AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar card: ನಿಮ್ಮ ಆಧಾರ್ ಕಾರ್ಡ್​ ಫೋಟೋ ಬದಲಾಯಿಸಬೇಕೇ? ಇಲ್ಲಿದೆ ನೋಡಿ ಸುಲಭ ವಿಧಾನ

ಆಧಾರ್ ಕಾರ್ಡ್‌ನಲ್ಲಿರುವ ಫೋಟೋ ನೋಡಿದಾಗ ಅದೆಷ್ಟೋ ಜನಿಗೆ ನಗು ಬರುತ್ತದೆ. ಬದಲಾವಣೆ ಮಾಡಬೇಕು ಎಂದು ಬಯಸಿರುತ್ತಾರೆ. ಅಂತವರು ಚಿಂತಿಸುವ ಅವಶ್ಯಕೆ ಇಲ್ಲ, ಸುಲಭ ವಿಧಾನಗಳ ಮೂಲಕ ಆಧಾರ್ ಫೋಟೋವನ್ನು ಬದಲಾವಣೆ ಮಾಡಬಹುದು.

Aadhaar card: ನಿಮ್ಮ ಆಧಾರ್ ಕಾರ್ಡ್​ ಫೋಟೋ ಬದಲಾಯಿಸಬೇಕೇ? ಇಲ್ಲಿದೆ ನೋಡಿ ಸುಲಭ ವಿಧಾನ
ಆಧಾರ್ ಕಾರ್ಡ್ ಸಾಂಕೇತಿಕ ಚಿತ್ರ
TV9 Web
| Updated By: Rakesh Nayak Manchi|

Updated on: Aug 26, 2022 | 10:47 AM

Share

ಎಷ್ಟೇ ಸುಂದರ ವ್ಯಕ್ತಿಯಾಗಿದ್ದರೂ ಆಧಾರ್ ಕಾರ್ಡ್​ನಲ್ಲಿರುವ ಫೋಟೋವನ್ನು ಮಾತ್ರ ವರ್ಣಿಸಲು ಸಾಧ್ಯವಿಲ್ಲ, ಸಣ್ಣವರಿದ್ದಾಗ ಮಾಡಿದ ಈ ಕಾರ್ಡ್ ದೊಡ್ಡವರಾದ ಮೇಲೆ ನೋಡಿದಾಗ ಅಯ್ಯೋ ಹೇಗಿದ್ದೆ ನಾನು? ಎಂಬ ಪ್ರಶ್ನೆ ಮೂಡುತ್ತದೆ. ಅನೇಕರು ತಮ್ಮ ಆಧಾರ್ ಕಾರ್ಡ್​ನಲ್ಲಿ ಫೋಟೋವನ್ನು ನೋಡಿ ಅಸಮಾಧಾನಗೊಂಡಿದ್ದು, ಬದಲಾವಣೆ ಮಾಡಬೇಕು ಎಂದು ಬಯಸುತ್ತಿದ್ದಾರೆ. ಆಧಾರ್ ಕಾರ್ಡ್ ಒಂದು ಪ್ರಮುಖ ಗುರುತಿನ ಚೀಟಿ ಆಗಿರುವುದರಿಂದ ಅದರಲ್ಲಿ ನಿಮ್ಮ ಫೋಟೋ ಚೆನ್ನಾಗಿಲ್ಲದಿದ್ದರೆ ಬೇಸರಗೊಳ್ಳಬೇಡಿ. ಏಕೆಂದರೆ ನೀವು ನಿಮ್ಮ ಫೋಟೋವನ್ನು ಕೆಲವು ಸರಳ ವಿಧಾನಗಳ ಮೂಲಕ ಬದಲಾಯಿಸಬಹುದು. ಇದಕ್ಕಾಗಿ ಸರಳ ಪ್ರಕ್ರಿಯೆಯನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಸೂಚಿಸಿದೆ. ಆಧಾರ್ ಕಾರ್ಡ್‌ನಲ್ಲಿರುವ ಫೋಟೋವನ್ನು ಬದಲಾಯಿಸಲು ಸುಮಾರು 90 ದಿನಗಳನ್ನು ತೆಗೆದುಕೊಳ್ಳಬಹುದು. ಆಧಾರ್ ಕಾರ್ಡ್ ಬದಲಾವಣೆಗೆ ನೀವು ಆಧಾರ್ ಕೇಂದ್ರಕ್ಕೆ ಹೋಗಬೇಕು. ಸಾಮಾನ್ಯ ನಾಗರಿಕರು ತಮ್ಮ ಆಧಾರ್ ಕಾರ್ಡ್ ಅನ್ನು ಸುಲಭವಾಗಿ ಮಾರ್ಪಡಿಸಲು ಅನುವು ಮಾಡಿಕೊಡಲು UIDAI ದೇಶದ 53 ನಗರಗಳಲ್ಲಿ 114 ಆಧಾರ್ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಿದೆ.

