AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವರಾತ್ರಿ ಹಬ್ಬದಲ್ಲಿ 11.23 ಲಕ್ಷ ವಾಹನಗಳ ಮಾರಾಟ; ದ್ವಿಚಕ್ರ ವಾಹನಗಳೇ 8.34 ಲಕ್ಷದಷ್ಟು ಸೇಲ್

ಹಬ್ಬದ ಸೀಸನ್‌ನ ನವರಾತ್ರಿ ಅವಧಿಯಲ್ಲಿ ದೇಶದಲ್ಲಿ ಒಟ್ಟು 11.23 ಲಕ್ಷ ವಾಹನಗಳು ಮಾರಾಟವಾಗಿವೆ. ಮುಂಬರುವ ದೀಪಾವಳಿ ಹಬ್ಬದ ಮಾರಾಟದ ಭರಾಟೆಯನ್ನು ಎದುರಿಸಲು ಮಾರುತಿ ಸುಜುಕಿ ಮತ್ತು ಟಾಟಾ ಮೋಟರ್ಸ್ ಸೇರಿದಂತೆ ಪ್ರಮುಖ ಆಟೋ ಕಂಪನಿಗಳು ಭರ್ಜರಿ ಸಿದ್ಧತೆ ನಡೆಸಿವೆ. 2025ಕ್ಕೆ ಹೋಲಿಸಿದರೆ 2026ರಲ್ಲಿ ವಾಹನಗಳ ಮಾರಾಟ ಇಳಿಮುಖವಾದರೂ, ದೀಪಾವಳಿಗೆ ಭರಾಟೆ ಹೆಚ್ಚುವ ನಿರೀಕ್ಷೆ ಇದೆ.

ನವರಾತ್ರಿ ಹಬ್ಬದಲ್ಲಿ 11.23 ಲಕ್ಷ ವಾಹನಗಳ ಮಾರಾಟ; ದ್ವಿಚಕ್ರ ವಾಹನಗಳೇ 8.34 ಲಕ್ಷದಷ್ಟು ಸೇಲ್
ಮಾರುತಿ ಸುಜುಕಿಯ ಕಾರುImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 22, 2026 | 5:02 PM

Share

ನವದೆಹಲಿ, ಅಕ್ಟೋಬರ್ 22: ದೇಶದಲ್ಲಿ ಹಬ್ಬದ ಸೀಸನ್‌ನ ಆರಂಭಿಕ ಹಂತವಾದ ನವರಾತ್ರಿ ಅವಧಿಯಲ್ಲಿ ಆಟೋಮೊಬೈಲ್ ಕ್ಷೇತ್ರವು ಭರ್ಜರಿ ಮಾರಾಟವನ್ನು ದಾಖಲಿಸಿದೆ. ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (FADA) ದತ್ತಾಂಶದ ಪ್ರಕಾರ, ಈ ಬಾರಿಯ ನವರಾತ್ರಿ ಉತ್ಸವದ ಅವಧಿಯಲ್ಲಿ ದೇಶಾದ್ಯಂತ ಒಟ್ಟು 11.23 ಲಕ್ಷ ವಾಹನಗಳ ಚಿಲ್ಲರೆ ಮಾರಾಟ (Auto Retail) ದಾಖಲಾಗಿದೆ. ಕಳೆದ ವರ್ಷದ (2025) ನವರಾತ್ರಿ ವೇಳೆ 12 ಲಕ್ಷ ವಾಹನಗಳ ಮಾರಾಟವಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ ರೀಟೇಲ್ ಸೇಲ್ ಆದರೂ 2024ರ ನವರಾತ್ರಿಯದಕ್ಕಿಂತಲೂ ಶೇ. 27ರಷ್ಟು ಹೆಚ್ಚು ಮಾರಾಟ ದಾಖಲಾಗಿದೆ.

ಕಾರ್‌ಗಳು, ದ್ವಿಚಕ್ರ ವಾಹನಗಳು ಮತ್ತು ವಾಣಿಜ್ಯ ವಾಹನಗಳೆರಡರಲ್ಲೂ ಉತ್ತಮ ಬೇಡಿಕೆ ಕಂಡುಬಂದಿದೆ. ಹೊಸ ಮಾಡೆಲ್‌ಗಳ ಬಿಡುಗಡೆ ಹಾಗೂ ಹಬ್ಬದ ಆಫರ್‌ಗಳು ಗ್ರಾಹಕರನ್ನು ಶೋರೂಮ್‌ಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ.

ನವರಾತ್ರಿಯ ಯಶಸ್ಸಿನ ಬೆನ್ನಲ್ಲೇ, ಮುಂಬರುವ ದೀಪಾವಳಿ ಹಬ್ಬದ ವೇಳೆಗೆ ವಾಹನಗಳ ಬೇಡಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಮಾರುತಿ ಸುಜುಕಿ, ಟಾಟಾ ಮೋಟರ್ಸ್, ಮಹೀಂದ್ರಾ ಮತ್ತು ಹ್ಯುಂಡೈ ಸೇರಿದಂತೆ ಪ್ರಮುಖ ಆಟೋಮೋಟಿವ್ ದಿಗ್ಗಜರು ಡೀಲರ್‌ಶಿಪ್‌ಗಳಲ್ಲಿ ಸ್ಟಾಕ್ ಹೆಚ್ಚಿಸಿಕೊಳ್ಳುವುದು ಮತ್ತು ಗ್ರಾಹಕರಿಗೆ ವಿಶೇಷ ರಿಯಾಯಿತಿಗಳನ್ನು ಘೋಷಿಸುವ ಮೂಲಕ ದೀಪಾವಳಿ ಸುಗ್ಗಿಗೆ ಸಜ್ಜಾಗುತ್ತಿವೆ.

