ಕ್ರಿಪ್ಟೋಕರೆನ್ಸಿ ವಿನಿಮಯ ಕಾಯಿನ್‌ಸ್ವಿಚ್ ಕುಬರ್‌ ಕಚೇರಿಗಳ ಮೇಲೆ ಇಡಿ ದಾಳಿ

| Updated By: Rakesh Nayak Manchi

Updated on: Aug 26, 2022 | 3:47 PM

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆಗಾಗಿ ಜಾರಿ ನಿರ್ದೇಶನಾಲಯವು ಗುರುವಾರ ಕ್ರಿಪ್ಟೋಕರೆನ್ಸಿ ವಿನಿಮಯ ಕಾಯಿನ್‌ಸ್ವಿಚ್ ಕುಬರ್‌ನ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಕಂಪನಿಯಿಂದ ಸಹಕಾರ ಸಿಗದ ಹಿನ್ನೆಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕ್ರಿಪ್ಟೋಕರೆನ್ಸಿ ವಿನಿಮಯ ಕಾಯಿನ್‌ಸ್ವಿಚ್ ಕುಬರ್‌ ಕಚೇರಿಗಳ ಮೇಲೆ ಇಡಿ ದಾಳಿ
ಕ್ರಿಪ್ಟೋಕರೆನ್ಸಿ ವಿನಿಮಯ ಕಾಯಿನ್‌ಸ್ವಿಚ್ ಕುಬರ್‌ ಕಚೇರಿಗಳ ಮೇಲೆ ಇಡಿ ದಾಳಿ
Follow us on

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆಗಾಗಿ ಜಾರಿ ನಿರ್ದೇಶನಾಲಯವು ಗುರುವಾರ ಕ್ರಿಪ್ಟೋಕರೆನ್ಸಿ ವಿನಿಮಯ ಕಾಯಿನ್‌ಸ್ವಿಚ್ ಕುಬರ್‌ನ ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಕಾಯ್ದೆ ಉಲ್ಲಂಘನೆ ಸಂಬಂಧ ಸ್ಪಷ್ಟನೆ ನೀಡುವಂತೆ ಫೋನ್ ಮೂಲಕ ಸಂಪರ್ಕಿಸಿದಾಗಲೂ ಯಾವುದೇ ಅಧಿಕಾರಿಗಳು ಸಂಪರ್ಕಕ್ಕೆ ಲಭ್ಯವಾಗಿರಲಿಲ್ಲ. ಅಲ್ಲದೆ ಕಂಪನಿಯಿಂದ ಸಾಕಷ್ಟು ಸಹಕಾರವನ್ನು ಸ್ವೀಕರಿಸದ ಹಿನ್ನೆಲೆ ಕಾಯಿನ್‌ಸ್ವಿಚ್ ಕುಬರ್‌ನ ಕಚೇರಿಗಳ ಮೇಲೆ ಬೆಂಗಳೂರಿನ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎಂದು ಕ್ರಿಪ್ಟೋ ಕೇಂದ್ರಿತ ಪ್ರಕಟಣೆಯ ಕಾಯಿನ್ ಡೆಸ್ಕ್​ ವರದಿ ಮಾಡಿದೆ. ಆದರೆ ಆರೋಪವನ್ನು ತಳ್ಳಿಹಾಕಿದ ಕಂಪನಿಯ ವಕ್ತಾರರು, ನಮ್ಮ ವಿಧಾನವು ಯಾವಾಗಲೂ ಪಾರದರ್ಶಕತೆಯಾಗಿದೆ. ಕ್ರಿಪ್ಟೋ ಸಾಕಷ್ಟು ಸಾಮರ್ಥ್ಯವನ್ನು ಹೊಂದಿರುವ ಆರಂಭಿಕ ಹಂತದ ಉದ್ಯಮವಾಗಿದೆ ಮತ್ತು ನಾವು ಎಲ್ಲಾ ಮಧ್ಯಸ್ಥಗಾರರೊಂದಿಗೆ ನಿರಂತರವಾಗಿ ತೊಡಗಿಸಿಕೊಳ್ಳುತ್ತೇವೆ ಎಂದಿದ್ದಾರೆ.

“ನಾವು ಭಾರತದ ವಿದೇಶಿ ವಿನಿಮಯ ನಿರ್ವಹಣ ಕಾಯ್ದೆ ಮತ್ತು ಅದರೊಂದಿಗೆ ಸಂಪರ್ಕ ಹೊಂದಿದ ಇತರ ಘಟಕಗಳ ಅಡಿಯಲ್ಲಿ ಅನೇಕ ಸಂಭವನೀಯ ಉಲ್ಲಂಘನೆಗಳನ್ನು ಮಾಡಲಾಗಿದೆ. ಈ ಸಂಬಂಧ ನಾವು ಬಯಸಿದ ಸಹಕಾರವನ್ನು ಕಂಪನಿ ಕಡೆಯಿಂದ ಸಿಗದ ಕಾರಣ ಕಾಯಿನ್‌ಸ್ವಿಚ್ ಕುಬರ್​ನ ನಿರ್ದೇಶಕರು, ಸಿಇಒ O ಮತ್ತು ಅವರ ಅಧಿಕೃತ ನಿವಾಸಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದೇವೆ” ಎಂದು ಇಡಿ ಅಧಿಕಾರಿಯೊಬ್ಬರು ಕಾಯಿನ್ ಡೆಸ್ಕ್​ಗೆ ಹೇಳಿದ್ದಾರೆ.