ಫೋಟೋವನ್ನು ಬದಲಾಯಿಸುವ ಸುಲಭ ವಿಧಾನಗಳು

ನಿಮ್ಮ ಆಧಾರ್ ಫೋಟೋದಿಂದ ನೀವು ಅತೃಪ್ತರಾಗಿದ್ದರೆ ಅಥವಾ ನೀವು ಆ ಫೋಟೋವನ್ನು ಬದಲಾಯಿಸಲು ಬಯಸುತ್ತಿದ್ದರೆ ನಿಮ್ಮ ಹತ್ತಿರದ ಅಧಿಕೃತ ಆಧಾರ್ ಕೇಂದ್ರಕ್ಕೆ ಭೇಟಿ ಕೊಡಿ. ಇಲ್ಲಿ ನೀವು ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿದ ನಂತರ ತಮ್ಮ ಫೋಟೋವನ್ನು ಬದಲಾಯಿಸಬಹುದು. ಇನ್ನೂ ಸರಳವಾಗಿ ವಿವರಿಸುತ್ತೇವೆ ನೋಡಿ:

  1. ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ.
  2. UIDAI ವೆಬ್‌ಸೈಟ್‌ನಿಂದ ಆಧಾರ್ ನೋಂದಣಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ.
  3. ಮಾಡಬೇಕಾದ ಬದಲಾವಣೆಗಳೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಿ.
  4. ಬಯೋಮೆಟ್ರಿಕ್ ವಿವರಗಳೊಂದಿಗೆ ಫಾರ್ಮ್ ಅನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸಲ್ಲಿಸಿ.
  5. ಇದರ ನಂತರ ಸಂಬಂಧಪಟ್ಟ ಅಧಿಕಾರಿ ನಿಮ್ಮ ಹೊಸ ಛಾಯಾಚಿತ್ರವನ್ನು ತೆಗೆದುಕೊಳ್ಳುತ್ತಾರೆ.
  6. ಬಯೋಮೆಟ್ರಿಕ್
  7. ಅನ್ನು ಒದಗಿಸುವ ಮೂಲಕ ಕಾರ್ಡ್‌ದಾರರು ಸಂಬಂಧಿತ ಮಾಹಿತಿಯನ್ನು ಪರಿಶೀಲಿಸಬೇಕು. ಈ ಪ್ರಕ್ರಿಯೆಗೆ ರೂ.50, ಜಿಎಸ್‌ಟಿ ವಿಧಿಸಲಾಗುತ್ತದೆ.
  8. ನೋಂದಣಿ ಮತ್ತು ಪ್ರಕ್ರಿಯೆಯ ನಂತರ ರಶೀದಿಯನ್ನು ನೀಡಲಾಗುತ್ತದೆ.
  9. ನಿಮ್ಮ ಬದಲಾವಣೆಯ ಸ್ಥಿತಿಯನ್ನು ವೆಬ್‌ಸೈಟ್‌ನಿಂದ ಪರಿಶೀಲಿಸಬಹುದು.
  10. ನವೀಕರಿಸಿದ ಆಧಾರ್ ಕಾರ್ಡ್ ಅನ್ನು UIDAI ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು.

ತಿಳಿದುಕೊಳ್ಳಬೇಕಾದ ವಿಷಯ

ಆಧಾರ್ ಕಾರ್ಡ್‌ನಲ್ಲಿರುವ ಫೋಟೋವನ್ನು ಬದಲಾಯಿಸಲು ಸುಮಾರು 90 ದಿನಗಳನ್ನು ತೆಗೆದುಕೊಳ್ಳಬಹುದು. ಆಧಾರ್ ಸೇವಾ ಕೇಂದ್ರದ ಸಂಬಂಧಪಟ್ಟ ಅಧಿಕಾರಿ ಈ ಫೋಟೋವನ್ನು ಬದಲಾಯಿಸುತ್ತಾರೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ನೀವು ನವೀಕರಿಸಿದ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೇಗೆ ಹೆಣ ಎಸೆದು ಹೋದ ನೋಡಿ ಆಂಬ್ಯುಲೆನ್ಸ್​ ಚಾಲಕ
ಹೇಗೆ ಹೆಣ ಎಸೆದು ಹೋದ ನೋಡಿ ಆಂಬ್ಯುಲೆನ್ಸ್​ ಚಾಲಕ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್