ಕಳೆದ 9 ತಿಂಗಳಲ್ಲಿ 15 ಲಕ್ಷ ಕೋಟಿ ರೂ ಜಿಎಸ್​ಟಿ ಸಂಗ್ರಹ; ಡಿಸೆಂಬರ್​ನಲ್ಲಿ ಕಲೆಕ್ಷನ್ 1.6 ಲಕ್ಷಕೋಟಿ ರೂ

GST Collection in December 2023: ಭಾರತದಲ್ಲಿ ಡಿಸೆಂಬರ್ ತಿಂಗಳಲ್ಲಿ 1,66,882 ಕೋಟಿ ರೂನಷ್ಟು ಜಿಎಸ್​ಟಿ ತೆರಿಗೆ ಸಂಗ್ರಹವಾಗಿದೆ. ಕಳೆದ 9 ತಿಂಗಳಲ್ಲಿ 14.97 ಲಕ್ಷ ಕೋಟಿ ಟ್ಯಾಕ್ಸ್ ಸಿಕ್ಕಿದೆ. ಜಿಎಸ್​ಟಿಯಲ್ಲಿ ಸಿಕ್ಕಿರುವ ಐಜಿಎಸ್​ಟಿಯಲ್ಲಿ ಕೇಂದ್ರಕ್ಕೆ 40 ಸಾವಿರ ಹಾಗೂ ರಾಜ್ಯಗಳಿಗೆ 33 ಸಾವಿರ ಕೋಟಿ ರೂನಷ್ಟು ಪಾಲು ಹಂಚಲಾಗಿದೆ. ಡಿಸೆಂಬರ್​ನಲ್ಲಿ ಸಂಗ್ರಹವಾದ ಒಟ್ಟಾರೆ ಜಿಎಸ್​ಟಿಯಲ್ಲಿ ಕರ್ನಾಟಕದಿಂದ 11,759 ಕೋಟಿ ರೂ ಸಂಗ್ರಹವಾಗಿದೆ. ಮಹಾರಾಷ್ಟ್ರದಲ್ಲಿ 26,814 ಜಿಎಸ್​ಟಿ ಸಂಗ್ರಹವಿದೆ.

ಕಳೆದ 9 ತಿಂಗಳಲ್ಲಿ 15 ಲಕ್ಷ ಕೋಟಿ ರೂ ಜಿಎಸ್​ಟಿ ಸಂಗ್ರಹ; ಡಿಸೆಂಬರ್​ನಲ್ಲಿ ಕಲೆಕ್ಷನ್ 1.6 ಲಕ್ಷಕೋಟಿ ರೂ
ಜಿಎಸ್​ಟಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 01, 2024 | 6:17 PM

ನವದೆಹಲಿ, ಜನವರಿ 1: ಸರಕು ಮತ್ತು ಸೇವಾ ತೆರಿಗೆಯ ಸಂಗ್ರಹ (GST collection) ಡಿಸೆಂಬರ್ ತಿಂಗಳಲ್ಲಿ 1.6 ಲಕ್ಷ ಕೋಟಿ ರೂ ಗಡಿ ದಾಟಿದೆ. ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಈ ಹಣಕಾಸು ವರ್ಷದ ಆರಂಭದಿಂದ ಹಿಡಿದು ಡಿಸೆಂಬರ್​ವರೆಗೆ 9 ತಿಂಗಳ ಅವಧಿಯಲ್ಲಿ 14.97 ಲಕ್ಷ ಕೋಟಿ ರೂನಷ್ಟು ಜಿಎಸ್​ಟಿ ಕಲೆಕ್ಷನ್ ಆಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 12ರಷ್ಟು ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಇದರೊಂದಿಗೆ ಈ 9 ತಿಂಗಳಲ್ಲಿ ಮಾಸಿಕ ಸರಾಸರಿ 1.66 ಲಕ್ಷ ಕೋಟಿ ರೂನಷ್ಟು ಜಿಎಸ್​ಟಿ ತೆರಿಗೆ ಸಂಗ್ರಹ ಇದೆ. ಇನ್ನು, ಡಿಸೆಂಬರ್ ತಿಂಗಳಲ್ಲಿ 1,66,882 ಕೋಟಿ ರೂನಷ್ಟು ತೆರಿಗೆಯು ಸರ್ಕಾರದ ಕೈ ಸೇರಿದೆ. ನವೆಂಬರ್ ತಿಂಗಳಿಗೆ ಹೋಲಿಸಿದರೆ ಡಿಸೆಂಬರ್​ನಲ್ಲಿ ತೆರಿಗೆ ಸಂಗ್ರಹ ತುಸು ಕಡಿಮೆ ಆಗಿದೆ.

