AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs China: ಚೀನಾದ ಪ್ರಾಬಲ್ಯ ಎದುರಿಸಲು ಈ ವಿಶ್ವಕ್ಕೆ ಭಾರತ ಅಗತ್ಯ: ಉದ್ಯಮಿ ಆನಂದ್ ಮಹೀಂದ್ರ

Anand Mahindra Opinion: ಸರಬರಾಜು ಸರಪಳಿ ವ್ಯವಸ್ಥೆಯಲ್ಲಿ ಚೀನಾ ಹೊಂದಿರುವ ಪ್ರಾಬಲ್ಯಕ್ಕೆ ಸವಾಲೊಡ್ಡಲು ಭಾರತದ ಅವಶ್ಯಕತೆ ಈ ವಿಶ್ವಕ್ಕೆ ಇದೆ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ. ಜಾಗತಿಕವಾಗಿ, ಚೀನಾದ ಸಪ್ಲೈ ಚೈನ್ ಪ್ರಾಬಲ್ಯಕ್ಕೆ ಭಾರತ ಸವಾಲೊಡ್ಡುವ ಅವಶ್ಯಕತೆ ಇದೆ. 2024ಕ್ಕೆ ಇದು ಒಳ್ಳೆಯ ಅವಕಾಶವಾಗಿದೆ. ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಭಾರತ ಸೀಮೋಲಂಘನ ಮಾಡುವ ಅವಕಾಶವನ್ನು ಪಡೆಯುವುದು ಬಿಡುವುದು ನಮ್ಮ ಕೈಯಲ್ಲೇ ಇದೆ ಎಂದಿದ್ದಾರೆ ಮಹೀಂದ್ರ.

India vs China: ಚೀನಾದ ಪ್ರಾಬಲ್ಯ ಎದುರಿಸಲು ಈ ವಿಶ್ವಕ್ಕೆ ಭಾರತ ಅಗತ್ಯ: ಉದ್ಯಮಿ ಆನಂದ್ ಮಹೀಂದ್ರ
ಆನಂದ್ ಮಹೀಂದ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 01, 2024 | 3:34 PM

Share

ನವದೆಹಲಿ, ಜನವರಿ 1: ಸರಬರಾಜು ಸರಪಳಿ ವ್ಯವಸ್ಥೆಯಲ್ಲಿ (supply chain) ಚೀನಾ ಹೊಂದಿರುವ ಪ್ರಾಬಲ್ಯಕ್ಕೆ ಸವಾಲೊಡ್ಡಲು ಭಾರತದ ಅವಶ್ಯಕತೆ ಈ ವಿಶ್ವಕ್ಕೆ ಇದೆ ಎಂದು ಉದ್ಯಮಿ ಆನಂದ್ ಮಹೀಂದ್ರ ಹೇಳಿದ್ದಾರೆ. ಹಾಗೆಯೇ 2024ರಲ್ಲಿ ಭಾರತಕ್ಕೆ ಅಪರಿಮಿತ ಪ್ರಮಾಣದಲ್ಲಿ ಹೂಡಿಕೆಗಳು ಹರಿದುಬರುತ್ತವೆ ಎಂದೂ ಅವರು ಅಂದಾಜ ಮಾಡಿದ್ದಾರೆ.

‘ಜಾಗತಿಕವಾಗಿ, ಚೀನಾದ ಸಪ್ಲೈ ಚೈನ್ ಪ್ರಾಬಲ್ಯಕ್ಕೆ ಭಾರತ ಸವಾಲೊಡ್ಡುವ ಅವಶ್ಯಕತೆ ಇದೆ. 2024ಕ್ಕೆ ಇದು ಒಳ್ಳೆಯ ಅವಕಾಶವಾಗಿದೆ. ಭಾರತಕ್ಕೆ ಪುಷ್ಟಿ ಕೊಡಲು ಇದು ಸಹಾಯವಾಗುತ್ತದೆ. ಭಾರತಕ್ಕೆ ಹೂಡಿಕೆಗಳ ಮಹಾಪೂರವೇ ಹರಿದುಬರುತ್ತದೆ’ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ.

