Electoral Bonds: ಜನವರಿ 2ರಿಂದ 11ರವರೆಗೆ ಎಸ್​ಬಿಐನ ಈ 29 ಕಚೇರಿಗಳಲ್ಲಿ ಸಿಗಲಿದೆ ಎಲೆಕ್ಟೋರಲ್ ಬಾಂಡ್; ಏನಿದು ಬಾಂಡ್?

|

Updated on: Jan 01, 2024 | 7:08 PM

SBI branches to distribute electoral bonds: ದೇಶಾದ್ಯಂತ ಎಸ್​ಬಿಐನ 29 ಪ್ರಧಾನ ಕಚೇರಿಗಳಲ್ಲಿ 2024ರ ಜನವರಿ 2ರಿಂದ 11ರವರೆಗೆ ಚುನಾವಣಾ ಬಾಂಡ್​ಗಳು ಮಾರಾಟಕ್ಕಿರಲಿವೆ. ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಎಸ್​ಬಿಐ ಬ್ರ್ಯಾಂಚ್​ನಲ್ಲೂ ಎಲೆಕ್ಟೋರಲ್ ಬಾಂಡ್​ಗಳು ಲಭ್ಯ ಇರುತ್ತವೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಎಲೆಕ್ಟೋರಲ್ ಬಾಂಡ್ ಖರೀದಿಸಬಹುದು. ಇದು ರಾಜಕೀಯ ಪಕ್ಷಕ್ಕೆ ನೀಡುವ ದೇಣಿಗೆಯಾಗಿದೆ.

Electoral Bonds: ಜನವರಿ 2ರಿಂದ 11ರವರೆಗೆ ಎಸ್​ಬಿಐನ ಈ 29 ಕಚೇರಿಗಳಲ್ಲಿ ಸಿಗಲಿದೆ ಎಲೆಕ್ಟೋರಲ್ ಬಾಂಡ್; ಏನಿದು ಬಾಂಡ್?
ಎಲೆಕ್ಟೋರಲ್ ಬಾಂಡ್
Follow us on

ನವದೆಹಲಿ, ಜನವರಿ 1: ಚುನಾವಣಾ ಬಾಂಡ್​ಗಳನ್ನು ವಿತರಿಸಲು ಸರ್ಕಾರದಿಂದ ಮಾನ್ಯತೆ ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೇ ಜನವರಿ 2ರಿಂದ 11ರವರೆಗೆ ಬಾಂಡ್​ಗಳನ್ನು (electoral bond) ಮಾರಲಿದೆ. ಇದಕ್ಕಾಗಿ ದೇಶಾದ್ಯಂತ ಒಟ್ಟು 29 ಎಸ್​ಬಿಐ ಶಾಖಾ ಕಚೇರಿಗಳನ್ನು ನಿಯೋಜಿಸಲಾಗಿದೆ. ಕರ್ನಾಟಕದಲ್ಲಿ ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯ ಎಸ್​ಬಿಐ ಕಚೇರಿಯಲ್ಲಿ ಈ ಬಾಂಡ್​ಗಳನ್ನು ಖರೀದಿಸಬಹುದು. ಈ ಎಲ್ಲಾ 29 ಕಚೇರಿಗಳೂ ಕೂಡ ಆಯಾ ರಾಜ್ಯಗಳ ಪ್ರಧಾನ ಎಸ್​ಬಿಐ ಕಚೇರಿಗಳೇ ಆಗಿವೆ.

ಎಲೆಕ್ಟೋರಲ್ ಬಾಂಡ್ ಸಿಗುವ ಎಸ್​ಬಿಐ ಕಚೇರಿಗಳು

ಬೆಂಗಳೂರು, ನವದೆಹಲಿ, ಚಂಡೀಗಡ, ಶಿಮ್ಲಾ, ಬದಗಾಮ್, ಡೆಹ್ರಾಡೂನ್, ಭೋಪಾಲ್, ರಾಯಪುರ್, ಜೈಪುರ್, ಮುಂಬೈ, ಪಣಜಿ, ಲಕ್ನೋ, ಖುರ್ದಾ (ಒಡಿಶಾ), ಕೋಲ್ಕತಾ, ಪಾಟ್ನಾ, ಗ್ಯಾಂಗ್​ಟಾಕ್, ಇಟಾನಗರ್ ಕೊಹಿಮಾ, ಗುವಾಹಟಿ, ಇಂಫಾಲ್ ವೆಸ್ಟ್, ಐಜ್ವಾಲ್, ಅಗಾರ್ತಲಾ, ವಿಶಾಖಪಟ್ಟಣಂ, ಹೈದರಾಬಾದ್, ಚೆನ್ನೈ, ತಿರುವನಂತಪುರಂ, ಈ ನಗರಗಳ ಎಸ್​ಬಿಐ ಮುಖ್ಯ ಕಚೇರಿಗಳಲ್ಲಿ ಚುನಾವಣಾ ಬಾಂಡ್​ಗಳನ್ನು ಖರೀದಿ ಮಾಡಬಹುದು.

