ಇಲಾನ್ ಮಸ್ಕ್ 1998ರಲ್ಲಿ ನುಡಿದಿದ್ದ ಭವಿಷ್ಯ ನಿಜವಾಯ್ತು… ಎಐ ಬಗ್ಗೆ ಈ ಹೇಳಿದ ಸುಂದರ ಭವಿಷ್ಯ ಸತ್ಯವಾಗುತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ
Elon Musk's predictions: ಮುಂದಿನ ದಿನಗಳಲ್ಲಿ ಇಂಟರ್ನೆಟ್ ಕ್ರಾಂತಿಯು ಸಾಂಪ್ರದಾಯಿಕ ಮಾಧ್ಯಮಗಳನ್ನು ಅವರಿಸುತ್ತವೆ ಎಂದು 1998ರಲ್ಲಿ ಇಲಾನ್ ಮಸ್ಕ್ ಹೇಳಿದ್ದರು. ಅವರ ಆ ಮಾತುಗಳು ಬಹುತೇಕ ನಿಜವಾಗಿವೆ. ಇತ್ತೀಚೆಗೆ ಅವರು ಎಐ ಬಗ್ಗೆ ನುಡಿದ ಭವಿಷ್ಯದ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಭವಿಷ್ಯದಲ್ಲಿ ಮನುಷ್ಯರಿಗೆ ಉದ್ಯೋಗವೇ ಬೇಕಿಲ್ಲ. ಎಲ್ಲಾ ಸೇವೆ ಮತ್ತು ಸರಕುಗಳನ್ನು ಎಐ ಮತ್ತು ರೋಬೋಗಳೇ ಮಾಡಬಲ್ಲುವು ಎಂದಿದ್ದಾರೆ.
ನವದೆಹಲಿ, ಡಿಸೆಂಬರ್ 11: ವಿಶ್ವದ ಅತೀ ಶ್ರೀಮಂತ ಉದ್ಯಮಿಯಾಗಿರುವ ಇಲಾನ್ ಮಸ್ಕ್ ನೇರಾ ನೇರವಾಗಿ ಮಾತನಾಡುವ ವ್ಯಕ್ತಿತ್ವದವರು. ಮೊದಲಿಂದಲೂ ಅವರ ವ್ಯಕ್ತಿತ್ವ ಇರುವುದೇ ಹಾಗೆ. ಬಹಳ ಜನರು ಅವರ ಮಾತುಗಳನ್ನು ಹುಚ್ಚುತನ ಎಂದು ಕರೆಯುವುದುಂಟು. ಆದರೆ, ಬಿಸಿನೆಸ್ನಲ್ಲಿ ಇವರದ್ದು ಪ್ರಚಂಡ ಬುದ್ಧಿಮತ್ತೆ ಎನ್ನುವವರಿದ್ದಾರೆ. ಭವಿಷ್ಯದ ಬಗ್ಗೆ ಇತರರಿಗಿಂತ ಹೆಚ್ಚು ನಿಖರವಾಗಿ ಇವರು ಅಂದಾಜು ಮಾಡುವ ಶಕ್ತಿ ಹೊಂದಿದ್ದಾರೆ. 1998ರಲ್ಲಿ ಇವರು ಮಾಧ್ಯಮದ ಭವಿಷ್ಯದ ಬಗ್ಗೆ ಹೇಳಿದ ಮಾತುಗಳು ಈಗ ನಿಜವಾಗಿವೆ. ಇಂಟರ್ನೆಟ್ ಕ್ರಾಂತಿಯಿಂದಾಗಿ ಸಾಂಪ್ರದಾಯಿಕ ಮಾಧ್ಯಮದ ಸ್ವರೂಪ ಹೇಗೆ ಬದಲಾಗುತ್ತದೆ ಎಂಬುದನ್ನು ಅವರು 1998ರಲ್ಲೇ ಅಂದಾಜಿಸಿದ್ದರು. ಅವರ ಆ ಮಾತುಗಳು ಇಂದು ಬಹುತೇಕ ಸತ್ಯ ಆಗಿವೆ.
