Deposit Insurance: ಕರ್ನಾಟಕದ ನಾಲ್ಕು ಬ್ಯಾಂಕ್​ಗಳ ಗ್ರಾಹಕರ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ

PM Narendra Modi: 1944 ರಲ್ಲಿ ವಿಜಯಪುರದಲ್ಲಿ ದಿ ಡೆಕ್ಕನ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಸ್ಥಾಪನೆಯಾಗಿದ್ದುಸದ್ಯ ಈ ಬ್ಯಾಂಕ್ ಸುಮಾರು 10,000 ಗ್ರಾಹಕರನ್ನು ಹೊಂದಿದ್ದರೂ ಸ್ಥಿತಿ ಉತ್ತಮವಾಗಿಲ್ಲ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ. ಅದೇನೇ ಇದ್ದರೂ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪನೆಯಾದ ಬ್ಯಾಂಕಿನ ಗ್ರಾಹಕರೊಂದಿಗೆ ಇಂದು ಪ್ರಧಾನಿ ಮೋದಿ ವರ್ಚ್ಯೂವಲ್ ಕಾರ್ಯಕ್ರಮದ ಮೂಲಕ ಮಾತನಾಡುತ್ತಿರೋದು ಜಿಲ್ಲೆಯ ಜನರಿಗೆ ಖುಷಿಯ ವಿಚಾರವಾಗಿದೆ.

Deposit Insurance: ಕರ್ನಾಟಕದ ನಾಲ್ಕು ಬ್ಯಾಂಕ್​ಗಳ ಗ್ರಾಹಕರ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ
Deposit Insurance: ಇಂದು ರಾಜ್ಯದ 4 ಬ್ಯಾಂಕ್‌ಗಳ ಠೇವಣಿದಾರರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 13, 2021 | 5:51 PM

ವಿಜಯಪುರ: ಭಾರತೀಯ ರಿಸರ್ವ್​ ಬ್ಯಾಂಕ್​ (RBI) ನಿಯಂತ್ರಣ ಕಾಯ್ದೆಗೆ ತಿದ್ದುಪಡಿಯಾಗಿದೆ. ಈ ಕಾಯ್ದೆಗೆ ತಿದ್ದುಪಡಿಯಿಂದ ಡಿಪಾಸಿಟ್ ಹಣ ಹಿಂಪಡೆಯುವುದಕ್ಕೆ ಅವಕಾಶ, ವಿಮಾ ವ್ಯಾಪ್ತಿಯ ಮಿತಿಯಲ್ಲಿ ಹಣ ಹಿಂಪಡೆಯಲು ಅವಕಾಶ ಸಿಗುತ್ತದೆ. ಈ ಕಾಯ್ದೆಗೆ ಒಳಪಡುವ ಫಲಾನುಭವಿಗಳ (Depositors) ಜೊತೆಗೆ (ಇಂದು ಭಾನುವಾರ ಡಿಸೆಂಬರ್ 12 ರಂದು) ದೇಶದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಂವಾದ ನಡೆಸಲಿದ್ದಾರೆ. ವರ್ಚ್ಯೂವಲ್ ಕಾರ್ಯಕ್ರಮದ ಮೂಲಕ ಫಲಾನುಭವಿಗಳ ಜೊತೆಗೆ ಪ್ರಧಾನಿ ಮಾತನಾಡಲಿದ್ದಾರೆ. ಇಂದು ಬೆಳಗ್ಗೆ 11 ರಿಂದ 12 ಗಂಟೆ ಸುಮಾರಿಗೆ ಫಲಾನುಭವಿಗಳ (Deposit Insurance) ಜೊತೆಗೆ ಸಂವಾದ ಕಾರ್ಯಕ್ರಮ (Bank Deposit Insurance Programme) ನಡೆಯಲಿದೆ.

