AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Breaking News: ಬಳ್ಳಾರಿ, ತುಮಕೂರು, ಚಿತ್ರದುರ್ಗದಲ್ಲಿ ಕಬ್ಬಿಣ ಅದಿರು ಉತ್ಪಾದನೆ ಹೆಚ್ಚಿಸಲು ಸುಪ್ರೀಂಕೋರ್ಟ್ ಸಮ್ಮತಿ: ಷೇರುಪೇಟೆಯಲ್ಲಿ ಸಂಚಲನ

ಕರ್ನಾಟಕದ ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗಗಳಲ್ಲಿ ಅದಿರು ಉತ್ಪಾದನೆ ಮತ್ತು ರಫ್ತಿಗೆ ಸುಪ್ರೀಂಕೋರ್ಟ್ 2011ರಲ್ಲಿ ನಿರ್ಬಂಧ ವಿಧಿಸಿತ್ತು.

Breaking News: ಬಳ್ಳಾರಿ, ತುಮಕೂರು, ಚಿತ್ರದುರ್ಗದಲ್ಲಿ ಕಬ್ಬಿಣ ಅದಿರು ಉತ್ಪಾದನೆ ಹೆಚ್ಚಿಸಲು ಸುಪ್ರೀಂಕೋರ್ಟ್ ಸಮ್ಮತಿ: ಷೇರುಪೇಟೆಯಲ್ಲಿ ಸಂಚಲನ
ಗಣಿಗಾರಿಕೆ ಮತ್ತು ಸುಪ್ರೀಂಕೋರ್ಟ್ (ಸಂಗ್ರಹ ಚಿತ್ರ)
TV9 Web
| Edited By: |

Updated on:Aug 26, 2022 | 11:56 AM

Share

ದೆಹಲಿ: ಕರ್ನಾಟಕದ ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಕಬ್ಬಿಣದ ಅದಿರು ಉತ್ಪಾದನೆಗೆ ವಿಧಿಸಿದ್ದ ಮಿತಿಯಲ್ಲಿ ಸುಪ್ರೀಂಕೋರ್ಟ್​ ಒಂದಿಷ್ಟು ರಿಯಾಯ್ತಿ ನೀಡಿದೆ. ಕಬ್ಬಿಣ ಉತ್ಪಾದನೆ ಹೆಚ್ಚಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದ ಬೆನ್ನಿಗೇ ಷೇರುಪೇಟೆಯಲ್ಲಿ ಲೋಹ ವಲಯದ (Metal Sector) ಷೇರುಗಳ ಮೌಲ್ಯ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಹೂಡಿದಾರರ ಗಮನ ಸೆಳೆದಿವೆ. ಬೆಳಿಗ್ಗೆ 11.35ರ ಹೊತ್ತಿಗೆ ಟಾಟಾ ಸ್ಟೀಲ್ ₹ 108.70 ( ಶೇ 2.31 ಏರಿಕೆ), ಜೆಎಸ್​ಡಬ್ಲ್ಯು ಸ್ಟೀಲ್ ₹ 663.95ರ (ಶೇ 2.35 ಏರಿಕೆ) ದರದಲ್ಲಿ ವಹಿವಾಟು ನಡೆಸುತ್ತಿದ್ದವು.

ಬಳ್ಳಾರಿ ಜಿಲ್ಲೆಯಲ್ಲಿ 28 ದಶಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಉತ್ಪಾದನೆಗೆ ವಿಧಿಸಿದ್ದ ಮಿತಿಯನ್ನು ಸುಪ್ರೀಂಕೋರ್ಟ್​ ಇದೀಗ 35 ದಶಲಕ್ಷ ಮೆಟ್ರಿಕ್ ಟನ್​ಗೆ ಹೆಚ್ಚಿಸಿದೆ. ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಈ ಮೊದಲು 7 ದಶಲಕ್ಷ ಟನ್ ಅದಿರು ಉತ್ಪಾದನೆಗೆ ಅವಕಾಶವಿತ್ತು. ಇದೀಗ ಈ ಮಿತಿಯನ್ನು 15 ದಶಲಕ್ಷ ಟನ್​ಗೆ ಹೆಚ್ಚಿಸಲಾಗಿದೆ ಎಂದು ‘ಮನಿಕಂಟ್ರೋಲ್’ ಜಾಲತಾಣ ವರದಿ ಮಾಡಿದೆ.

‘ಅದಿರು ಉತ್ಪಾದನೆಯ ಜೊತೆಗೆ ಪರಿಸರ ಮತ್ತು ಆರ್ಥಿಕ ಅಭಿವೃದ್ಧಿಯು ಜೊತೆಜೊತೆಗೆ ನಡೆಯಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಮೂರೂ ಜಿಲ್ಲೆಗಳಲ್ಲಿ ಉತ್ಪಾದನೆಯಾಗುವ ಕಬ್ಬಿಣದ ಅದಿರು ರಫ್ತು ಮಾಡಲು ಇದ್ದ ನಿರ್ಬಂಧವನ್ನು ಕಳೆದ ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್​ ತೆರವು ಮಾಡಿತ್ತು. ಇ-ಹರಾಜಿನ ಬದಲು ನೇರ ಮಾರಾಟದ ಮೂಲಕ ಅದಿರು ಮಾರಾಟಕ್ಕೆ ಸುಪ್ರೀಂಕೋರ್ಟ್​ ಸೂಚನೆ ನೀಡಿದೆ.

ಕರ್ನಾಟಕದ ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗಗಳಲ್ಲಿ ಅದಿರು ಉತ್ಪಾದನೆ ಮತ್ತು ರಫ್ತಿಗೆ ಸುಪ್ರೀಂಕೋರ್ಟ್ 2011ರಲ್ಲಿ ನಿರ್ಬಂಧ ವಿಧಿಸಿತ್ತು. ಪರಿಸರ ಸಂರಕ್ಷಣೆಗಾಗಿ ಅದಿರು ಉತ್ಪಾದನೆಗೆ ನಿರ್ಬಂಧ ಅಗತ್ಯ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು.

Published On - 11:56 am, Fri, 26 August 22

Follow Us
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