AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Edible Oil: ಕಳೆದ 30 ದಿನದಲ್ಲಿ ಖಾದ್ಯ ತೈಲಗಳ ಬೆಲೆ 8ರಿಂದ 10 ರೂ. ಇಳಿಕೆ; ಮುಂದಿನ ತಿಂಗಳಲ್ಲಿ ಇನ್ನಷ್ಟು ಕಡಿಮೆ ನಿರೀಕ್ಷೆ

ಖಾದ್ಯ ತೈಲಗಳ ಬೆಲೆ ಕಳೆದ 30 ದಿನದಲ್ಲಿ ರೂ. 8ರಿಂದ 10 ಇಳಿಕೆ ಆಗಿದೆ. ಮುಂಬರುವ ತಿಂಗಳಲ್ಲಿ ಮೂರರಿಂದ ನಾಲ್ಕು ರೂಪಾಯಿ ಇಳಿಕೆ ಆಗಿದೆ ಎಂಬ ನಿರೀಕ್ಷೆ ಇದೆ.

Edible Oil: ಕಳೆದ 30 ದಿನದಲ್ಲಿ ಖಾದ್ಯ ತೈಲಗಳ ಬೆಲೆ 8ರಿಂದ 10 ರೂ. ಇಳಿಕೆ; ಮುಂದಿನ ತಿಂಗಳಲ್ಲಿ ಇನ್ನಷ್ಟು ಕಡಿಮೆ ನಿರೀಕ್ಷೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Dec 11, 2021 | 7:45 PM

Share

ಕಳೆದ ಒಂದು ತಿಂಗಳಲ್ಲಿ ಖಾದ್ಯ ತೈಲ ಬೆಲೆಗಳು ಕೇಜಿಗೆ 8ರಿಂದ 10 ರೂಪಾಯಿಯಷ್ಟು ಕಡಿಮೆಯಾಗಿದೆ. ಪ್ರಮುಖವಾಗಿ ಕಡಿಮೆ ಆಮದು ಸುಂಕದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದ್ದು, ಮುಂದಿನ ತಿಂಗಳುಗಳಲ್ಲಿ ತೈಲಬೀಜಗಳ ಹೆಚ್ಚಿನ ದೇಶೀಯ ಉತ್ಪಾದನೆ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿನ ಟ್ರೆಂಡ್​ ಕಾರಣಕ್ಕೆ ಪ್ರತಿ ಕೇಜಿಗೆ ಇನ್ನೂ 3ರಿಂದ 4 ರುಪಾಯಿಯಷ್ಟು ಕುಸಿಯಬಹುದು ಎಂದು ಉದ್ಯಮ ಸಂಸ್ಥೆಗಳ ಒಕ್ಕೂಟವಾದ SEA (Solvent Extractors Association Of India) ಹೇಳಿದೆ. “ಕಳೆದ ಕೆಲವು ತಿಂಗಳುಗಳಿಂದ ತಾಳೆ, ಸೋಯಾ ಮತ್ತು ಸೂರ್ಯಕಾಂತಿ ಹೀಗೆ ಎಲ್ಲ ತೈಲಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆ ಕಾರಣದಿಂದಾಗಿ ಭಾರತೀಯ ಖಾದ್ಯ ತೈಲ ಗ್ರಾಹಕರು ತೊಂದರೆಗೀಡಾಗಿದ್ದಾರೆ,” ಎಂದು ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಎಸ್‌ಇಎ) ಅಧ್ಯಕ್ಷ ಅತುಲ್ ಚತುರ್ವೇದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಸ್​ಇಎ ತನ್ನ ಸದಸ್ಯರಿಗೆ ದೀಪಾವಳಿಯ ಮೊದಲು ಬೆಲೆಗಳನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಲು ಸಲಹೆ ಮಾಡಿತ್ತು. ಕೇಂದ್ರವು ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದೆ ಎಂದು ಅವರು ಹೇಳಿದ್ದಾರೆ. “ಈ ಎಲ್ಲ ಕ್ರಮಗಳ ಪರಿಣಾಮವಾಗಿ ಕಳೆದ 30 ದಿನಗಳಲ್ಲಿ ಖಾದ್ಯ ತೈಲ ಬೆಲೆ ಪ್ರತಿ ಕೇಜಿಗೆ 8ರಿಂದ 10 ರೂಪಾಯಿಯಷ್ಟು ಕಡಿಮೆಯಾಗಿದೆ ಎಂದು ಖಚಿತಪಡಿಸಲು ನಾವು ಸಂತೋಷಪಡುತ್ತೇವೆ,” ಎಂದು ಚತುರ್ವೇದಿ ತಿಳಿಸಿದ್ದಾರೆ. ಕಡಿಮೆ ಬೆಲೆಯಿಂದ ಆಗುವ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಲ್ಲಿ ಅದರ ಸದಸ್ಯರು ಈ ಹಿಂದೆ ಶೀಘ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಎಸ್​ಇಎ ಹೇಳಿದೆ.