ಪ್ರಧಾನಿ ಜೊತೆಗೆ ಇಂದು ನಡೆಯಲಿರೋ ಸಂವಾದದಲ್ಲಿ ರಾಜ್ಯದ 4 ಬ್ಯಾಂಕ್‌ಗಳ ಫಲಾನುಭವಿಗಳು ಚರ್ಚೆ ನಡೆಸಲಿದ್ದಾರೆ. ರಾಜ್ಯದ ನಾಲ್ಕು ಬ್ಯಾಂಕಗಳ ಪೈಕಿ ವಿಜಯಪುರ ನಗರದ ಸ್ಟೇಷನ್ ರಸ್ತೆಯಲ್ಲಿನ ದಿ ಡೆಕ್ಕನ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಡೆಪಾಸಿಟ್ ಇನ್ಸೂರೆನ್ಸ್ ಫಲಾನುಭವಿಗಳು ಭಾಗಿಯಾಗುತ್ತಿದ್ದಾರೆ. ನಗರದ ಕಂದಗಲ್ ಹನುಂತರಾಯ ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾದ ಡೆಕ್ಕನ್ ಅರ್ಬನ್ ಕೋ ಆಪ್ ಬ್ಯಾಂಕ್ ಸ್ಥಿತಿ ಉತ್ತಮವಾಗಿಲ್ಲ, ಪ್ರಧಾನಿ ಮಾತುಕತೆ: ಓರ್ವ ಫಲಾನುಭವಿಗೆ ಪ್ರಶ್ನೆ ಕೇಳಲು ಅಥವಾ ಮಾತನಾಡಲು 30 ರಿಂದ 35 ಸೆಕೆಂಡ್ ಕಾಲಾವಕಾಶ ಮಾತ್ರ ನೀಡಲಾಗಿದೆ. 1944 ರಲ್ಲಿ ದಿ ಡೆಕ್ಕನ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಸ್ಥಾಪನೆಯಾಗಿದ್ದು ಸ್ವಾತಂತ್ರ ಪೂರ್ವದಲ್ಲಿಯೇ ಸ್ಥಾಪನೆಯಾದ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸದ್ಯ ದಿ ಡೆಕ್ಕನ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಸುಮಾರು 10,000 ಗ್ರಾಹಕರನ್ನು (Savings Depositors) ಹೊಂದಿದ್ದರೂ ಸ್ಥಿತಿ ಉತ್ತಮವಾಗಿಲ್ಲ ಎಂದು ಬ್ಯಾಂಕಿನ ಕೆಲ ಮೂಲಗಳು ತಿಳಿಸಿವೆ. ಅದೇನೇ ಇದ್ದರೂ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪನೆಯಾದ ಬ್ಯಾಂಕಿನ ಗ್ರಾಹಕರೊಂದಿಗೆ ಇಂದು ಪ್ರಧಾನಿ ಮೋದಿ ವರ್ಚ್ಯೂವಲ್ ಕಾರ್ಯಕ್ರಮದ ಮೂಲಕ ಮಾತನಾಡುತ್ತಿರೋದು ವಿಜಯಪುರ ಜಿಲ್ಲೆಯ ಜನರಿಗೆ ಖುಷಿಯ ವಿಚಾರವಾಗಿದೆ.