ಇದಕ್ಕೂ ಮೊದಲು, ಜಾರಿ ನಿರ್ದೇಶನಾಲಯವು ಜನಪ್ರಿಯ ಕ್ರಿಪ್ಟೋಕರೆನ್ಸಿ ವಿನಿಮಯ ವಾಝಿರ್ಎಕ್ಸ್ ಅನ್ನು ಹೊಂದಿರುವ ಝನ್ಮೈ ಲ್ಯಾಬ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರೊಬ್ಬರ ನಿವಾಸದ ಮೇಲೆ ದಾಳಿ ನಡೆಸಿ ಹುಡುಕಾಟ ನಡೆಸಿತ್ತು. ಅವರ ಬ್ಯಾಂಕ್ ಬ್ಯಾಲೆನ್ 64.67 ಕೋಟಿ ರೂ.ಗಳನ್ನು ವಶಕ್ಕೆ ಪಡೆಯುವಂತೆ ಹಣಕಾಸು ತನಿಖಾ ಸಂಸ್ಥೆ ಆದೇಶ ಹೊರಡಿಸಿದೆ.

ಇದಲ್ಲದೆ, ಹಿಂದೆ ದಿ ಎಕನಾಮಿಕ್ ಟೈಮ್ಸ್‌ನ ವರದಿಯು ವಿದೇಶಿ ಕಂಪನಿಗಳು ಹಣವನ್ನು ಲಾಂಡರ್ ಮಾಡಲು ಕ್ರಿಪ್ಟೋಕರೆನ್ಸಿಯನ್ನು ಬಳಸಲು ಸಹಾಯ ಮಾಡುವುದಕ್ಕಾಗಿ ಕನಿಷ್ಠ 10 ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್‌ಗಳನ್ನು ಪರಿಶೀಲಿಸುತ್ತಿದೆ ಎಂದು ಕಾಯಿನ್ ಡೆಸ್ಕ್ ಉಲ್ಲೇಖಿಸಿದೆ. ಇನ್‌ಸ್ಟಂಟ್ ಲೋನ್ ಆ್ಯಪ್ ಪ್ರಕರಣದಲ್ಲಿ ಆರೋಪಿ ಸಂಸ್ಥೆಗಳು 1,000 ಕೋಟಿ ರೂ.ಗೂ ಅಧಿಕ ಲಾಂಡರಿಂಗ್ ಮಾಡಿವೆ ಎಂದು ಸರ್ಕಾರಿ ಸಂಸ್ಥೆ ಮೌಲ್ಯಮಾಪನ ಮಾಡಿದೆ ಎಂದು ವರದಿ ತಿಳಿಸಿದೆ.

ಆಗಸ್ಟ್ ತಿಂಗಳಲ್ಲಿ ಅಕ್ರಮ ಸಾಲದ ಅಪ್ಲಿಕೇಶನ್‌ಗಳು ಮತ್ತು ಕ್ರಿಪ್ಟೋಕರೆನ್ಸಿಗಳ ಮೂಲಕ ಮನಿ ಲಾಂಡರಿಂಗ್‌ಗೆ ಸಂಬಂಧಿಸಿದಂತೆ ಬೆಂಗಳೂರಿನ ಯೆಲ್ಲೋ ಟ್ಯೂನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್​ಗೆ ಸಂಬಂಧಿಸಿದ ವಿವಿಧ ಕಡೆಗಳ ಮೇಲೆ ಇಡಿ ದಾಳಿ ನಡೆಸಿತು. ಕಂಪನಿಯ ಲಾಭದಾಯಕ ಮಾಲೀಕರನ್ನು ಮತ್ತು ಸ್ವೀಕರಿಸುವವರ ವ್ಯಾಲೆಟ್‌ಗಳನ್ನು ಪತ್ತೆಹಚ್ಚಲು ಆಗಸ್ಟ್ 8-10 ರಿಂದ ಯೆಲ್ಲೋ ಟ್ಯೂನ್ ಟೆಕ್ನಾಲಜೀಸ್‌ನ ವಿವಿಧ ಆವರಣದಲ್ಲಿ ಹುಡುಕಾಟಗಳನ್ನು ನಡೆಸಲಾಯಿತು ಎಂದು ಇಡಿ ಹೇಳಿದೆ. ಕ್ರಿಪ್ಟೋ ಎಕ್ಸ್‌ಚೇಂಜ್ ಫ್ಲಿಪ್‌ವೋಲ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಹೊಂದಿದ್ದ 370 ಕೋಟಿ ರೂಪಾಯಿ ಆಸ್ತಿಯನ್ನು ಸಂಸ್ಥೆ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಕೆಲವು ವರದಿಗಳ ಪ್ರಕಾರ, ಜುಲೈ ತಿಂಗಳಲ್ಲಿ ವಿದೇಶಿ ವಿನಿಮಯ ಅಪರಾಧಗಳ ಆಪಾದಿತ ಪ್ರಕರಣಗಳ ತನಿಖೆಯ ಭಾಗವಾಗಿ ಹೆಚ್ಚಿನ ಮಾಹಿತಿ ಮತ್ತು ದಾಖಲೆಗಳನ್ನು ಸಲ್ಲಿಸುವಂತೆ ಕಾಯಿನ್ ಡಿಸಿಎಕ್ಸ್, ಕಾಯಿನ್​ಸ್ವಿಚ್ ಕುಬರ್ ಸೇರಿದಂತೆ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರಗಳಿಗೆ ಇಡಿ ಸೂಚಿಸಿತ್ತು.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