“ನಮ್ಮ ಸದಸ್ಯರು ಭವಿಷ್ಯದಲ್ಲಿ ಪ್ರತಿ ಕೇಜಿಗೆ ಸುಮಾರು 3ರಿಂದ 4 ರೂಪಾಯಿಯಷ್ಟು ಬೆಲೆಗಳನ್ನು ಕಡಿಮೆ ಮಾಡುತ್ತಾರೆ ಎಂದು ನಾವು ಭಾವಿಸುತ್ತೇವೆ. ಇದು ಹಬ್ಬದ ಸಮಯದಲ್ಲಿ ನಮ್ಮ ಖಾದ್ಯ ತೈಲ ಗ್ರಾಹಕರಿಗೆ ಪರಿಹಾರವಾಗಿ ಒದಗಿಸಬೇಕು”. ಸುಮಾರು 120 ಲಕ್ಷ ಟನ್‌ಗಳಷ್ಟು ದೊಡ್ಡ ಸೋಯಾಬೀನ್ ಬೆಳೆ ಮತ್ತು 80 ಲಕ್ಷ ಟನ್‌ಗಿಂತಲೂ ಹೆಚ್ಚಿನ ಕಡಲೆ ಬೆಳೆಯೊಂದಿಗೆ, ಖಾದ್ಯ ತೈಲ ಬೆಲೆಗಳು ಈಗ ನಿಯಂತ್ರಣದಲ್ಲಿರುತ್ತವೆ ಎಂದು ಚತುರ್ವೇದಿ ಹೇಳಿದ್ದಾರೆ. ಹೆಚ್ಚಿನ ಸಾಸಿವೆ ಕಾಳು ಬೆಲೆಯು ರೈತರಿಂದ ಬೃಹತ್ ಪೂರೈಕೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಮತ್ತು ಸುಮಾರು 77.62 ಲಕ್ಷ ಹೆಕ್ಟೇರ್‌ಗಳಲ್ಲಿ ಸಾರ್ವಕಾಲಿಕ ಹೆಚ್ಚಿನ ಸಾಸಿವೆ ಬೆಳೆಯನ್ನು ಅವರು ಹಾಕಿದ್ದಾರೆ. ಈ ಅಂಕಿ- ಅಂಶವು ಸುಮಾರು ಶೇ 30ರಷ್ಟು ಹೆಚ್ಚಾಗಿದೆ. ಮುಂಬರುವ ವರ್ಷದಲ್ಲಿ ದೇಶೀಯ ಸಾಸಿವೆ ಎಣ್ಣೆಯ ಲಭ್ಯತೆಯನ್ನು 8 ರಿಂದ 10 ಲಕ್ಷ ಟನ್‌ಗಳಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದಿದ್ದಾರೆ.

ಖಾದ್ಯ ತೈಲ ಬೆಲೆಗಳ ಜಾಗತಿಕ ಟ್ರೆಂಡ್ “ತುಲನಾತ್ಮಕವಾಗಿ ಇಳಿಕೆ ಹಾದಿಯಲ್ಲಿದೆ ಮತ್ತು ಬೆಲೆಗಳು ಕೆಳಮುಖವಾಗಿ ಚಲಿಸುತ್ತವೆ ಎಂದು ನಾವು ಭಾವಿಸುತ್ತೇವೆ,” ಎಂದು ಚತುರ್ವೇದಿ ಹೇಳಿದ್ದಾರೆ. ಎಸ್​ಇಎ ಪ್ರಕಾರ, ಖಾದ್ಯ ತೈಲಗಳ ಆಮದಿನ ಮೇಲೆ ಭಾರತದ ಅವಲಂಬನೆಯು ಸುಮಾರು 22-22.5 ಮಿಲಿಯನ್ ಟನ್‌ಗಳ ಒಟ್ಟು ಬಳಕೆಯ ಶೇಕಡಾ 65 ರಷ್ಟಿದೆ. ಬೇಡಿಕೆ ಮತ್ತು ದೇಶೀಯ ಪೂರೈಕೆಯ ನಡುವಿನ ಅಂತರವನ್ನು ಕಡಿಮೆ ಮಾಡಲು ದೇಶವು 13-15 ಮಿಲಿಯನ್ ಟನ್‌ಗಳನ್ನು ಆಮದು ಮಾಡಿಕೊಳ್ಳುತ್ತದೆ. ಕಳೆದ ಎರಡು ಮಾರುಕಟ್ಟೆ ವರ್ಷಗಳಲ್ಲಿ (ನವೆಂಬರ್​ನಿಂದ ಅಕ್ಟೋಬರ್) ಕೊರೊನಾದಿಂದಾಗಿ ಆಮದು ಸುಮಾರು 13 ಮಿಲಿಯನ್ ಟನ್‌ಗಳಿಗೆ ಕಡಿಮೆಯಾಗಿದೆ.

“2019-20ರಲ್ಲಿ ಆಮದು ಸುಮಾರು 71,600 ಕೋಟಿ ರೂಪಾಯಿ ಮೌಲ್ಯದ 13.2 ಮಿಲಿಯನ್ ಟನ್‌ಗೆ ಇಳಿಯಿತು. 2020-21ರಲ್ಲಿ ಭಾರತವು ಇದೇ ಪ್ರಮಾಣದಲ್ಲಿ ಆಮದು ಮಾಡಿಕೊಂಡಿತು ಆದರೆ ಆಮದು ಬಿಲ್ ಶೇ 63ರಷ್ಟು ಜಿಗಿದಿದೆ ಮತ್ತು ಅಂತರರಾಷ್ಟ್ರೀಯ ಏರಿಕೆಯಿಂದಾಗಿ ಖಾದ್ಯ ತೈಲಗಳ ಬೆಲೆಗಳು 1.17 ಲಕ್ಷ ಕೋಟಿ ರೂಪಾಯಿಗೆ ಅಪಾಯಕಾರಿ ಮಟ್ಟವನ್ನು ಮುಟ್ಟಿದೆ,” ಎಂದು ಎಸ್​ಇಎ ಕಳೆದ ತಿಂಗಳು ಹೇಳಿತ್ತು.

ಇದನ್ನೂ ಓದಿ: Edible Oil: ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಇಳಿಕೆ ಮಾಡಿದ ಕೇಂದ್ರ ಸರ್ಕಾರ; ಗ್ರಾಹಕರಿಗೆ ನಿರಾಳ

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