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಮಿಲ್ಲತ್ ಬ್ಯಾಂಕ್ ಸಿಬ್ಬಂದಿ ಪ್ರಧಾನಿ ಜೊತೆ ವರ್ಚುಯಲ್ ಸಭೆ ದಾವಣಗೆರೆ: ಕೇಂದ್ರ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಡಿಸೆಂಬರ್ 12 ರಂದು ದಾವಣಗೆರೆ ಜಿಲ್ಲೆ ಪ್ರವಾಸ ಹಮ್ಮಿಕೊಂಡಿದ್ದಾರೆ. ಸಚಿವ ರಾಜೀವ್ ಚಂದ್ರಶೇಖರ್ ಅವರು ಡಿಸೆಂಬರ್ 12 ರಂದು ಬೆಳಗ್ಗೆ ಬೆಂಗಳೂರಿನಿಂದ ಹೊರಟು, 10.30 ಗಂಟೆಗೆ ದಾವಣಗೆರೆ ನಗರಕ್ಕೆ ಆಗಮಿಸುವರು. ಬಳಿಕ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ‘ಡೆಪಾಸಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ತಿದ್ದುಪಡಿ) ಕಾಯ್ದೆ 2021 ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ವರ್ಚುಯಲ್ ಮೂಲಕ ನಡೆಯುವ ಈ ಕಾರ್ಯಕ್ರಮದಲ್ಲಿ ಸಚಿವ ರಾಜೀವ್ ಚಂದ್ರಶೇಖರ್ ಅವರು ಭಾಗವಹಿಸುವರು. ಇದೇ ವೇಳೆ ರಾಜ್ಯದ ಕೆಲ ಸಹಕಾರಿ ಬ್ಯಾಂಕ್ ಗಳ‌ ಸಿಬ್ಬಂದಿ ಜೊತೆ ಪ್ರಧಾನಿ ಮಾತನಾಡಲಿದ್ದಾರೆ. ಇದರಲ್ಲಿ ದಾವಣಗೆರೆ ಮಿಲ್ಲತ್ ಬ್ಯಾಂಕ್ ಸಿಬ್ಬಂದಿ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುಯಲ್ ನಲ್ಲಿ ಮಾತನಾಡಲಿದ್ದಾರೆ‌.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ದೆಹಲಿಯ ವಿಜ್ಞಾನ ಭವನದಲ್ಲಿ – ಡೆಪಾಸಿಟರ್ಸ್ ಫಸ್ಟ್: ಗ್ಯಾರಂಟೀಡ್ ಟೈಮ್- ಬೌಂಡ್ ಡೆಪಾಸಿಟ್ ಇನ್ಷೂರೆನ್ಸ್ ಪೇಮೆಂಟ್ ಅಪ್​ ಟು ರುಪೀಸ್ 5 ಲ್ಯಾಕ್ಸ್ (Depositors First: Guaranteed Time-bound Deposit Insurance Payment up to Rs 5 Lakh) ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. ಠೇವಣಿ ವಿಮೆಯು ಠೇವಣಿದಾರರ ಎಲ್ಲ ಠೇವಣಿಗಳಾದ ಉಳಿತಾಯ, ನಿಶ್ಚಿತ, ಚಾಲ್ತಿ, ರೆಕರಿಂಗ್ ಡೆಪಾಸಿಟ್ಸ್ ಇವೆಲ್ಲವನ್ನೂ ಕವರ್ ಮಾಡುತ್ತದೆ. ಭಾರತದಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ವಾಣಿಜ್ಯ ಬ್ಯಾಂಕ್​ಗಳು ಒಳಗೊಳ್ಳುತ್ತವೆ. ಅಷ್ಟೇ ಅಲ್ಲ, ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜ್ಯ, ಕೇಂದ್ರ ಮತ್ತು ಪ್ರಾಥಮಿಕ ಕೋ-ಆಪರೇಟಿವ್ ಬ್ಯಾಂಕ್​ಗಳು ಸಹ ಸೇರುತ್ತವೆ. ಪ್ರಮುಖ ಸುಧಾರಣೆ ಕ್ರಮದಲ್ಲಿ ಬ್ಯಾಂಕ್ ಠೇವಣಿ ಇನ್ಷೂರೆನ್ಸ್ ಕವರ್ ಅನ್ನು ರೂ.1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಯಿತು.

1 ಲಕ್ಷದಷ್ಟು ಠೇವಣಿದಾರರು ತಮ್ಮ ಕ್ಲೇಮ್​ಗೆ ರೂ. 1300 ಕೋಟಿ ಪಡೆದುಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ಖಾತೆ ರಾಜ್ಯ ಸಚಿವರಾದ ಭಾಗ್ವತ್ ಕೆ. ಕರಡ್ ಮತ್ತು ಆರ್​ಬಿಐ ಗವರ್ನರ್​ ಆದ ಶಕ್ತಿಕಾಂತ ದಾಸ್ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: Insurance On Deposits: ಬ್ಯಾಂಕ್​ಗಳ ಹಣಕಾಸು ನಿರ್ಬಂಧ, ವಂಚನೆಯಾದಲ್ಲಿ 90 ದಿನದೊಳಗೆ 5 ಲಕ್ಷ ರೂ. ಇನ್ಷೂರೆನ್ಸ್

Published On - 6:00 am, Sun, 12 December 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್