಲಾದಾಗ, ಆ ಮಾಹಿತಿಯನ್ನು ಅಪ್‌ಡೇಟ್ ಮಾಡಲು ಕೇವಲ 15 ದಿನಗಳ ಕಠಿಣ ಗಡುವು ವಿಧಿಸುವ ಪ್ರಸ್ತಾವನೆಯಿದೆ. ನಿಗದಿತ ಅವಧಿಯೊಳಗೆ ಬದಲಾವಣೆ ಮಾಡಿಕೊಳ್ಳದಿದ್ದರೆ ದಂಡ ವಿಧಿಸುವ ನಿಯಮವಿರಲಿದೆ.

ಇದನ್ನೂ ಓದಿ: ನವರಾತ್ರಿ ಹಬ್ಬದಲ್ಲಿ 11.23 ಲಕ್ಷ ವಾಹನಗಳ ಮಾರಾಟ; ದ್ವಿಚಕ್ರ ವಾಹನಗಳೇ 8.34 ಲಕ್ಷದಷ್ಟು ಸೇಲ್

ಕೆಲ ಆನ್‌ಲೈನ್ ಸೇವೆಗಳು ಉಚಿತ

ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರ್​ಟಿಒ (RTO) ಕಚೇರಿಗೆ ಅಲೆಯುವುದನ್ನು ತಪ್ಪಿಸಲು, ಡಿಎಲ್ ನವೀಕರಣ, ಹೆಸರು ಮತ್ತು ವಿಳಾಸ ಬದಲಾವಣೆ ಮತ್ತು ನಕಲು ಡಿಎಲ್ ಪಡೆಯುವಂತಹ ಕೆಲವು ನಿರ್ದಿಷ್ಟ ಆನ್‌ಲೈನ್ ಸೇವೆಗಳನ್ನು ಸಂಪೂರ್ಣವಾಗಿ ಉಚಿತಗೊಳಿಸುವ ಅಥವಾ ಶುಲ್ಕವನ್ನು ಗಣನೀಯವಾಗಿ ತಗ್ಗಿಸುವ ಕುರಿತು ಚಿಂತನೆ ನಡೆಸಲಾಗಿದೆ.

ಖಾಸಗಿ ಡ್ರೈವಿಂಗ್ ಶಾಲೆಗಳಿಗೆ ಉತ್ತೇಜನ

ಅಧಿಕೃತವಾಗಿ ನೋಂದಾಯಿಸಲ್ಪಟ್ಟ ಖಾಸಗಿ ಡ್ರೈವಿಂಗ್ ಸ್ಕೂಲ್‌ಗಳ ಮೂಲಕವೇ ತರಬೇತಿ ಪಡೆದು ಪರೀಕ್ಷೆ ಪಾಸ್‌ ಮಾಡುವವರಿಗೆ ಡಿಎಲ್ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲು ಹೊಸ ಮಾರ್ಗಸೂಚಿಗಳನ್ನು ರೂಪಿಸಲಾಗುತ್ತಿದೆ.

ಡ್ರೈವಿಂಗ್ ಲೈಸೆನ್ಸ್ ಹೆಸರು ಮತ್ತು ವಿಳಾಸ ಬದಲಾವಣೆ ನಿಯಮಗಳು…

ಡ್ರೈವಿಂಗ್ ಲೈಸೆನ್ಸ್​ದಾರರ ಹೆಸರು ಮತ್ತು ವಿಳಾಸಗಳನ್ನು ಬದಲಾಯಿಸಲು ಸಲ್ಲಿಸಲಾಗುವ ಅರ್ಜಿಗಳ ಶೀಘ್ರ ವಿಲೇವಾರಿಗೆ ನಿಯಮಗಳನ್ನು ರೂಪಿಸಲು ಯತ್ನಿಸಲಾಗುತ್ತಿದೆ. 15 ದಿನದೊಳಗೆ ಅರ್ಜಿಯನ್ನು ತಿರಸ್ಕರಿಸುವುದೋ ಅಥವಾ ಸ್ವೀಕರಿಸುವುದೋ ವಿಲೇವಾರಿ ಆಗಬೇಕು. ಅರ್ಜಿ ತಿರಸ್ಕರಿಸಿದರೆ ಅದಕ್ಕೆ ಕಾರಣ ನೀಡಬೇಕು ಎಂದು ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ: ಕೊಲ್ಲಿ ನಾಡಾದ ದುಬೈಗಿಂತಲೂ ಭಾರತದಲ್ಲೇ ಪೆಟ್ರೋಲ್ ಬೆಲೆ ಕಡಿಮೆ

ವಿಳಾಸ ಬದಲಾವಣೆಗೆ ಸಲ್ಲಿಸುವ ಅರ್ಜಿಗಳನ್ನು 30 ದಿನದೊಳಗೆ ವಿಲೇವಾರಿ ಮಾಡದೇ ಹೋದರೆ ಅದು ಸ್ವೀಕೃತ ಎಂದು ಪರಿಗಣಿಸಬೇಕಾಗುತ್ತದೆ.

ಪ್ರಸ್ತಾಪಿತ ಹೊಸ ಡ್ರೈವಿಂಗ್ ಲೈಸೆನ್ಸ್ ನಿಯಮಗಳು ಯಾವಾಗ ಜಾರಿ?

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ಕರಡು ನಿಯಮಗಳನ್ನು ಬಿಡುಗಡೆ ಮಾಡಿದ್ದು, ಯಾರಿಗಾದರೂ ಆಕ್ಷೇಪಣೆಗಳು, ಸಲಹೆಗಳು ಇದ್ದರೆ 30 ದಿನದೊಳಗೆ ಸಲ್ಲಿಸಲು ಕಾಲಾವಕಾಶ ಕೊಡಲಾಗಿದೆ. ಸಲಹೆಗಳು ಬಂದಲ್ಲಿ, ಸರ್ಕಾರ ತಿದ್ದುಪಡಿ ಮಾಡಿ ಆ ಬಳಿಕ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್