ಇದನ್ನೂ ಓದಿ: ಅನಿಲ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಪವರ್​ನ ಷೇರುಬೆಲೆ ಹೆಚ್ಚುತ್ತಿರುವುದು ಯಾಕೆ? ಮುಕೇಶ್ ತಮ್ಮನ ಅದೃಷ್ಟ ಖುಲಾಯಿಸಿತಾ?

‘ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಭಾರತ ಸೀಮೋಲಂಘನ ಮಾಡುವ ಅವಕಾಶವನ್ನು ಪಡೆಯುವುದು ಬಿಡುವುದು ನಮ್ಮ ಕೈಯಲ್ಲೇ ಇದೆ. ಈ ಅವಕಾಶವನ್ನು ನಾವು ಎರಡೂ ಕೈಯಿಂದ ಸ್ವೀಕರಿಸಬೇಕು. ಉತ್ಪಾದನಾ ಕ್ಷೇತ್ರದಲ್ಲಿ ಪ್ರಗತಿ ಕಂಡರೆ, ರಫ್ತುಗಳು ಅನುಭೋಗ ಪ್ರಮಾಣ ಹೆಚ್ಚಿಸುತ್ತದೆ. ಈ ಒಂದು ಚಕ್ರ ಹಲವು ವರ್ಷಗಳವರೆಗೆ ಚಾಲನೆಯಲ್ಲಿರುತ್ತದೆ,’ ಎಂದು ತಯಾರಿಕಾ ಕ್ಷೇತ್ರದ ಪ್ರಗತಿಯಿಂದ ಆಗುವ ಲಾಭದ ಬಗ್ಗೆ ಮಹೀಂದ್ರ ಗ್ರೂಪ್ ಛೇರ್ಮನ್ ಬೆಳಕು ಚೆಲ್ಲಿದ್ದಾರೆ.

ಆರ್ಥಿಕ ಜಿಗಿತ ಕಾಣುವ ಹಲವು ದಶಕಗಳ ಕನಸು ನನಸಾಗುವ ಎಲ್ಲಾ ಸೂಚನೆಗಳು ಭಾರತದ ಆರ್ಥಿಕತೆಯತ್ತ ಬೊಟ್ಟು ಮಾಡುತ್ತಿವೆ ಎಂದೂ ಅವರು ತಿಳಿಸಿದ್ದಾರೆ.

ಹೊಸ ವರ್ಷಕ್ಕೆ ಶುಭ ಹಾರೈಸಿದ ಅವರು, ಒಂದು ಅದ್ಭುತ ಸಂದೇಶವನ್ನೂ ಜನರಿಗೆ ರವಾನಿಸಿದ್ದಾರೆ.

ಇದನ್ನೂ ಓದಿ: Debtors List: ಸಾಲದ ವಿಚಾರದಲ್ಲಿ ಅಮೆರಿಕಕ್ಕೆ ಯಾರು ಸಾಟಿ? ಅತಿಹೆಚ್ಚು ಸಾಲ ಹೊಂದಿರುವವರ ಪಟ್ಟಿಯಲ್ಲಿ ಭಾರತದ ಸ್ಥಾನವೆಷ್ಟು?

‘ಹೊಸ ವರ್ಷವು ಹೊಸ ಆರಂಭಕ್ಕೆ ಸಂಕೇತವಾಗಿದೆ. ಗತಿಸಿದ ವರ್ಷ ಎಷ್ಟೇ ಕೆಟ್ಟದಿರಲಿ, ಮುಂಬರುವ ಹೊಸ ವರ್ಷಕ್ಕೆ ಹೊಸ ಭರವಸೆ ಇಟ್ಟುಕೊಳ್ಳುವುದು ಮಾನವನ ಸ್ವಭಾವ. 2023ರ ವರ್ಷದಲ್ಲಿ ಸಂಘರ್ಷ, ಹವಾಮಾನ ಬದಲಾವಣೆ, ಕೋವಿಡ್ ನಂತರದ ಮಂದಗತಿ ಚೇತರಿಕೆ ಇವನ್ನು ಕಂಡಿದ್ದೇವೆ. ಹೊಸ ವರ್ಷದಲ್ಲಿ ಹೊಸ ಬದಲಾವಣೆಯನ್ನು ಬಯಸುವುದರೊಂದಿಗೆ 2023ರ ವರ್ಷದ ಅದ್ಯಾಯ ಮುಕ್ತಾಯವಾಗಿದೆ’ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