ಡಿಸೆಂಬರ್ ತಿಂಗಳ ಜಿಎಸ್​ಟಿ ಸಂಗ್ರಹ ವಿವರ

2023ರ ಡಿಸೆಂಬರ್​ನಲ್ಲಿ ಒಟ್ಟು ತೆರಿಗೆ ಸಂಗ್ರಹ: 1,66,882 ಕೋಟಿ ರೂ

  • ಸಿಜಿಎಸ್​ಟಿ: 30,443 ಕೋಟಿ ರೂ
  • ಎಸ್​ಜಿಎಸ್​ಟಿ: 37,935 ಕೋಟಿ ರೂ
  • ಐಜಿಎಸ್​ಟಿ: 84,255 ಕೋಟಿ ರೂ
  • ಸೆಸ್: 12,249 ಕೋಟಿ ರೂ

ಐಜಿಎಸ್​ಟಿಯಲ್ಲಿ ಕೇಂದ್ರ ಮತ್ತು ರಾಜ್ಯಗಳಿಗೆ ಹಂಚಿಕೆ ಆಗಿರುವುದು ಹೀಗೆ:

  • ಸಿಜಿಎಸ್​ಟಿ: 40,057 ಕೋಟಿ ರೂ
  • ಎಸ್​ಜಿಎಸ್​ಟಿ: 33,652 ಕೋಟಿ ರೂ

ಇದನ್ನೂ ಓದಿ: Gold: ಒಂದು ವರ್ಷದಲ್ಲಿ ಚಿನ್ನದ ಬೆಲೆ ಹೆಚ್ಚಾಗಿದ್ದು ಎಷ್ಟು? ಹೂಡಿಕೆ ಮಾಡಿದವರಿಗೆ ಎಷ್ಟು ಲಾಭ?

ಡಿಸೆಂಬರ್ ತಿಂಗಳಲ್ಲಿ ಹೆಚ್ಚು ಜಿಎಸ್​ಟಿ ಕಲೆಕ್ಷನ್ ಕಂಡ ರಾಜ್ಯಗಳು

ಜಿಎಸ್​ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿ ಮುಂದುವರಿದಿದೆ. ಕರ್ನಾಟಕ ನಂತರದ ಸ್ಥಾನದಲ್ಲಿದೆ. ತಮಿಳುನಾಡು, ಗುಜರಾತ್, ಹರ್ಯಾಣ ಮತ್ತು ಉತ್ತರಪ್ರದೇಶ ರಾಜ್ಯಗಳು 8,000 ಕೋಟಿ ರೂಗಿಂತ ಹೆಚ್ಚು ತೆರಿಗೆ ಸಂಗ್ರಹ ಮಾಡಿವೆ.

  • ಮಹಾರಾಷ್ಟ್ರ: 26,814 ಕೋಟಿ ರೂ
  • ಕರ್ನಾಟಕ: 11,759 ಕೋಟಿ ರೂ
  • ತಮಿಳುನಾಡು: 9,888 ಕೋಟಿ ರೂ
  • ಗುಜರಾತ್: 9,874 ಕೋಟಿ ರೂ
  • ಹರ್ಯಾಣ: 8,130 ಕೋಟಿ ರೂ
  • ಉತ್ತರಪ್ರದೇಶ: 8,011 ಕೋಟಿ ರೂ
  • ದೆಹಲಿ: 5,121 ಕೋಟಿ ರೂ
  • ಪಶ್ಚಿಮ ಬಂಗಾಳ: 5,019 ಕೋಟಿ ರೂ
  • ತೆಲಂಗಾಣ: 4,753 ಕೋಟಿ ರೂ
  • ಒಡಿಶಾ: 4,351 ಕೋಟಿ ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