ಇದನ್ನೂ ಓದಿ: ಕಳೆದ 9 ತಿಂಗಳಲ್ಲಿ 15 ಲಕ್ಷ ಕೋಟಿ ರೂ ಜಿಎಸ್​ಟಿ ಸಂಗ್ರಹ; ಡಿಸೆಂಬರ್​ನಲ್ಲಿ ಕಲೆಕ್ಷನ್ 1.6 ಲಕ್ಷಕೋಟಿ ರೂ

ಏನಿದು ಎಲೆಕ್ಟೋರಲ್ ಬಾಂಡ್?

ಇದು ಜನಸಾಮಾನ್ಯರು, ಕಾರ್ಪೊರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ನೀಡುವ ಒಂದು ವಿಧದ ದೇಣಿಗೆ ಕ್ರಮ. 1,000 ರೂ, 10,000 ರೂ, 1 ಲಕ್ಷ ರೂ, 10 ಲಕ್ಷ ರೂ, 1 ಕೋಟಿ ರೂ ಇತ್ಯಾದಿ ಮುಖಬೆಲೆಗಳಲ್ಲಿ ಬಾಂಡ್​ಗಳನ್ನು ಖರೀದಿಸಬಹುದು. ಈ ಬಾಂಡ್​ಗಳು ಅನಾಮಧೇಯವಾಗಿರುತ್ತವೆ. ಅಂದರೆ, ಇದನ್ನು ಖರೀದಿಸಿದ ವ್ಯಕ್ತಿ ಅಥವಾ ಸಂಸ್ಥೆಯ ಹೆಸರು ಬಹಿರಂಗ ಇರುವುದಿಲ್ಲ. ಯಾವ ರಾಜಕೀಯ ಪಕ್ಷಕ್ಕೆ ದೇಣಿಗೆ ಕೊಡಲಾಗಿದೆ ಆ ಪಕ್ಷ ಹೆಸರೂ ಬಹಿರಂಗ ಇರುವುದಿಲ್ಲ.

ಇತ್ತೀಚಿನ ಚುನಾವಣೆಯಲ್ಲಿ ಶೇ. 1ಕ್ಕೂ ಹೆಚ್ಚು ಮತಗಳನ್ನು ಪಡೆದ ಯಾವುದೇ ರಾಜಕೀಯ ಪಕ್ಷವೂ ಎಲೆಕ್ಟ್ರೋರಲ್ ಬಾಂಡ್ ಅಕೌಂಟ್ ತೆರೆಯಲು ಅವಕಾಶ ಹೊಂದಿರುತ್ತದೆ. ಎಲೆಕ್ಟೋರಲ್ ಬಾಂಡ್ ಖರೀದಿಸಿದ ಬಳಿಕ ರಾಜಕೀಯ ಪಕ್ಷವು 15 ದಿನದೊಳಗೆ ಆ ಹಣವನ್ನು ಎನ್​ಕ್ಯಾಷ್ ಮಾಡಿಕೊಳ್ಳಬೇಕು. ಅದು ತಪ್ಪಿದಲ್ಲಿ ಬಾಂಡ್ ಹಣವು ಪಿಎಂ ರಾಷ್ಟ್ರೀಯ ಪರಿಹಾರ ನಿಧಿಗೆ (ಪಿಎಂಎನ್​ಆರ್​ಎಫ್) ವರ್ಗಾವಣೆ ಆಗುತ್ತದೆ.

ಇದನ್ನೂ ಓದಿ: Gold: ಒಂದು ವರ್ಷದಲ್ಲಿ ಚಿನ್ನದ ಬೆಲೆ ಹೆಚ್ಚಾಗಿದ್ದು ಎಷ್ಟು? ಹೂಡಿಕೆ ಮಾಡಿದವರಿಗೆ ಎಷ್ಟು ಲಾಭ?

ಎಲೆಕ್ಟೋರಲ್ ಬಾಂಡ್ ಖರೀದಿಸಿದರೆ ಆ ಹಣಕ್ಕೆ ತೆರಿಗೆ ವಿನಾಯಿತಿ ಸಿಕ್ಕುತ್ತದೆ. ರಾಜಕೀಯ ಪಕ್ಷಗಳು ಆದಾಯ ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಆದರೆ, ಎಲೆಕ್ಟೋರಲ್ ಬಾಂಡ್ ವಿತರಣೆ ಮಾಡುವ ಎಸ್​ಬಿಐ, ಇದಕ್ಕೆ ಸರ್ಕಾರದಿಂದ ನಿರ್ದಿಷ್ಟ ಶುಲ್ಕ ಪಡೆಯುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