ಇದನ್ನೂ ಓದಿ: ಕೊಲ್ಲಿ ನಾಡಾದ ದುಬೈಗಿಂತಲೂ ಭಾರತದಲ್ಲೇ ಪೆಟ್ರೋಲ್ ಬೆಲೆ ಕಡಿಮೆ

ವಿಶೇಷವಾಗಿ ದ್ವಿಚಕ್ರ ವಾಹನಗಳು ಮತ್ತು ಕಾರು ವಿಭಾಗದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಹಬ್ಬದ ಸೀಸನ್‌ನಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಾಣುತ್ತಿದ್ದು, ಒಟ್ಟಾರೆ ಆಟೋ ಮಾರಾಟದ ಅಂಕಿಅಂಶಗಳಿಗೆ ಇದು ಬಲ ತುಂಬಿದೆ.

2026ರ ನವರಾತ್ರಿಯಲ್ಲಿ ವಾಹನಗಳ ಮಾರಾಟ ವಿವರ

ವಾಹನಗಳ ಒಟ್ಟು ರೀಟೇಲ್ ಮಾರಾಟ: 11.23 ಲಕ್ಷ

  • ದ್ವಿಚಕ್ರ ವಾಹನಗಳು: 8.34 ಲಕ್ಷ
  • ಪ್ರಯಾಣಿಕ ವಾಹನಗಳು: 1.82 ಲಕ್ಷ
  • ಕಮರ್ಷಿಯಲ್ ವಾಹನಗಳು: 35,618
  • ತ್ರಿಚಕ್ರ ವಾಹನಗಳು: 45,735
  • ಟ್ರಾಕ್ಟರ್​ಗಳು: 22,690

2026ರ ನವರಾತ್ರಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ

ಒಟ್ಟು ಮಾರಾಟವಾದ ಇವಿಗಳು: 1.17 ಲಕ್ಷ

  • ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು: 75,758
  • ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳು: 28,086
  • ಎಲೆಕ್ಟ್ರಿಕ್ ಪ್ಯಾಸೆಂಜರ್ ವಾಹನಗಳು: 12,305
  • ಎಲೆಕ್ಟ್ರಿಕ್ ಕಮರ್ಷಿಯಲ್ ವಾಹನಗಳು: 1,288

ಇದನ್ನೂ ಓದಿ: ಈ ವರ್ಷ ಮಧ್ಯಪ್ರಾಚ್ಯ, ಪಾಕಿಸ್ತಾನ, ಉತ್ತರ ಆಫ್ರಿಕನ್ ದೇಶಗಳಲ್ಲಿ ಆರ್ಥಿಕ ಕುಸಿತ: ಐಎಂಎಫ್ ವರದಿ

ಕಾರು ನೊಂದಣಿಗಳಲ್ಲಿ ಇಳಿಕೆ

2026ರ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಕಾರುಗಳ ನೊಂದಣಿ ಇಳಿಮುಖವಾಗಿದೆ. ಜಾಟೊ ಡೈನಾಕ್ಸ್ ದತ್ತಾಂಶದ ಪ್ರಕಾರ, ಪೆಟ್ರೋಲ್, ಡೀಸಲ್, ಸಿಎನ್​ಜಿ ಕಾರುಗಳ ನೊಂದಣಿ ಶೇ. 5.2ರಷ್ಟು ಕಡಿಮೆ ಇದೆ. 1.69 ಲಕ್ಷ ಕಾರುಗಳಿಗೆ ನೊಂದಣಿ ಆಗಿದೆ. ವಿವಿಧ ಕಂಪನಿಗಳ ಕಾರು ನೊಂದಣಿ ವಿವರ ಇಂತಿದೆ:

  • ಮಾರುತಿ ಸುಜುಕಿ: 78,387
  • ಟಾಟಾ ಮೋಟಾರ್ಸ್: 24,843
  • ಹ್ಯೂಂಡಾಯ್: 19,706
  • ಕಿಯಾ: 9,731
  • ಮಹೀಂದ್ರ: 20,681

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
ದಸರಾ ಮುಗಿಯುತ್ತಿದ್ದಂತೆಯೇ ಭುಗಿಲೆದ್ದ ಯತೀಂದ್ರ ಸಿದ್ದರಾಮಯ್ಯ ಫೋಟೋ ವಿವಾದ!
ದಸರಾ ಮುಗಿಯುತ್ತಿದ್ದಂತೆಯೇ ಭುಗಿಲೆದ್ದ ಯತೀಂದ್ರ ಸಿದ್ದರಾಮಯ್ಯ ಫೋಟೋ ವಿವಾದ!
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