ಇಲಾನ್ ಮಸ್ಕ್ ಅವರೇ ಸ್ವತಃ ಆ ವಿಡಿಯೋ ತುಣಕನ್ನು ತಮ್ಮ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ‘ನಾನು ಭವಿಷ್ಯ ಹೇಳಿದಾಗ ಜನರು ಹುಚ್ಚುತನ ಎಂದು ಕರೆದಿದ್ದರು’ ಎಂದು ಇಲಾನ್ ಮಸ್ಕ್ ಹೇಳಿದ್ದಾರೆ. ಯಾವುದೋ ಮಾಧ್ಯಮ ಸಂದರ್ಶನದಲ್ಲಿ ಇಲಾನ್ ಮಸ್ಕ್ ಅವರಿಗೆ ‘ಇಂಟರ್ನೆಟ್ನ ಭವಿಷ್ಯ ಏನು?’ ಎನ್ನುವ ಪ್ರಶ್ನೆ ಎದುರಾಗುತ್ತದೆ. ಅದಕ್ಕೆ ಅವರು, ‘ಪ್ರಿಂಟ್, ಟಿವಿ ಸೇರಿದಂತೆ ಎಲ್ಲಾ ಸಾಂಪ್ರದಾಯಿಕ ಮಾಧ್ಯಮಗಳನ್ನು ಇಂಟರ್ನೆಟ್ ಅವರಿಸುತ್ತದೆ’ ಎಂದಿದ್ದರು. 1998ರಲ್ಲಾಗಲೇ ಇಂಟರ್ನೆಟ್ ಬಹಳಷ್ಟು ವ್ಯಾಪಿಸಿತ್ತು. ಇಂಟರ್ನೆಟ್ ವೇಗ ಕಡಿಮೆ ಇದ್ದರೂ ಬಹಳಷ್ಟು ವೆಬ್ಸೈಟ್, ಪೋರ್ಟಲ್, ಬ್ಲಾಗ್ಗಳು ಆರಂಭವಾಗಿದ್ದರು.
ಇದನ್ನೂ ಓದಿ: ಮೂರೂವರೆ ಲಕ್ಷ ಕೋಟಿ ರೂ ಗಾತ್ರ ಮುಟ್ಟಲಿರುವ ಭಾರತದ ಮನರಂಜನೆ-ಮಾಧ್ಯಮ ಉದ್ಯಮ
ಈಗ ಇಲಾನ್ ಮಸ್ಕ್ ಅವರು ತಮ್ಮ ಸ್ಪೇಸ್ಎಕ್ಸ್ ಸಂಸ್ಥೆಯ ವತಿಯಿಂದ ಸ್ಟಾರ್ಲಿಂಕ್ ಪ್ರಾಜೆಕ್ಟ್ ಆರಂಭಿಸುತ್ತಿದ್ದಾರೆ. ಸೆಟಿಲೈಟ್ಗಳ ಸಮೂಹಗಳನ್ನು ಬಳಸಿ ಭೂಮಿಯ ಪ್ರತಿಯೊಂದು ಜಾಗವನ್ನೂ ಇಂಟರ್ನೆಟ್ ತಲುಪಬಲ್ಲಂತೆ ಇದು ಮಾಡಬಲ್ಲುದು.
The crazy thing is that they thought I was crazy for stating this super obvious prediction pic.twitter.com/OK0akTRj3E
— Elon Musk (@elonmusk) December 10, 2024
ಎಐ ಬಗ್ಗೆ ಇಲಾನ್ ಮಸ್ಕ್ ನುಡಿದ ಭವಿಷ್ಯ ನಿಜವಾಗುತ್ತಾ?
ಇಲಾನ್ ಮಸ್ಕ್ ಅವರು ಇತ್ತೀಚೆಗಷ್ಟೇ ಎಕ್ಸ್ಎಐ ಎನ್ನುವ ತಮ್ಮದೇ ಎಐ ಸಂಸ್ಥೆಯೊಂದನ್ನು ಸ್ಥಾಪಿಸಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವು ಮುಂಬರುವ ಕಾಲಘಟ್ಟದಲ್ಲಿ ಎಲ್ಲಾ ಉದ್ಯೋಗಗಳನ್ನು ಅಳಿಸಿಹಾಕುತ್ತದೆ. ಯಾರಿಗೂ ಕೆಲಸ ಎಂಬುದೇ ಇರುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: MSSC scheme: ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್; ಠೇವಣಿ ಮೊತ್ತ, ಅವಧಿ, ಬಡ್ಡಿ ಇತ್ಯಾದಿ ವಿವರ
ಈ ಮಾತು ಆಘಾತಕಾರಿ ಎನಿಸಬಹುದು. ಆದರೆ, ಇಲಾನ್ ಮಸ್ಕ್ ಪ್ರಕಾರ ಭವಿಷ್ಯದಲ್ಲಿ ಯಾರೂ ಕೂಡ ಕೆಲಸ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ. ಕೆಲಸ ಎಂಬುದು ಹವ್ಯಾಸ ಮಾತ್ರವೇ ಆಗಿರುತ್ತದೆ. ಮನುಷ್ಯರಿಗೆ ಬೇಕಾದ ಎಲ್ಲಾ ಸೇವೆಗಳನ್ನು ಮತ್ತು ಸರಕುಗಳನ್ನು ಎಐ ಮತ್ತು ರೋಬೋಗಳೇ ಒದಗಿಸುತ್ತವಂತೆ. ಈ ಕನಸು ಸಾಕಾರವಾಗಬೇಕಾದರೆ ಯೂನಿವರ್ಸಲ್ ಹೈ ಇನ್ಕಮ್ ಅಥವಾ ಸಾರ್ವತ್ರಿಕ ಉಚ್ಚ ಆದಾಯ ವ್ಯವಸ್ಥೆ ಜಾಗತಿಕವಾಗಿ ಜಾರಿಯಲ್ಲಿರಬೇಕು ಎಂಬುದು ಅವರ ಅನಿಸಿಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:44 pm, Wed, 11 December 24